Don't Miss!
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೀರ್ತನಾ ಪ್ಲ್ಯಾನ್ ಠುಸ್... ಸತ್ಯ, ಕಾರ್ತಿಕ್ ಮದುವೆಗೆ ಅಪ್ಪನ ನಿರ್ಧಾರ!
ಸತ್ಯ ಧಾರಾವಾಹಿಯಲ್ಲಿ ಈಗ ದಿವ್ಯಾ ಕಾಣೆಯಾಗಿದ್ದಾಳೆ. ಮದುವೆ ನಿಂತು ಹೋಗುತ್ತೋ ಅಥವಾ ಸತ್ಯ ಜೊತೆಗೆ ಕಾರ್ತಿಕ್ ಮದುವೆಯಾಗುತ್ತೋ ಎಂಬ ಕುತೂಹಲ ಸೃಷ್ಟಿಯಾಗಿದೆ. ಗುರುಗಳು ಏನ್ ಹೇಳುತ್ತಾರೆ, ಸೀತಾರನ್ನು ಹೇಗೆ ಒಪ್ಪಿಸುತ್ತಾರೆ ಎಂಬುದೇ ಈಗ ಕುತೂಹಲದ ಸಂಗತಿ.
ಸೀತಾ ಕೋಟೆಮನೆ ಮರ್ಯಾದೆ ಗೌರವ ಎಲ್ಲವೂ ನುಚ್ಚು ನೂರಾಗಿದೆ. ಇನ್ನೇನು ಮಾಡಿದರೂ ಆ ಮರಿಯಾದೆ ಸಿಗೋದಿಲ್ಲ. ನನ್ನಿಂದಲೇ ಈ ಇದೆಲ್ಲಾ ನಡೆದೇ ಹೋಯ್ತು. ನಾನು ಅಂದು ಮದುವೆ ಬೇಡ ಅಂದೆ ಅನ್ನೋ ಒಂದೇ ಒಂದು ಕಾರಣಕ್ಕೆ ಇವತ್ತು ಸತ್ಯ ಮದುವೆ ನಿಲ್ಲಿಸಿದ್ದಾಳೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ.
ಮದುವೆ
ಬಿಟ್ಟು
ಓಡಿ
ಹೋದ
ದಿವ್ಯಾ:
ಸತ್ಯ
ಮೇಲೆ
ಕಾರ್ತಿಕ್
ಅನುಮಾನ!
ಕೀರ್ತನಾ, ತಾಯಿ ಸೀತಾಗೆ ಯೋಚನೆ ಮಾಡಬೇಡ ಅಮ್ಮ. ಹೇಗಾದರೂ ಮಾಡಿ ಕಾರ್ತಿಕ್ ಜೊತೆಗೆ ಸುಹಾಸ್ ತಂಗಿ ನಿಶಾಳ ಮದುವೆ ಮಾಡಿಸಬೇಕು ಎಂದು ಲೆಕ್ಕಾಚಾರ ಹಾಕಿದ್ದಾಳೆ. ಹಾಗಾಗಿ ಸೀತಾ ಬಳಿ ಕಾರ್ತಿಕ್ ಮದುವೆಯನ್ನು ನಿಶಾ ಜೊತೆ ಮಾಡೋಣ. ನಿಶಾ ಕಾರ್ತಿಕ್ ನನ್ನು ತುಂಬಾ ಪ್ರೀತಿಸುತ್ತಿದ್ದಾಳೆ ಎಂದು ಹೇಳುತ್ತಾಳೆ.

ನಿಶಾ, ಕಾರ್ತಿಕ್ ಮದುವೆ ಮಾಡಿಸಲು ಕೀರ್ತಾನಾ ಪ್ಯಾನ್!
ಕೀರ್ತನಾ ಹಾಗೂ ಸುಹಾಸ್ ನಿಶಾ ಜೊತೆಗೆ ಕಾರ್ತಿಕ್ ಮದುವೆ ಮಾಡೋಣ. ಆಗ ನಮ್ಮ ಮರ್ಯಾದೆಯೂ ಉಳಿಯುತ್ತೆ. ಪ್ರೆಸ್ಟೀಜ್ ಅನ್ನು ಕೂಡ ಕಾಪಾಡಿಕೊಳ್ಳಬಹುದು ಎಂದು ಕೀರ್ತನಾ ಹೇಳುತ್ತಾಳೆ. ಈ ಬಗ್ಗೆ ಯೋಚನೆ ಮಾಡುವ ಸೀತಾಗೆ ಕೀರ್ತನಾ ಕಾರ್ತಿಕ್ ಗೆ ಈಗಾಗಲೇ ಎರಡೆರಡು ಸಲ ಮದುವೆ ನಿಂತು ಹೋದ ಮೇಲೆ ಯಾರು ಹೆಣ್ಣು ಕೊಡುತ್ತಾರೆ. ಹಾಗೊಂದು ವೇಳೆ ಯಾರಾದರೂ ಮದುವೆಯಾದರೂ ಸಹ ನಮ್ಮ ಮನೆಗೆ ಹೊಂದುಕೊಳ್ಳುತ್ತಾಳಾ. ಆದರೆ ನಿಶಾ ನಮ್ಮನೆ ಸಂಪ್ರದಾಯವನ್ನು ತಿಳಿದುಕೊಂಡಿದ್ದಾಳೆ. ಸತ್ಯ ಎಂದುಕೊಂಡಂತೆ ನಡೆಯುವುದರ ಬದಲು ನಿಶಾ ಮದುವೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾಳೆ. ಏನೂ ಮಾಡದೆ ಸೀತಾ ಅಲ್ಲಿಂದ ಹೊರಡುತ್ತಾಳೆ.
ಮದುವೆ
ನಿಲ್ಲಲು
ಸತ್ಯ
ಕಾರಣ
ಎಂದು
ಸುಳ್ಳು
ಕಥೆ
ಕಟ್ಟಿದ
ಕೀರ್ತನಾ!

ರಾಮಚಂದ್ರ ಗೊಂದಲಗಳಿಗೆ ತೆರೆ ಎಳೆದ ಗುರುಗಳು!
ರಾಮಚಂದ್ರ ರಾಯರ ಯೋಚನೆಯನ್ನು ಬದಿಗೊತ್ತಿ ಗುರುಗಳು ಹೇಳಿದ ಮಾತನ್ನು ಇನ್ನೊಮ್ಮೆ ಯೋಚಿಸಿ ನಿಮಗೆ ಸತ್ಯ ಗೊತ್ತಾಗುತ್ತೆ. ಕಾರ್ತಿಕ್ ಮದುವೆಯನ್ನು ಮದುವೆ ಮಾಡಿಸಿ. ನಿಮ್ಮ ಪ್ರಶ್ನೆಗಳಲ್ಲೇ ಉತ್ತರವಿದೆ. ಇರುವ ಮುಹೂರ್ತದಲ್ಲೇ ಮದುವೆ ಮಾಡಿ ಮುಗಿಸಿ. ಕಾರಣವಿಲ್ಲದೇ ಯಾವುದೇ ಕಾರ್ಯವೂ ನಡೆಯೋದಿಲ್ಲ. ಧೈರ್ಯವಾಗಿ ಹೆಜ್ಜೆ ಮುಂದಿಡಿ. ಗುರುಗಳು ಹೇಳಿದ್ಯಾವುದೂ ಸುಳ್ಳಲ್ಲ. ಆ ಹುಡುಗಿ ದೈವಾಂಶ ಇರುವವಳು. ಅವಳು ನಿಮ್ಮ ಮನೆಗೆ ಬಂದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.

ಸತ್ಯ ಕಾರ್ತಿಕ್ ಮದುವೆಗೆ ಯೋಚನೆಯಲ್ಲಿ ಕಾರ್ತಿಕ್ ಅಪ್ಪ!
ಗುರುಗಳು ಹೇಳಿದಾಗ ರಾಮಚಂದ್ರ ರಾಯರು ನಡೆದಿದ್ದೆಲ್ಲವನ್ನು ಮತ್ತೆ ನೆನಪಿಸಿಕೊಳ್ಳುತ್ತಾರೆ. ಸತ್ಯ ಹಾಗೂ ದಿವ್ಯಾ ಜಾತಕ ಬದಲಾಗಿದ್ದು. ಗುರುಗಳು ಜಾತಕದ ಹುಡುಗಿಯೇ ನಿಮ್ಮ ಮನೆಗೆ ಸೂಕ್ತ ಹೆಣ್ಣು ಮಗಳು ಎಂದಿದ್ದು ಎಲ್ಲವನ್ನೂ ರಾಮಚಂದ್ರ ರಾಯರು ನೆನಪು ಮಾಡಿಕೊಳ್ಳುತ್ತಾರೆ. ದೈವ ಸಂಕಲ್ಪದಂತೆಯೇ ಈಗ ಸತ್ಯ ಜೊತೆಗೆ ಕಾರ್ತಿಕ್ ಮದುವೆ ಮಾಡಿಸುವುದೇ ಸರಿ ಎನ್ನುತ್ತಾರೆ.
ಸಿಲ್ಲಿ
ಲಲ್ಲಿ
NML
ಪಾತ್ರ
ಖ್ಯಾತಿಯ
ನಮಿತಾ
ರಾವ್
ಈಗ
ಸಿನಿಮಾದಲ್ಲಿ!

ಸತ್ಯ ಕಾರ್ತಿಕ್ ಮದುವೆಗೆ ಗ್ರೀನ್ ಸಿಗ್ನಲ್!
ಎಲ್ಲಾ ಸತ್ಯವನ್ನೂ ಹೇಳಿ ಮದುವೆಯನ್ನು ನಡೆಸಬೇಕು ಎಂದು ರಾಮಚಂದ್ರ ರಾಯರು ಧೃಢ ನಿರ್ಧಾರ ಮಾಡುತ್ತಾರೆ. ರಾಮಚಂದ್ರ ರಾಯರಿಗೆ ಗುರುಗಳು ಧೈರ್ಯ ಹೇಳುತ್ತಾರೆ. ನಿಮ್ಮ ನಂಬಿಕೆಯೇ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ನಂಬಿಕೆ ಇಟ್ಟು ಮುನ್ನಡೆಯಿರಿ ಎಂದು ಹೇಳುತ್ತಾರೆ.ಮುಂದೆ ಏನಾಗುತ್ತದೆ? ಸೀತಾ ನಿಶಾ ಜೊತೆಗೆ ಮದುವೆ ಮಾಡಿಸಲು ಮುಂದಾಗಿದ್ದರೆ, ರಾಮಚಂದ್ರ ರಾಯರು ಸತ್ಯಳ ಜೊತೆಗೆ ಕಾರ್ತಿಕ್ ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ ಕಾರ್ತಿಕ್ ನಿಜಕ್ಕೂ ಸತ್ಯಳನ್ನು ಮದುವೆಯಾಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.