ದಿವ್ಯಾಗೆ ಸತ್ಯ ಹೇಳಿ ಸಿಕ್ಕಿ ಬಿದ್ದ ಬಾಲ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ದಿವ್ಯಾಳನ್ನು ಮೆಂಟೈನ್ ಮಾಡಲು ಕಷ್ಟಪಡುತ್ತಿರುವ ಬಾಲ, ತಲೆ ಕೆಡಿಸಿಕೊಂಡು ಕೀರ್ತನಾಗೆ ಕರೆ ಮಾಡಿದ್ದಾನೆ. ಕೀರ್ತನಾಳನ್ನು ಬ್ಲಾಕ್‌ಮೇಲ್ ಮಾಡಿ ಬಾಲ ಹಣ ಕೇಳಿದ್ದಾನೆ. ಕೀರ್ತನಾ ಕೂಡ ಹೆದರಿಕೊಂಡು ಹಣ ಕೊಟ್ಟಿದ್ದು, ಈಗ ಬಾಲನಿಗೆ ಹೊಸ ತಲೆ ನೋವಾಗಿಬಿಟ್ಟಿದ್ದಾನೆ.

ಇತ್ತ, ಸತ್ಯಗೆ ಮನೆಯಲ್ಲಿ ಹೇಗಿರಬೇಕು.? ಏನು ಮಾಡಬೇಕು ಎಂಬುದು ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಕಾರ್ತಿಕ್‌ ನೋಡಿದರೆ, ಸತ್ಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾನೆ. ಸತ್ಯ ತಾಯಿ ಜಾನಕಿ ಜೊತೆಗೆ ಫೋನ್‌ನಲ್ಲಿ ನಡೆದ ಘಟನೆಯನ್ನೆಲ್ಲಾ ಹೇಳಿಕೊಂಡು ಕಣ್ಣೀರಿಟ್ಟಿದ್ದಾಳೆ.

ಇನ್ನು ಕಾರ್ತಿಕ್‌ ಅಪ್ಪನಿಗೆ ಕೊಟ್ಟ ಒಂದು ಮಾತಿನಿಂದಾಗಿ ತನ್ನ ಇಡೀ ಜೀವನ ನಾಶವಾಯಿತಲ್ಲ ಎಂದು ಬೇಸರಗೊಂಡಿದ್ದಾನೆ. ಇದೇ ಬೇಸರದಲ್ಲಿ ಸ್ನೇಹಿತ ಮಂಜನ ಜೊತೆಗೆ ಕೂತು ಕುಡಿದಿದ್ದಾನೆ. ತನ್ನ ಮನದಾಳದ ಮಾತುಗಳನ್ನು ಮಂಜನ ಬಳಿ ಹೇಳಿಕೊಂಡಿದ್ದಾನೆ.

ಮಗಳ ಕಷ್ಟ ಕೇಳಿ ಕಣ್ಣೀರಿಟ್ಟ ಜಾನಕಿ

ಮಗಳ ಕಷ್ಟ ಕೇಳಿ ಕಣ್ಣೀರಿಟ್ಟ ಜಾನಕಿ

ಸತ್ಯ ಅಮ್ಮ ಜಾನಕಿ ಬಳಿ ಮನೆಯಲ್ಲಿ ನಡೆಯುತ್ತಿರುವುದನ್ನೆಲ್ಲಾ ಹೇಳಿಕೊಂಡಿದ್ದಾಳೆ. ನನಗೆ ಇಲ್ಲಿ ತುಂಬಾ ಕಷ್ಟವಾಗುತ್ತಿದೆ. ನಾನು ಅಲ್ಲಿಗೇ ಬಂದು ಬಿಡುತ್ತೇನೆ. ವಾಪಸ್‌ ಮಾತನಾಡಬೇಕು ಎನಿಸಿದರೂ ಮಾತನಾಡುವುದಿಲ್ಲ. ಕೋಪ ಬಂದರೂ ನಿಮ್ಮ ಮಾತುಗಳನ್ನು ನೆನಪಿಸಿಕೊಂಡು ಸುಮ್ಮನೆ ಇದ್ದೀನಿ. ಇಲ್ಲಿ ನನಗೆ ಹೆಜ್ಜೆ ಹೆಜ್ಜೆಗೂ ಕಷ್ಟವಾಗುತ್ತಿದೆ ಎಂದು ಹೇಳುತ್ತಾಳೆ. ಆಗ ಜಾನಕಿ ಕಾರ್ತಿಕ್‌ ಬಳಿ ಎಲ್ಲಾ ಹೇಳಿಕೋ ಎಂದು ಹೇಳುತ್ತಾಳೆ. ಆಗ ಸತ್ಯ ಕಾರ್ತಿಕ್‌ ಕೂಡ ತನ್ನ ಮಾತುಗಳನ್ನು ನಂಬುತ್ತಿಲ್ಲ. ನನ್ನನ್ನು ಮದುವೆಯಾಗುವುದೇ ಕಾರ್ತಿಕ್‌ಗೆ ಇಷ್ಟವಿರಲಿಲ್ಲ. ನನ್ನ ಮಾತನ್ನು ಅವನು ಕೇಳೋದಿಲ್ಲ ಎಂದು ಹೇಳುತ್ತಾಳೆ.

ಬೀಗರ ಊಟಕ್ಕೆ ಕರೆದ ಜಾನಕಿ!

ಬೀಗರ ಊಟಕ್ಕೆ ಕರೆದ ಜಾನಕಿ!

ಈ ಮಾತುಗಳನ್ನೆಲ್ಲಾ ಕೇಳಿಸಿಕೊಂಡ ಜಾನಕಿ ಬೀಗರ ಊಟಕ್ಕೆ ಮನೆಗೆ ಬನ್ನಿ ಎಂದಿದ್ದಾಳೆ. ನೀನು ಮತ್ತೆ ಕಾರ್ತಿಕ್‌ ನಾಳೆಯೇ ಮನೆಗೆ ಬನ್ನಿ, ಬೀಗರ ಊಟಕ್ಕೆ ಸೀತಾ ಅವರನ್ನು ಫೋನ್ ಮಾಡಿ ಕರೆಯುತ್ತೇನೆ ಎಂದು ಹೇಳುತ್ತಾಳೆ. ಆಗ ಸತ್ಯ ಅದು ಸಾಧ್ಯವೇ ಇಲ್ಲ. ಕಾರ್ತಿಕ್‌ ನನ್ನ ಮುಖ ನೋಡೋದಕ್ಕೆ ಇಷ್ಟ ಪಡುವುದಿಲ್ಲ. ಇನ್ನು ನಮ್ಮ ಮನೆಗೆ ಅದೂ ನನ್ನ ಜೊತೆಗೆ ಬರುತ್ತಾನಾ. ನಾನೇನೋ ಹೇಳುತ್ತಿದ್ದರೆ ನೀನೇನೋ ಹೇಳುತ್ತಿಯಾ ಎಂದು ಗೋಳಾಡುತ್ತಾಳೆ. ಆಗ ಜಾನಕಿ ನಾನು ಹೇಳುತ್ತಿರುವುದು ನಿನ್ನ ಒಳ್ಳೆಯದಕ್ಕೆ, ನೀನು ಮತ್ತೆ ಅಳಿಯ ಇಬ್ಬರೂ ನಾಳೆ ನಮ್ಮ ಮನೆಗೆ ಬನ್ನಿ ಎಂದು ಹೇಳುತ್ತಾಳೆ.

ಹಣವಿಲ್ಲ ಎಂದು ದಿವ್ಯಾಗೆ ಸತ್ಯ ಹೇಳಿದ ಬಾಲ!

ಹಣವಿಲ್ಲ ಎಂದು ದಿವ್ಯಾಗೆ ಸತ್ಯ ಹೇಳಿದ ಬಾಲ!

ಬಾಲ, ಕೀರ್ತನಾ ಬಳಿ ಬ್ಲ್ಯಾಕ್‌ಮೇಲ್‌ ಮಾಡಿ ಹಣವನ್ನು ಪಡೆದಿದ್ದಾನೆ. ತನ್ನ ಬಜೆಟ್ ಪ್ರಕಾರ ಚಿಕ್ಕ ರೂಮ್‌ ಮಾಡಿದ್ದಾನೆ. ಇಷ್ಟು ಚಿಕ್ಕ ಹೋಟೆಲ್‌ನಲ್ಲಿ ನಾನಿರುವುದಿಲ್ಲ ಎಂದು ದಿವ್ಯಾ ಹಠ ಮಾಡಿದ್ದಾಳೆ. ಆಗ ಬಾಯಿ ತಪ್ಪಿ ಬಾಲ, ನನ್ನ ಬಜೆಟ್ ಇರೋದೇ ಇಷ್ಟು ಎಂದಾಗ, ದಿವ್ಯಾ ಶಾಕ್‌ ಆಗಿದ್ದಾಳೆ. ಆಗ ಬಾಲ ತನ್ನ ತಂದೆ ಎಲ್ಲಾ ಅಕೌಂಟ್ ಬ್ಲಾಕ್‌ ಮಾಡಿದ್ದು, ತನ್ನ ಬಳಿ ಹಣವಿಲ್ಲ ಎಂದು ಹೇಳುತ್ತಾನೆ. ಆಗ ದಿವ್ಯಾ ಶಾಕ್‌ ಆಗುತ್ತಾಳೆ.

ಸತ್ಯ ಪರವಾಗಿ ನಿಂತ ಸೀತಾ!

ಸತ್ಯ ಪರವಾಗಿ ನಿಂತ ಸೀತಾ!

ಸತ್ಯ ಮಾತುಗಳನ್ನು ಕೇಳಿಸಿಕೊಂಡ ಊರ್ಮಿಳಾ, ಲಕ್ಷ್ಮಣನ ಬಳಿ ನಡೆದಿದ್ದೆಲ್ಲವನ್ನೂ ಹೇಳುತ್ತಾಳೆ. ಆದರೆ ಊರ್ಮಿಳಾ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಲಕ್ಷ್ಮಣ, ಸರಿ ಹೋಗುತ್ತಾರೆ. ಈಗಲೇ ಯೋಚಿಸುವಂತಹದ್ದು ಏನೂ ಆಗಿಲ್ಲ ಎಂದು ಹೇಳಿ ಸುಮ್ಮನಾಗುತ್ತಾನೆ. ಇತ್ತ ಕಾರ್ತಿಕ್‌ ಮಂಜನ ಬಳಿ ನಡೆದ ಘಟನೆಯನ್ನೆಲ್ಲಾ ಹೇಳಿಕೊಳ್ಳುತ್ತಿರುತ್ತಾನೆ. ಆಗ ಕಾರ್ತಿಕ್‌ ಮಾತುಗಳನ್ನು ಸೀತಾ ಕೇಳಿಸಿಕೊಳ್ಳುತ್ತಾಳೆ. ಮಗನ ಪರಿಸ್ಥಿತಿ ಹೀಗಾಯಿತಲ್ಲ ಎಂದು ಬೇಸರಪಟ್ಟುಕೊಳ್ಳುತ್ತಾಳೆ.

More from Filmibeat

English summary
Sathya Tv Serial Written Update On May 28th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X