ಸತ್ಯಗೆ ಕಾರ್ತಿಕ್ ತಾಳಿ ಕಟ್ಟಿದ ಮೇಲೆ ಸೀತಾ ಹೇಳಿದ್ದೇನು..?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ಸತ್ಯ ಹಾಗೂ ಕಾರ್ತಿಕ್ ಮದುವೆ ನಡೆಯುತಿದೆ. ಆದರೆ ಇದೀಗ ರಾಜೀ ಮದುವೆಗೆ ಚಕಾರ ಎತ್ತುತ್ತಿದ್ದಾಳೆ. ಧಾರೆ ಎರೆದು ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.

ಸತ್ಯ ಮದುವೆಯಾಗುತ್ತಿದ್ದಾಳೆ. ಮದುವೆಯಾದ ಮೇಲೆ ಗಂಡನ ಮನೆಗೆ ಹೋಗುತ್ತಾಳೆ. ಇನ್ನು ನಮಗೆ ಮನೆಯನ್ನು ಎಲ್ಲಿ ಬರೆದುಕೊಡುತ್ತಾಳೆ. ನಮ್ಮ ಕೆಲಸ ಮಾಡಿಕೊಡುವುದಿಲ್ಲ ಎಂದ ಮೇಲೆ ನಾವ್ಯಾಕೆ ಅವರ ಕೆಲಸ ಮಾಡಬೇಕು.? ನಾವು ಧಾರೆ ಎರದುಕೊಡೋಣ ಎಂದು ಹೇಳುತ್ತಾಳೆ.

ಆದರೆ, ಅದಕ್ಕೆ ಸತ್ಯ ಚಿಕ್ಕಪ್ಪ ಒಪ್ಪುವುದಿಲ್ಲ. ನೀನಿನ್ನು ನಿನ್ನ ಗಂಡನನ್ನು ಅರ್ಥ ಮಾಡಿಕೊಂಡಿಲ್ಲ ರಾಜೀ, ಸತ್ಯ ಮದುವೆಯಾಗಿರಲಿಲ್ಲ ಎಂದಿದ್ದರೆ ಉಳಿದುಕೊಳ್ಳಲು ಮನೆ ಬೇಕಿತ್ತು. ಆದರೆ ಈಗ ಸತ್ಯ ಮದುವೆಯಾಗಿ ಹೋಗುತ್ತಿದ್ದಾಳೆ. ಅಂದರೆ ಅವಳಿಗೆ ಮನೆ ಬೇಕಿಲ್ಲ. ನಮಗೆ ಸಿಗುತ್ತೆ ಎಂದು ಹೇಳುತ್ತಾನೆ. ಇದಕ್ಕೆ ರಾಜಿಯೂ ಒಪ್ಪಿ ಸುಮ್ಮನಾಗುತ್ತಾಳೆ.

ಸತ್ಯ ಕಂಡು ಹೊಟ್ಟೆ ಉರಿದು ಕೊಂದ ಕೀರ್ತನಾ!

ಸತ್ಯ ಕಂಡು ಹೊಟ್ಟೆ ಉರಿದು ಕೊಂದ ಕೀರ್ತನಾ!

ಇತ್ತ ಕೀರ್ತನಾ ಹಾಗೂ ಸುಹಾಸ್ ಮದುವೆ ನೋಡಿ ಹೊಟ್ಟೆ ಉರಿದುಕೊಳ್ಳುತ್ತಿರುತ್ತಾರೆ. ಆ ದಿವ್ಯಾನೇ ಮನೆಗೆ ಬರುವುದು ಬೇಡ ಅಂತ ಪ್ಲಾನ್ ಮಾಡಿದ್ವಿ. ಆದರೆ ಈಗ ನೋಡು ಈ ದೊಡ್ಡ ಪೆಡಂಭೂತಾನೇ ಮನೆಗೆ ಬರುತ್ತಿದೆ. ಇನ್ನು ಮುಂದೆ ನಮ್ಮ ಕಥೆ ಮುಗಿಯಿತಷ್ಟೇ ಎಂದು ಸುಹಾಸ್ ಹೇಳುತ್ತಾನೆ.

ತಾಳಿ ಕಟ್ಟುತ್ತಾನಾ ಕಾರ್ತಿಕ್..?

ತಾಳಿ ಕಟ್ಟುತ್ತಾನಾ ಕಾರ್ತಿಕ್..?

ಕಾರ್ತಿಕ್ ಕೈಯಲ್ಲಿ ತಾಳಿ ಹಿಡಿದು. ಇದು ನೀನು ನನಗೆ ಮಾಡುತ್ತಿರುವ ಅನ್ಯಾಯ ಸತ್ಯ. ನನ್ನ ಕೈಯಲ್ಲಿ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿಸಿಕೊಳ್ಳಬೇಕು ಅಂತ ನೀನು ಹೀಗೆಲ್ಲಾ ಮಾಡಿದ್ಯಾ.? ಇದನ್ನ ನಾನು ಕೊನೆಯವರೆಗೂ ಮರೆಯಲ್ಲ. ಈ ತಪ್ಪಿಗೆ ಕ್ಷಮೆ ಇಲ್ಲ. ನಿನ್ನ ಕುತ್ತಿಗೆಗೆ ಮೂರು ಗಂಟೇ ಹಾಕುತ್ತೀನಿ. ಮೊದಲನೆಯದು ನನ್ನ ಅಪ್ಪನಿಗೋಸ್ಕರ, ಎರಡನೇಯದು ನನ್ನ ಮನೆ ಮರ್ಯಾದೆಗೋಸ್ಕರ. ಆದರೆ ಮೂರನೇಯದು ಯಾಕೆ ಅಂತ ಗೊತ್ತಿಲ್ಲದೆ, ಇಷ್ಟವಿಲ್ಲದೆ ಹಾಕುತ್ತಿದ್ದೇನೆ ಎಂದು ಹೇಳುತ್ತಾನೆ. ಮಾತು ಮುಂದುವರಿಸಿ, ಆದರೆ ಒಂದು ಮಾತು ಮಾತ್ರ ನೆನಪಿಟ್ಟುಕೋ. ನಾನು ಸಾಯುವವರೆಗೂ ನಿನ್ನ ದ್ವೇಷಿಸುತ್ತೇನೆ. ಐ ಹೇಟ್ ಯೂ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಸತ್ಯ ಶಾಕ್ ಆಗುತ್ತಾಳೆ.

ಕನಸಿನಲ್ಲಿ ತೇಲುತ್ತಿರುವ ದಿವ್ಯಾ!

ಕನಸಿನಲ್ಲಿ ತೇಲುತ್ತಿರುವ ದಿವ್ಯಾ!

ಇನ್ನು ದಿವ್ಯಾ ಹಾಗೂ ಬಾಲ ಕಾರಿನಲ್ಲಿ ಹೋಗುತ್ತಿರುತ್ತಾರೆ. ಸನ್ ರೂಫ್ ಇರುವ ಕಾರಿನಲ್ಲಿ ದಿವ್ಯ ಎಂಜಾಯ್ ಮಾಡುತ್ತಿರುತ್ತಾಳೆ. ಬಾಲ ಈಗ ನನಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ದಿವ್ಯ ಹೇಳುತ್ತಾಳೆ. ಆಗ ಬಾಲ ಮನಸ್ಸಿನಲ್ಲೇ ಅಯ್ಯೋ ಈ ಕಾರನ್ನು ಇವತ್ತೇ ಓನರ್‌ಗೆ ವಾಪಸ್ ಮಾಡಬೇಕು. ಆಗಲೇ ಫೋನ್ ಮಾಡುತ್ತಿದ್ದಾರೆ. ಇವಳು ನೋಡಿದರೆ ಫ್ರೀಡಂ, ಗಾಳಿ ಅಂತೆಲ್ಲಾ ಮಾತನಾಡುತ್ತಿದ್ದಾಳಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ದಿವ್ಯಾ ಮಾತನಾಡುತ್ತಾ, ನನಗೆ ತುಂಬಾ ಆಸೆಗಳಿವೆ. ನಾವು ಫಾರಿನ್ ಟ್ರಿಪ್ ಹೋಗೋಣ. ಕಣ್ಣಿಗೆ ಕಂಡದ್ದನ್ನೆಲ್ಲಾ ತೆಗೆದುಕೊಳ್ಳೋಣ. ಲ್ಯಾವಿಶ್ ಲೈಫ್ ಲೀಡ್ ಮಾಡೋಣ ಎನ್ನುತ್ತಾಳೆ. ದಿವ್ಯಾ ಆಸೆಗಳನ್ನು ಕೇಳಿ ಬಾಲ ಶಾಕ್ ಆಗುತ್ತಾನೆ. ನನ್ನ ಬಳಿ ಏನಿರಲಿ ಬಿಡಲಿ, ನಾನು ಬೀದಿಗೆ ಬಂದರೂ ನಿನ್ನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗುವುದಿಲ್ಲ ಎನ್ನುತ್ತಾನೆ. ಈ ಮಾತನ್ನು ಕೇಳಿ ದಿವ್ಯ ಶಾಕ್ ಆಗಿ, ಹಾಗೆಲ್ಲಾ ಏನೂ ಆಗೋದಿಲ್ಲ. ನೆಗೆಟಿವ್ ಆಗಿ ಮಾತನಾಡಬೇಡ ಬಾಲ ತುಂಬಾ ಆಸೆ ಕನಸುಗಳನ್ನ ಹೊತ್ತುಕೊಂಡು ನಿನ್ನ ಜೊತೆ ಬಂದಿದ್ದೀನಿ ಎನ್ನುತ್ತಾಳೆ.

ಸತ್ಯ ಬಗ್ಗೆ ವ್ಯಂಗ್ಯವಾಡಿದ ಸೀತಾ!

ಸತ್ಯ ಬಗ್ಗೆ ವ್ಯಂಗ್ಯವಾಡಿದ ಸೀತಾ!

ಕಾರ್ತಿಕ್ ಸತ್ಯಗೆ ಮಾಂಗಲ್ಯ ಕಟ್ಟುತ್ತಾನೆ. ನಂತರ ಪುರೋಹಿತರು ಮಾಂಗಲ್ಯಕ್ಕೆ ಪೂಜೆ ಮಾಡಲು ಹೇಳುತ್ತಾರೆ. ಕೊನೆಗೆ ಹೂವನ್ನು ಸತ್ಯಗೆ ಮುಡಿಸುವುದಕ್ಕೆ ಹೇಳುತ್ತಾರೆ. ಆದರೆ ಸತ್ಯ ಬಾಯ್ ಕಟ್ ಮಾಡಿಸಿಕೊಂಡಿರುವುದರಿಂದ ಹೇಗೆ ಮುಡಿಸುವುದು ಎಂದು ಯೋಚಿಸುತ್ತಾನೆ. ಆಗ ಜಡೆ ಇರುವ ಹುಡುಗಿಗೆ ಹೂವು ಮುಡಿಸಬಹುದು. ಈಗೆ ಬಾಯ್ ಮಾಡಿಸಿರುವವರಿಗೆ ಹೂವು ಮುಡಿಸೋಕೆ ಎಲ್ಲಾಗುತ್ತೆ. ಪ್ರಸಾದ ಪಡೆಯೋದಕ್ಕೂ ಯೋಗ ಇರಬೇಕು ಎನ್ನುತ್ತಾಳೆ ಸೀತಾ. ಆಗ ಸತ್ಯ ಕುರಿತು ಬಳಿ ಏರ್ ಪಿನ್ ತೆಗೆದುಕೊಂಡು ಹೂವನ್ನು ಮುಡಿಕೊಳ್ಳುತ್ತಾಳೆ. ಅದಕ್ಕೂ ಸೀತಾ ಆಡಿಕೊಳ್ಳುತ್ತಾಳೆ. ಮುಂದೇನಾಗುತ್ತೋ ಸೋಮವಾರದವರೆಗೂ ಕಾಯಬೇಕಿದೆ.

More from Filmibeat

English summary
Sathya Tv Serial Written Update On May 20th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X