ಮದುವೆ ಬಿಟ್ಟು ಓಡಿ ಹೋದ ದಿವ್ಯಾ: ಸತ್ಯ ಮೇಲೆ ಕಾರ್ತಿಕ್ ಅನುಮಾನ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಎಲ್ಲರೂ ಮದುವೆ ಮಂಟಪದ ಬಳಿ ಇದ್ದಾರೆ. ಹುಡುಗಿಯನ್ನು ಕರೆದುಕೊಂಡು ಬನ್ನಿ ಎಂದಾಗ ಸತ್ಯ, ದಿವ್ಯಾ ಸ್ನೇಹಿತೆ ರಮ್ಯಾಳನ್ನು ನೋಡಿ ಶಾಕ್ ಆಗುತ್ತಾಳೆ. ನೀನೇನು ಇಲ್ಲಿದ್ದೀಯಾ, ದಿವ್ಯಾ ಎಲ್ಲಿ ಎಂದು ಕೇಳುತ್ತಾಳೆ. ಆಗ ರಮ್ಯಾ ನಾನು ಅವಳ ಜೊತೆ ಇಲ್ಲ. ಮುಹೂರ್ತಕ್ಕೆ ಟೈಂ ಆಯ್ತು ಅಂತ ಇಲ್ಲಿಗೆ ಬಂದೆ ಎಂದು ಹೇಳುತ್ತಾಳೆ.

ಪುರೋಹಿತರು ದಿವ್ಯಾಳನ್ನು ಕರೆದು ಇಷ್ಟೊತ್ತಾದರೂ ಇನ್ನೂ ಬರಲಿಲ್ಲವಲ್ಲ ಅಂತ ಎಲ್ಲರೂ ಹುಡುಗಿಯನ್ನು ನೋಡುತ್ತಿರುತ್ತಾರೆ. ಆಗ ಸತ್ಯ ದಿವ್ಯಾಳನ್ನು ನೋಡಲು ಓಡುತ್ತಾಳೆ. ಇದೇ ಟೈಂ ಗೆ ಸರಿಯಾಗಿ ಕೀರ್ತನಾ ಓಡಿ ಬಂದು ಅಮ್ಮ ಎಂದು ಕಿರುಚುತ್ತಾಳೆ.

ಎಲ್ಲರೂ ಶಾಕ್ ಆಗಿ ಕೀರ್ತನಾಳನ್ನೇ ನೋಡುತ್ತಾರೆ. ಸೀತಾ ಏನಾಯ್ತೇ, ಯಾಕೆ ಅರ್ಚುಕೋತಾ ಇದೀಯಾ ಎಂದು ಕೇಳಿದಾಗ, ದಿವ್ಯಾ ಎಲ್ಲೂ ಇಲ್ಲ ಎಂದು ಹೇಳುತ್ತಾಳೆ. ಆಗ ಮದುವೆ ಹುಡುಗಿ ಎಲ್ಲೂ ಕಾಣಿಸುತ್ತಿಲ್ಲ ಅಮ್ಮ ಎಂದು ಹೇಳುತ್ತಾಳೆ. ಕೀರ್ತನಾ ಮಾತು ಕೇಳಿ ಎಲ್ಲರೂ ಒಂದು ಕ್ಷಣ ಶಾಕ್ ಆಗುತ್ತಾರೆ.

ಮದುಮಗಳೆ ಇಲ್ಲವೆಂದು ಕುಟುಂಬದವರಿಗೆ ದೊಡ್ಡ ಶಾಕ್!

ಮದುಮಗಳೆ ಇಲ್ಲವೆಂದು ಕುಟುಂಬದವರಿಗೆ ದೊಡ್ಡ ಶಾಕ್!

ದಿವ್ಯಾ ಓಡಿ ಹೋಗಿರುವುದು ಎರಡೂ ಕುಟುಂಬಕ್ಕೂ ದೊಡ್ಡ ಶಾಕ್ ಅನ್ನು ನೀಡುತ್ತದೆ. ಸತ್ಯ ಕೀರ್ತನಾಳನ್ನು ತಮಾಷೆ ಮಾಡಬೇಡಿ ಎನ್ನುತ್ತಾಳೆ. ಆಗ ಕೀರ್ತನಾ ಹಸೆಮಣೆ ಮೇಲೆ ಕೂತಿರುವುದು ನನ್ನ ತಮ್ಮ, ತಮಾಷೆ ಮಾಡುವುದಕ್ಕೆ ನನಗೇನು ತಲೆ ಕೆಟ್ಟಿಲ್ಲ. ನಿಮ್ಮ ಅಕ್ಕ ಎಲ್ಲೂ ಕಾಣುತ್ತಿಲ್ಲ ಎಂದು ಹೇಳುತ್ತಾಳೆ. ಸತ್ಯ ಎಲ್ಲಾ ಕಡೆ ದಿವ್ಯಾಳನ್ನು ಹುಡುಕಲು ಹೋಗುತ್ತಾಳೆ. ಇತ್ತ ಗಿರಿಜಮ್ಮ, ಜಾನಕಿ, ಸೀತಾ ಶಾಕ್ ಆಗಿರುತ್ತಾರೆ. ಆದರೆ ದಿವ್ಯ ಚಿಕ್ಕಪ್ಪ ಅಯ್ಯೋ ದಿವ್ಯ ಓಡಿ ಹೋಗಿ ಬಿಟ್ಟಳಾ, ನನಗೆ ಮೊದಲೇ ಗೊತ್ತಿತ್ತು ಹೀಗೆ ಏನಾದರೂ ಆಗುತ್ತೆ ಅಂತ. ನನ್ನ ಎಡಗಣ್ಣು ಒಡೆದುಕೊಳ್ಳುತ್ತಿತ್ತು ಎನ್ನುತ್ತಾನೆ.

ಕಿಡ್ನಾಪ್ ಆಗೇ ಬಿಟ್ಟಳು ದಿವ್ಯಾ: ಬಾಯಿ ಬಡ್ಕೊಂಡ ಚಿಕ್ಕಪ್ಪ!

ಕಿಡ್ನಾಪ್ ಆಗೇ ಬಿಟ್ಟಳು ದಿವ್ಯಾ: ಬಾಯಿ ಬಡ್ಕೊಂಡ ಚಿಕ್ಕಪ್ಪ!

ಲಾಸ್ಟ್ ಟೈಂ ಕಿಡ್ನಾಪ್ ಮಾಡೋದಕ್ಕೆ ಆಗಲಿಲ್ಲ ಎಂದು ಈ ಸಲ ಕಿಡ್ನಾಪ್ ಮಾಡೇ ಬಿಟ್ರಾ. ಎಲ್ಲಮ್ಮ ಹೋಗಿ ಬಿಟ್ಟೆ. ನಾನು ನಿನಗೆ ಧಾರೆ ಎರೆದುಕೊಡಬೇಕು ಎಂದುಕೊಂಡಿದ್ದೆ. ಈಗ ಎಲ್ಲಿಗೆ ಹೋದೆ, ಒಂದು ಸಾರಿ ಅಲ್ಲ ಎರಡೆರಡು ಸಾರಿ ಮದುವೆ ಮನೆಯಲ್ಲಿ ಈ ರೀತಿಯ ಅನಾಹುತವಾಗಿರುವುದು. ಅಯ್ಯೋ ಮಗಳೇ.. ಅಯ್ಯೋ ಮಗಳೇ ಎನ್ನುತ್ತಿರುತ್ತಾನೆ. ಆಗ ಸೀತಾ ಜಾನಕಿ ಅವರಿಗೆ ಸುಮ್ಮನಿರಲು ಹೇಳಿ ನಾವೆಲ್ಲಾ ಇಲ್ಲಿ ಮೊದಲೇ ಟೆನ್ಷನ್ ನಲ್ಲಿ ಇದ್ದೀವಿ ಎಂದು ಹೇಳುತ್ತಾಳೆ. ಜಾನಕಿ ಸುಮ್ಮನಿರಲು ಹೇಳುತ್ತಾಳೆ.

ಕಾರ್ತಿಕ್‌ಗೆ ಸತ್ಯ ಮೇಲೆ ಅನುಮಾನ!

ಕಾರ್ತಿಕ್‌ಗೆ ಸತ್ಯ ಮೇಲೆ ಅನುಮಾನ!

ಪೊಲೀಸ್‌ಗೆ ಕರೆ ಮಾಡಲು ಮುಂದಾದಾಗ ಕಾರ್ತಿಕ್, ಯಾರೂ ಎಲ್ಲಿಗೂ ಹೋಗಬೇಡಿ, ಪೊಲೀಸ್ ಗೂ ಹೇಳಬೇಡಿ. ಮೊದಲು ಆ ಸತ್ಯ ಎಲ್ಲಿ ಎಂದು ಹುಡುಕಿ. ಅವಳು ಇಲ್ಲಿಗೆ ಬಂದಿರುವುದು ಮದುವೆ ನಡೆಸುವುದಕ್ಕೂ ಅಲ್ಲ. ಮದುವೆ ನೋಡುವುದಕ್ಕೂ ಅಲ್ಲ. ಈ ಮದುವೆ ಕೆಡಿಸುವುದಕ್ಕಾಗೇ ಇಲ್ಲಿಗೆ ಬಂದಿದ್ದಾಳೆ. ಅವಳೆಲ್ಲಿದ್ದಾಳೆ ಎಂದು ನೋಡಿ ಎಂದು ಹೇಳುತ್ತಾನೆ. ಅಷ್ಟರಲ್ಲಿ ಸತ್ಯ ಬರುತ್ತಾಳೆ. ಸೀತಾ ಎಲ್ಲಿ ದಿವ್ಯಾ ಎಂದು ಕೇಳುತ್ತಾರೆ. ಎಲ್ಲಿ ಅವಳು.? ಏನ್ ಮಾಡಿದೆ ದಿವ್ಯಾಳಿಗೆ ಎಂದು ಕೇಳುತ್ತಾಳೆ.

ಕೀರ್ತನಾಳನ್ನು ಪ್ರಶ್ನೆ ಮಾಡಿದ ಸತ್ಯ!

ಕೀರ್ತನಾಳನ್ನು ಪ್ರಶ್ನೆ ಮಾಡಿದ ಸತ್ಯ!

ಅಷ್ಟರಲ್ಲಿ ರಾಮಚಂದ್ರ ರಾಯರು ಬಂದು ದಿವ್ಯಾ ಎಲ್ಲಿದ್ದಾಳೆ ಎಂದು ಗೊತ್ತಾ ಎಂದು ಕೇಳಿದಾಗ ಇಲ್ಲ ಎಂದು ಸತ್ಯ ತಲೆಯಾಡಿಸುತ್ತಾಳೆ. ಸೀತಾ, ಜಾನಕಿ, ಗಿರಿಜಮ್ಮ ಎಲ್ಲರೂ ಸತ್ಯಳನ್ನು ಪ್ರಶ್ನೆ ಮಾಡುತ್ತಾರೆ. ಆದರೆ ಸತ್ಯ ಏನೂ ಹೇಳುವುದಿಲ್ಲ. ಒಂದು ನಿಮಿಷ ಎಲ್ಲರೂ ಸುಮ್ಮನಿರಿ ಎಂದು ಹೇಳಿ ಕೀರ್ತನಾಳನ್ನು ಪ್ರಶ್ನೆ ಮಾಡುತ್ತಾಳೆ. ನಮ್ಮಕ್ಕ ಎಲ್ಲಿ ಎಂದು ಕೇಳುತ್ತಾಳೆ. ಆಗ ಕೀರ್ತನಾ ತಡವರಿಸುತ್ತಾ ನನಗೇನು ಗೊತ್ತು ಎನ್ನುತ್ತಾಳೆ. ಸತ್ಯ ನನ್ನ ತಾಳ್ಮೆನಾ ಪರೀಕ್ಷೆ ಮಾಡದೇ, ನಮ್ಮಕ್ಕೆ ಎಲ್ಲಿ ಎಂದು ಕೇಳುತ್ತಾಳೆ. ಆದ ಕಾರ್ತಿಕ್ ನಿಮ್ಮಕ್ಕ ಕಾಣಿಸುತ್ತಿಲ್ಲ ಅಂತ ನಮ್ಮಕ್ಕನ ಕೇಳುತ್ತೀರಾ.? ಎಂದಾಗ ಸತ್ಯ ನಾನು ಮಾತನಾಡುತ್ತಿದ್ದೀನಿ ತಾನೇ. ನನಗೆ ಚೆನ್ನಾಗಿ ಗೊತ್ತು ನಿಮಗೆಲ್ಲಾ ಗೊತ್ತು ಅಂತ, ಯಾರು ಬಂದಿದ್ದರು ಇಲ್ಲಿಗೆ ಎಂದು ಕೀರ್ತನಾಳನ್ನು ಸತ್ಯ ಕೇಳುತ್ತಾಳೆ.

More from Filmibeat

English summary
Sathya Tv Serial Written Update On May 10th, Big Twist In Divya Marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X