ಮಂಟಪದಲ್ಲೇ ಕಾರ್ತಿಕ್ ಅನ್ನು ತಬ್ಬಿಕೊಂಡ ಸತ್ಯ!
ಸತ್ಯ ಧಾರಾವಾಹಿಯಲ್ಲಿ ಮದುವೆಯ ಮುಂದಿನ ಶಾಸ್ತ್ರಗಳು ನಡೆದಿವೆ. ಶಾಸ್ತ್ರ, ಸಂಪ್ರದಾಯ ಹಾಗೂ ಪೂಜೆಯ ಬಗ್ಗೆ ಅಷ್ಟು ತಿಳಿಯದ ಸತ್ಯ ಮಾಡುವ ಎಡವಟ್ಟುಗಳನ್ನು ನೋಡಿ ಸೀತಾ ಬೈಯುತ್ತಿರುತ್ತಾಳೆ. ಯಾವುದೇ ಕಾರಣಕ್ಕೂ ಇವಳನ್ನು ನಮ್ಮ ಮನೆಯ ಸೊಸೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದುಕೊಳ್ಳುತ್ತಾಳೆ.
ನೋಡಿ ನೋಡಿ ಕಣ್ಣು ತುಂಬಾ ನೋಡಿ, ನೀವು ಆರಿಸಿರುವ ಸೊಸೆಯನ್ನು ಎಂದು ಸೀತಾ ರಾಮಚಂದ್ರರಾಯರಿಗೆ ಹೇಳುತ್ತಾಳೆ. ದೇವರ ಕೆಲಸವನ್ನು ಬಲಗೈಯಲ್ಲಿ ಮಾಡಬೇಕು ಎಂಬುದೂ ಗೊತ್ತಿಲ್ಲ. ಎಷ್ಟೇ ಆದರೂ ಹೊಡಿ-ಬಡಿ ಕೆಲಸ ಮಾಡುತ್ತಿದ್ದವಳು ಅಲ್ವಾ ಎಂದು ಸೀತಾ ಆಡಿಕೊಳ್ಳುತ್ತಾಳೆ.
ಈ ಮಾತುಗಳನ್ನು ಕೇಳಿಸಿಕೊಂಡ ಲಕ್ಷ್ಮಣ ಅತ್ತಿಗೆ ಹೇಳುವುದಕ್ಕೂ ಸತ್ಯ ಮಾಡುವುದಕ್ಕೂ ಸರಿಯಾಗಿದೆ. ಇವರಿಬ್ಬರೂ ಹೇಗೆ ಅಡ್ಜಸ್ಟ್ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಮುಂದೆ ಹೇಗೋ ಏನೊ ಎಂದು ಲಕ್ಷ್ಮಣ, ಊರ್ಮಿಳ ಬಳಿ ಹೇಳುತ್ತಾನೆ.

ಸೀತಾಗೆ ಬುದ್ಧಿ ಹೇಳಿ ರಾಮಚಂದ್ರರಾಯರು!
ಸೀತಾ ಮಂಟಪದಿಂದ ಹೊರಡುತ್ತಾಳೆ. ಆಗ ರಾಮಚಂದ್ರ ರಾಯರು ತಡೆದು ಹೋಗಬೇಡ ಎಂದು ಬುದ್ಧಿವಾದ ಹೇಳುತ್ತಾನೆ. ಸೀತಾ, ನನ್ನ ಕೈಯಲ್ಲಿ ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ. ಸತ್ಯ, ನನ್ನ ಸೊಸೆ ಆಗುವುದಕ್ಕೆ ಸಾಧ್ಯವಿಲ್ಲ. ನಾನು ಅವಳ ಅತ್ತೆಯೂ ಅಲ್ಲ ಎನ್ನುತ್ತಾಳೆ. ಅದಕ್ಕೆ ರಾಮಚಂದ್ರರಾಯರು, ಅವಳೇ ನಿನ್ನ ಸೊಸೆ ಅನ್ನೋದು ಸತ್ಯ ಇವತ್ತಲ್ಲ ನಾಳೆ ಒಪ್ಪಿಕೊಳ್ಳಲೇಬೇಕು. ಅವಳಿಗೆ ಶಾಸ್ತ್ರ, ಸಂಪ್ರದಾಯ ಹೇಳಿಕೊಡು ಕಲಿಯುತ್ತಾಳೆ. ಹೀಗೆ ಬಂದವರ ಮುಂದೆ ಕೂಗಾಡಿದರೆ ನಮ್ಮ ಮನೆಯ ಮರ್ಯಾದೆಯೇ ಹೋಗುವುದು ಎಂದು ಹೇಳುತ್ತಾನೆ.

ಮಂಟಪದಲ್ಲಿ ಸತ್ಯ ಕಾರ್ತಿಜ್ ಜೂಟಾಟ!
ಪುರೋಹಿತರು ಅಗ್ನಿಸಾಕ್ಷಿ ಕುಂಡವನ್ನ ಪ್ರದಕ್ಷಿಣೆ ಹಾಕಲು ಹೇಳುತ್ತಾರೆ. ಆಗ ವಿಧಿ ಇಲ್ಲದೇ ಸತ್ಯ, ಕಾರ್ತಿಕ್ ಕೈ ಹಿಡಿದು ಹೆಜ್ಜೆ ಹಾಕುತ್ತಾಳೆ. ಆದರೆ, ಕಾರ್ತಿಕ್ ಮುಂದೆ ಹೋಗಬೇಕು ಎಂದು ಪುರೋಹಿತರು ಹೇಳುತ್ತಾರೆ. ಆಗ ಕಾರ್ತಿಕ್ ಮುಂದೆ ಸಾಗಿದಾಗ ಸತ್ಯ ಎಡವಿ ಕಾರ್ತಿಕ್ ನನ್ನು ತಬ್ಬಿಕೊಳ್ಳುತ್ತಾಳೆ. ಈ ಸೀನ್ ನೋಡಿದವರು ಕೆಲವರು ಖುಷಿ ಪಡುತ್ತಾರೆ. ಆದರೆ ಸೀತಾ ಹಾಗೂ ಕಾರ್ತಿಕ್ ಮುಖ ಸಿಂಡರಿಸಿಕೊಳ್ಳುತ್ತಾರೆ.

ಹೊಸ ಲವ್ ಸ್ಟೊರಿ ಶುರು!
ರೀತು, ರಾಕೇಶ್ ನನ್ನು ಪ್ರೀತಿಸುತ್ತಿದ್ದಾಳೆ. ಎಲ್ಲೇ ರಾಕೇಶ್ ಕಂಡರು ತಡೆದು ಮಾತನಾಡಿಸುತ್ತಾಳೆ. ಆದರೆ ರಾಕೇಶ್ ಗೆ ಇಷ್ಟವಾಗುವುದಿಲ್ಲ. ಯಾಕೆಂದರೆ, ರಾಕೇಶ್ ಓದಿನ ಕಡೆ ತನ್ನ ಗುರಿ ಇಟ್ಟುಕೊಂಡಿದ್ದಾನೆ. ಆದರೆ ರಿತು ನಿನ್ನ ಸಾಧನೆಗೆ ನಾನು ಜೊತೆಯಾಗಿರುತ್ತೇನೆ ಎಂದು ಹೇಳಿ ಮಾತನಾಡಿಸುತ್ತಿರುತ್ತಾಳೆ. ಇದನ್ನು ನೋಡುವ ಸತ್ಯ ಸ್ನೇಹಿತರು. ಒಂದು ಲವ್ ಸ್ಟೋರಿಗೆ ಹ್ಯಾಪಿ ಎಂಡಿಂಗ್ ಕೊಡುವುದೇ ಕಷ್ಟವಾಯ್ತು. ಈಗ ಇನ್ನೊಂದು ಲವ್ ಸ್ಟೋರಿನಾ ಎಂದು ಶಾಕ್ ಆಗುತ್ತಾರೆ. ರಾಕೇಶ್ ಬಗ್ಗೆ ತಮಾಷೆ ಮಾಡಿಕೊಂಡು ಮಾತನಾಡುತ್ತಾರೆ.

ಅಜ್ಜಿ-ಅಮ್ಮನ ಬಳಿ ಮಾತನಾಡಿದ ಸತ್ಯ!
ಮದುವೆಯಾದ ಮೇಲೆ ಗಿರಿಜಮ್ಮ ಹಾಗೂ ಜಾನಕಿಯನ್ನು ಸತ್ಯ ಸಪರೇಟ್ ಆಗಿ ಕರೆದುಕೊಡು ಬಂದು ಮಾತನಾಡಿದ್ದಾಳೆ. ಚಿಕ್ಕಪ್ಪ ಮನೆ ಮನೆ ಅಂತ ಹಿಂದೆ ಬಿದ್ದಿದ್ದಾರೆ. ಹುಷಾರು ಎಂದು ಹೇಳುತ್ತಾಳೆ. ಗಿರಿಜಮ್ಮ ಹಾಗೂ ಜಾನಕಿ ಮಗಳ ಮದುವೆಯನ್ನು ನೋಡಿ ಖುಷಿಪಟ್ಟಿದ್ದಾರೆ. ಸೀತಾ ಸ್ವಲ್ಪ ಜಾಸ್ತಿ ಸಂಪ್ರದಾಯ, ಶಾಸ್ತ್ರದ ಬಗ್ಗೆ ಒಲವಿಟ್ಟುಕೊಂಡಿದ್ದಾರೆ. ಅವರು ಹಳಿಕೊಡುವುದನ್ನು ಕಲಿತುಕೊಂಡು, ಆ ಮನೆಯ ಮುದ್ದಿನ ಸೊಸೆಯಾಗಿರು. ಸೀತಾ ಅವರಿಗೆ ಬೇಸರ ಮಾಡಬೇಡ, ಕಾರ್ತಿಕ್ ಮನಸಿನಲ್ಲಿ ಬೇಸರವಿದೆ ಅದನ್ನೆಲ್ಲಾ ನೀನೇ ಸರಿಪಡಿಸಿಕೋ ಎಂದು ಜಾನಕಿ ಹೇಳುತ್ತಾಳೆ.


Click it and Unblock the Notifications











