ಅತ್ತೆ ಮನೆಯಲ್ಲಿ ಸತ್ಯಗೆ ಹಿಂಸೆ: ಸತ್ಯ ಪರ ನಿಂತ ಮಾವ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಪ್ರತಿಯೊಬ್ಬರ ನಡೆಯೂ ದಿಕ್ಕಾ ಪಾಲಾಗಿದೆ. ಮಗಳ ಜೀವನ ದಡ ಸೇರಿತು ಎಂದು ಜಾನಕಿ ಖುಷಿಯಾಗಿದ್ದಾಳೆ. ಆದರೆ ಮಗನ ಬದುಕು ಹಾಳಾಯ್ತು ಎಂಬ ಚಿಂತೆಯಲ್ಲಿ ಸೀತಾ ಇದ್ದಾಳೆ.

ರಾಮಚಂದ್ರ ರಾಯರಿಗೆ ಸತ್ಯ ಮೇಲೆ ಅಪಾರವಾದ ನಂಬಿಕೆ ಇದೆ. ಊರ್ಮಿಳಾ, ಲಕ್ಷ್ಮಣ ಹಾಗೂ ರಿತು ಕೂಡ ಸತ್ಯಳನ್ನು ತಮ್ಮ ಮನೆಯ ಸೊಸೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಕಾರ್ತಿಕ್ ಹಾಗೂ ಸೀತಾ ಸತ್ಯ ಮೇಲೆ ಕೆಂಡಕಾರುತ್ತಿದ್ದಾರೆ.

ಇತ್ತ ದಿವ್ಯಾ ಹಾಗೂ ಬಾಲ ರೆಸಾರ್ಟ್‌ನಲ್ಲಿ ಜಾಲಿಯಾಗಿದ್ದಾರೆ. ದಿವ್ಯಾಗೆ ಈ ರೆಸಾರ್ಟ್ ನಿಂದ ಹೋದ ಮೇಲೆ ಸ್ಲಂ ಬದುಕೇ ಗತಿ ಎಂಬುದು ಇನ್ನೂ ಅರಿವಾಗಿಲ್ಲ. ಬಾಲ ರೆಸಾರ್ಟ್ ಬಿಲ್ ಕಟ್ಟುವುದು ಹೇಗೆ ಅನ್ನೋ ಯೋಚನೆಯಲ್ಲಿದ್ದಾನೆ.

ಮಗಳಿಗೆ ಸಮಾಧಾನ ಹೇಳಿದ ಜಾನಕಿ!

ಮಗಳಿಗೆ ಸಮಾಧಾನ ಹೇಳಿದ ಜಾನಕಿ!

ಜಾನಕಿ ಬಳಿ ಸತ್ಯ ಅಳುತ್ತಾ ಮನೆಗೆ ವಾಪಸ್ ಬರುತ್ತೀನಿ ಎಂದಾಗ, ಆಕೆ ಸಮಾಧಾನ ಮಾಡುತ್ತಾಳೆ. ಬದುಕಿನಲ್ಲಿ ಎಷ್ಟೋಂದು ಕಷ್ಟ ಪಟ್ಟಿರುವ ನೀನು ಇದಕ್ಕೆಲ್ಲಾ ಹೆದರಬಾರದು. ನಿಧಾನವಾಗಿ ಎಲ್ಲವನ್ನೂ ಕಲಿತುಕೊಳ್ಳುತ್ತೀಯಾ. ಆಗ ಎಲ್ಲವೂ ಆಗ ಸರಿ ಹೋಗುತ್ತೆ ಎನ್ನುತ್ತಾಳೆ. ಆಗ ಸತ್ಯ, ನನ್ನ ಬದುಕಿನಲ್ಲಿ ಇಷ್ಟು ದೊಡ್ಡ ತಿರುವು ಬರುತ್ತದೆ ಅಂತ ನಾನೆಂದು ಅಂದುಕೊಂಡಿರಲಿಲ್ಲ ಅಮ್ಮ ಎಂದು ಹೇಳುತ್ತಾಳೆ. ಅದಕ್ಕೆ ಜಾನಕಿ, ಅದು ನಿನ್ನ ಮನೆ ಅಂತ ಅಂದುಕೊಂಡಾಗ ಎಲ್ಲವೂ ಸರಿ ಹೋಗುತ್ತದೆ. ಹೆದರಬೇಡ. ನಿನ್ನ ಮನೆ ಅಂತ ಆದಾಗ ಎಲ್ಲವೂ ಸಹಜವಾಗಿಯೇ ಕಾಣುತ್ತದೆ ಎಂದು ಸಮಾಧಾನ ಮಾಡುತ್ತಾಳೆ.

ಸತ್ಯ ಪರ ನಿಂತ ರಾಮಚಂದ್ರ ರಾಯರು!

ಸತ್ಯ ಪರ ನಿಂತ ರಾಮಚಂದ್ರ ರಾಯರು!

ರಾಮಚಂದ್ರ ರಾಯರು ಸತ್ಯ ಅವರ ತಾಯಿ ಬಳಿ ಫೋನ್ ನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡಿದ್ದಾರೆ. ಇದರಿಂದ ಬೇಸರಗೊಂಡ ರಾಯರು, ಸತ್ಯ ಗಟ್ಟಿಗಿತ್ತಿ. ಆದರೂ ಕೂಡ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ನಮ್ಮ ಸೀತಾ ಕೂಡ ಸ್ಟ್ರಿಕ್ಟ್ ಬೇರೆ. ಪಾಪ ಆ ಹುಡುಗಿ ತಾನೇ ಏನು ಮಾಡುತ್ತಾಳೆ ಸ್ವಲ್ಪ ದಿನವಾದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.

ಬಾಲನ ಮೇಲೆ ಕೋಪಿಸಿಕೊಂಡ ದಿವ್ಯಾ!

ಬಾಲನ ಮೇಲೆ ಕೋಪಿಸಿಕೊಂಡ ದಿವ್ಯಾ!

ಬಾಲ ಪ್ರೆಸ್ ಎಂದು ಹೇಳಿಕೊಂಡು ಬಂದಿದ್ದ ಹುಡಿಗಿಯರಿಗೆ ಹಣ ಕೊಟ್ಟಿದ್ದನ್ನು ದಿವ್ಯಾ ನೋಡಿದ್ದಾಳೆ. ಆದರೆ ಬಾಲ ತಾನು ತಮ್ಮ ಮದುವೆಯ ಸುದ್ದಿ ಲೀಕ್ ಆಗದಿರಲಿ ಎಂದು ಅವರಿಗೆ ಹಣ ಕೊಟ್ಟಿರುವುದಾಗಿ ಹೇಳಿ ಸಮಾಧಾನ ಮಾಡುತ್ತಾನೆ. ಆಗ ದಿವ್ಯಾ ಕ್ಷಮಿಸು ಬಾಲ, ನನ್ನ ದಡ್ಡ ತನದಿಂದ ನಿನಗೆ ತೊಂದರೆ ಮಾಡಿದೆ ಎಂದು ಹೇಳುತ್ತಾಳೆ.

ಕಾರ್ತಿಕ್ ಮಾತಿಗೆ ದಿವ್ಯಾಳನ್ನು ದೂರಿದ ಸೀತಾ!

ಕಾರ್ತಿಕ್ ಮಾತಿಗೆ ದಿವ್ಯಾಳನ್ನು ದೂರಿದ ಸೀತಾ!

ಊಟಕ್ಕೆ ಎಲ್ಲರೂ ಕೂತಿರುವಾಗ ನಾಳೆ ಮನೆ ದೇವರಿಗೆ ಗಂಡು ಹೆಣ್ಣನ್ನು ಕರೆದುಕೊಂಡು ಹೋಗಬೇಕು ಎಂದು ಹೇಳಲಾಗುತ್ತೆ. ಆಗ ಸೀತಾ ಅದೂ ಒಂದು ಆಗೇ ಬಿಡಲಿ ಎನ್ನುತ್ತಾಳೆ. ರಾಮಚಂದ್ರ ರಾಯರು ಎಲ್ಲರೂ ಬೇಗ ಹೊರಡೋಣ ಎಂದು ಹೇಳಿದಾಗ ಕಾರ್ತಿಕ್ ನಿಮಗೆ ಸುಸ್ತಾಗಿದೆ. ನೀವು ಬರುವುದು ಬೇಡ ಎಂದು ಹೇಳುತ್ತಾನೆ. ರಾಮಚಂದ್ರ ರಾಯರು ಹಠ ಹಿಡಿದಾಗ, ಕಾರ್ತಿಕ್ ನೀವು ಹೇಳಿದಂತೆ ನಾನು ಕೇಳಿದ್ದೇನೆ. ಈಗ ನನ್ನ ಮಾತನ್ನು ನೀವು ಕೇಳಿ ಎಂದು ಕೇಳಿ ಕೊಳ್ಳುತ್ತಾನೆ. ಆಗ ರಾಮಚಂದ್ರ ರಾಯರು ಓಕೆ ಎನ್ನುತ್ತಾರೆ. ಈ ಮಾತನ್ನು ಕೇಳಿದ ಸೀತಾ ಸುಮ್ಮನಿರದೇ, ಮೊದಲು ಈ ಮನೆಯಲ್ಲಿ ಯಾವ ಗುಟ್ಟುಗಳೂ ಇರುತ್ತಿರಲಿಲ್ಲ. ಈಗ ಎಲ್ಲರೂ ಗುಟ್ಟು ಮಾಡುವವರೆ. ಕೆಲವರ ಕಾಲು ಗುಣವೇ ಸರಿ ಇರುವುದಿಲ್ಲ ಏನು ಮಾಡೋದಿಕ್ಕೆ ಆಗುತ್ತೆ ಎಂದು ಪರೋಕ್ಷವಾಗಿ ಸತ್ಯಳನ್ನೇ ದೂರುತ್ತಾಳೆ.

More from Filmibeat

English summary
Sathya Tv Serial Written Update On May 3rd Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X