ಮದುವೆ ನಿಲ್ಲಲು ಸತ್ಯ ಕಾರಣ ಎಂದು ಸುಳ್ಳು ಕಥೆ ಕಟ್ಟಿದ ಕೀರ್ತನಾ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ಕಾರ್ತಿಕ್ ಹಾಗೂ ಸತ್ಯ ಮದುವೆ ನಡೆಯುವ ಸಂದರ್ಭ ಬಂದಿದೆ. ಸತ್ಯ ಅಕ್ಕ ದಿವ್ಯಾ ಬಾಲನ ಜೊತೆ ಓಡಿ ಹೋಗಿದ್ದಾಳೆ. ಮದುವೆ ಮನೆಯಲ್ಲಿ ಈಗ ಎಲ್ಲರೂ ಶಾಕ್ ಆಗಿದ್ದಾರೆ. ಸತ್ಯನ ಮೇಲೆ ಎಲ್ಲರೂ ಅನುಮಾನ ಪಡುತ್ತಿದ್ದಾರೆ, ಸತ್ಯ ಕೀರ್ತನಾ ಮೇಲೆ ಸಂಶಯ ಪಡುತಿದ್ದಾಳೆ.

ಹಾಗಾಗಿ ಸತ್ಯ ಕೀರ್ತನಾಳನ್ನು ಪ್ರಶ್ನೆ ಮಾಡುತ್ತಿದ್ದಾಳೆ. ನನ್ನ ಅಕ್ಕ ಎಲ್ಲಿ ಅಂತ ಹೇಳು ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡ. ನನಗೆ ಚೆನ್ನಾಗಿ ಗೊತ್ತು ನಿನಗೆಲ್ಲಾ ಗೊತ್ತು ಅಂತ, ಯಾರು ಬಂದಿದ್ದರು ಇಲ್ಲಿಗೆ ಹೇಳು ಎಂದು ಕೀರ್ತನಾಳನ್ನು ಸತ್ಯ ಕೇಳುತ್ತಾಳೆ.

ಆಗ ರೊಚ್ಚಿಗೆದ್ದ ಕೀರ್ತನಾ, ಏನಾಗಿದೆ ನಿನಗೆ, ನಿಮ್ಮಕ್ಕ ಕಾಣಿಸುತ್ತಿಲ್ಲ ಅಂದರೆ ನಾನು ಹೇಗೆ ಹೊಣೆ ಆಗುತ್ತೀನಿ. ನಿಮ್ಮ ಫ್ಯಾಮಿಲಿನೇ ಹೀಗೆ ಅಂತ ಕಾಣುತ್ತೆ. ಕಾರ್ತಿಕ್ ಹೇಳಿದ್ದೆ ಸರಿ, ನೀನು ಬಂದಿರೋದೆ ಮದುವೆ ನಿಲ್ಲಿಸೋಕೆ ಅಂತ. ನಿಮ್ಮಕ್ಕನನ್ನ ಬಚ್ಚಿಟ್ಟು ಈಗ ನನ್ನ ತೆಲೆಗೆ ಕಟ್ಟುತ್ತಿದ್ದೀಯಾ ಎಂದು ಹೇಳುತ್ತಾಳೆ.

ಸತ್ಯ ಎದುರು ತಿರುಗಿ ಬಿದ್ದ ಕೀರ್ತನಾ!

ಸತ್ಯ ಎದುರು ತಿರುಗಿ ಬಿದ್ದ ಕೀರ್ತನಾ!

ಕೀರ್ತನಾ ಮಾತು ಕೇಳಿದ ಸತ್ಯ ಕೋಪಗೊಂಡು. ಎಲ್ಲದಕ್ಕೂ ನಾನೇ ಕಾರಣಾನ? ಕಾರ್ತಿಕ್ ಹಾಗೂ ದಿವ್ಯಕ್ಕನ ಮದುವೆ ಮಾಡಿಸಬೇಕು ಎಂದು ಹಗಲು ರಾತ್ರಿ ಓಡಾಡುತ್ತಿದ್ದೇನೆ. ಮದುವೆ ನಿಲ್ಲಿಸುವ ಹಾಗಿದ್ದಿದ್ದರೆ, ಮಂಟಪದವರೆಗೂ ಬರುತ್ತಲೇ ಇರಲಿಲ್ಲ ಎಂದು ಹೇಳುತ್ತಾಳೆ. ಅಷ್ಟಕ್ಕೂ ದಿವ್ಯಕ್ಕ ಇಷ್ಟೊತ್ತು ಇದ್ದಿದ್ದು ನಿಮ್ಮ ಜೊತೆಗೆ ಅದಕ್ಕೆ ನಿಮ್ಮನ್ನ ಕೇಳುತ್ತಿರೋದು ಎಂದು ಹೇಳಿದ ಸತ್ಯ, ದಿವ್ಯಾ ಸ್ನೇಹಿತೆ ರಮ್ಯಳನ್ನು ಕೇಳುತ್ತಾಳೆ. ಆಗ ರಮ್ಯಾ ಕೀರ್ತನಾ ಅವರೇ ದಿವ್ಯಾಳನ್ನ ಕರೆದುಕೊಂಡು ಹೋಗಿದ್ದು ಎನ್ನುತ್ತಾಳೆ. ಕರೆಂಟ್ ಇಲ್ಲ ಮೇಕಪ್ ಮಾಡಬೇಕು ಅಂತ ಒಂದು ರೂಮಿನಿಂದ ಇನ್ನೊಂದು ರೂಮಿಗೆ ಕರೆದುಕೊಂಡು ಹೋಗಿದ್ದು ನೀನು. ಅಕ್ಕ ಎಲ್ಲಿ ಅಂತ ನೀನೇ ಹೇಳಬೇಕು ಎನ್ನುತ್ತಾಳೆ.

ಕೀರ್ತನಾ ಮೇಲೆ ಸತ್ಯ ಕಿರುಚಾಟ!

ಕೀರ್ತನಾ ಮೇಲೆ ಸತ್ಯ ಕಿರುಚಾಟ!

ಸತ್ಯ ಹೇಳಿದ ಮಾತುಗಳನ್ನು ಕೇಳಿ, ಅಯ್ಯೋ ಎಲ್ಲಾ ತನ್ನ ತಲೆ ಮೇಲೆ ಬಂತಲ್ಲಪ್ಪ ಎಂದು ಕೀರ್ತನಾ ಶಾಕ್ ಆಗುತ್ತಾಳೆ. ನನಗೆ ನಿಜವಾಗಲೂ ಗೊತ್ತಿಲ್ಲ ಸತ್ಯ ಎನ್ನುತ್ತಾಳೆ. ಆಗ ಸತ್ಯ, ಅಕ್ಕ ಎಲ್ಲಿಗೆ ಹೋದಳು, ಎಷ್ಟೊತ್ತಾಯ್ತು ಅಂತನಾದರೂ ಹೇಳಿ ಪುಣ್ಯ ಕಟ್ಟಿಕೊಳ್ಳಿ ಎಂದು ಕೈ ಮುಗಿಯುತ್ತಾಳೆ. ಆಗ ಕೀರ್ತನಾ ಚಿಕ್ಕಪ್ಪ ಲಕ್ಷ್ಮಣ ಕೂಡ ಕೇಳುತ್ತಾರೆ. ನಿನ್ನ ಜೊತೆ ದಿವ್ಯಾ ಇದ್ದಳು ಎಂದ ಮೇಲೆ ನೀನೇ ಹೇಳಬೇಕು ಎನ್ನುತ್ತಾನೆ. ಆಗ ಕೀರ್ತನಾ ದಿವ್ಯಾಳನ್ನ ರೂಮಿಂದ ಬೇರೆ ರೂಮಿಗೆ ಕರೆದುಕೊಂಡು ಹೋಗಿದ್ದು ನಾನೇ. ಆದರೆ ಅಲ್ಲಿ ಬಿಟ್ಟು ನಾನು ಬಂದು ಬಿಟ್ಟೆ. ನಾನೇ ತಾನೇ ದಿವ್ಯಾ ಕಾಣಿಸ್ತಿಲ್ಲ ಅಂತ ಹೇಳ್ತಿರೋದು ನನ್ನ ಮೇಲೆಯೇ ಅನುಮಾನ ಪಡುತ್ತೀರಲ್ಲ ಎಂದು ಹೇಳುತ್ತಾಳೆ. ಆಗ ಸೀತಾ ಮಾತನಾಡಿ ಲಕ್ಷ್ಮಣ ನೀನೇನೋ ಯಾರದೋ ಮಾತು ಕೇಳಿಕೊಂಡು ನಮ್ಮನೆ ಹುಡುಗಿ ಮೇಲೆ ಅನುಮಾನ ಪಡುತ್ತೀಯಾ ಎನ್ನುತ್ತಾಳೆ.

ಸತ್ಯ ಮೇಲೆ ಸುಳ್ಳು ಹೇಳಿದ ಕೀರ್ತನಾ!

ಸತ್ಯ ಮೇಲೆ ಸುಳ್ಳು ಹೇಳಿದ ಕೀರ್ತನಾ!

ಕೀರ್ತನಾಳನ್ನು ಸೀತಾ, ಲಕ್ಷ್ಮಣ ಎಲ್ಲರೂ ಏನಾಯ್ತು ಅಂತ ಹೇಳು ಎಂದಾಗ ಕೀರ್ತನಾ ದಿವ್ಯಾಳನ್ನು ಮದುವೆ ಮನೆಯಿಂದ ಕಳಿಸಿಕೊಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ನಂತರ ಕಥೆ ಕಟ್ಟಿ ಹೇಳುತ್ತಾಳೆ. ಸತ್ಯ ಯಾವುದೋ ಹೆಂಗಸನ್ನು ಕಾರಿನಲ್ಲಿ ಕಳಿಸಿಕೊಟ್ಟಳು ಅದು ದಿವ್ಯಾನೇ ಇರಬಹುದು. ನನಗೆ ಆಗ ಗೊತ್ತಾಗಲಿಲ್ಲ ಎನ್ನುತ್ತಾಳೆ. ಆಗ ಮನೆಯವರೆಲ್ಲರೂ ಶಾಕ್ ಆಗುತ್ತಾರೆ. ಸತ್ಯ ಮಾತು ಬಾರದೇ ಸುಮ್ಮನೆ ನಿಂತು ಬಿಡುತ್ತಾಳೆ. ಸೀತಾ, ಕೀರ್ತನಾ, ಸುಹಾಸ್, ಜಾನಕಿ, ಗಿರಿಜಮ್ಮ ಮಂಟಪದಿಂದ ಹೊರಡುತ್ತಾರೆ. ಆಗ ಸತ್ಯ ಅಮ್ಮನ ಹಿಂದೆಯೇ ಹೋಗುತ್ತಾಳೆ.

ಮದುವೆ ಮನೆ ಬಂದ ಸ್ವಾಮಿ ಜೀ!

ಮದುವೆ ಮನೆ ಬಂದ ಸ್ವಾಮಿ ಜೀ!

ಇದೇ ವೇಳೆಗೆ ಕಾರ್ತಿಕ್ ನೋಡಿದಿರಲ್ಲ ಅಪ್ಪ ಮದುವೆ ನಿಲ್ಲಿಸೋದಕ್ಕೆ ಸತ್ಯ ಏನೆಲ್ಲಾ ಮಾಡಿದಳು ಅಂತ ಮಂಟಪದಿಂದ ಇಳಿಯಲು ಮುಂದಾದಾಗ ಗುರುಗಳು ಬರುತ್ತಾರೆ. ಮದುವೆಯಾಗದೆ ಮಂಟಪದಿಂದ ಬರಬಾರದು ಎನ್ನುತ್ತಾರೆ. ರಾಮಚಂದ್ರ ರಾಯರು ಗುರುಗಳನ್ನು ಏನಾಗಿದೆ ನೋಡಿ ಎಂದಾಗ ಗುರುಗಳು ಯಾವುದೂ ಕಾಕತಾಳಿಯವಲ್ಲ. ಎಲ್ಲವೂ ಪೂರ್ವ ನಿಯೋಜಿತ ಎಂದು ಹೇಳುತ್ತಾರೆ. ಈಗ ಗುರುಗಳು ಸತ್ಯ ಹಾಗೂ ಕಾರ್ತಿಕ್ ಮದುವೆ ಮಾಡಿಸುತ್ತಾರೇನೋ ಕಾದು ನೋಡಬೇಕಿದೆ.

More from Filmibeat

English summary
Sathya Tv Serial Written Update On May 11th, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X