Sathya Serial: ಕಾರ್ತಿಕ್ ಅಪ್ಪನಿಗೆ ಏನಾಯ್ತು..? ಸತ್ಯ ಜೈಲಿಗೆ ಹೋಗೋದು ಗ್ಯಾರೆಂಟಿನಾ?
ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳೆಲ್ಲವೂ ಸೂಪರ್ ಡೂಪರ್ ಆಗಿ ಹಿಟ್ ಆಗಿವೆ. 'ಸತ್ಯ' ಧಾರಾವಾಹಿಯಲ್ಲಿ ಹುಡುಗನಂತೆ ಬೆಳೆದಿರುವ ಧಾರಾವಾಹಿಯ ನಾಯಕಿ ಸತ್ಯ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾಳೆ. ಇನ್ನು ಧಾರಾವಾಹಿಯ ನಾಯಕ ಸಂಪ್ರದಾಯ, ಸಂಸ್ಕೃತಿಗೆ ಹೆಚ್ಚು ಗೌರವ ಕೊಡುವ ಸಿರಿವಂತರ ಮನೆಯ ಮಗನಾಗಿದ್ದಾನೆ.
ಹುಡುಗಿಯೊಬ್ಬಳನ್ನು ನೋಡಿ ಫಸ್ಟ್ ಸೈಟ್, ಫಸ್ಟ್ ಲವ್ ಅಂತ ಕಾರ್ತಿಕ್ ಮನೆಯವರನ್ನು ಒಪ್ಪಿಸಿ ಬಡ ಕುಟುಂಬದ ಹುಡುಗಿ ದಿವ್ಯಾ ಜೊತೆ ಸಪ್ತಪದಿ ತುಳಿಯೋ ವೇಳೆಗೆ ಸತ್ಯ ಸ್ನೇಹ ಬೆಳೆಸಿದ್ದಾನೆ. ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಆದರೆ ಈ ಕಹಾನಿಯಲ್ಲಿ ಮುಖ್ಯ ಟ್ವಿಸ್ಟ್ ಏನೆಂದರೆ ಸತ್ಯ, ಕಾರ್ತಿಕ್ ಎಂಗೇಜ್ಮಂಟ್ ಮಾಡಿಕೊಂಡಿರುವ ದಿವ್ಯಾಳ ತಂಗಿ. ಇದು ಕಾರ್ತಿಕ್ ಗೆ ಆಗಲೀ, ಅವರ ಮನೆಯವರಿಗಾಗಲೀ ಗೊತ್ತಿರಲಿಲ್ಲ.
ಆದರೆ ದಿವ್ಯಾ ಹಾಗೂ ತಮ್ಮ ಕಾರ್ತಿಕ್ ಮದುವೆಯನ್ನು ಹೇಗಾದರೂ ಮಾಡಿ ಮುರಿಯಬೇಕು, ತನ್ನ ಪತಿ ಸೋದರಿ ಜೊತೆಗೆ ಮದುವೆ ಮಾಡಿಸಬೇಕು ಎಂದು ಕಾರ್ತಿಕ್ ಅಕ್ಕ ಕೀರ್ತನಾ ಏನೇನೋ ಲೆಕ್ಕಾಚಾರ ಹಾಕಿಕೊಂಡರೂ ಎಲ್ಲಾ ಉಲ್ಟಾ ಹೊಡೆಯುತ್ತಿತ್ತು, ಇತ್ತ ಶ್ರೀಮಂತಳಾಗಬೇಕು ಅನ್ನೋ ದಿವ್ಯಾ ಕಾರ್ತಿಕ್ ಜೊತೆ ಮದುವೆಯಾಗಬೇಕು ಎಂದುಕೊಂಡಿದ್ದಳು.

ಸ್ವಪ್ನ ಕೃಷ್ಣ ನಿರ್ದೇಶಿಸುತ್ತಿರುವ 'ಸತ್ಯ' ಸೀರಿಯಲ್ ನಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತಿದೆ. ಹುಡುಗನಂತೆ ಬಟ್ಟೆ ಹಾಕಿಕೊಂಡು ಮನೆಯ ಜವಾಬ್ದಾರಿ ಹೊತ್ತಿರುವ ಸತ್ಯ ತನ್ನ ಪ್ರಿಯಕರ ಕಾರ್ತಿಕ್ ಅನ್ನು ಅನಿವಾರ್ಯ ಕಾರಣದಿಂದ ಅಕ್ಕನಿಗೆ ಬಿಟ್ಟುಕೊಟ್ಟಿದ್ದಳು. ಆದರೆ, ಕಾರ್ತಿಕ್ ಬರುವ ಮುಂಚೆ ಬಾಲನನ್ನು ಪ್ರೀತಿಸಿದ್ದ ದಿವ್ಯಾಗೆ ಈಗ ಬಾಲ ಸುಳ್ಳು ಅಪ್ಪ-ಅಮ್ಮ ಹಾಗೂ ಸಿರಿವಂತಿಕೆಯನ್ನು ತೋರಿಸಿ ಮರಳು ಮಾಡಿದ್ದಾನೆ. ಹೇಗಾದರೂ ಮಾಡಿ ಕಾರ್ತಿಕ್ ಜೊತೆಗೆ ಮದುವೆ ಕ್ಯಾನ್ಸಲ್ ಮಾಡಿಕೊಂಡು ಬಾಲ ಜೊತೆ ಓಡಿ ಹೋಗುವ ಲೆಕ್ಕಾಚಾರ ಹಾಕಿದ್ದಳು. ದಿವ್ಯಾ ಬಗ್ಗೆ ತಿಳಿದ ಕೀರ್ತನಾ ಮದುವೆ ಕ್ಯಾನ್ಸಲ್ ಮಾಡೋ ಕಾಂಟ್ರ್ಯಾಕ್ಟ್ ಅನ್ನು ಬಾಲನಿಗೆ ಒಪ್ಪಿಸಿದ್ದಳು. ಕಾರ್ತಿಕ್ ಹಾಗೂ ದಿವ್ಯಾ ಅರಿಶಿನ ಶಾಸ್ತ್ರದಲ್ಲಿ ಕಿಡ್ನ್ಯಾಪರ್ಸ್ ಎಂಟ್ರಿಕೊಟ್ಟರು. ಯಾವುದೇ ಕಾರಣಕ್ಕೂ ಮದುವೆಗೆ ಬರಬೇಡ ಎಂದು ಸತ್ಯಗೆ ಹೇಳಿದ್ದರೂ ಈಗ ಮದುವೆ ಮನೆಗೆ ಸತ್ಯ ಆಗಮಿಸಿದ್ದಾಳೆ.
ಈಗ ಸತ್ಯಳಿಂದಲೇ ಕಾರ್ತಿಕ್ ಹಾಗೂ ದಿವ್ಯಾ ಮದುವೆ ಮುರಿದು ಬಿದ್ದಂತಾಗಿದೆ. ಮೊದಲಿನಿಂದಲೂ ಸತ್ಯ ರೀತಿ-ನೀತಿಯನ್ನು ಇಷ್ಟ ಪಡದ ಕಾರ್ತಿಕ್ ತಾಯಿಗೆ ಈಗ ಸತ್ಯ ದಿವ್ಯಾ ತಂಗಿ ಅನ್ನೋ ಕಹಿ ವಿಚಾರ ತಿಳಿದು ಮದುವೆ ಕ್ಯಾನ್ಸಲ್ ಆಗಿದೆ. ಆದರೆ, ಚಿದಗ್ನಿ ಭಾಯಿಯನ್ನು ಕೊಲೆ ಮಾಡಲು ಸತ್ಯ ಯತ್ನಿಸಿದ್ದಾಳೆ ಎಂದು ಹೇಳಿ ಪೊಲೀಸರು ಮದುವೆ ಮನೆಗೆ ಬಂದಿದ್ದರು. ಕೊಲೆಗಡುಕಿ ಇರುವ ಮನೆಯಿಂದ ಹೆಣ್ಣು ತರಲು ಒಪ್ಪದ ಕಾರ್ತಿಕ್ ತಾಯಿ ಮದುವೆ ಬೇಡ ಎಂದರು. ಸತ್ಯಳನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇತ್ತ ದಿವ್ಯಾ ಕಾರ್ತಿಕ್ ಮದುವೆ ನಿಂತು ಹೋಗಿದೆ. ಅತ್ತ ಕಾರ್ತಿಕ್ ತಂದೆಗೆ ಎದೆ ನೋವು ಬಂದಿದ್ದು, ಪ್ರಜ್ಞೆ ತಪ್ಪಿದ್ದಾರೆ. ಕಾರ್ತಿಕ್ ಈಗ ಸತ್ಯ ಮೇಲೆ ಕೋಪಗೊಂಡಿದ್ದು, ಅಪ್ಪನ ಪರಿಸ್ಥಿತಿ ಕಂಡು ಕಂಗಾಲಾಗಿದ್ದಾನೆ. ನಿನ್ನೆ ಧಾರಾವಾಹಿ ಇಷ್ಟಕ್ಕೆ ನಿಂತಿದ್ದು, ಇಂದಿನ ಎಪಿಸೋಡ್‌ನಲ್ಲಿ ಏನಾಗುತ್ತೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ.


Click it and Unblock the Notifications











