ಸತ್ಯ ಸೀರಿಯಲ್: ಸತ್ಯಗೆ ಮನೆ ಮುರುಕಿ ಪಟ್ಟ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಗುರುಗಳು ಎಷ್ಟು ಹೇಳಿದರೂ ಸೀತಾಗೆ ನಂಬಿಕೆ ಬರುವುದಿಲ್ಲ. ಮತ್ತೆ ಮತ್ತೆ ಸತ್ಯನ ಮೇಲೆ ರೇಗಾಡುತ್ತಿರುತ್ತಾಳೆ. ಸತ್ಯ ಇದೆಲ್ಲವನ್ನು ಸಹಿಸಿಕೊಂಡು ಸುಮ್ಮನಿರುತ್ತಾಳೆ. ಇನ್ನು ಸತ್ಯ ಸ್ಥಿತಿ ಕಂಡು ಕಾಕ್ರೋಚ್ ಮತ್ತು ರಾಕಿ ಬೇಸರ ಪಟ್ಟುಕೊಳ್ಳುತ್ತಾರೆ. ಸತ್ಯ ಇದನ್ನೆಲ್ಲಾ ಹೇಗೆ ಸಹಿಸಿಕೊಂಡಿದ್ದಾಳೋ ಎಂದು ಬೇಸರ ಮಾಡಿಕೊಳ್ಳುತ್ತಾರೆ.

ರಿತು ಎಲ್ಲರ ಮುಂದೆ ರಾಕಿಗೆ ಕಣ್ಣು ಹೊಡೆಯುತ್ತಾಳೆ. ರಾಕಿ ಗಾಬರಿಗೊಂಡು ಅಲ್ಲಿಂದ ಹೊರಡುತ್ತಾನೆ. ಆದರೆ, ರಾಕಿ ಬೆನ್ನು ಬಿಡದ ರಿತು ಹಿಂದೆಯೇ ಹೋಗಿ ಕಾಡುತ್ತಾಳೆ. ನಿಮ್ಮ ಮನೆಯವರು ನೋಡಿದರೆ ನನಗೆ ಕಷ್ಟ ಎಂದರೂ ಕೇಳದ ರಿತು, ನನ್ನನ್ನು ಪ್ರೀತಿಸುತ್ತಿದ್ದೀಯಾ ಎಂದು ಒಪ್ಪಿಕೋ ಅಂತ ಬಲವಂತ ಮಾಡುತ್ತಾಳೆ.

ಕಾಕ್ರೋಚದ ಮತ್ತು ರಾಕೇಶ್ ಇಬ್ಬರೂ ಪ್ರಸಾದ ತೆಗೆದುಕೊಂಡು ಸತ್ಯನ ನೋಡಲು ದೇವಸ್ಥಾನಕ್ಕೆ ಬಂದಿದ್ದಾರೆ. ಇವರಿಬ್ಬರನ್ನು ನೋಡಿದ ಸತ್ಯ ಫುಲ್ ಖುಷಿಯಾಗುತ್ತಾಳೆ. ಮನೆಯವರನ್ನೆಲ್ಲಾ ವಿಚಾರಿಸಿಕೊಳ್ಳುತ್ತಾಳೆ. ಆಗ ಕಾಕ್ರೋಚ್ ಅವರೆಲ್ಲಾ ಸೂಪರ್ ಆಗಿದ್ದಾರೆ. ನೀನು ಮನೆಯವರ ಬಗ್ಗೆ ಯೋಚನೆ ಬಿಡು. ನೀನು ನೋಡು ಸೀರೆ ಉಟ್ಟಿಕೊಂಡು, ಕೈಯಲ್ಲಿ ಬಳೆ ಹಾಕಿಕೊಂಡು, ಸೊಂಟಕ್ಕೆ ಡಾಬು ಇರೋದಕ್ಕೆ ಥೇಟ್ ಬಡ್ಡಿ ಬಂಗಾರಮ್ಮ ಥರ ಕಾಣಿಸುತ್ತಿದ್ದೀಯಾ ಎನ್ನುತ್ತಾನೆ.

ಸತ್ಯಾಗೆ ಮನೆ ಮುರುಕಿ ಎಂದ ಸೀತಾ!

ಸತ್ಯಾಗೆ ಮನೆ ಮುರುಕಿ ಎಂದ ಸೀತಾ!

ಪ್ರಸಾದ ತಂದ್ದೀವಲ್ಲ ಇನ್ಯಾಕೆ ಇಲ್ಲೇ ಪ್ರಸಾದ ಮಾಡೋದು ಎಂದು ಕೇಳಿದ್ದಕ್ಕೆ ಸೀತಾ ಕೆಂಡಾಮಂಡಲವಾಗುತ್ತಾಳೆ. ಮನೆಯಿಂದ ಪ್ರಸಾದ ಮಾಡಿಕೊಂಡು ಬರೋದಕ್ಕೆ ಯಾರು ಹೇಳಿದ್ದು ಎಂದು ಕೇಳುತ್ತಾಳೆ. ಆಗ ಸತ್ಯ ಹೇಗೂ ಪೂಜೆ ಮಾಡಿಸುತ್ತಿದ್ದೀವಲ್ಲ. ಹಾಗಾಗಿ ಅಮ್ಮನ ಮನೆಯವರ ಹೆಸರಲ್ಲೂ ಪೂಜೆ ಮಾಡಿಸೋಕೆ ಎನ್ನುತ್ತಾಳೆ. ಈ ಮಾತನ್ನು ಕೇಳಿ ಸೀತಾ, ನೀವು ಮನೆಯಿಂದ ತಂದಿರುವ ಪ್ರಸಾದನಾ ನಾವು ನೈವೇದ್ಯಕ್ಕೆ ಇಡಬೇಕಾ..? ಈಗಲೇ ನಿಮ್ಮ ಮನೆ ನಮ್ಮ ಮನೆ ಅಂತ ಮಾತನಾಡುತ್ತೀಯಾ. ಮನೆಗೆ ಬಂದು ಎರಡು ದಿನ ಆಗಿಲ್ಲ ಆಗಲೇ ಮನೆ ಒಡೆಯುವ ಯೋಜನೆ ನಿನ್ನದು ಎಂದು ಬೈಯುತ್ತಾಳೆ.

ರಿತು ಮಾಡಿದ ಎಡವಟ್ಟು!

ರಿತು ಮಾಡಿದ ಎಡವಟ್ಟು!

ರಾಕಿ ನೀರು ತರಲು ಕಲ್ಯಾಣಿಗೆ ಹೋಗುತ್ತಾನೆ. ಆಗ ರಿತು ಬಂದು ರಾಕಿಯನ್ನು ತಡೆಯುತ್ತಾಳೆ. ನನ್ನನ್ನ ಪ್ರಿತಿಸುತ್ತಿದ್ದೀನಿ ಎಂದು ಒಪ್ಪಿಕೋ ಎಂದು ಬಿಂದಿಗೆ ಹಿಡಿದು ಎಳೆದಾಡುತ್ತಾಳೆ. ರಾಕಿ ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ಆಯ ತಪ್ಪಿ ಬಿಂದಿಗೆ ಕೈಜಾರಿ ಬೀಳುತ್ತದೆ, ರಾಕಿ ರಿತು ಕೈ ಹಿಡಿದು ಬಚಾವ್ ಆಗುತ್ತಾನೆ. ಈ ದೃಶ್ಯವನ್ನು ನೋಡುವ ಕೀರ್ತನಾ ಬಂದು ರಿತುಗೆ ಬೈದು ಕಳಿಸುತ್ತಾಳೆ.

ಸತ್ಯ ಬಗ್ಗೆ ಕೀರ್ತನಾ ವ್ಯಂಗ್ಯ!

ಸತ್ಯ ಬಗ್ಗೆ ಕೀರ್ತನಾ ವ್ಯಂಗ್ಯ!

ಅಷ್ಟಕ್ಕೆ ಸುಮ್ಮನಿರದ ಕೀರ್ತನಾ, ಯೋಗ್ಯತೆಗೆ ತಕ್ಕಂತೆ ಬಿಹೇವ್ ಮಾಡು. ಸತ್ಯಗೆ ಬುದ್ಧಿ ಇಲ್ಲ. ನಮ್ಮ ಮನೆಯ ಪೂಜೆಗೆ ಇವರನ್ನೆಲ್ಲಾ ಕರೆಸಿದ್ದಾಳೆ. ಸ್ಟೇಟಸ್ ನೋಡಿ ಸಂಬಂಧ ಬೆಳೆಸು. ಲವ್ ಅದು ಇದು ಅಂತೆಲ್ಲಾ ಮುಂದುವರಿದರೆ ಸರಿ ಇರೋದಿಲ್ಲ. ಇನ್ನೊಂದು ಸಲ ರಿತು ಜೊತೆ ಕಂಡರೆ ಗ್ರಹಚಾರ ಬಿಡಿಸುತ್ತಿನಿ ಎಂದು ವಾರ್ನ್ ಮಾಡುತ್ತಾಳೆ. ನೀರು ತಂದು ಕೊಟ್ಟ ರಾಕಿ ನಾವಿನ್ನು ಹೊರಡುತ್ತೀವಿ ಎನ್ನುತ್ತಾನೆ. ಆದರೆ, ಸತ್ಯ ಪೂಜೆ ಮುಗಿಯುವವರೆಗೂ ಇಲ್ಲೇ ಇರಿ ಎಂದು ಬಲವಂತೆ ಮಾಡಿದರೂ ಇಲ್ಲ ಹೊರಡುತ್ತೇವೆ ಎಂದಾಗ, ರಿತು ಸತ್ಯ ಕಿವಿಯಲ್ಲಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ.

ಕೀರ್ತನಾ ನಡೆಗೆ ಕೋಪಗೊಂಡ ಸತ್ಯ!

ಕೀರ್ತನಾ ನಡೆಗೆ ಕೋಪಗೊಂಡ ಸತ್ಯ!

ಕೋಪಗೊಳ್ಳುವ ಸತ್ಯ. ರಾಕಿ ನೀನು ನಮ್ಮ ಮನೆಯವನೇ ಈ ಪೂಜೆ ಮುಗಿಯುವವರೆಗೂ ಎಲ್ಲೂ ಹೋಗಬೇಡ. ಯಾರು ಏನು ಹೇಳುತ್ತಾರೋ ನಾನು ನೋಡುತ್ತೀನಿ ಎಂದು, ಕೀರ್ತನಾಳನ್ನು ನೋಡಿಕೊಂಡು ಹೇಳುತ್ತಾಳೆ. ಆದರೆ ರಾಕಿ ಮತ್ತು ಕಾಕ್ರೋಚ್ ಇಲ್ಲ ನಿಮ್ಮ ಫ್ಯಾಮಿಲಿ ಪೂಜೆ ಇದು. ಇನ್ನೊಂದು ಸಲ ಸಿಗುತ್ತೀವಿ ಎಂದು ಹೇಳಿ ಹೊರಟು ಹೋಗುತ್ತಾರೆ.

More from Filmibeat

English summary
Sathya Tv Serial Written Update On May 21th Episode, Big Twist In Sathya Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X