ದಿವ್ಯಾ ಬಾಲನ ಜೊತೆ ಓಡಿ ಹೋದ 'ಸತ್ಯ' ಕಾರ್ತಿಕ್‌ಗೆ ಗೊತ್ತಾಯ್ತು!

By ಪ್ರಿಯಾ ದೊರೆ

'ಸತ್ಯ' ಸೀರಿಯಲ್ ನಲ್ಲಿ ಬಾಲ-ದಿವ್ಯಾ ಹಾಗೂ ಸತ್ಯ-ಕಾರ್ತಿಕ್ ಫಸ್ಟ್ ನೈಟ್‌ಗೆ ಅರೇಂಜ್ ಆಗಿದೆ. ಆದರೆ ಕಾರ್ತಿಕ್‌ಗೆ ಇದು ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಸತ್ಯ ಮೇಲೆ ಕೂಗಾಡಿದ್ದಾನೆ. ಅಲ್ಲದೇ, ಸತ್ಯ ಬೇಕಂತಲೇ ಈ ಮದುವೆಯಾಗಿದ್ದಾಳೆ ಎಂಬಂತೆ ಮಾತನಾಡಿದ್ದಾನೆ.

ಸತ್ಯ ಬೆಳಗ್ಗಿನಿಂದ ಎಲ್ಲರ ಮಾತುಗಳನ್ನು, ಎಲ್ಲಾ ಅವಮಾನಗಳನ್ನು ಸಹಿಸಿಕೊಂಡಿದ್ದಳು. ಆದರೆ ಕಾರ್ತಿಕ್ ಮಾತನಾಡಿದ ಮಾತುಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ಕಾರ್ತಿಕ್ ಆಡಿದ ಮಾತುಗಳು ಸತ್ಯಗೆ ತುಂಬಾ ನೋವುಂಟು ಮಾಡಿದೆ.

ಸತ್ಯಳ ತಾಳ್ಮೆಯ ಕಟ್ಟೆ ಒಡೆದಿದೆ. ಬಾಯಿಗೆ ಬಂದಂತೆ ಮಾತನಾಡುತ್ತಿರುವ ಕಾರ್ತಿಕ್ ಮೇಲೆ ಸಿಡಿದಿದ್ದಾಳೆ. ಸಾಕು ಮಾಡು ಎಂದಿರುವ ಸತ್ಯ, ಇರುವ ಸತ್ಯವನ್ನೆಲ್ಲಾ ಹೇಳಿ ಬಿಡುತ್ತಾಳಾ? ದಿವ್ಯಾ-ಬಾಲನೊಂದಿಗೆ ಓಡಿ ಹೋಗಿದ್ದಾಳೆ ಎಂಬ ವಿಚಾರವನ್ನು ಹೇಳುತ್ತಾಳಾ ಎಂಬ ಕುತೂಹಲ ಮನೆ ಮಾಡಿದೆ.

ಸತ್ಯ ಮಾತಿಗೆ ಎಲ್ಲರೂ ಶಾಕ್!

ಸತ್ಯ ಮಾತಿಗೆ ಎಲ್ಲರೂ ಶಾಕ್!

ಕಾರ್ತಿಕ್ ಮಾತುಗಳಿಗೆ ಬೇಸತ್ತು ಸತ್ಯ ಮಾತು ಶುರು ಮಾಡಿದ್ದಾಳೆ. ನನಗೂ ಈ ಮದುವೆ ಇಷ್ಟವಿರಲಿಲ್ಲ. ನಿನ್ನ ನಾನು ಇಷ್ಟಪಟ್ಟು ಮದುವೆಯಾಗಿಲ್ಲ. ನನಗೆ ನೀನು ಬೇಕು ಅನ್ನಿಸಿದ್ದರೆ, ಎತ್ತಾಕಿಕೊಂಡು ಹೋಗಿ ಮದುವೆಯಾಗುತ್ತಿದ್ದೆ. ಈ ಮದುವೆ ನನಗೂ ಬೇಕಿರಲಿಲ್ಲ. ನಿನ್ನ ಮದುವೆಯಾಗುವುದಕ್ಕೆ ನಾನು ಯಾವ ನಾಟಕವನ್ನೂ ಮಾಡುತ್ತಿಲ್ಲ. ನಿನ್ನಂತೆಯೇ ನನಗೂ ಇದು ಬೇಡದ ಮದುವೆ. ನಿನ್ನನ್ನ ನಾನ್ಯಾವತ್ತೋ ಬಿಟ್ಟಾಯ್ತು ಎಂದು ಹೇಳುತ್ತಾಳೆ.

ದಿವ್ಯಾನ ಬಚ್ಚಿಟ್ಟಿದ್ದು ಯಾಕೆ ಗೊತ್ತಾ?

ದಿವ್ಯಾನ ಬಚ್ಚಿಟ್ಟಿದ್ದು ಯಾಕೆ ಗೊತ್ತಾ?

ಸತ್ಯ ಮಾತುಗಳನ್ನು ನಂಬದ ಕಾರ್ತಿಕ್ ಎಲ್ಲಾ ನಾಟಕ ನಿನ್ನದು. ಇದೆಲ್ಲಾ ಸುಳ್ಳು. ನೀನು ನನ್ನನ್ನು ಮದುವೆಯಾಗಬೇಕು ಅಂತಾನೆ ನೀನು ದಿವ್ಯಾನ ಬಚ್ಚಿಟ್ಟಿದ್ದು. ಈಗ ಸುಳ್ಳಿನ ಕಥೆ ಕಟ್ಟುತ್ತಿದ್ದೀಯಾ ಎಂದು ಕಾರ್ತಿಕ್ ಹೇಳುತ್ತಾನೆ. ಆಗ ಸತ್ಯ ನಿನ್ನನ್ನು ಬಲವಂತವಾಗಿ ಪಡೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ನಿನ್ನ ಹಾಗೆಯೇ ನಾನೂ ಕೂಡ ನನ್ನ ಮನೆಯವರಿಗಾಗಿ ಈ ಮದುವೆಯಾಗಿದ್ದು ಎಂದು ಸತ್ಯ ಹೇಳುತ್ತಾಳೆ. ಆದರೆ ಇದನ್ನೂ ನಂಬದ ಕಾರ್ತಿಕ್, ನೀನು ಮನೆಯವರಿಗೋಸ್ಕರ ತ್ಯಾಗ ಮಾಡುವವಳಲ್ಲ ಎಂದು ಕಿಂಡಲ್ ಮಾಡುತ್ತಾನೆ.

ಬಾಲನ ಜೊತೆಗೆ ದಿವ್ಯಾ ಓಡಿ ಹೋಗಿದ್ದು ಗೊತ್ತಾಯ್ತಾ?

ಬಾಲನ ಜೊತೆಗೆ ದಿವ್ಯಾ ಓಡಿ ಹೋಗಿದ್ದು ಗೊತ್ತಾಯ್ತಾ?

ಹೀಗೆ ಮಾತು ಮುಂದುವರಿದಾಗ ಬಾಯಿ ತಪ್ಪಿ ಸತ್ಯ ಬಾಲನ ಜೊತೆಗೆ ದಿವ್ಯಾ ಓಡಿ ಹೋಗಿದ್ದು ಎಂದು ಹೇಳಲು ಬರುತ್ತಾಳೆ. ಆದರೆ, ಸುಮ್ಮನಾಗುತ್ತಾಳೆ. ಬಳಿಕ ರಾಮಚಂದ್ರ ರಾಯರು ಬಂದು ಕೇಳಿಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಬಳಿಕ ನಾನು ಅದನ್ನು ಹೇಳುವ ಹಾಗಿಲ್ಲ ಎಂದು ಹೇಳುತ್ತಾಳೆ. ನಂತರ ಇಬ್ಬರು ಕೊಂಚ ಸಮಾಧಾನವಾಗಿ, ಇಬ್ಬರೂ ಡಿಸ್ಟೆನ್ಸ್ ಮೈಂಟೈನ್ ಮಾಡೋಣ ಎನ್ನುತ್ತಾಳೆ. ಇದಕ್ಕೆ ಕಾರ್ತಿಕ್ ನನಗೆ ನಿನ್ನ ಮೇಲೇಯೆ ನಂಬಿಕೆ ಇಲ್ಲ ಎಂದು ಹೇಳುತ್ತಾನೆ. ಸತ್ಯ ಅದೇನೆ ಇರಲಿ, ನಮ್ಮಿಬ್ಬರ ಬಗ್ಗೆ ರಾಯರ ಕಣ್ಣಿಗೆ ಚೆನ್ನಾಗಿದ್ದೇವೆ ಎಂದು ಗೊತ್ತಾದರೆ ಸಾಕು. ರಾಯರಿಗೆ ಬೇಜಾರಾಗುತ್ತೆ ಎಂದು ಹೇಳುತ್ತಾಳೆ.

ದಿವ್ಯಾ ಮಾತು ನಿಜವಾಗುತ್ತಾ?

ದಿವ್ಯಾ ಮಾತು ನಿಜವಾಗುತ್ತಾ?

ಬಾಲನ ಬಳಿ ದಿವ್ಯಾ ಈ ಫಸ್ಟ್ ನೈಟ್ ಬೇಡ ಎನ್ನುತ್ತಿದ್ದಾಳೆ. ಇದರಿಂದ ಬೇಸರಗೊಂಡ ಬಾಲ ಯಾಕೆ ಎಂದು ಕೇಳಿದ್ದಾನೆ. ಅದಕ್ಕೆ ದಿವ್ಯಾ, ನಿನ್ನಿಷ್ಟದಂತೆ ಫಾರಿನ್‌ನಲ್ಲೇ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದಾಳೆ. ಇದಕ್ಕೆ ಬಾಲ ಇಲ್ಲ ಬೇಬಿ ನಾನು ಮೈಂಡ್ ಚೇಂಜ್ ಮಾಡಿಕೊಂಡಿದ್ದೇನೆ ಎಂದಿದ್ದಕ್ಕೆ, ದಿವ್ಯಾ ಅಪ್ಪ-ಅಮ್ಮನನ್ನು ಒಪ್ಪಿಸುವವರೆಗೂ ಬೇಡ ಎನ್ನುತ್ತಾಳೆ. ನನಗೂ ಒಂದು ಫೀಲಿಂಗ್ ಇದೆ ಬಾಲ. ಅಪ್ಪ-ಅಮ್ಮನ ಫೀಲಿಂಗ್ಸ್ ಅನ್ನು ಅರ್ಥ ಮಾಡಿಕೊಳ್ಳೋಣ ಎಂದು ಹೇಳುತ್ತಾಳೆ.

More from Filmibeat

English summary
Sathya Tv Serial Written Update On May 8th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X