ಕಾರ್ತಿಕ್ ಜೊತೆ ಮದುವೆಯಾಗುವುದಿಲ್ಲ ಎಂದ ಸತ್ಯ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ರಾಮಚಂದ್ರ ರಾಯರು ಸತ್ಯಳನ್ನು ಮನೆಗೆ ತುಂಬಿಸಿಕೊಳ್ಳು ಮುಂದಾಗಿದ್ದಾರೆ. ಇದೇ ವಿಚಾರವಾಗಿ ಸತ್ಯ ಅವರ ಮನೆಯವರ ಬಳಿ ಮಾತನಾಡಲು ಬಂದಿದ್ದಾರೆ. ನಿಮ್ಮ ಮೊಮ್ಮೊಗಳನ್ನ ನಮ್ಮ ಮನೆ ತುಂಬಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟಿದ್ದೀನಿ. ಈಗಲೂ ಆ ಮಾತನ್ನು ಉಳಿಸಿಕೊಳ್ಳೋದಕ್ಕೆ ಬಂದಿದ್ದೀನಿ ಎಂದು ರಾಮಚಂದ್ರ ರಾಯರು ಹೇಳಿದ್ದಾರೆ.

ನಾನೀಗ ನನ್ನ ಮಗನ ಜೊತೆ ಹೊಂದಿಕೆಯಾಗಿರುವ ಜಾತಕದ ಹುಡುಗಿಯನ್ನು ಕೇಳೋಕೆ ಬಂದಿದ್ದೀನಿ. ಸತ್ಯ ನನ್ನ ಮಗ ಕಾರ್ತಿಕ್ ನನ್ನ ಮದುವೆಯಾಗುತ್ತೀಯೇನಮ್ಮ. ನಮ್ಮ ಮನೆಯ ಸೊಸೆಯಾಗಿ ನಮ್ಮ ಮನೆಗೆ ಬೆಳುಕು ತರುತ್ತೀಯೇನಮ್ಮ ಎಂದು ರಾಮಚಂದ್ರರಾಯರು ಕೇಳುತ್ತಾರೆ.

ಇತ್ತ ನಿಶಾ ಮದುವೆಗೆ ತಯಾರಾಗುತ್ತಿರುತ್ತಾಳೆ. ಆದರೆ ಕಾರ್ತಿಕ್ ತನ್ನನ್ನು ಒಪ್ಪುತ್ತಾನಾ ಎಂಬ ಗೊಂದಲಕ್ಕೆ ಕೀರ್ತನಾ ಖಂಡಿತಾ ನಿನ್ನ ಒಪ್ಪಲ್ಲ ಎಂದು ಹೇಳುತ್ತಾಳೆ. ಈ ಮಾತಿಗೆ ನಿಶಾ ಬೇಜಾರು ಮಾಡಿಕೊಳ್ಳುತ್ತಾಳೆ. ಕೀರ್ತನಾ ನಿನ್ನನ್ನು ಕಾರ್ತಿಕ್ ಒಪ್ಪಿದರೆ ಇಷ್ಟೆಲ್ಲಾ ನಾವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದಾಗ ನಿಶಾ ಬೇಸರದಲ್ಲಿ ಏನು ಹೀಗೆಲ್ಲಾ ಮಾತನಾಡುತ್ತಿದ್ದೀರಾ. ನಾನೇನು ಹರಕೆ ಕುರಿನಾ ಅಲ್ಲಿ ಮಂಟಪದಲ್ಲಿ ಎಲ್ಲರ ಮುಂದೆ ಅವಮಾನ ಮಾಡಿಸಿಕೊಳ್ಳುವುದಕ್ಕೆ ಎಂದು ನಿಶಾ ಹೇಳುತ್ತಾಳೆ. ಆಗ ಕೀರ್ತನಾ ಇದಕ್ಕೆಲ್ಲಾ ಏನೂ ಕಡಿಮೆ ಇಲ್ಲ. ನಮ್ಮಮ್ಮ ನಿನ್ನ ಒಪ್ಪಿದರೆ ಸಾಕು ಕಾರ್ತಿಕ್ ಒಪ್ಪುವ ಅವಶ್ಯಕತೆ ಇಲ್ಲ ಎಂದು ಹೇಳಿ ಸಮಾಧಾನಾ ಮಾಡುತ್ತಾಳೆ. ಪುರೋಹಿತರು ಕರೆದ ಕೂಡಲೇ ಬಾ ಎಂದು ಹೇಳಿ ಹೊರಡುತ್ತಾಳೆ.

Sathya Tv Serial Written Update On May 16th Episode, Big Twist In Sathya Life

ಗಿರಿಜಮ್ಮ ರಾಮಚಂದ್ರ ಅವರ ಮಾತನ್ನು ಕೇಳಿ ಶಾಕ್ ಆಗುತ್ತಾರೆ. ರಾಯರೇ ನೀವಾ ಈ ಮಾತು ಹೇಳುತ್ತಿರುವುದು ನನಗೆ ನಂಬೋದಕ್ಕೆ ಆಗುತ್ತಿಲ್ಲ ಎನ್ನುತ್ತಾಳೆ. ಜಾನಕಿ ಖುಷಿ ಪಟ್ಟು ಇದಕ್ಕಿಂತ ಅದೃಷ್ಟವೇನಿದೆ. ನಮಗೇನೋ ಒಪ್ಪಿಗೆ ಇದೆ. ಆದರೆ ಸತ್ಯ ಇದಕ್ಕೆ ಒಪ್ಪಬೇಕು ಅಷ್ಟೇ. ನಮ್ಮ ಸತ್ಯ ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೋ. ಅದೇ ನಮ್ಮ ನಿರ್ಧಾರ ಎನ್ನುತ್ತಾಳೆ. ಇದಕ್ಕೆ ರಾಮಚಂದ್ರರಾಯರು, ಅಮ್ಮ ಇದು ನಮ್ಮ ಗುರುಗಳು ಹೇಳಿರೋದು, ಈ ಮದುವೆ ದೈವ ಲಿಕಿತ. ಅದಕ್ಕೆ ನಮ್ಮ ಕೈ ಮೀರಿ ಇಷ್ಟೆಲ್ಲಾ ನಡೆದಿದ್ದು. ಈಗ ಸತ್ಯ ಒಪ್ಪಿ ಮದುವೆಯಾದರೆ ಗುರುಗಳ ಮಾತನ್ನು ಉಳಿಸಿಕೊಳ್ಳಬಹುದು. ಏನಮ್ಮ ನನ್ನ ಮಗ ಕಾರ್ತಿಕ್‌ನ ಮದುವೆಯಾಗುತ್ತೀಯಾ ಸತ್ಯ ಎಂದು ಕೇಳುತ್ತಾರೆ.

Sathya Tv Serial Written Update On May 16th Episode, Big Twist In Sathya Life

ಅದಕ್ಕೆ ಸತ್ಯ ಶಾಕ್ ಆಗಿ ನಿಂತಿರುತ್ತಾಳೆ. ಗಿರಿಜಮ್ಮ ಇದಕ್ಕಿಂದ ಅವಕಾಶ ಇನ್ನೊಮ್ಮೆ ಸಿಗೋದಿಲ್ಲ ಒಪ್ಪಿಕೋ ಸತ್ಯ. ಈ ಮೂಲಕನಾದರೂ ನಿನ್ನ ಪ್ರೀತಿ ಸಿಗುತ್ತೆ. ಒಪ್ಪಿಕೊಂಡು ಬಿಡು ಎನ್ನುತ್ತಾರೆ. ಜಾನಕಿ ಹೀಗಾದರೂ ನಿನಗೆ ನ್ಯಾಯ ಸಿಗುತ್ತೆ. ಇಲ್ಲ ಅನ್ನಬೇಡ ಒಪ್ಪಿಕೊಂಡು ಬಿಡಮ್ಮ ಎಂದು ಹೇಳುತ್ತಾಳೆ. ರಾಮಚಂದ್ರ ರಾಯರು, ಯಾಕಮ್ಮ ಸತ್ಯ ಸುಮ್ಮನಿದ್ದೀಯಾ.? ನಿನಗೆ ಕಾರ್ತಿಕ್ ನನ್ನ ಮದುವೆಯಾಗಲು ಒಪ್ಪಿಗೆ ತಾನೇ. ಸತ್ಯ ನಿನ್ನ ನಿರ್ಧಾರ ಏನು ಎಂದು ಹೇಳಮ್ಮ ಎಂದು ಕೇಳುತ್ತಾರೆ. ಆದರೆ ಸತ್ಯ, ಕ್ಷಮಿಸಿ ರಾಯರೇ ನಾನು ಕಾರ್ತಿಕ್‌ನ ಮದುವೆಯಾಗುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಆಗ ಜಾನಕಿ, ಗಿರಿಜಮ್ಮ ಹಾಗೂ ರಾಮಚಂದ್ರ ರಾಯರು ಶಾಕ್ ಆಗುತ್ತಾರೆ.

Sathya Tv Serial Written Update On May 16th Episode, Big Twist In Sathya Life

ಇನ್ನು ಸೀತಾ ರಾಮಚಂದ್ರ ರಾಯರನ್ನು ನೋಡಿ, ಇಷ್ಟೊತ್ತು ಎಲ್ಲಿಗೆ ಹೋಗಿದ್ರಿ, ಇನ್ನು ಮುಹೂರ್ತಕ್ಕೆ ಸ್ವಲ್ಪ ಹೊತ್ತೇ ಸಮಯವಿದೆ. ಇದೇ ಮುಹೂರ್ತದಲ್ಲೇ ಕಾರ್ತಿಕ್ ಮದುವೆ ಮಾಡಬೇಕು. ಇದು ನಮ್ಮ ಮನೆತನ ಮರ್ಯಾದೆ ಪ್ರಶ್ನೆ. ಇದಕ್ಕೆ ನಿಮ್ಮ ಒಪ್ಪಿಗೆ ಬೇಕು ಎಂದಾಗ ರಾಮಚಂದ್ರರಾಯರು ಒಪ್ಪುತ್ತಾರೆ. ಆಗ ಸೀತಾ ನಿಶಾ ಜೊತೆ ಮದುವೆ ಮಾಡಿ ಮುಗಿಸೋಣ. ಅವಳಿಗೆ ನಮ್ಮ ಮನೆತನದ ಬಗ್ಗೆ ಗೌರವವಿದೆ ಎನ್ನುತ್ತಾಳೆ. ಇದಕ್ಕೆ ರಾಮಚಂದ್ರ ರಾಯರು ನಾನು ಮದುವೆಗೂ ಮುನ್ನ ಕಾರ್ತಿಕ್ ಹತ್ತಿರ ಮಾತನಾಡಬೇಕು ಎಂದು ಹೇಳಿ ಹೊರಡುತ್ತಾನೆ. ಸತ್ಯ ಮದುವೆಯಾಗುವುದಿಲ್ಲ ಎಂದಿದ್ದಾಳೆ. ಗುರುಗಳು ಸತ್ಯ ಜೊತೆಗೆ ಕಾರ್ತಿಕ್ ಮದುವೆ ಮಾಡಿಸಬೇಕು ಎಂದಿದ್ದಾರೆ ಮುಂದೇನಾಗುತ್ತೋ ಕಾದು ನೋಡಬೇಕಿದೆ.

More from Filmibeat

English summary
Sathya Tv Serial Written Update On May 16th Episode, Big Twist In Sathya's Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X