ಅತ್ತೆ ಮನೆಯಲ್ಲಿ ಸತ್ಯಗೆ ಅಗ್ನಿ ಪರೀಕ್ಷೆ!
ಸತ್ಯ ಧಾರಾವಾಹಿಯಲ್ಲಿ ಫೈಟಿಂಗ್ ಸೀನ್ ನಿಂದ ಮತ್ತೆ ಸಿಡಿಮಿಡಿಗೊಂಡ ಸೀತಮ್ಮ. ಆದರೆ ಸೀತಮ್ಮನಿಗೆ ಶಾಕ್ ಕೊಟ್ಟಿರುವ ಗುರುಗಳು ಸತ್ಯ ಮಾಡಿದ ಸೀದ ಪೊಂಗಲ್ ದೇವರು ಸ್ವೀಕರಿಸಿದ್ದಾರಂತೆ. ಹಾಗಂತ ಗುರುಗಳು ಹೇಳಿದ್ದು ಕೇಳಿ ಸೀತಾ ಹಾಗೂ ಕೀರ್ತನಾ ಶಾಕ್ ಆಗಿದ್ದಾರೆ.
ರಿತುಳನ್ನು ಪುಂಡರು ರೇಗಿಸಿದ್ದು, ಮುಟ್ಟಲು ಬಂದಾಗ ಕಾಳಿಯಂತೆ ಬಂದ ಸತ್ಯ ಫೈಟ್ ಮಾಡಿದ್ದಾಳೆ. ದೇವಸ್ಥಾನದಲ್ಲಿದ್ದ ಪುಂಡರಿಗೆ ಚಳಿ ಬಿಡಿಸಿದ್ದಾಳೆ. ಸತ್ಯಳ ಫೈಟಿಂಗ್ ನೋಡಿ ರಿತು ಶಾಕ್ ಆಗಿದ್ದಾಳೆ. ಇತ್ತ ಸೀತಾ, ಕಾರ್ತಿಕ್ ಹಾಗೂ ಕೀರ್ತನಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮನದೊಳಗೇ ಊರ್ಮಿಳಾ ಹೆಮ್ಮೆ ಪಟ್ಟಿದ್ದಾಳೆ.
ಸತ್ಯ ಕೂಡ ಜೋಶ್‌ನಲ್ಲಿ ಸೀರೆಯುಟ್ಟಿರುವಾಗಲೇ ಫೈಟ್ ಮಾಡಿದ್ದಾಳೆ. ಇನ್ನು ಸೀರಿಯಲ್ ನೋಡಿದ ಪ್ರೇಕ್ಷಕರು ಸತ್ಯಳ ನಡೆಗೆ ಸಂತಸ ವ್ಯಕ್ತಪಡಿಸಿದ್ದು, ಹುಡುಗಿ ಎಂದರೆ ಹೀಗಿರಬೇಕು. ತಪ್ಪು ಮಾಡಿದವರಿಗೆ ಬೆಂಡೆತ್ತಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಸತ್ಯಳ ಫೈಟಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೀರೆಯಲ್ಲೇ ಫೈಟ್ ಮಾಡಿದ ಸತ್ಯ!
ರಿತುಳನ್ನು ಚುಡಾಯಿಸಿದ ಪುಂಡರಿಗೆ ಸತ್ಯ ಚಳಿ ಬಿಡಿಸಿದ್ದಾಳೆ. ನಾಲ್ಕು ಜನ ಪುಂಡರಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾಳೆ. ಇದನ್ನು ನೋಡಿ ರಿತು ಶಾಕ್ ಆಗಿದ್ದಾಳೆ. ಆದರೆ, ಇತ್ತ ಸೀತಾ ಸತ್ಯ ಫೈಟಿಂಗ್ ಮಾಡಿರುವುದನ್ನು ನೋಡಿದ ರಿತು ಗಾಬರಿಗೊಂಡಿದ್ದಾಳೆ. ಸೀತಾ ದೇವಸ್ಥಾನದಲ್ಲೂ ಸುಮ್ಮನಿರಲು ಆಗೋದಿಲ್ವಾ.? ಇಲ್ಲೂ ಗಲಾಟೆ ಮಾಡಬೇಕಾ.? ಎಲ್ಲಿ ಹೋಗುತ್ತೆ ರೌಡಿ ಬುದ್ಧಿ ಎಂದು ಬೈಯುತ್ತಾಳೆ. ಸೀತಾ ಅವರ ಮಾತಿಗೆ ಸರಿಯಾಗಿ ಅರ್ಚಕರು ಬಂದು ಅಯ್ಯೋ ನಿಮ್ಮ ಸೊಸೆ ಇದೇನು ಮಾಡಿದಳು. ದೇವಸ್ಥಾನ ಹೀಗೆ ಮಾಡಿದ್ದು ಅಪಚಾರವಾದಂತಾಯ್ತು ಎಂದೆಲ್ಲಾ ಮಾತನಾಡುತ್ತಾರೆ. ಕೀರ್ತನಾ, ಕಾರ್ತಿಕ್, ಸೀತಾ ಎಲ್ಲರೂ ಸತ್ಯಗೆ ಬೈಯುತ್ತಾರೆ.

ಸತ್ಯ ಮಾಡಿದ ಪ್ರಸಾದವೇ ದೇವರಿಗೆ ಮೀಸಲು!
ಇದೇ ಸಮಯಕ್ಕೆ ಸರಿಯಾಗಿ ಬಂದ ಗುರುಗಳು ಪುಂಡರಿಗೆ ಸತ್ಯ ಹೊಡೆದಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷಿಸಬೇಕು. ಸತ್ಯ ಮಾಡಿದ್ದರಲ್ಲಿ ತಪ್ಪಿಲ್ಲ ಎಂದಾಗ ಆಕೆ ಮಾಡಿದ ಪ್ರಸಾದದ ವಿಚಾರ ಬರುತ್ತದೆ. ಆಗ ಗುರುಗಳು ಸೀದಿದ್ದ ಪ್ರಸಾದವನ್ನೇ ದೇವರು ಸ್ವೀಕರಿಸಿರುವುದು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಎಲ್ಲರೂ ಶಾಕ್ ಆಗುತ್ತಾರೆ. ಸಾಧ್ಯವೇ ಇಲ್ಲ ಎಂದು ಕೀರ್ತನಾ ಕೂಗಾಡುತ್ತಾಳೆ. ಆಗ ಗುರುಗಳು ಸಮಾಧಾನವಾಗಿ ಗೋವಿನ ರೂಪದಲ್ಲಿ ಬಂದ ದೇವರು ಸತ್ಯ ಮಾಡಿದ ಪ್ರಸಾದವನ್ನೇ ಸವಿದಿದೆ. ಹಸು ಸೀದಿದ್ದ ಪೊಂಗಲ್ ಅನ್ನು ತಿಂದ ಬಗ್ಗೆ ವಿವರಣೆ ಕೊಡುತ್ತಾರೆ. ಆಗ ಗುರುಗಳ ಮಾತನ್ನು ಕೇಳಿದ ಎಲ್ಲರೂ ದಿಗ್ಭ್ರಾಂತಗೊಳ್ಳುತ್ತಾರೆ.

ರಿತು ಬಗ್ಗೆ ಬೇಸರಿಸಿಕೊಂಡ ರಾಕೇಶ್!
ಇತ್ತ ರಾಕೇಶ್ ನಾವು ರಿತುಗೆ ಬುದ್ಧಿ ಹೇಳಿ ಬರಬೇಕಿತ್ತು. ಇನ್ಮುಂದೆ ಪ್ರೀತಿ ಅಂತೆಲ್ಲಾ ಯೋಚಿಸುವುದನ್ನು ಬಿಟ್ಟು, ಓದಿನ ಕಡೆಗೆ ಗಮನ ಕೊಡು ಎನ್ನಬೇಕಿತ್ತಾ. ಹಾಗೆಯೇ ಬಂದು ತಪ್ಪು ಮಾಡಿದೆ ಎಂದು ಕಾಕ್ರೋಜ್ ಬಳಿ ಹೇಳುತ್ತಿರುತ್ತಾನೆ. ಆಗ ಕಾಕ್ರೋಜ್ ಅಂದ್ರೆ ನಿಂಗೂ ಡಿಂಗ್ ಆಗಿದೆ ಅಂತಾಯ್ತು ಎಂದಾಗ ರಾಕಿ ಇಲ್ಲ ಕಣೋ, ರಿತು ದೊಡ್ಡ ಮನೆ ಹುಡುಗಿ ಅದೆಲ್ಲಾ ಸರಿ ಹೋಗುವುದಿಲ್ಲ ಎಂದು ಹೇಳುತ್ತಾನೆ.

ಸತ್ಯಗೆ ಬುದ್ಧಿ ಮಾತು ಹೇಳಿದ ಗುರುಗಳು
ಗುರುಗಳು ಸತ್ಯಳನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗುತ್ತಾರೆ. ಸಮಾಧಾನದಿಂದ ಇರಬೇಕು. ತಾಳ್ಮೆಯೊಂದೇ ಸತ್ಯಳ ಮೂಲ ಮಂತ್ರವಾಗಿರಬೇಕು. ಒಳ್ಳೆಯಕಾಲ ಬರುತ್ತದೆ. ಎಷ್ಟು ಸಮಾಧಾನದಿಂದ ಇರುತ್ತೀಯೋ ಅಷ್ಟೂ ಒಳ್ಳೆಯದು ಎಂದೆಲ್ಲಾ ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಸತ್ಯ ಕೂಡ ವಿಚಾರಗಳನ್ನು ಗುರುಗಳ ಬಳಿ ಹೇಳಿಕೊಳ್ಳುತ್ತಾಳೆ. ಗುರುಗಳು ಆಕೆಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳುತ್ತಾರೆ.


Click it and Unblock the Notifications











