Don't Miss!
- Automobiles
ಬೆಂಗಳೂರಿನಲ್ಲಿ ಪೇಯ್ಡ್ ಪಾರ್ಕಿಂಗ್ - ವಾಹನ ಸವಾರರಿಗೆ ಮತ್ತೆ ಶಾಕ್ ನೀಡಲಿದೆ ಬಿಬಿಎಂಪಿ..!
- Lifestyle
ಮನೆಯಲ್ಲಿ ಮಾಡುವ ಇಂಥಾ ಸಣ್ಣಪುಟ್ಟ ತಪ್ಪುಗಳಿಂದಲೇ ಬೆಂಕಿ ಅವಘಡಗಳು ಸಂಭವಿಸೋದು!
- News
ಮಹಾರಾಷ್ಟ್ರ ಬಿಜೆಪಿಯೊಳಗೆ ಗುರುತರ ಬದಲಾವಣೆ ಸಾಧ್ಯತೆ; ಫಡ್ನವಿಸ್ ಕೈ ಕಟ್ಟಿಹಾಕುವ ಯೋಜನೆ
- Sports
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!
- Education
KSSIDC Recruitment 2022 : 7 ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ಸತ್ಯ ವಿರುದ್ಧ ರೊಚ್ಚಿಗೆದ್ದ ಕಾರ್ತಿಕ್ ತಾಳಿ ಕಟ್ಟುವಾಗ ಏನ್ ಮಾಡ್ತಾನೋ?
'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್ ಸತ್ಯಗೆ ತಾಳಿ ಕಟ್ಟುವ ಸಂದರ್ಭ ಎದುರಾಗಿದೆ. ಮದುವೆ ಮಂಟಪಕ್ಕೆ ಸತ್ಯ ಮದುಮಗಳ ರೂಪದಲ್ಲಿ ಬಂದಿದ್ದಾಳೆ. ಸತ್ಯಳನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಪರದೆ ಸರಿಯುತ್ತಿದ್ದಂತೆ ಕಾರ್ತಿಕ್ ಅಚ್ಚರಿಗೊಂಡಿದ್ದಾನೆ.
ಕೀರ್ತನಾ ಸೀತಾ ಬಳಿ ಬಂದು ಇದೇನಮ್ಮ ಸತ್ಯ ಜೊತೆಗೆ ಕಾರ್ತಿಕ್ ಮದುವೆನಾ ಎಂದು ಕೇಳಿದ್ದಾಳೆ. ಇದಕ್ಕೆ ಸೀತಾ ಏನೂ ಮಾತನಾಡದಿದ್ದಾಗ, ಅದು ಹೇಗಮ್ಮ ಸತ್ಯನ ಒಪ್ಪಿಕೊಳ್ಳುತ್ತೀಯಾ ಹೇಗಾದರೂ ಮಾಡಿ ತಪ್ಪಿಸಮ್ಮ ಎನ್ನುತ್ತಾಳೆ. ಆಗ ಸೀತಾ ರಾಮಚಂದ್ರರಾಯರಿಗೆ ಕೊಟ್ಟ ಭಾಷೆಯನ್ನು ನೆನಪಿಸಿಕೊಂಡು ತಲೆ ತಗ್ಗಿಸುತ್ತಾಳೆ.
ಮಾಂಗಲ್ಯವನ್ನು ಎಲ್ಲರ ಮುಂದೆ ಸೀತಾ ಹಿಡಿದು ಬಂದಾಗ ಅವಳಿಗೆ ಅವಮಾನವಾಗಿದೆ. ಜನ ಕಳೆದ ಬಾರಿ ಸತ್ಯ ದಿವ್ಯ ತಂಗಿ ಎಂದು ಗೊತ್ತಾಗಿದ್ದಕ್ಕೆ ಮದುವೆ ನಿಲ್ಲಿಸಿದ್ರಿ. ಅದೇ ಸತ್ಯನೇ ಈಗ ನಿಮ್ಮ ಮನೆ ತುಂಬಿಸಿಕೊಳ್ಳುತ್ತಿದ್ದಿರಲ್ಲ. ಅದಕ್ಕೆ ಹೇಳುವುದು ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು ಅಂತ ಹೇಳುತ್ತಾರೆ. ಆಗ ಸೀತಾಗೆ ಅವಮಾನವಾಗುತ್ತದೆ.

'ಸತ್ಯ' ವಿರುದ್ಧ ಉರಿದು ಬಿದ್ದ ಸೀತಾ!
ಸೀತಾ ಸತ್ಯಳನ್ನು ಮನೆ ತುಂಬಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಮದುವೆ ಮನೆಯಲ್ಲಿ ಮುಖ ಸಣ್ಣಗೆ ಮಾಡಿಕೊಂಡಿರುತ್ತಾಳೆ. ಅಳುವುದಕ್ಕೂ ಆಗದೇ, ಮದುವೆಯನ್ನು ತಡೆಯುವುದಕ್ಕೂ ಆಗದೇ ಸಂಕಟ ಪಡುತ್ತಿರುತ್ತಾಳೆ. ಇದನ್ನು ಗಮನಿಸಿದ ಲಕ್ಷ್ಮಣ ಹಾಗೂ ಊರ್ಮಿಳಾ ಸಮಾಧಾನ ಮಾಡುತ್ತಾರೆ. ಲಕ್ಷ್ಮಣ ಮಾತನಾಡಿ, ಬೇಸರ ಮಾಡಿಕೊಳ್ಳಬೇಡಿ ಅತ್ತಿಗೆ. ಯಾರ ಹಣೆಯ ಬರಹದಲ್ಲಿ ಯಾರ ಹೆಸರು ಬರೆದಿರುತ್ತೋ ಅದರಂತೆಯೇ ಆಗುತ್ತೆ. ಬಹುಶ: ಕಾರ್ತಿಕ್ಗೆ ಸತ್ಯನೇ ಹೆಂಡತಿಯಾಗಿ ಬರಬೇಕು ಅಂತ ಇತ್ತು ಅನಿಸುತ್ತೆ. ನೀವು ಹೀಗೆ ಡಲ್ ಆಗಿದ್ದರೆ, ನೋಡುವುದಕ್ಕಾಗೋದಿಲ್ಲ. ನಗು ನಗುತಾ ಮಗನ ಮದುವೆ ಮಾಡಿ ಎಂದು ಹೇಳುತ್ತಾನೆ.

ಸತ್ಯ ತಿಳಿಯದೆ ತಪ್ಪು ತಿಳಿದ ಕಾರ್ತಿಕ್!
ಸತ್ಯ ಹಾಗೂ ಕಾರ್ತಿಕ್ ಹಸೆಮಣೆ ಮೇಲೆ ಕುತಿರುತ್ತಾರೆ. ಪೂಜೆಗಳನ್ನು ಮಾಡುತ್ತಿರುತ್ತಾರೆ. ಪುರೋಹಿತರು ಮಂತ್ರವನ್ನು ಹೇಳುತ್ತಿರುತ್ತಾರೆ. ಇಷ್ಟವಿಲ್ಲದೇ ಸತ್ಯಗೆ ತಾಳಿಕಟ್ಟಬೇಕಲ್ಲ ಎಂದು ಸಿಟ್ಟು ಮಾಡಿಕೊಳ್ಳುವ ಕಾರ್ತಿಕ್ ಸತ್ಯಳನ್ನು, "ಅಂತು ತೋರಿಸಿ ಬಿಟ್ಟೆ ಅಲ್ವಾ ನಿನ್ನ ಬುದ್ಧಿನಾ. ನಿನ್ನ ಅಕ್ಕನನ್ನು ಓಡಿಸಿ, ನೀನು ಬಂದು ಕೂತಿದ್ಯಲ್ಲ. ಸ್ವಲ್ಪನೂ ನಾಚಿಕೆ ಆಗುವುದಿಲ್ಲವಾ ನಿನಗೆ ಎಂದು ಕಾರ್ತಿಕ್ ಚುಚ್ಚಿ ಮಾತನಾಡುತ್ತಾನೆ. ಈ ಮಾತಿಗೆ ಬೇಸರ ಮಾಡಿಕೊಳ್ಳುವ ಸತ್ಯ ರಾಮಚಂದ್ರ ರಾಯರ ಮುಖ ನೋಡುತ್ತಾಳೆ.

ಬೇಸರದಲ್ಲಿ ಮಾತನಾಡಿದ ಸತ್ಯ!
ರಾಮಚಂದ್ರ ರಾಯರ ಮುಖ ನೋಡುವ ಸತ್ಯ, ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾಳೆ. ಸತ್ಯ ಈ ಮದುವೆ ಸಾಧ್ಯವಿಲ್ಲ ಎಂದು ಹೇಳಿ ಹೊರಟಾಗ ರಾಮಚಂದ್ರರಾಯರು ನನ್ನ ಮಗನನ್ನು ಮದುವೆಯಾಗು ಎಂದು ಕೇಳಿಕೊಳ್ಳುತ್ತಾರೆ. ಆಗ ಸತ್ಯ "ಸಾಧ್ಯವಿಲ್ಲ ರಾಯರೆ. ಮದುವೆಯಾಗು ಅನ್ನಬೇಡಿ. ನಾನೇನು ಗೊಂಬೆಯಲ್ಲ. ನನಗೂ ಮನಸ್ಸಿದೆ. ಒಬ್ಬರು ಮದುವೆಗೆ ಬರಬೇಡ ಅನ್ನುತ್ತಾರೆ. ಮತ್ತೊಬ್ಬರು ಮದುವೆ ಹತ್ತಿರ ಸುಳಿಯಬೇಡ ಎನ್ನುತ್ತಾರೆ. ನೀವೀಗ ಬಂದು ಮದುವೆಯಾಗು ಎಂದು ಹೇಳುತ್ತಿದ್ದೀರಾ. ನನಗೂ ಒಂದು ಮನಸ್ಸಿದೆ ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಾಳೆ.

ಮದುವೆಯಾಗಲು ಕೇಳಿಕೊಂಡ ರಾಮಚಂದ್ರರಾಯರು!
ಆಗ ರಾಮಚಂದ್ರ ರಾಯರು, "ಇಲ್ಲ ತಾಯಿ. ಆಗುವುದಿಲ್ಲ ಅಂತ ಮಾತ್ರ ಹೇಳಬೇಡ. ಈ ಮದುವೆಯನ್ನು ದೇವರೇ ನಿಶ್ಚಯ ಮಾಡಿದ್ದಾನೆ. ನನಗೆ ಮೊದಲೇ ಗೊತ್ತಾಗಲಿಲ್ಲ. ನಾನು ಅರ್ಥ ಮಾಡಿಕೊಳ್ಳುವುದು ತಡವಾಯಿತು. ನಮ್ಮ ಗುರುಗಳು ಹೇಳಿದ್ದು ಮೊದಲು ನನಗೆ ತಿಳಿಯಲಿಲ್ಲ. ಅವರ ಪ್ರಕಾರ, ನೀನೇ ನನ್ನ ಮಗನನ್ನು ಮದುವೆಯಾಗಬೇಕು. ಇದೆಲ್ಲದಕ್ಕಿಂತಲೂ ಹೆಚ್ಚು ನನ್ನ ಸ್ವಾರ್ಥವೂ ಇದೆ. ನೀನೇ ನಮ್ಮ ಮನೆಯ ಸೊಸೆಯಾಗಬೇಕು ತಾಯಿ. ನಾನು ಇನ್ನು ಹೆಚ್ಚು ದಿನ ಬದುಕುವುದಿಲ್ಲ. ನಿನ್ನಂತಹ ಒಳ್ಳೆಯ ಗುಣವಿರುವ ಹುಡುಗಿ ನಮ್ಮ ಮನೆಯ ಸೊಸೆಯಾಗಬೇಕು ನಿನ್ನ ಕಾಲು ಹಿಡಿದು ಕೊಳ್ಳುತ್ತೀನಿ. ಇಲ್ಲ ಎನ್ನಬೇಡ" ಎಂದು ಕೇಳಿಕೊಳ್ಳುತ್ತಾರೆ. ಆಗ ಸತ್ಯ ಮದುವೆಗೆ ಒಪ್ಪಿಕೊಳ್ಳುತ್ತಾಳೆ.