ಕಾರ್ತಿಕ್ ಮೇಲೆ ಕೂಗಾಡಿದ ಸತ್ಯ, ನಿಜ ಹೇಳ್ತಾಳಾ?
'ಸತ್ಯ' ಧಾರಾವಾಹಿಯಲ್ಲಿ ಕಾರ್ತಿನ್‌ನನ್ನು ರೂಮಿನಲ್ಲಿ ಕೂಡಿ ಹಾಕಲಾಗಿದೆ. ಬಾಗಿಲು ತೆಗೆಯುವಂತೆ ಎಷ್ಟು ಕಿರುಚಾಡಿದರೂ ಯಾರೂ ಬಾಗಿಲು ತೆಗೆಯುವುದಿಲ್ಲ. ಕಾರ್ತಿಕ್ ಹಾಗೂ ಸತ್ಯ ಮದುವೆಗೂ ಮುನ್ನ ಮಾತನಾಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾನೆ.
ಕಾರ್ತಿಕ್ ಅದೇನೇ ಆಗಲಿ ಸತ್ಯಳನ್ನು ಈ ಮನೆಯಲ್ಲಿ ನೆಮ್ಮದಿಯಾಗಿರಲು ಬಿಡುವುದಿಲ್ಲ ಎಂದು ತನಗೆ ತಾನೇ ಮಾತನಾಡಿಕೊಳ್ಳುತ್ತಾನೆ. ಅಷ್ಟೊತ್ತಿಗೆ ಬಾಗಿಲು ಓಪನ್ ಆಗುತ್ತದೆ. ನೋಡಿದರೆ, ಸತ್ಯ, ಊರ್ಮಿಳಾ ಹಾಗೂ ರಿತು ಬಂದು ನಿಂತಿರುತ್ತಾರೆ.

ಕಾರ್ತಿಕ್ ಬಗ್ಗೆ ಮಾತನಾಡಿದ ಲಕ್ಷ್ಮಣ!
ಇತ್ತ ಲಕ್ಷ್ಮಣ ಹಾಗೂ ರಾಮಚಂದ್ರ ರಾಯರು ಮಾತನಾಡುತಿರುತ್ತಾರೆ. ಈ ವೇಳೆ, ಲಕ್ಷ್ಮಣ ಕಾರ್ತಿಕ್ ಬಗ್ಗೆ ಮಾತನಾಡುತ್ತಾನೆ. ಕಾರ್ತಿಕ್‌ಗೆ ಇಷ್ಟವಿಲ್ಲದೇ ಇರುವ ಮದುವೆಯನ್ನು ಮಾಡಿ ತಪ್ಪು ಮಾಡಿದ್ವಿ ಅನ್ಸಲ್ವಾ.? ಮುಂದೆ ಹೇಗೆ ಎಂದು ಕೇಳುತ್ತಾನೆ. ಆಗ ರಾಮಚಂದ್ರ ರಾಯರು, ಲಕ್ಷ್ಮಣ, ಕಾರ್ತಿಕ್ ಪ್ರೀತಿಸಿದ್ದು ದಿವ್ಯಾ ನಾ, ಮದುವೆಯಾಗಿರುವುದು ಸತ್ಯನಾ ಎಂದು ಹೇಳುತ್ತಾರೆ. ಈಗಷ್ಟೇ ಮದುವೆಯಾಗಿದ್ದಾರೆ. ಮುಂದೆ ಹೋಗುತ್ತಾ ಎಲ್ಲವೂ ಸರಿ ಹೋಗುತ್ತೆ. ಕಾರ್ತಿಕ್‌ಗೂ ವಾಸ್ತವನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಡೋಣ ಎಂದು ಹೇಳುತ್ತಾನೆ.

ಸೀತಾ ಬಗ್ಗೆ ರಾಮಚಂದ್ರ ಚಿಂತೆ!
ಲಕ್ಷ್ಮಣ ಮಾತು ಮುಂದುವರೆಸಿ, ಅತ್ತಿಗೆ ಕೂಡ ಈ ಮದುವೆಯನ್ನು ಒಪ್ಪಿಕೊಂಡಿಲ್ಲವಲ್ಲ. ಮದುವೆ ನಡೆದಾಗಿನಿಂದ ಅತ್ತಿಗೆ ಮುಖದಲ್ಲಿನ ನಗುವೇ ಮಾಯವಾಗಿದೆ ಎಂದು ಹೇಳುತ್ತಾನೆ. ಈ ಮಾತಿಗೆ ರಾಮಚಂದ್ರ ರಾಯರು, ಹೌದು ಲಕ್ಷ್ಮಣ ನನಗೂ ಅದೇ ಚಿಂತೆಯಾಗಿರುವುದು. ಮೊದಲೇ ಸೀತಾಗೆ ಸತ್ಯ ಎಂದರೆ ಆಗುತ್ತಿರಲಿಲ್ಲ. ಈಗಂತೂ ಬಾಂಬ್ ಅನ್ನ ಕೈಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾಳೆ. ಯಾವಾಗ ಸಿಡಿಸುತ್ತಾಳೋ ಗೊತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಕಾರ್ತಿಕ್ ಹಾಗೂ ಸತ್ಯ ಹೇಗೋ ಒಂದಾಗುತ್ತಾರೆ. ಆದರೆ, ಸೀತಾ ಹಾಗೂ ಸತ್ಯ ಬಗ್ಗೆನೇ ಯೋಚನೆಯಾಗಿದೆ ಎಂದು ಹೇಳುತ್ತಾರೆ.

ಫಸ್ಟ್ ನೈಟ್‌ಗೆ ಬಾಲ, ದಿವ್ಯಾ ರೆಡಿ!
ರೆಸಾರ್ಟ್‌ನಲ್ಲಿ ಫಸ್ಟ್ ನೈಟ್‌ಗೆ ರೂಮ್ ಡೆಕೋರೇಟ್ ಮಾಡಿಸಿರುವ ಬಾಲ, ದಿವ್ಯಾಗೆ ಸರ್ಪ್ರೈಸ್ ಕೊಟ್ಟಿದ್ದಾನೆ. ಇದರಿಂದ ಖುಷಿಯಾಗಿರುವ ದಿವ್ಯಾ, ಬಾಲನನ್ನು ತಬ್ಬಿಕೊಂಡು ಸಿಹಿ ಮುತ್ತು ನೀಡಿದ್ದಾಳೆ. ಬಾಲ ತನಗೆಷ್ಟು ಸಾಧ್ಯವೋ ಅಷ್ಟು ಶೋ ಆಫ್ ಮಾಡಿದ್ದಾನೆ. ಇನ್ನು ನಿನ್ನ ಕನಸುಗಳೆಲ್ಲವೂ ನನ್ನ ಕನಸು, ಇನ್ಮುಂದೆ ನಿನ್ನ ಕನಸುಗಳನ್ನು ನನಸು ಮಾಡೋದೇ ನನ್ನ ಕೆಲಸ ಎಂದು ಹೇಳಿದ್ದಾನೆ. ದಿವ್ಯಾ ಕಣ್ಣೀರಿಟ್ಟಿದ್ದಾಳೆ. ಕೇಳಿದ್ದಕ್ಕೆ ಇದು ಆನಂದ ಬಾಷ್ಪಾ ಎಂದು ಎನ್ನುತ್ತಾಳೆ.

ತಾಳ್ಮೆ ಕಳೆದುಕೊಂಡ ಸತ್ಯ!
ಸತ್ಯ ರೂಮಿನೊಳಗೆ ಹೋಗಿ ಹಾಲಿನ ಲೋಟವನ್ನು ಇಟ್ಟು ಕುಳಿತುಕೊಳ್ಳುತ್ತಾಳೆ. ಕೋಪಗೊಂಡಿರುವ ಕಾರ್ತಿಕ್, ದಿವ್ಯಾಳನ್ನು ಮದುವೆ ಮನೆಯಿಂದ ಓಡಿಸಿ, ನಿನ್ನ ಕೈಯಲ್ಲಿ ತಾಳಿ ಕಟ್ಟಿಸಿಕೊಂಡು, ಈಗ ಫಸ್ಟ್ ನೈಟ್ ಅಂತ ಇಲ್ಲಿಗೆ ಬಂದಿದ್ದೀಯ ಅಲ್ವಾ.? ನಾಚಿಕೆಯಾಗಲ್ವಾ ನಿನಗೆ.? ದಿವ್ಯಾನ ನಾನು ಎಷ್ಟು ಪ್ರೀತಿಸುತ್ತಿದ್ದೆ. ನೀನು ಎಲ್ಲವನ್ನೂ ಹಾಳು ಮಾಡಿ, ಅಪ್ಪನ ತಲೆಕೆಡಿಸಿ ಡೀಲ್ ಮಾಡಿಕೊಂಡಿದ್ದೀಯಾ.? ಒಂದು ಮಾತನ್ನು ನೆನಪಿಟ್ಟುಕೋ ನಾನ್ಯವಾತ್ತು ನಿನ್ನ ಗಂಡನಾಗಿರೋದಿಲ್ಲ. ದಿವ್ಯ ಪಾಪ ಎಲ್ಲಿದ್ದಾಳೋ.? ಹೇಗಿದ್ದಾಳೋ ಎಂದು ಕಿರುಚಾಡುತ್ತಾನೆ. ಆಗ ತಾಳ್ಮೆ ಕಳೆದುಕೊಂಡ ಸತ್ಯ ಸಾಕು ಎಂದು ಜೋರಾಗಿ ಕಿರುಚುತ್ತಾಳೆ. ಅಲಂಕಾರ ಮಾಡಿದ್ದ ಹಾಸಿಗೆಯ ಮೇಲಿನ ಹೂವನ್ನೆಲ್ಲಾ ಚೆಲ್ಲಾಡುತ್ತಾಳೆ.


Click it and Unblock the Notifications











