Sathya Serial: ಸತ್ಯ ಲವ್ ಬ್ರೇಕಪ್, ಕಾರ್ತಿಕ್‌ಗೆ ಸತ್ಯ ಗೊತ್ತಾಗುವ ಟೈಮ್ ಇದು!

By Priya Dore

ಈಗ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಎಲ್ಲಾ ಧಾರಾವಾಹಿಗಳಲ್ಲೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಪ್ರತಿಯೊಂದು ಧಾರಾವಾಹಿಯೂ ಕುತೂಹಲದ ಘಟ್ಟದಲ್ಲಿವೆ. ಪ್ರೇಕ್ಷಕರು ಯಾವೊಂದು ಧಾರಾವಾಹಿಯನ್ನೂ ಮಿಸ್ ಮಾಡಿಕೊಳ್ಳಲು ಬಯಸುತ್ತಿಲ್ಲ. ಎಲ್ಲಾ ಸೀರಿಯಲ್‌ಗಳೂ ಈಗ ಇಂಟ್ರೆಸ್ಟಿಂಗ್ ಆಗಿವೆ.

'ಸತ್ಯ' ಧಾರಾವಾಹಿಯಲ್ಲಿ ದಿವ್ಯಾ ಹಾಗೂ ಕಾರ್ತಿಕ್ ಮದುವೆ ಮುರಿದು ಬಿದ್ದಿದೆ. ಇದರಿಂದ ಒಂದುಕಡೆ ದಿವ್ಯಾ ಮನೆಯವರು ಗೊಂದಲದಲ್ಲಿದ್ದಾರೆ. ಒಂದು ಕಡೆ ಸತ್ಯ ಜೈಲಿನಲ್ಲಿದ್ದಾಳೆ. ಮತ್ತೊಂದು ಕಡೆ ಮದುವೆ ನಿಂತು ಹೋಗಿದೆ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅನ್ನೋದೇ ಅರ್ಥವಾಗದೆ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಇತ್ತ ಕಾರ್ತಿಕ್ ಮನೆಯಲ್ಲಿ ಮೌನವೇ ಉತ್ತರವಾಗಿಬಿಟ್ಟಿದೆ. ಕಾರ್ತಿಕ್ ತಂದೆಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಕಾರ್ತಿಕ್ ಹಾಗೂ ಅವರ ತಾಯಿ ಇದೇ ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ ಕೀರ್ತನಾ ಹಾಗೂ ಸುಹಾಸ್ ಖುಷಿ ಮೂಡ್ ನಲ್ಲಿ ಇದ್ದು, ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಈಗ ಧಾರಾವಾಹಿಯಲ್ಲಿ ಏನೆಲ್ಲಾ ಬದಲಾಗುತ್ತೆ? ಟ್ವಿಸ್ಟ್ ಏನು? ಎಂಬುದೇ ದೊಡ್ಡ ಕುತೂಹಲ.

ಬ್ಲ್ಯಾಕ್ ಮೇಲ್ ಮಾಡುತ್ತಿರುವ ಬಾಲ!

ಬ್ಲ್ಯಾಕ್ ಮೇಲ್ ಮಾಡುತ್ತಿರುವ ಬಾಲ!

ದಿವ್ಯಾ ಹಾಗೂ ಕಾರ್ತಿಕ್ ಮದುವೆಯನ್ನು ಹೇಗಾದರೂ ಮಾಡಿ ಕ್ಯಾನ್ಸಲ್ ಮಾಡಬೇಕು ಎಂದು ಕೀರ್ತನಾ ಹಾಗೂ ಸುಹಾಸ್ ಅಂದುಕೊಂಡಿದ್ದರು. ಇದೇ ವೇಳೆಯಲ್ಲಿ ಅವರ ಕಣ್ಣಿಗೆ ಬಿದ್ದಿದ್ದು, ದಿವ್ಯಾ ಲವರ್ ಬಾಲ. ಬಾಲ ಕೂಡ ದಿವ್ಯಾಳನ್ನು ಬಿಟ್ಟುಕೊಡಬಾರದು ಎಂದುಕೊಂಡಿದ್ದ. ಕೀರ್ತನಾ, ಸುಹಾಸ್ ಹಾಗೂ ಬಾಲ ಸೇರಿಕೊಂಡು ಹಲವು ಪ್ಲಾನ್‌ಗಳನ್ನು ಮಾಡಿಕೊಂಡಿರುತ್ತಾರೆ. ಈ ವೇಳೆ, ಬಾಲ ಕೀರ್ತನಾ ವೀಕ್ ನೆಸ್ ಅನ್ನು ಯೂಸ್ ಮಾಡಿಕೊಂಡು ಆಗಾಗ ಹಣ ಕೇಳುತ್ತಿದ್ದ.

ಕೀರ್ತನಾ ಮಾಸ್ಟರ್ ಪ್ಲ್ಯಾನ್!

ಕೀರ್ತನಾ ಮಾಸ್ಟರ್ ಪ್ಲ್ಯಾನ್!

ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕು ಎಂದು ಕೀರ್ತನಾ ಹಣ ಕೊಡುತ್ತಿದ್ದಳು. ಆದರೆ ಈಗ ಮದುವೆ ಕ್ಯಾನ್ಸಲ್ ಆಗಿದೆ. ಈಗಲೂ ಕೂಡ ಬಾಲ ಸುಮ್ಮನಿರದೇ ಕೀರ್ತನಾ ಬಳಿ ಹಣ ಕೀಳಲು ಮುಂದಾಗಿದ್ದಾನೆ. ಕೀರ್ತನಾಗೆ ಕರೆ ಮಾಡಿ ತನ್ನನ್ನು ತಾನು ಹೊಗಳಿಕೊಂಡಿದ್ದಾನೆ. ಆಗ ಕೀರ್ತನಾಗೆ ಇರಿಟೇಟ್ ಆಗಿದೆ. ಆದರೆ ಅನಿವಾರ್ಯವಾಗಿ ಬಾಲನ ಜೊತೆ ಮಾತನಾಡುತ್ತಿದ್ದಾಗ ಆತ ಮತ್ತೆ ಹಣ ಕೇಳಿದ್ದಾನೆ. ಇದಕ್ಕೆ ಶಾಕ್ ಆದ ಕೀರ್ತನಾ ವಿಧಿಯಿಲ್ಲದೆ ಹಣ ಕೊಡ್ತೀನಿ ಮತ್ತೆ ಕೇಳಬೇಡ ಎಂದು ಹೇಳಿದ್ದಾಳೆ. ಆದರೆ ಬಾಲ ನೀವೇ ಕೊಡಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದಾನೆ. ಆಗ ಸರಿ ಎಂದು ಹೇಳಿ ಕೀರ್ತನಾ ಫೋನ್ ಕಟ್ ಮಾಡಿದ್ದಾಳೆ.

ಚಿಂತೆಯಲ್ಲಿ ಮುಳುಗಿ ಹೋದ ಸತ್ಯ!

ಚಿಂತೆಯಲ್ಲಿ ಮುಳುಗಿ ಹೋದ ಸತ್ಯ!

ಚಿದಗ್ನಿ ಭಾಯಿ ಕೊಲೆ ಯತ್ನ ಆರೋಪದ ಮೇಲೆ ಸತ್ಯ ಜೈಲು ಪಾಲಾಗಿದ್ದಾಳೆ. ಸತ್ಯಳನ್ನು ಹೇಗಾದರೂ ಮಾಡಿ ಬಿಡಿಸಬೇಕು ಎಂದು ಕಾಕ್ರೋಜ್ ಸೇರಿದಂತೆ ಅವಳ ಸ್ನೇಹಿತರು ಪ್ರಯತ್ನ ಪಡುತ್ತಿದ್ದಾರೆ. ಇತ್ತ ಜೈಲಿನಲ್ಲೇ ಇರುವ ಸತ್ಯ ಸುಮ್ಮನೇ ಕೂರದೇ ನಡೆದ ಎಲ್ಲಾ ಘಟನೆಗಳ ಮೆಲುಕು ಹಾಕುತ್ತಿದ್ದಾಳೆ. ಚಿದಗ್ನಿ ಭಾಯಿ ಜೊತೆ ತಾನಿದ್ದ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೆ ಪೊಲೀಸರಿಗೆ ಈ ವಿಚಾರ ಹೇಗೆ ಗೊತ್ತಾಯ್ತು ಎಂದು ಯೋಚಿಸುತ್ತಿದ್ದಾಳೆ. ಆಗಲೇ ಸತ್ಯಾಳಿಗೆ ಒಂದು ವಿಷಯ ಅರಿವಿಗೆ ಬರುತ್ತೆ. ಚಿದಗ್ನಿ ಭಾಯಿ ಸೆಕ್ರೆಟರಿಗೆ ಮಾತ್ರ ತಾನು ಆಕೆಯನ್ನು ಭೇಟಿ ಮಾಡಿದ್ದು, ಹಾಗೂ ಸ್ಥಳದ ಬಗ್ಗೆ ಗೊತ್ತಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಈಗ ಮುಂದೆ ಏನು ಮಾಡುತ್ತಾಳೋ ಕಾದು ನೋಡಬೇಕಿದೆ.

ನಟ ಕಾರ್ತಿಕ್‌ಗೆ ಸತ್ಯದ ಅರಿವು!

ನಟ ಕಾರ್ತಿಕ್‌ಗೆ ಸತ್ಯದ ಅರಿವು!

ಇನ್ನು ಮನೆಯಲ್ಲಿ ಸೀತಾ ಹಾಗೂ ಗಿರಿಜಮ್ಮ ಸತ್ಯ ಬಗ್ಗೆ ಯೋಚಿಸುತ್ತಿದ್ದರೆ, ದಿವ್ಯಾಗೆ ತನ್ನ ಮದುವೆ ಹಾಗೂ ಬಾಲನ ಬಗ್ಗೆನೇ ಚಿಂತೆಯಾಗಿ ಬಿಟ್ಟಿದೆ. ಸತ್ಯ ಜೈಲಿನಲ್ಲಿ ಹೇಗಿದ್ದಾಳೋ ಏನೋ..? ಊಟ ಮಾಡಿದಳೋ ಇಲ್ವೋ..? ಎಂದು ಯೋಚಿಸಿದ ಸೀತಾ ಊಟ ತೆಗೆದುಕೊಂಡು ಸೀದಾ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಅಲ್ಲಿ ಸತ್ಯಾಳನ್ನು ಭೇಟಿ ಮಾಡಿದ್ದಾಳೆ. ನನ್ನದೇನು ತಪ್ಪಿಲ್ಲ ಅಮ್ಮ ಎಂದು ಕಣ್ಣೀರು ಹಾಕಿದ ಸತ್ಯ ತಲೆ ತಗ್ಗಿಸುತ್ತಾಳೆ. ಆಗ ಸೀತಾ ತಲೆ ತಗ್ಗಿಸಬೇಡ. ನಿಂದೇನು ತಪ್ಪಿಲ್ಲ. ನಿನ್ನ ಪರವಾಗಿ ನಾನು ನಿಲ್ಲುತ್ತೇನೆ ಎಂದಿದ್ದಾಳೆ. ಇದರಿಂದ ಸತ್ಯ ಸ್ವಲ್ಪ ಸಮಾಧಾನ ಪಟ್ಟುಕೊಂಡಿದ್ದಾಳೆ. ಇನ್ನು ಸತ್ಯ ಜೈಲಿನಿಂದ ಹೇಗೆ ಹೊರ ಬರುತ್ತಾಳೆ? ಕಾರ್ತಿಕ್ ಸತ್ಯಾಳನ್ನು ಅರ್ಥ ಮಾಡಿಕೊಂಡು ಮದುವೆಯಾಗುತ್ತಾನಾ? ಎಂದು ತಿಳಿಯಲು ಪ್ರೇಕ್ಷಕರು ಕಾಯುತ್ತಿದ್ದಾರೆ.

More from Filmibeat

English summary
Sathya Tv Serial Written update On March 24th,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X