'ಸತ್ಯ'ಗಾಗಿ ಜಾನಕಿ ಮಾಸ್ಟರ್ ಪ್ಲ್ಯಾನ್!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಇಂದು ಕುಡಿದು ಬಂದ ಕಾರ್ತಿಕ್ ಸಂಭಾವನಿಸುವುದೇ ಸತ್ಯಗೆ ಕಷ್ಟವಾಗಿತ್ತು. ಇಷ್ಟವಿಲ್ಲದ ಮದುವೆಯಾಗಿ, ಜೀವನ ಪೂರ್ತಿ ಹೆಣಗಾಡುವಂತಾಯ್ತಲ್ಲ ಎಂದು ಕಾರ್ತಿಕ್ ಕಂಠ ಪೂರ್ತಿ ಕುಡಿದು ಬಂದಿದ್ದಾನೆ. ಇದರಿಂದ ಸತ್ಯ ಬೇಸರಗೊಂಡಿದ್ದಾಳೆ.

ಇನ್ನು ಮಗ ಕುಡಿಯುತ್ತಿರುವುದನ್ನು ನೋಡಿದ ಸೀತಾ ನೊಂದುಕೊಂಡಿದ್ದಾನೆ. ಮಗನ ಸ್ಥಿತಿ ಕೆಟ್ಟಿರುವುದಕ್ಕೆ ಕಣ್ಣೀರು ಹಾಕಿದ್ದು, ಇದನ್ನು ನೋಡಿದ ಲಕ್ಷ್ಮಣ ಸೀತಾಳನ್ನು ಸಮಾಧಾನ ಮಾಡಿದ್ದಾನೆ. ಈಗೇನು ಕಾರ್ತಿಕ್‌ನನ್ನು ಮಾತನಾಡಿಸುವುದು ಬೇಡ ಎಂದು ಹೇಳಿದ್ದಾನೆ.

ಇತ್ತ ಬಾಲನ ಕಷ್ಟ ಅವನಿಗಷ್ಟೇ ಗೊತ್ತು ಎಂಬಂತಾಗಿದೆ. ಜೇಬಲ್ಲಿ ಕಾಸಿಲ್ಲ. ದಿವ್ಯಾ ಹಠ ಬಿಡುತ್ತಿಲ್ಲ. ತನಗೆ ರಾಯಲ್‌ ಹೋಟೆಲ್‌ ಬೇಕು. ನಾನ್‌ ಕಾಂಟಿನೆಂಟಲ್ ಊಟ ಬೇಕು ಎಂದೆಲ್ಲಾ ಹಠ ಮಾಡುತ್ತಿದ್ದಾಳೆ. ಇದರಿಂದ ಬಾಲನ ತಲೆ ಕೆಟ್ಟೋಗಿದೆ. ಇವಳನ್ನು ಮ್ಯಾನೇಜ್‌ ಮಾಡುವುದು ಹೇಗೆ ಎಂಬುದೇ ಗೊತ್ತಾಗದೇ, ಒಳಗೊಳಗೇ ಒದ್ದಾಡುತ್ತಿದ್ದಾನೆ.

ಸತ್ಯ ಮನೆಗೆ ಹೋಗಲು ಕಾರ್ತಿಕ್ ನಿರಾಕರಣೆ!

ಸತ್ಯ ಮನೆಗೆ ಹೋಗಲು ಕಾರ್ತಿಕ್ ನಿರಾಕರಣೆ!

ಕಾರ್ತಿಕ್‌ ಕಂಠ ಪೂರ್ತಿ ಕುಡಿದು ರೂಮಿಗೆ ಬಂದಿದ್ದಾನೆ. ತನಗೆ ಸತ್ಯ ಸಹಾಯ ಬೇಡ ಎಂದು ಹೇಳಿ ತಟ್ಟಾಡುತ್ತಾ ಕೆಳಗೆ ಬಿದ್ದಿದ್ದಾನೆ. ಇಷ್ಟವಿಲ್ಲದೇ ನಿನ್ನನ್ನು ಮದುವೆಯಾಗಿದ್ದೇನೆ. ಪ್ಲ್ಯಾನ್ ಮಾಡಿ ಮದುವೆಯಾಗಿದ್ದೀಯಾ ಸತ್ಯ. ಜೀವನ ಪೂರ್ತಿ ನನ್ನ ಹೆಣದ ಜೊತೆಗೆ ಸಂಸಾರ ಮಾಡು ಅಂತೆಲ್ಲಾ ಕುಡಿದ ಮತ್ತಿನಲ್ಲಿ ಮಾತನಾಡಿದ್ದಾನೆ. ನಾಡಿದ್ದು ನಮ್ಮ ಮನೆಯಲ್ಲಿ ಬೀಗರ ಊಟಕ್ಕೆ ಅಮ್ಮ ಕರೆದಿದ್ದಾರೆ. ನಾವು ಹೋಗಬೇಕು ಎಂದು ಸತ್ಯ ಹೇಳಿದ್ದಕ್ಕೆ, ಕಾರ್ತಿಕ್‌ ನಾನು ಬರೋದಿಲ್ಲ ಅದೇನು ಮಾಡಿಕೊಳ್ಳುತ್ತೀಯೋ ಮಾಡಿಕೋ. ಇಷ್ಟು ದಿನ ನೀನು ಆಟವಾಡಿಸಿದೆ. ಈಗ ನನ್ನ ಟೈಮ್‌ ನಾನು ಬರಲ್ಲ ಎಂದು ಹೇಳಿ ಹೋಗುತ್ತಾನೆ.

ಮಗನನ್ನು ಕಂಡು ಮರುಗಿದ ಸೀತಾ

ಮಗನನ್ನು ಕಂಡು ಮರುಗಿದ ಸೀತಾ

ಇನ್ನು ಕಾರ್ತಿಕ್‌ ಮತ್ತೆ ಸೋಫಾ ಮೇಲೆ ಮಲಗಿಕೊಂಡಿದ್ದಾನೆ. ಇದನ್ನು ನೋಡಿದ ಸೀತಾ ನೊಂದುಕೊಂಡು ಮಗನಿಗೆ ಬೆಡ್‌ ಶೀಟ್‌ ಹೊದಿಸಿದ್ದಾಳೆ. ಕಾರ್ತಿಕ್‌ ಒಳಗೆ ಮಲ್ಕೊಳಪ್ಪ ಎಂದು ಮಾತನಾಡಿಸಿದಾಗ ನಿದ್ದೆಯಲ್ಲಿ ಕಾರ್ತಿಕ್‌ ಮಾತನಾಡಿದ್ದಾನೆ. ಅಪ್ಪ ನೀವು ನನಗೆ ಮೋಸ ಮಾಡಿದ್ದೀರಿ. ಮಾತು ತೆಗೆದುಕೊಂಡು ಸತ್ಯಳಿಗೆ ತಾಳಿ ಕಟ್ಟುವಂತೆ ಮಾಡಿ ನನ್ನ ಬದುಕನ್ನೇ ಹಾಳು ಮಾಡಿದಿರಿ ಎಂದಿದ್ದಾನೆ. ಸತ್ಯ ನನಗೆ ನೀನು ಅಂದರೆ ಇಷ್ಟವಿಲ್ಲ. ಪ್ಲಾನ್ ಮಾಡಿ ಮದುವೆಯಾಗಿ ನನಗೆ ಮೋಸ ಮಾಡಿದ್ದೀಯಾ. ನನ್ನ ಜೀವನ ಪೂರ್ತಿ ನಾನು ನಿನ್ನನ್ನು ದ್ವೇಷಿಸುತ್ತೇನೆ. ಐ ಹೇಟ್ ಯೂ ಎಂದು ಹೇಳಿದ್ದಾನೆ. ಈ ಮಾತುಗಳನ್ನು ಕೇಳಿದ ಸೀತಾ ಮರುಗಿದ್ದಾಳೆ. ಮಗನ ಸ್ಥಿತಿ ಹೀಗಾಯಿತಲ್ಲ ಎಂದು ಕೊರಗುತ್ತಿದ್ದಾಳೆ.

ಬೀಗರ ಊಟಕ್ಕೆ ಹೋಗುವಂತೆ ಹೇಳಿದ ರಾಯರು!

ಬೀಗರ ಊಟಕ್ಕೆ ಹೋಗುವಂತೆ ಹೇಳಿದ ರಾಯರು!

ಸತ್ಯ ಎಲ್ಲರಿಗೂ ಕಾಫಿ ತಂದುಕೊಟ್ಟಿದ್ದಾಳೆ. ಸೀತಾ ಕಾಫಿ ಬೇಡ ಎಂದಿದ್ದು, ಕಾರ್ತಿಕ್‌ ಕಾಫಿಯನ್ನು ನೇರವಾಗಿ ತಿರಸ್ಕರಿಸಿದ್ದಾನೆ. ಇನ್ನು ಆಫೀಸಿಗೆ ಬರುತ್ತೀನಿ ಎಂದ ಕಾರ್ತಿಕ್‌ಗೆ ಬೇಡ ನೀನು ಇಂದು ಸತ್ಯ ಮನೆಗೆ ಹೋಗು, ಬೀಗರ ಊಟಕ್ಕೆ ನಾವು ನಾಳೆ ಬರುತ್ತೀವಿ ಎಂದು ರಾಯರು ಹೇಳಿದ್ದಾರೆ. ಕಾರ್ತಿಕ್‌ ಹೋಗಲ್ಲ ಎಂದಿದ್ದಕ್ಕೆ ಹೋಗಲೇಬೇಕು ಎಂದು ತಾಕೀತು ಮಾಡಿದ್ದು, ಸೀತಾ ಇದು ಸಂಪ್ರದಾಯ ಹೋಗು ಎಂದು ಹೇಳಿದ್ದಾಳೆ. ಈಗ ಕಾರ್ತಿಕ್‌ಗೆ ಬೇರೆ ದಾರಿ ಇಲ್ಲದಂತಾಗಿದೆ.

ಬೀಗರ ಊಟಕ್ಕೆ ತಯಾರಿ!

ಬೀಗರ ಊಟಕ್ಕೆ ತಯಾರಿ!

ಇತ್ತ ಸತ್ಯ ದೊಡ್ಡಪ್ಪ ಮನೆಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳುವ ಯೋಚನೆಯಲ್ಲಿ ಇದ್ದಾನೆ. ಇದೇ ವೇಳೆಗೆ ರಾಕೇಶ್ ಹಾಗೂ ಸತ್ಯ ಸ್ನೇಹಿತರು ಮನೆಗೆ ರೇಷನ್ ತಂದಿದ್ದಾರೆ. ಬೀಗರ ಊಟ ಗ್ರ್ಯಾಂಡ್‌ ಆಗಿ ಮಾಡಲು ಹುಡುಗರು ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ರೇಷನ್ ತಂದಿದ್ದಾರೆ. ಸತ್ಯಳ ದೊಡ್ಡಪ್ಪ ಯಾಕೆ ಎಂದು ಕೇಳಿದಾಗ ವಿಚಾರ ಗೊತ್ತಾಗಿ ಒಳಗೊಳಗೇ ಖುಷಿಪಟ್ಟಿದ್ದಾನೆ. ಅಂತೂ ಇಂತೂ ಸತ್ಯ ಬರುತ್ತಿದ್ದಾಳೆ. ರೋಗಿ ಬಯಸಿದ್ದು ಬಿರಿಯಾನಿ, ವೈದ್ಯ ಹೇಳಿದ್ದು ಬಿರಿಯಾನಿ ಎಂದು ಸಂತಸಗೊಂಡಿದ್ದಾನೆ.

ಈ ನಡುವೆ ಬಾಲ ದಿವ್ಯಾಗೆ ತನ್ನ ತಂದೆಯನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದಾನೆ. ಆದರೆ, ತಂದೆಯ ಪಾತ್ರದಲ್ಲಿ ಈ ಹಿಂದೆ ನಟಿಸಿದ ಆರ್ಟಿಸ್ಟ್ ಈಗ ಬರಲು ನಿರಾಕರಿಸಿದ್ದಾನೆ. ಇದರಿಂದ ಬಾಲ ಒದ್ದಾಡುತ್ತಿದ್ದು, ಈ ಮಾತುಗಳನ್ನೆಲ್ಲಾ ಹೋಟೆಲ್‌ನಲ್ಲಿ ಕೆಲಸ ಮಾಡುವವನು ಕೇಳಿಸಿಕೊಂಡಿದ್ದಾನೆ. ಆದರೆ ಮುಂದೇನಾಗುತ್ತೋ ಗೊತ್ತಿಲ್ಲ.

More from Filmibeat

English summary
Sathya Tv Serial Written Update On june 30th Episode, Big Twist In Sathya Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X