ಮನೆಗೆ ಬಂದು ಬೀಡುತ್ತೀನಿ ಅಮ್ಮ ಎಂದು ಗಳಗಳನೇ ಅತ್ತ ಸತ್ಯ
ಸತ್ಯ ಧಾರಾವಾಹಿಯಲ್ಲಿ ಈಗ ಸತ್ಯ ಹಾಲು ಚೆಲ್ಲಿದ್ದಕ್ಕೆ ಕಾರ್ತಿಕ್, ಕೀರ್ತನಾ ಹಾಗೂ ಸೀತಾ ಬೈದಿದ್ದಾರೆ. ಅಳುತ್ತಿರುವ ಸತ್ಯಗೆ ಸೀತಾ ಇನ್ಯಾವತ್ತೂ ನೀನು ನಮ್ಮ ಮನೆಯ ಅಡುಗೆ ಮನೆಗೆ ಕಾಲಿಡಬಾರದು ಎಂದು ವಾರ್ನಿಂಗ್ ಕೊಟ್ಟಿದ್ದಾಳೆ.
ಸತ್ಯ ತನ್ನ ಪರಿಸ್ಥಿತಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾಳೆ. ಏನು ಮಾಡಬೇಕು ಎಂದು ಅರ್ಥವಾಗದೇ ಒದ್ದಾಡುತ್ತಿದ್ದಾಳೆ. ಮುಂದೆ ಈ ಮನೆಯಲ್ಲಿ ಹೇಗೆ ಜೀವನ ನಡೆಸುವುದು ಎಂದು ಯೋಚಿಸುತ್ತಿದ್ದಾಳೆ. ಆದರೆ ಇತ್ತ ಇವರಿಬ್ಬರ ಮೊದಲ ರಾತ್ರಿಯ ಶಾಸ್ತ್ರಕ್ಕೆ ತಯಾರಿಯನ್ನು ನಡೆಸಲಾಗುತ್ತಿದೆ.
ಸತ್ಯ ಹಾಗೂ ಕಾರ್ತಿಕ್ ಮೊದಲ ರಾತ್ರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಡ್ ರೂಮ್ ಅರೇಂಜ್ ಮಾಡಲು ಲಕ್ಷ್ಮಣ, ಮಂಜುಗೆ ಹೇಳಿದ್ದಾರೆ. ಸತ್ಯ ಹಾಗೂ ಕಾರ್ತಿಕ್ ಫಸ್ಟ್ ನೈಟ್ ಆದರೆ, ಇಬ್ಬರ ನಡುವಿನ ಮನಸ್ತಾಪ ಸರಿ ಹೋಗುತ್ತದೆ ಎಂದು ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ನಿಜವಾಗಲೂ ಸತ್ಯ ಹಾಗೂ ಒಂದಾಗುತ್ತಾರಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಸತ್ಯಗೆ ಚಿಕ್ಕತ್ತೆ ಊರ್ಮಿಳಾ ಸಮಾಧಾನ!
ಸತ್ಯ ಬಿಸಿ ಪಾತ್ರೆ ತಗುಲಿದ್ದರಿಂದ ಕೈ ಸುಟ್ಟುಕೊಂಡಿದ್ದಾಳೆ. ಕೈ ಬೆರಳುಗಳಿಗೆ ಔಷಧಿ ಹಚ್ಚಿಕೊಳ್ಳುತ್ತಿದ್ದಾಳೆ. ಇದನ್ನು ನೋಡಿದ ಊರ್ಮಿಳಾ ಬಂದು ಆಯಿಂಟ್ ಮೆಂಟ್ ಹಚ್ಚಿದ್ದಾಳೆ. ಇದೆಲ್ಲಾ ಬಿಡಿ, ಗ್ಯಾರೇಜ್‌ನಲ್ಲಿ ನನಗೆ ಅಭ್ಯಾಸವಾಗಿಬಿಟ್ಟಿದೆ ಎನ್ನುತ್ತಾಳೆ. ಆದರೆ, ಊರ್ಮಿಳಾ ನಿನಗೆ ನೋವಾಗುತ್ತೆ ಎಂದು ಹೇಳುತ್ತಾಳೆ. ಸತ್ಯ ಊರ್ಮಿಳಾಳನ್ನು ಆಂಟಿ ಎನ್ನುತ್ತಿರುತ್ತಾಳೆ. ಆಗ ಊರ್ಮಿಳಾ ನನ್ನ ಚಿಕ್ಕತ್ತೆ ಅಂತ ಕರಿ. ಈಗ ನೀನು ನನ್ನ ಸೊಸೆ ಎಂದು ಕೇಳುತ್ತಾಳೆ. ಆಗ ಸತ್ಯ, ಸರಿ ಚಿಕ್ಕತ್ತೆ ಎಂದು ಕರೆಯುತ್ತಾಳೆ.

ಸಂಪ್ರದಾಯಗಳನ್ನು ಕಲಿಯುತ್ತಾಳ ಸತ್ಯ?
ಹಾಗೆ ಮಾತನಾಡುತ್ತಾ ಊರ್ಮಿಳಾ, ಇದು ಹೊಸ ಮನೆ, ಹೊಸ ಜಾಗ, ಹೊಸ ಜನ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಇನ್ನು ಸೀತಕ್ಕನಿಗೆ ಶಾಸ್ತ್ರ, ಸಂಪ್ರಾದಯದ ಮೇಲೆ ಒಲವು ಜಾಸ್ತಿ. ಹಾಗಾಗಿ ಹೀಗಾಡುತ್ತಾಳೆ ಅಷ್ಟೇ. ನೀನು ಬೇಗ ಸಂಪ್ರದಾಯಗಳನ್ನೆಲ್ಲಾ ಕಲಿತುಕೊಂಡು ಬಿಡು. ಆಗ ನೀನೇ ಅವರ ಮನಸ್ಸನ್ನು ಗೆಲ್ಲಬಹುದು. ಇದರ ಜವಾಬ್ದಾರಿ ನನ್ನದು ಎಂದು ಊರ್ಮಿಳಾ ಹೇಳುತ್ತಾಳೆ.

ಅಮ್ಮನ ಮುಂದೆ ಸತ್ಯ ಕಣ್ಣೀರು!
ಸತ್ಯಗೆ ಜಾನಕಿ ಫೋನ್ ಮಾಡುತ್ತಾಳೆ. ಆಗ ಫೋನ್ ರಿಸೀವ್ ಮಾಡುವ ಸತ್ಯ, ಅಮ್ಮ ನನಗೆ ಇಲ್ಲಿ ಇರೋದಕ್ಕೆ ಆಗುತ್ತಿಲ್ಲ. ಅಲ್ಲಿಗೆ ಬಂದು ಬಿಡುತ್ತೇನೆ ಅಮ್ಮ ಎಂದು ಅಳುತ್ತಾಳೆ. ಜಾನಕಿ ಸತ್ಯ ಮಾತಿಗೆ ಬೇಸರ ಮಾಡಿಕೊಳ್ಳುತ್ತಾಳೆ. ಯಾಕೆ ಏನಾಯ್ತು ಎಂದು ಕೇಳುತ್ತಾಳೆ. ಸತ್ಯ ಅದಕ್ಕೆ ಈ ಮನೆಗೆ ನಾನು ಸೊಸೆಯಾಗಿ ಬಂದಿರುವುದು ಯಾರಿಗೂ ಇಷ್ಟವಿಲ್ಲ. ನನ್ನಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ಅಳುತ್ತಿರುತ್ತಾಳೆ.

ಪಾಪಾ ದಿವ್ಯಾ ಇನ್ನೂ ಬಾಲನ ಸುಳ್ಳಿನ ಮಾತನ್ನು ನಂಬಿದ್ದಾಳೆ!
ಇತ್ತ ದಿವ್ಯ ಹಾಗೂ ಬಾಲ ಮಾತನಾಡುತ್ತಿರುತ್ತಾರೆ. ಮೀಡಿಯಾ ಬಳಿ ದಿವ್ಯಾ ಮಾತನಾಡಿದ್ದು ತಪ್ಪು. ಇದೆಲ್ಲಾ ವೀಡಿಯೋಗಳು ಈಗ ಲೀಕ್ ಆದರೆ ಅಪ್ಪ-ಅಮ್ಮ ನೋಡಿ ಬೇಜಾರು ಮಾಡಿಕೊಳ್ಳುತ್ತಾರೆ. ಏನು ಮಾಡೋದು ಎಂದು ಕೇಳುತ್ತಾನೆ. ಇದಕ್ಕೆ ದಿವ್ಯ ನಾನು ಯಾವಾಗಲೂ ಹೀಗೆ ಏನಾದರೂ ಒಂದು ಎಡವಟ್ಟನ್ನು ಮಾಡುತ್ತಲೇ ಇರುತ್ತೇನೆ. ನನ್ನ ಕ್ಷಮಿಸು ಬಾಲ ಎಂದು ಹೇಳುತ್ತಾಳೆ. ಅದಕ್ಕೆ ನಾವೀಗ ಮೀಡಿಯಾಗೆ ಹಣ ಕೊಟ್ಟು ಸೈಲೆಂಟ್ ಮಾಡಿಸಬೇಕು. ಅದನ್ನೇ ಯೋಚಿಸುತ್ತಿದ್ದೇನೆ ಎಂದು ಹೇಳುತ್ತಾನೆ. ಮುಂದೇನಾಗುತ್ತೋ ಎಂಬುದನ್ನು ಪ್ರೇಕ್ಷಕರು ಕಾದು ನೋಡಬೇಕಿದೆ.


Click it and Unblock the Notifications











