ನಿಶಾ ಅಥವಾ ಸತ್ಯ ಯಾರಿಗೆ ತಾಳಿ ಕಟ್ಟುತ್ತಾನೆ ಕಾರ್ತಿಕ್!?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಮದುವೆಗೆ ವಿಘ್ನ ಎದುರಾಗಿದೆ. ದಿವ್ಯಾ ಓಡಿ ಹೋಗಿದ್ದು, ನಿಶಾ ಜೊತೆಗೆ ಮದುವೆ ಮಾಡಲು ಸೀತಾ ಮುಂದಾಗಿದ್ದಾಳೆ. ಆದರೆ ಸತ್ಯ ಜೊತೆಗೆ ಕಾರ್ತಿಕ್ ಮದುವೆ ಮಾಡಬೇಕು ಎಂದು ರಾಮಚಂದ್ರರಾಯರು ಅಂದುಕೊಂಡಿದ್ದರೆ, ಸತ್ಯ ತಿರಸ್ಕರಿಸಿದ್ದಾಳೆ. ಇದೀಗ ಗುರುಗಳು ಮದುವೆ ಮಂಟಪಕ್ಕೆ ಬಂದಿದ್ದಾರೆ.

ಕಾರ್ತಿಕ್ ಗುರುಗಳನ್ನು ನೋಡುತ್ತಿದ್ದಂತೆಯೇ ಬೇಸರದಲ್ಲಿ ಮಾತನಾಡಲು ಶುರು ಮಾಡುತ್ತಾನೆ. ಏನು ಗುರುಗಳೇ ಹೀಗಾಯ್ತು. ಹಸೆಮಣೆ ಮೇಲೆ ಕೂತಾಗಲೇ ಹೀಗೆಲ್ಲಾ ಆಗಬೇಕಾ. ನಾನೇನು ತಪ್ಪು ಮಾಡಿದೆ ಎಂದು ನನಗೇ ಹೀಗಾಗುತ್ತಿದೆ. ಎರಡೆರಡು ಸಲ ನನ್ನ ಮದುವೆ ನಿಂತು ಹೋಯ್ತು ಎಂದು ಗೋಳಾಡುತ್ತಾನೆ.

ಅದಕ್ಕೆ ಗುರುಗಳು ಮಾತು ಮುಂದುವರಿಸಿ, ಎಲ್ಲವೂ ನಿಶ್ಚಯವಾಗಿದ್ದೇ. ಯಾವುದು ಅನಿರೀಕ್ಷಿತವಲ್ಲ ಮಗು. ಆಗುವುದೆಲ್ಲವೂ ಒಳ್ಳೆಯದಕ್ಕೇ ಆಗಿದೆ. ಅಂತ್ಯದ ತುದಿಗಳೆಲ್ಲವೂ ಆರಂಭವೇ ಆಗಿದೆ. ನೀನು ಈಗ ಇಡುವ ಹೆಜ್ಜೆ ನಿನ್ನ ಮುಂದಿನ ಬದುಕಿನ ನಿರ್ಧಾರವಾಗಿದೆ. ಮುಂದೆ ಏನು ಮಾಡಬೇಕು ಎಂಬ ಸೂಚನೆ ಈಗಾಗಲೇ ನಿಮ್ಮ ತಂದೆ-ತಾಯಿಗಳಿಗೆ ಸಿಕ್ಕಿದೆ. ಅವರ ಮಾತಿನಂತೆ ನಡೆದುಕೋ ಎಂದು ಹೇಳುತ್ತಾರೆ.

ಕಾರ್ತಿಕ್ ಜೊತೆ ರಾಮಚಂದ್ರ ರಾಯರ ಮಾತು!

ಕಾರ್ತಿಕ್ ಜೊತೆ ರಾಮಚಂದ್ರ ರಾಯರ ಮಾತು!

ಅಷ್ಟೊತ್ತಿಗೆ ಸೀತಾ ಹಾಗೂ ರಾಮಚಂದ್ರ ರಾಯರು ಬಂದು ಈ ಮದುವೆಯನ್ನು ನೀವೇ ಮುಂದೆ ನಿಂತು ನಡೆಸಿಕೊಡಿ ಎಂದು ಹೇಳುತ್ತಾರೆ. ನಂತರ ರಾಮಚಂದ್ರರಾಯರು ಕಾರ್ತಿಕ್ ನನ್ನು ಕರೆದುಕೊಂಡು ಬಂದು ಮಾತನಾಡುತ್ತಾರೆ. ಈಗ ಯಾರ ಮದುವೆ ನಡೆಯುತ್ತೆ. ಮದುವೆ ಹೆಣ್ಣೇ ಇಲ್ಲ ಅಂದ ಮೇಲೆ, ಹೇಗೆ ಮದುವೆ ನಡೆಯುತ್ತೆ ಎಂದು ಕೇಳುತ್ತಾನೆ. ಆಗ ರಾಮಚಂದ್ರ ರಾಯರು ನಿನ್ನ ಮದುವೆ ನಡೆಯುತ್ತೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಈಗ ಇಟ್ಟ ಮೂಹೂರ್ತದಲ್ಲೇ ಮದುವೆಯಾಗಬೇಕು. ಇದೇ ನನ್ನ ಕೊನೆಯ ಆಸೆ ಎಂದು ಹೇಳುತ್ತಾನೆ.

ಅಪ್ಪನಿಗೆ ಮಾತು ಕೊಟ್ಟ ಕಾರ್ತಿಕ್

ಅಪ್ಪನಿಗೆ ಮಾತು ಕೊಟ್ಟ ಕಾರ್ತಿಕ್

ಅದಕ್ಕೆ ಕಾರ್ತಿಕ್ ಯಾಕಪ್ಪ ಹೀಗೆಲ್ಲಾ ಮಾತನಾಡುತ್ತೀರಾ ನೀವೇನೇ ಹೇಳಿದರೂ, ನಾನು ಕೇಳುತ್ತೀನಿ ಎಂದು ಹೇಳುತ್ತಾನೆ. ಅದಕ್ಕೆ ರಾಮಚಂದ್ರ ರಾಯರು ನಾನು ತೋರಿಸುವ ಹುಡುಗಿಗೆ ತಾಳಿ ಕಟ್ಟುತ್ತೀಯಾ ಮಗನೇ ಎಂದು ಕೇಳುತ್ತಾರೆ. ಅದಕ್ಕೆ ಕಾರ್ತಿಕ್ ಕಟ್ಟುತ್ತೀನಿ ಅಪ್ಪ. ನೀವು ಯಾವ ಹುಡುಗಿಯನ್ನೇ ಕರೆದುಕೊಂಡು ಬಂದು ತಾಳಿ ಕಟ್ಟು ಅಂದರೂ ಕಟ್ಟುತ್ತೀನಿ ಅಪ್ಪ. ನಾನು ದಿವ್ಯಾ ಬಗ್ಗೆ ಹೇಳಿದಾಗ ಒಂದೂ ಮಾತನಾಡದೇ ಮದುವೆಗೆ ಒಪ್ಪಿದ್ದೀರಿ. ಆದರೆ ಅವಳನ್ನು ಮದುವೆಯಾಗುವ ಯೋಗ ನನಗಿಲ್ಲ. ಈಗ ನೀವು ಯಾರನ್ನೇ ಹೇಳೀದರು ಕಣ್ಣು ಮುಚ್ಚಿಕೊಂಡು ನಾನು ತಾಳಿ ಕಟ್ಟುತ್ತೀನಿ. ನನಗೆ ಆರ್ಡರ್ ಮಾಡಿ ಅಪ್ಪ ಅಷ್ಟೇ ಸಾಕು ಎಂದು ಕಾರ್ತಿಕ್ ಹೇಳುತ್ತಾನೆ.

ಸತ್ಯ ಮದುವೆ ಆಸೆಯಲ್ಲಿ ಗಿರಿಜಮ್ಮ!

ಸತ್ಯ ಮದುವೆ ಆಸೆಯಲ್ಲಿ ಗಿರಿಜಮ್ಮ!

ಇತ್ತ ಮದುವೆ ಕಾರ್ಯಗಳು ನಡೆಯುತ್ತಿದೆ. ಇದನ್ನು ನೋಡಿದ ಸತ್ಯ ಚಿಕ್ಕಪ್ಪ ಪತ್ನಿಯನ್ನು ಏನೇ ಇದು. ಮದುವೆ ನಿಂತು ಹೋದ ಮೇಲೆ ನಮಗೇನು ಕೆಲಸ. ನಡಿ ಮನೆಗೆ ಹೋಗೋಣ ಎಂದು ಹೇಳುತ್ತಾನೆ. ಅದಕ್ಕೆ ಅವಳು ಎಲ್ಲರೂ ನಿಂತಿದ್ದಾರೆ ನಾವು ನಿಲ್ಲಬೇಕು ಸುಮ್ಮನೆ ನಿಂತು ಕೊಳ್ಳಿ ಜಾಸ್ತಿ ಪ್ರಶ್ನೆ ಮಾಡಿ ನನ್ನ ತಲೆ ತಿನ್ನಬೇಡಿ ಎಂದು ಹೇಳುತ್ತಾಳೆ. ಆತ ಸೀದಾ ಜಾನಕಿ ಹಾಗೂ ಗಿರಿಜಮ್ಮ ನಿಂತಿರುವ ಮಂಟಪದ ಬಳಿ ಹೋಗಿ, ನಡೀರಿ ಹೋಗೋಣ. ನಿಮ್ಮ ಮಗಳು ಮಾಡಿದ ಅವಮಾನ ಸಾಲದ ಇನ್ನೂ ಯಾಕೆ ಇಲ್ಲೇ ನಿಲ್ಲಬೇಕು. ಅಸಿಡಿಟಿ ಬೇರೆ ಎಂದು ಹೇಳುತ್ತಾನೆ. ಆಗ ಗಿರಿಜಮ್ಮ ನೀನೀಗ ಸುಮ್ಮನೆ ನಿಂತುಕೊಂಡಿಲ್ಲ ಅಂದರೆ ನಿನ್ನ ಮಾನ ಮರ್ಯಾದೆ ನಾನೇ ತೆಗೆದು ಬಿಡುತ್ತೀನಿ ಎನ್ನುತ್ತಾಳೆ.

ಕಾರ್ತಿಕ್, ಸತ್ಯ ಮದುವೆ ಮಾಡಲು ಅಪ್ಪನ ಸಾಹಸ!

ಕಾರ್ತಿಕ್, ಸತ್ಯ ಮದುವೆ ಮಾಡಲು ಅಪ್ಪನ ಸಾಹಸ!

ಇದೇ ಸಂದರ್ಭದಲ್ಲಿ ಸೀತಾಗೆ ಅನುಮಾನ ಬರುತ್ತದೆ. ರಾಮಚಂದ್ರ ರಾಯರ ಬಳಿ ಹೋಗಿ ಕೇಳುತ್ತಾಳೆ. ಯಾರ ಜೊತೆ ಕಾರ್ತಿಕ್ ಮದುವೆಯಾಗುತ್ತಿರುವುದು. ಹುಡುಗಿ ಯಾರು ಎಂದು ಕೇಳುತ್ತಾಳೆ. ಆಗ ರಾಮಚಂದ್ರರಾಯರು ಮಾತು ತೆಗೆದುಕೊಳ್ಳುತ್ತಾರೆ. ಮದುವೆಯಾದಾಗಿನಿಂದ ನಾನು ನಿನ್ನಿಂದ ಏನನ್ನೂ ಕೇಳಿಲ್ಲ. ಈ ಮದುವೆಗೆ ಒಪ್ಪಿಕೋ ಎಂದು ಮಾತು ತೆಗೆದುಕೊಳ್ಳುತ್ತಾನೆ. ಸೀತಾ ಮನಸ್ಸಿಲ್ಲದೆ ಇದ್ದರು ಅನಿವಾರ್ಯವಾಗಿ ಮಾತು ಕೊಡುತ್ತಾಳೆ. ಇತ್ತ ಕೀರ್ತನಾ, ಕಾರ್ತಿಕ್ ಮದುವೆಯಾಗುತ್ತಿರುವುದು ನಿಶಾ ಎಂದು ಹೇಳುತ್ತಾಳೆ. ಅದಕ್ಕೆ ಕಾರ್ತಿಕ್ ಯಾರಾದರೂ ಸರಿ ಅಪ್ಪ-ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಾನೆ.

More from Filmibeat

English summary
Sathya Tv Serial Written Update On May 17th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X