ಕಾರ್ತಿಕ್, ಸತ್ಯ ಮದುವೆ ಆಯ್ತು: ಅತ್ತೆ ಕಣ್ಣು ಕೆಂಪಾಯ್ತು!
ಸತ್ಯ ಧಾರಾವಾಹಿಯಲ್ಲಿ ಕೊನೆಗೂ ಕಾರ್ತಿಕ್ ಮದುವೆ ನಡೆದೇ ಹೋಗಿದೆ. ಇಷ್ಟವಿಲ್ಲದಿದ್ದರೂ ಸತ್ಯ ಕುತ್ತಿಗೆಗೆ ಕಾರ್ತಿಕ್ ತಾಳಿ ಕಟ್ಟಿದ್ದಾನೆ. ಇತ್ತ ದಿವ್ಯಾಳನ್ನು ಮದುವೆಯಾಗಲು ಬಾಲ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದಾನೆ. ಕೀರ್ತನಾ ಈಗ ತಲೆ ಕೆಡಿಸಿಕೊಂಡು ಕೂತಿದ್ದಾಳೆ.
ಹೇಗಾದರೂ ಮಾಡಿ ದಿವ್ಯಾಳನ್ನು ಕಾರ್ತಿಕ್ ಜೊತೆ ಮದುವೆ ಮಾಡಿಸುವುದನ್ನು ತಡೆಯಬೇಕು ಎಂದು ಹರಸಾಹಸ ಪಟ್ಟ ಕೀರ್ತನಾಗೆ ಈಗ ಸತ್ಯ ದೊಡ್ಡ ತಲೆನೋವಾಗಿದ್ದಾಳೆ. ಸತ್ಯ ಹಾಗೂ ಕಾರ್ತಿಕ್ ಮದುವೆಯನ್ನು ಕೀರ್ತನಾ, ಸುಹಾಸ್ ಕೈಯಲ್ಲಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ವೇಳೆ ನಿಶಾ ಬೇರೆ ಕೋಪಗೊಂಡಿದ್ದಾಳೆ.
ನಿಶಾ ಕೀರ್ತನಾ ಹಾಗೂ ಸುಹಾಸ್ ಬಳಿ ಬಂದು ನನ್ನ ಕೈಗೆ ಕೊನೆಗೂ ಚಿಪ್ಪು ಕೊಟ್ಟು ಬಿಟ್ರಲ್ಲ. ಕಾರ್ತಿಕ್ ಜೊತೆಗೆ ಮದುವೆ ಮಾಡಿಸುತ್ತೀನಿ ಎಂದು ಹೇಳಿ ಮೋಸ ಮಾಡಿದ್ದೀರಾ. ನಾನು ಆ ಮನೆಗೆ ಸೊಸೆಯಾಗಿ ಬಂದಿದ್ದರೆ ನಿಮಗೂ ಉಳಿಗಾಲವಿರುತ್ತಿತ್ತು. ಆದರೆ ಈಗ ಬಂದಿರುವುದು ಸತ್ಯ. ಇನ್ನು ನಿಮ್ಮ ಕೈಗೂ ಚಿಪ್ಪು ಸಿಗುವುದು ಗ್ಯಾರೆಂಟಿ ಎಂದು ಹೇಳಿ ಹೋಗುತ್ತಾಳೆ.

ಸತ್ಯಾ ಕಾರ್ತಿಕ್ ಮದುವೆಯಲ್ಲಿ ಸಂಭ್ರಮ!
ಸತ್ಯಗೆ ಕಾರ್ತಿಕ್ ತಾಳಿಯನ್ನು ಕಟ್ಟಿ ಆಗಿದೆ. ಈಗ ಮನೆಯವರೆಲ್ಲಾ ಧಾರೆ ಎರೆಯುತ್ತಿದ್ದಾರೆ. ಸತ್ಯ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಬಂದು ಧಾರೆ ಎರೆದುಕೊಟ್ಟಿದ್ದಾರೆ. ಅಲ್ಲದೇ, ಮತ್ತೆ ಮನೆಯ ಬಗ್ಗೆಯೂ ನೆನಪು ಮಾಡಿದ್ದಾನೆ. ಕೊನೆಗೂ ಒಳ್ಳೆಯ ಮನೆಯನ್ನೇ ಸೇರಿದ್ದೀಯಾ ಎಂದು ವ್ಯಂಗ್ಯವಾಡಿದ್ದಾನೆ. ಗಿರಿಜಮ್ಮ ಸತ್ಯಗೆ ಮುತ್ತು ಕೊಟ್ಟು, ನಮ್ಮ ಮನೆಯ ಮಗಳನ್ನು ಚೆನ್ನಾಗಿ ನೋಡಿಕೊಳ್ಳಪ್ಪ ಎಂದು ಹೇಳುತ್ತಾಳೆ. ಸತ್ಯ ಸ್ನೇಹಿತರು ಕೂಡ ಕಣ್ಣೀರು ಹಾಕುತ್ತಾ ಧಾರೆ ಎರೆದಿದ್ದಾರೆ. ನಮ್ಮ ಸತ್ಯ ಇನ್ನು ಮುಂದಾದರೂ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ.

ಸತ್ಯ, ಕಾರ್ತಿಕ್ ಇನ್ನು ಜೊತೆ ಜೊತೆಯಲಿ!
ಮದುವೆ ಕಾರ್ಯ ಮುಗಿದ ಮೇಲೆ ಮಂಟಪದಿಂದ ಬಂದು ಕಾರ್ತಿಕ್ ಹಾಗೂ ಸತ್ಯ ಗುರುಗಳ ಬಳಿ ಬಂದು ಆಶೀರ್ವಾದ ತೆಗೆದುಕೊಂಡಿದ್ದಾರೆ. ಈ ವೇಳೆ, ಗುರುಗಳು ಮಾತನಾಡಿದ್ದು, ಆಗಿದ್ದೆಲ್ಲದಕ್ಕೂ ಕಾರಣವಿರುತ್ತದೆ. ನಿಮ್ಮ ಮದುವೆ ಮೊದಲೇ ನಿಶ್ಚಯವಾಗಿದ್ದು, ಆಗಿದ್ದೆಲ್ಲವನ್ನೂ ಮರೆತು. ಮುಂದೆ ಸಾಗಿ. ಮಳೆ ಬರುವ ಮುಂಚೆ ಗುಡುಗು ಸಿಡಿಲು ಸಹಜ. ಸ್ವಲ್ಪ ತಾಳ್ಮೆ ಇಂದ ಇರಿ. ಎಲ್ಲವೂ ಶಾಂತವಾಗುತ್ತದೆ. ನಡೆದ ಮದುವೆಯನ್ನು ಒಪ್ಪಿಕೊಂಡು ಉತ್ತಮ ಜೀವನ ನಡೆಸಿ ಎಂದು ಆಶೀರ್ವಾದವನ್ನು ಮಾಡುತ್ತಾರೆ.

ದಿವ್ಯಾಗೆ ಚೆಲ್ಲಾಟ, ಬಾಲನಿಗೆ ಪ್ರಾಣ ಸಂಕಟ!
ದಿವ್ಯಾ ಹಾಗೂ ಬಾಲ ತಮ್ಮ ಪ್ಲಾನ್ ಪ್ರಕಾರ ಮದುವೆ ಮನೆಯಿಂದ ಎಸ್ಕೇಪ್ ಆಗಿದ್ದಾರೆ. ದಿವ್ಯಾ ತನ್ನ ಕನಸಿನ ಲೋಕದಲ್ಲಿ ತೇಲುತ್ತಿದ್ದಾಳೆ. ನಾವು ಹಾಗೆ ಬದುಕಬೇಕು, ಹೀಗೆ ಬದುಕಬೇಕು. ನನ್ನ ಕಷ್ಟಗಳೆಲ್ಲಾ ಮುಗೀತು ಇನ್ನೇನಿದ್ದರೂ ರಾಯಲ್ ಲೈಫ್ ಲೀಡ್ ಮಾಡಬೇಕು ಎಂಬ ಆಲೋಚನೆಯಲ್ಲಿದ್ದಾಳೆ. ಆದರೆ ನಾಳೆಯಿಂದ ಬದುಕು ನಡೆಸುವುದು ಹೇಗೆ ಎಂದು ಬಾಲ ಯೋಚಿಸುತ್ತಿದ್ದಾನೆ. ಈ ನಡುವೆ ಮದುವೆ ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಕೀರ್ತನಾಗೆ ಕರೆ ಮಾಡೋಣ ಎಂದು ದಿವ್ಯಾ ಹೇಳಿದಾಗ, ಬಾಲ ಬೇಡ ಅವರ ಬಗ್ಗೆ ಯೋಚಿಸೋದು ಬೇಡ, ಏನನ್ನೂ ತಿಳಿದುಕೊಳ್ಳುವುದೂ ಬೇಡ ಎಂದು ಸಬೂಬು ಹೇಳುತ್ತಾನೆ.

ದಿವ್ಯಾ ಮದುವೆಯಾಗಲು ಬಾಲ ಸಿದ್ಧ!
ಬಾಲನಿಗೆ ಪದೇ ಪದೇ ಒಂದು ಫೋನ್ ಕಾಲ್ ಬರುತ್ತಿರುತ್ತದೆ. ಆದರೆ, ಬಾಲ ಕಾಲ್ ಪಿಕ್ ಮಾಡುತ್ತಿರಲ್ಲ. ಆಗ ದಿವ್ಯಾ ಯಾರದು ಪದೇ ಪದೇ ಕಾಲ್ ಮಾಡುತ್ತಿದ್ದಾರೆ. ಯಾರು ಅಂತ ರಿಸೀವ್ ಮಾಡಿ ನೋಡು. ಅದೇನಾದರೂ ಬಿಸಿನೆಸ್ ಕಾಲ್ ಆಗಿದ್ದರೆ, ಏನು ಮಾಡುತ್ತೀರಾ ರಿಸೀವ್ ಮಾಡಿ ಎನ್ನುತ್ತಾಳೆ. ಆಗ ಬಾಲ ಅಕಸ್ಮಾತ್ ಆಗಿ ಕಾರ್ ಓನರ್ ದು ಎಂದು ಹೇಳುತ್ತಾನೆ. ಆಗ ದಿವ್ಯಾ ಶಾಕ್ ಆಗಿ ಕೇಳಿದಾಗ ಬಾಲ ಸಂಜಾಯಿಸಿ ಕೊಡುತ್ತಾನೆ. ಈ ಕಾರನ್ನು ಮಾರುತ್ತಿದ್ದೇನೆ. ಇದನ್ನು ಖರೀದಿಸುವವನೆ ಟಾರ್ಚರ್ ಎನ್ನುತ್ತಾನೆ. ಆಗ ದಿವ್ಯಾ ಈ ಕಾರನ್ನು ಮಾರಬೇಡ. ಇದು ನಮ್ಮ ಎಮೋಷನಲ್ ಅಂತೆಲ್ಲಾ ಹೇಳುತ್ತಾಳೆ.


Click it and Unblock the Notifications











