ಕಾರ್ತಿಕ್ ಸ್ಥಿತಿ ಕಂಡು ಮರುಗಿದ ಸೀತಾ, ಸತ್ಯ ಮೇಲೆ ಕೆಂಡಾಮಂಡಲ!

By ಪ್ರಿಯಾ ದೊರೆ

ಜಗಳವಾಡಿದ ಮೇಲೆ ಸತ್ಯ ಕೆಳಗೆ ಮಲಗುತ್ತಾಳೆ. ಕಾರ್ತಿಕ್ ಮಂಚದ ಮೇಲೆ ಮಲಗಿರುತ್ತಾನೆ. ಸತ್ಯ ನಿದ್ದೆ ಮಾಡುತ್ತಿದ್ದಾಳೆ. ಕಾರ್ತಿಕ್‌ಗೆ ನಿದ್ದೆಯೇ ಬರುತ್ತಿಲ್ಲ. ಹೀಗಾಗಿ ಎದ್ದು ಹೋಗಿ ಆಚೆ ಮಲಗಬೇಕು ಎಂದು ಅಂದುಕೊಳ್ಳುತ್ತಾನೆ.

ಆಗ ಎಡವಿ ಸತ್ಯ ಮೇಲೆ ಬೀಳುತ್ತಾನೆ. ಎಚ್ಚರವಾದ ಸತ್ಯ ಒಂದು ಕ್ಷಣ ಶಾಕ್ ಆಗುತ್ತಾಳೆ. ನಂತರ ಕಾರ್ತಿಕ್ ಹಾಗೂ ಸತ್ಯ ಜೋರಾಗಿ ಕೂಗಿಕೊಳ್ಳುತ್ತಾರೆ. ಇಬ್ಬರೂ ಮತ್ತೆ ಕಿತ್ತಾಡಲು ಶುರು ಮಾಡುತ್ತಾರೆ.

ಇತ್ತ ಸೋಫಾ ಮೇಲೆ ಮಲಗಿರುವ ಮಂಜ ಶಾಕ್ ಆಗುತ್ತಾನೆ. ಕಾರ್ತಿಕ್ ಯಾಕೆ ಕಿರುಚಿಕೊಂಡ ಎಂದು ಮಂಜ ಭಯಪಡುತ್ತಾನೆ. ಇದನ್ನು ಚಿಕ್ಕಪ್ಪನಿಗೆ ಹೇಳಬೇಕು ಎಂದು ಹೋಗಿ ಲಕ್ಷ್ಮಣನನ್ನು ಎಚ್ಚರಿಸುತ್ತಾನೆ. ಲಕ್ಷ್ಮಣ ಏನಾಯ್ತು ಎಂದು ಕೇಳುತ್ತಾನೆ. ಕಾರ್ತಿಕ್ ಕಿರುಚಿಕೊಂಡ ಎಂದು ಹೇಳಿದ್ದಕ್ಕೆ ಬೈದು ಕಳಿಸುತ್ತಾನೆ.

ಸತ್ಯ ಹಾಗೂ ಕಾರ್ತಿಕ್ ಕಿತ್ತಾಟ ಜೋರು!

ಸತ್ಯ ಹಾಗೂ ಕಾರ್ತಿಕ್ ಕಿತ್ತಾಟ ಜೋರು!

ಸತ್ಯ ಹಾಗೂ ಕಾರ್ತಿಕ್ ಕಿತ್ತಾಡುತ್ತಾರೆ. ಕಾರ್ತಿಕ್ ಎಡವಿ ಬಿದ್ದೆ ಎಂದು ಹೇಳುತ್ತಾನೆ. ಸತ್ಯ ಈಗ ಮಲ್ಕೋ ಹೋಗು ಎಂದಾಗ, ಈ ಸೆಟಪ್‌ನಲ್ಲಿ ನನಗೆ ಉಸಿರುಕಟ್ಟಿದಂತೆ ಆಗುತ್ತಿದೆ. ಜೊತೆಗೆ ನೀನು ಬೇರೆ ಇದ್ಯಲ್ಲ ಅದಕ್ಕೆ ಎಂದು ಸತ್ಯ ಕೇಳಿದಾಗ ಆಚೆ ಮಲಗುವುದಾಗಿ ಹೇಳುತ್ತಾನೆ. ಅದಕ್ಕೆ ಸತ್ಯ ನೋಡು ನೀನು ಈಗ ಆಚೆ ಮಲಗಿಕೊಂಡರೆ, ಎಲ್ಲರಿಗೂ ಗೊತ್ತಾಗುತ್ತೆ. ಆಗ ರಾಯರು ಬೇಜಾರು ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾಳೆ. ಆಗ ಕಾರ್ತಿಕ್ ಅಪ್ಪನಿಗೆ ಗೊತ್ತಾಗದ ಹಾಗೆ ನೋಡಿಕೊಳ್ಳುವುದು ನನಗೂ ಗೊತ್ತು ಎಂದು ಹೇಳುತ್ತಾನೆ. ನಂತರ ರೂಮಿನಿಂದ ಎದ್ದು ಬರುವ ಕಾರ್ತಿಕ್ ಸೋಫಾ ಮೇಲೆ ಮಲಗುತ್ತಾನೆ.

ಇಷ್ಟವಿಲ್ಲದ ಮದುವೆಯನ್ನು ಮಾಡಿಬಿಟ್ಟರು!

ಇಷ್ಟವಿಲ್ಲದ ಮದುವೆಯನ್ನು ಮಾಡಿಬಿಟ್ಟರು!

ಸೀತಾ, ಕಾರ್ತಿಕ್ ಸೋಫಾ ಮೇಲೆ ಮಲಗಿರುವುದನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾಳೆ. ಕಾರ್ತಿಕ್ ಬಳಿ ಬಂದು ಒಬ್ಬಳೆ ಮಾತನಾಡುತ್ತಾಳೆ. ಇಷ್ಟವಿಲ್ಲದ ಮದುವೆಯನ್ನು ಮಾಡಿಬಿಟ್ಟರು. ಕಾರ್ತಿಕ್‌ನನ್ನೂ ಒಂದು ಮಾತೂ ಕೇಳದೇ ಮದುವೆ ಮಾಡಿದರು. ಪಾಪ ಸತ್ಯ ಜೊತೆ ರೂಮಿನಲ್ಲಿ ಮಲಗಲಾಗದೇ ಇಲ್ಲಿ ಸೋಫಾ ಮೇಲೆ ಬಂದು ಮಲಗಿದ್ದಾನೆ ಪಾಪ ಎಂದು ಹೇಳುತ್ತಾಳೆ. ನಂತರ ರೂಮಿಗೆ ಬಂದು ನೋಡಿದಾಗ ಅಲ್ಲಿ ಸತ್ಯ ಮಂಚದ ಮೇಲೆ ಮಲಗಿರುತ್ತಾಳೆ. ಅದನ್ನು ನೋಡಿ ಕೋಪಗೊಳ್ಳುತ್ತಾಳೆ. ನನ್ನ ಮಗನನ್ನು ರೂಮಿನಿಂದ ಆಚೆ ಹಾಕಿ ನೀನು ಇಲ್ಲಿ ನೆಮ್ಮದಿಯಾಗಿ ಮಲಗಿದ್ದೀಯಾ ಎಂದು ಮನಸಲ್ಲೇ ಹೇಳಿಕೊಳ್ಳುತ್ತಾಳೆ.

ನನ್ನ ನಿರ್ಧಾರ ಚೆನ್ನಾಗೇ ಇದೆ ಎಂದ ಸತ್ಯ!

ನನ್ನ ನಿರ್ಧಾರ ಚೆನ್ನಾಗೇ ಇದೆ ಎಂದ ಸತ್ಯ!

ಫಸ್ಟ್ ನೈಟ್ ಬೇಡ ಎಂದ ದಿವ್ಯಾ ಈಗ ನಿದ್ದೆಯಿಂದ ಎದ್ದು ಬಂದು ಒಬ್ಬಳೆ ಜಮ್ ಅಂತ ಕಾಫಿ ಕುಡಿಯುತ್ತಿದ್ದಾಳೆ. ಸದ್ಯ ನಾನು ಆ ಕೊಂಪೆಯಿಂದ ಓಡಿ ಬಂದಿದ್ದು ಒಳ್ಳೆಯದೇ ಆಯ್ತು. ಆ ಮದುವೆ ಮನೆಯಿಂದ ಬಂದಿರಲಿಲ್ಲ ಎಂದರೆ, ತುಂಬಾ ದೊಡ್ಡ ತಪ್ಪಾಗುತ್ತಿತ್ತು. ಇದು ನನಗೆ ಎರಡನೇಯ ಜನ್ಮ. ಬಾಲ ನನ್ನನ್ನು ತುಂಬಾ ಪ್ರೀತಿಸುತ್ತಾನೆ. ನಾನು ಹೇಳಿದೆ ಅಂತ ಫಸ್ಟ್ ನೈಟ್ ಕೂಡ ಅರೇಂಜ್ ಮಾಡಿದ್ದ. ಆದರೆ ಏನೂ ಮಾಡುವುದಕ್ಕಾಗೋದಿಲ್ಲ. ಬಾಲ ಕಾಯಲೇಬೇಕು. ಆ ಕೊಂಪೆಲ್ಲಿ ನೂರು ವರ್ಷ ಬದುಕೋದಕ್ಕಿಂತ, ಬಾಲ ಜೊತೆಗೆ ಒಂದೇ ಒಂದು ದಿನ ಹೀಗೆ ಬದುಕಿದರೆ ಸಾಕು. ಇಂತಹ ಜೀವನ ಪಡೆಯೋದಕ್ಕೆ ನನ್ನ ಹಠವೇ ಕಾರಣ. ನನ್ನ ಡಿಸಿಷನ್ ಚೆನ್ನಾಗೇ ಇದೆ ಎಂದು ಮಾತನಾಡಿಕೊಳ್ಳುತ್ತಾಳೆ.

ಸತ್ಯಳಿಗಾಗಿ ಹುಡುಕಾಟ

ಸತ್ಯಳಿಗಾಗಿ ಹುಡುಕಾಟ

ಸೀತಾ ಅಡುಗೆ ಮನೆಗೆ ಬಂದ ಕೂಡಲೇ ಸತ್ಯ ಳನ್ನ ಹುಡುಕಾಡುತ್ತಾ ಇರುತ್ತಾಳೆ. ಊರ್ಮಿಳಾ ಸತ್ಯಳನ್ನು ಹುಡುಕುತ್ತಿದ್ದೀಯಾ ಎಂದು ಕೇಳಿದಾಗ, ಹು. ಇಷ್ಟೋತ್ತಿಗೆ ಎದ್ದು ಬಂದು ಗುಡಿಸಿ, ಸಾರಿಸಿ, ರಂಗೋಲಿ ಹಾಕಬೇಕು. ಇದೇ ತಾನೇ ನಾನು ನೀನು ಎಲ್ಲಾ ಮಾಡಿಕೊಂಡು ಬಂದಿದ್ದು ಎಂದು ಹೇಳುತ್ತಾಳೆ. ಅದಕ್ಕೆ ಊರ್ಮಿಳಾ ಬಿಡಿ ಅಕ್ಕ ಅವಳೂ ಹೋಗ್ತಾ ಹೋಗ್ತಾ ಕಲಿತಾಳೆ ಎಂದು ಹೇಳುತ್ತಾಳೆ. ಅದಕ್ಕೆ ಸೀತಾ ಅವಳ ಪರ ಹೆಚ್ಚಾಗಿ ವಹಿಸಿಕೊಂಡು ಬರಬೇಡ ಎಂದು ಹೇಳುತ್ತಾಳೆ.

More from Filmibeat

English summary
Sathya Tv Serial Written Update On May 9th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X