ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಸತ್ಯ: ಕಾರ್ತಿಕ್ ಶಾಕ್!
ಸತ್ಯ ಧಾರಾವಾಹಿಯಲ್ಲಿ ಇಂದು ನಾಳೆ ಕಾರ್ತಿಕ್ ಮದುವೆ ನಡೆಯಲಿದೆ. ರಾಮಚಂದ್ರರಾಯರು ಹಾಗೂ ಗುರುಗಳು ಮದುವೆಗೆ ಎಲ್ಲಾ ತಯಾರಿ ನಡೆಸಿದ್ದಾರೆ. ಮದುವೆ ಹುಡುಗಿ ಬಗ್ಗೆ ಸೀತಾ ಗೊಂದಲದಲ್ಲಿದ್ದಾಳೆ.
ಆದರೆ ರಾಮಚಂದ್ರರಾಯರು ಯಾವುದೇ ಕಾರಣಕ್ಕೂ ಹುಡುಗಿ ಮದುವೆ ಮಂಟಪಕ್ಕೆ ಬಂದು ತಾಳಿ ಕಟ್ಟುವವರೆಗೂ ಏನೂ ಮಾತನಾಡಬಾರದು ಎಂದು ಸೀತಾ ಬಳಿ ಮಾತು ತೆಗೆದುಕೊಂಡಿದ್ದಾರೆ. ಸೀತಾ ಮದುವೆ ಹುಡುಗಿ ಯಾರೆಂದು ಹೇಳಿ ಅಂತ ಪದೇ ಪದೇ ಕೇಳುತ್ತಿದ್ದಾಳೆ. ಅತ್ತ ರಿತು ಮದುವೆ ಹುಡುಗಿಗೆ ಸಿಂಗಾರ ಮಾಡುತ್ತಿದ್ದಾಳೆ.
ಇತ್ತ ಹುಡುಗರು ಸತ್ಯ ಎಲ್ಲಿ ಕಾಣಿಸುತ್ತಿಲ್ಲವಲ್ಲ ಅಂತ ತಲೆ ಕೆಡಿಸಿಕೊಂಡಿದ್ದಾರೆ. ರಾಮಚಂದ್ರರಾಯರ ಬಳಿ ಸತ್ಯ ಮದವೆ ಬಗ್ಗೆ ಮಾತನಾಡಿದ್ದು, ಇದಕ್ಕೆ ರಾಮಚಂದ್ರರಾಯರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದನ್ನು ರಾಕೇಶ್ ಬಳಿ ಹೇಳಿದ್ದಾರೆ. ಈಗ ಪರಿಸ್ಥಿತಿ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ನಿಶಾ ಖುಷಿಗೆ ತಣ್ಣೀರೆರಚಿದ ರಾಮಚಂದ್ರರಾಯರು!
ಕಾರ್ತಿಕ್ ನನ್ನು ನಿಶಾ ಮದುವೆಯಾಗಬೇಕೆಂದು ಸುಹಾಸ್ ಹಾಗೂ ಕೀರ್ತನಾ ಪ್ಲಾನ್ ಮಾಡಿಕೊಂಡಿದ್ದು, ಬಾಲ ಜೊತೆಗೆ ದಿವ್ಯಾಳನ್ನು ಕಳಿಸಿಕೊಟ್ಟಿದ್ದಾಳೆ. ಮದುವೆಯ ಹುಡುಗಿ ಇಲ್ಲ ಅನ್ನೋ ಕಾರಣಕ್ಕೆ ಮದುವೆ ನಿಂತಿದ್ದು, ಹೇಗಾದರೂ ಮಾಡಿ ಮರ್ಯಾದೆ ಉಳಿಸಿಕೊಳ್ಳಲಾದರೂ ಇದೇ ಮೂಹೂರ್ತದಲ್ಲಿ ಕಾರ್ತಿಕ್ ಮದುವೆ ಮಾಡಬೇಕು ಎಂದು ಕೀರ್ತನಾ, ಸೀತಾ ತಲೆಗೆ ತುಂಬಿದ್ದಾಳೆ. ನಮ್ಮ ಮನೆ ಸಂಪ್ರದಾಯದ ಬಗ್ಗೆ ತಿಳಿದುಕೊಂಡಿರುವ ಸುಹಾಸ್ ತಂಗಿ ನಿಶಾಳನ್ನು ಕಾರ್ತಿಕ್ ಗೆ ಕೊಟ್ಟು ಮದುವೆ ಮಾಡೋಣ ಎಂದು ಕೀರ್ತನಾ ಒಪ್ಪಿಸಿದ್ದಾಳೆ. ಕೀರ್ತನಾ ಮಾತು ಕೇಳಿದ ಸೀತಾ ಕೂಡ ಮದುವೆಗೆ ಒಪ್ಪಿದ್ದಾಳೆ. ಆದರೆ ಇತ್ತ ರಾಮಚಂದ್ರರಾಯರು ಗುರುಗಳ ಮಾತು ಕೇಳಿ ಸತ್ಯಳನ್ನು ಮದುವೆಗೆ ಒಪ್ಪಿಸಿದ್ದು, ಈಗ ನಿಶಾ ಆಸೆಗೆ ತಣ್ಣೀರೆರಚಿದ ಹಾಗಾಗಿದೆ.

ಹುಡುಗಿ ಯಾರೆನ್ನುವುದೆ ದೊಡ್ಡ ರಹಸ್ಯ!
ಗುರುಗಳ ಬಳಿ ಮಾತನಾಡಿರುವ ರಾಮಚಂದ್ರರಾಯರು ಕಾರ್ತಿಕ್ ಬಳಿಯೂ ಮಾತನಾಡಿ, ತಮ್ಮ ಕೊನೆಯಾಸೆ ಇದಾಗಿದ್ದು, ತಾವು ಕರೆದುಕೊಂಡು ಬರುವ ಹುಡುಗಿಗೆ ಕಾರ್ತಿಕ್ ತಾಳಿ ಕಟ್ಟಬೇಕು ಎಂದು ರಾಮಚಂದ್ರರಾಯರು ಮಗನ ಬಳಿ ಮಾತು ತೆಗೆದುಕೊಂಡಿದ್ದಾರೆ. ಹಾಗೆಯೇ ಸತ್ಯ ಎಂದರೆ ಸೀತಾಗೆ ಸ್ವಲ್ಪವೂ ಇಷ್ಟವಿಲ್ಲದ ಕಾರಣ ಮದುವೆ ಸಂದರ್ಭದಲ್ಲಿ ಗಲಿಬಿಲಿ ಆಗಬಾರದು ಎಂಬ ಕಾರಣಕ್ಕೆ ರಾಮಚಂದ್ರರಾಯರು ಸೀತಾ ಬಳಿ ಮದುವೆಯಾಗುವವರೆಗೂ ಏನೂ ತೊಂದರೆಯಾಗಬಾರದು ಎಂದು ಮಾತು ತೆಗೆದುಕೊಂಡಿದ್ದಾರೆ. ಈಗ ಸೀತಾ ತಲೆ ತುಂಬಾ ಗುರುಗಳು ಏನು ಹೇಳಿದರು.? ರಾಮಚಂದ್ರರಾಯರು ಕಾರ್ತಿಕ್ ಮಾತನಾಡಿದ್ದು ಏನು.? ಮದುವೆ ಹುಡುಗಿ ಯಾರು ಅನ್ನೋ ಪ್ರಶ್ನೆಗಳೇ ತುಂಬಿಕೊಂಡಿವೆ.

ಮದುಮಗಳಾಗಿ ಬಂದ ಸತ್ಯ!
ಮದುವೆಗೆ ಹುಡುಗನಿಗೆ ಪುರೋಹಿತರು ಪರದೆ ಎಳೆದಿದ್ದು, ಮದುಮಗಳನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಈ ಸಮಯಕ್ಕೆ ಸರಿಯಾಗಿ ರಿತು ಸತ್ಯಳನ್ನು ಕರೆದುಕೊಂಡು ಮಂಟಪಕ್ಕೆ ಬಂದಿದ್ದಾಳೆ. ಸತ್ಯಳನ್ನು ನೋಡಿದ ಕೀರ್ತನಾ ಶಾಕ್ ಆಗಿದ್ದಾಳೆ. ನಿಶಾ ಉಟ್ಟಿದ್ದು ಹಳದಿ ಸೀರೆ ಅಲ್ಲವಾ ಎಂದು ಕನ್ ಫ್ಯೂಸ್ ಆಗಿದ್ದಾಳೆ. ಇತ್ತ ನಿಶಾ ಕೋಪದಿಂದ ಸುಹಾಸ್ ನನ್ನು ನೋಡಿತ್ತಿದ್ದಾಳೆ. ಇದನ್ನು ಕಂಡ ಸುಹಾಸ್ ಹಾಗೂ ಕೀರ್ತನಾ ಶಾಕ್ ಆಗಿದ್ದಾರೆ.

ಸತ್ಯಳನ್ನು ಮಂಟಪದಲ್ಲಿ ಕಂಡು ಶಾಕ್ ಆದ ಕಾರ್ತಿಕ್!
ಸತ್ಯ ಮದುಮಗಳು ಎಂದು ತಿಳಿದಕೂಡಲೇ ಸೀತಾ ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದಾಳೆ. ಈ ರೌಡಿನ ನಾನು ಹೇಗೆ ಮನೆ ತುಂಬಿಸಿಕೊಳ್ಳಲಿ ಎಂದಿದ್ದಾಳೆ. ಸತ್ಯ ರಾಮಚಂದ್ರರಾಯರ ಮುಖ ನೋಡಿ ಮೌನವಾಗೇ ಮಂಟಪಕ್ಕೆ ಬಂದಿದ್ದಾಳೆ. ಇತ್ತ ಜಾನಕಿ, ಗಿರಿಜಮ್ಮ ಖುಷಿಪಟ್ಟಿದ್ದಾರೆ. ಹೀಗಾದರೂ ಸತ್ಯ ಮದುವೆಯಾಗುತ್ತಿದೆ ಎಂದು ನೆಮ್ಮದಿ ತಂದುಕೊಂಡಿದ್ದಾರೆ. ಮಂಟಪದಲ್ಲಿದ್ದವರೆಲ್ಲರೂ ಶಾಕ್ ಆಗಿದ್ದಾರೆ. ಮಂಜು ಮುಂದೇನಾಗುತ್ತೋ ಎಂದು ಪರದೆಯನ್ನು ಸರಿಸಿದ್ದಾನೆ. ಕಾರ್ತಿಕ್ ಸತ್ಯಳನ್ನು ನೋಡಿ ಶಾಕ್ ಆಗಿದ್ದಾನೆ.


Click it and Unblock the Notifications











