ಮದುಗೆ ಆದ ಬಳಿಕ ಮೊದಲ ಬಾರಿಗೆ ರೌಡಿಗಳ ಜೊತೆ ಫೈಟ್ ಮಾಡಿದ ಸತ್ಯ!
ಸತ್ಯ ಧಾರಾವಾಹಿಯಲ್ಲಿ ಕಳೆದೊಂದು ವಾರದಿಂದ ಅತ್ತೆ ಸೊಸೆಯ ಫೈಟಿಂಗ್ ನಡೆಯುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಸತ್ಯಳಲ್ಲಿ ಸೀತಾ ತಪ್ಪುಗಳನ್ನು ಹುಡುಕುತ್ತಿದ್ದಾಳೆ. ಅವಳಿಗೆ ಹೇಗೆಲ್ಲಾ ಬೈಯಬೇಕು? ಎಷ್ಟು ನೋವು ಮಾಡಬೇಕು ಎಂಬುದು ಅರ್ಥವಾಗದೇ ಸುಮ್ಮನೇ ನಿಮಿಷ ನಿಮಿಷಕ್ಕೂ ಸೀತಾ ಬೈಯುತ್ತಿದ್ದಾರೆ.
ಸತ್ಯ ಮದುವೆಯಾದಾಗಿನಿಂದಲೂ ತುಂಬಾನೇ ತಾಳ್ಮೆಯಿಂದ ವರ್ತಿಸುತ್ತಿದ್ದಾಳೆ. ಸೀತಾ, ಕಾರ್ತಿಕ್, ಕೀರ್ತನಾ ಮಾತನಾಡುವ ಮಾತುಗಳಿಗೆ ಕೋಪ ಬಂದರೂ ಮುಷ್ಟಿ ಹಿಡಿದು ಸಮಾಧಾನವಾಗಿದ್ದಾಳೆ. ಇನ್ನು ಸತ್ಯ ಏನೇ ಮಾಡಿದರೂ ಎಡವಟ್ಟುಗಳಾಗುತ್ತಿವೆ. ಇದು ಸೀತಾಳನ್ನು ಇನ್ನಷ್ಟು ಕೆರಳುವಂತೆ ಮಾಡುತ್ತಿದೆ.
ಇತ್ತ ಇದೆಲ್ಲದಕ್ಕೂ ಸರಿಯಾಗಿ ಕೀರ್ತನಾ ತಾಳ ಹಾಕುತ್ತಿದ್ದಾಳೆ. ಸತ್ಯಳನ್ನು ಹೇಗಾದರೂ ಮಾಡಿ ಮನೆಯಿಂದ ದೂರವಿಡಬೇಕು. ಸೀತಾ ಹೀಗೆ ಸತ್ಯಳನ್ನು ದ್ವೇಷಿಸುತ್ತಿರಬೇಕು. ಆಗಷ್ಟೇ ತನ್ನ ಬೇಳೆ ಬೇಯಿಸಿಕೊಳ್ಳಲು ಸಾಧ್ಯ ಎಂದು ತಿಳಿದಿರುವ ಕೀರ್ತನಾ, ಉರಿಯುತ್ತಿರುವ ಬೆಂಕಿಗೆ ಆಗಾಗ ತುಪ್ಪ ಸುರಿಯುತ್ತಿದ್ದಾಳೆ.

ಕೀರ್ತನಾ ಮೇಲೆ ಕೋಪಗೊಂಡಿರುವ ಸತ್ಯ!
ರಿತು ಮಾಡಿರುವ ಎಡವಟ್ಟಿನಿಂದ ರಾಕೇಶ್ ಕೀರ್ತನಾ ಕೈಯಲ್ಲಿ ಬೈಯಿಸಿಕೊಂಡಿದ್ದಾನೆ. ರಿತು ಪ್ರೀತಿಸು ಎಂದು ರಾಕಿ ಹಿಂದೆ ಬಿದ್ದಿದ್ದಾಳೆ. ಇದನ್ನು ನೋಡಿ ರಾಕಿ ಮೇಲೆ ಕೀರ್ತನಾ ಕೂಗಾಡಿದ್ದಾಳೆ. ಹಾಗಾಗಿ ರಾಕಿ ಮನೆಗೆ ಹೊರಟಿದ್ದು, ಸತ್ಯ ತಡೆದಾಗ ರಿತು ಸತ್ಯಗೆ ಎಲ್ಲಾ ವಿಚಾರ ವಿವರಿಸಿದ್ದಾಳೆ. ಆದರೂ ರಾಕಿ ಮುಜುಗರಗೊಂಡಿದ್ದು ಅಲ್ಲಿಂದ ಹೊರಟಿದ್ದಾನೆ. ಸತ್ಯ, ನೀನು ನಮ್ಮ ಕುಟುಂಬ, ಯಾರಿಗೂ ಹೆದರಬೇಕಿಲ್ಲ. ಪೂಜೆ ಆಗುವವರೆಗೂ ಇರು ರಾಕಿ ಎಂದು ಹೇಳಿದರೂ ಕೇಳದ ರಾಕಿ, ಇದು ಸರಿಯಾದ ಸಮಯವಲ್ಲ ಎಂದು ಹೇಳಿ ಹೊರಟಿದ್ದಾನೆ.

ಸತ್ಯ ಮಾಡಿದ ಪ್ರಸಾದ ಸೀದೋಯ್ತು!
ಸತ್ಯ, ಊರ್ಮಿಳಾ ಹಾಗೂ ಕೀರ್ತನಾ ಮೂರು ಪ್ರಸಾದವನ್ನು ತಯಾರಿಸಿದ್ದಾರೆ. ಕೀರ್ತನಾ ಹಾಗೂ ಊರ್ಮಿಳಾ ಮಾಡಿದ ಪ್ರಸಾದ ಕೂಡ ನೈವೇದ್ಯಕ್ಕಿಡಲು ಸಿದ್ಧವಾಗಿದೆ. ಆದರೆ, ಸತ್ಯ ಮಾಡಿದ ಪ್ರಸಾದ ಸೀದು ಹೋಗಿದೆ. ಇದನ್ನು ನೋಡಿದ ಸೀತಾ ಮತ್ತೆ ಸತ್ಯಗೆ ಬೈಯಲು ಶುರು ಮಾಡಿದ್ದಾಳೆ. ನ್ಯಾಯವಾಗಿ ಒಂದು ಪ್ರಸಾದವನ್ನೂ ಮಾಡೋದಕ್ಕೆ ಬರೋದಿಲ್ವಾ ಎಂದು ರೇಗಾಡಿದ್ದಾಳೆ. ಅರ್ಚಕರು ಮನೆ ಸೊಸೆ ಮಾಡಿದ ಪ್ರಸಾದ ಸೀದೋಗಿದೆ ಎಂದರೆ ಅದು ಅಪಶಕುನ ಎಂದು ಹೇಳಿರುವುದು ಸೀತಾಗೆ ಇನ್ನಷ್ಟು ಸಿಟ್ಟು ತರಿಸಿದೆ.

ರಿತುಗೆ ಚುಡಾಯಿಸಿದ ಪುಂಡರು!
ಇತ್ತ ರಾಕಿ ಬೇಸರ ಮಾಡಿಕೊಂಡು ಹೋಗಿದ್ದಾನೆ ಎಂದು ರಿತು ಬೇಸರಗೊಂಡಿದ್ದಾಳೆ. ಇದರಿಂದ ರಾಕಿಯನ್ನು ಹುಡುಕಿಕೊಂಡು ಬಂದಿದ್ದು, ಫೋನ್ ಮಾಡಲು ಪ್ರಯತ್ನಿಸುತ್ತಿದ್ದಾಳೆ. ರಿತು ಒಂಟಿಯಾಗಿರುವುದನ್ನು ನೋಡಿದ ಪುಂಡರು ರೇಗಿಸಲು ಮುಂದಾಗಿದ್ದಾರೆ. ನನ್ನ ನಂಬರ್ ಇದೆ ಕೊಡುತ್ತೀನಿ ಕಾಲ್ ಮಾಡು ಯಾವಾಗ ಬೇಕಿದ್ದರೂ ಸಿಗುತ್ತೀನಿ ಎಂದು ಚುಡಾಯಿಸುತ್ತಾರೆ. ಇದರಿಂದ ಕೋಪಗೊಂಡ ರಿತು ಅವರ ಬಳಿ ಹೋಗಿ ಬೈಯಲು ಶುರು ಮಾಡುತ್ತಾಳೆ.

ಪುಂಡರ ಜೊತೆ ಫೈಟ್ ಮಾಡಿದ ಸತ್ಯ!
ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರಿಲ್ಲವಾ, ನಾಚಿಕೆ ಮಾನ ಮರಿಯಾದೇ ಇಲ್ವಾ ಎಂದು ರಿತು ಆ ಹುಡುಗರನ್ನು ಪ್ರಶ್ನೆ ಮಾಡುತ್ತಾಳೆ. ಆದರೆ, ರಿತು ಮಾತಿಗೆ ಸುಮ್ಮನಾಗದ ಪುಂಡರು ಅವಳನ್ನು ಮುಟ್ಟಿ ಮಾತನಾಡಿಸಲು ಮುಂದಾಗುತ್ತಾರೆ. ಈ ವೇಳೆಗೆ ಅಲ್ಲಿಗೆ ಸತ್ಯ ಬಂದಿದ್ದು, ಪುಂಡರ ಜೊತೆಗೆ ಫೈಟ್ ಮಾಡುತ್ತಿದ್ದಾಳೆ. ಹುಡುಗರಿಗೆ ಹಿಗ್ಗಾ ಮುಗ್ಗಾ ತಳಿಸುತ್ತಿದ್ದಾಳೆ. ಸತ್ಯ ಹೊಡೆತಕ್ಕೆ ಹುಡುಗರು ಸೋತಿದ್ದು, ಆಕೆಯಿಂದ ಒದೆ ತಿನ್ನುತ್ತಿದ್ದಾರೆ. ಮುಂದೆ ಇನ್ನೇನು ಅವಾಂತರವಾಗುತ್ತದೋ ಮುಂದಿನ ಸಂಚಿಕೆಯಲ್ಲಿ ನೋಡಬೇಕು.


Click it and Unblock the Notifications











