ಹಾವು ಮುಂಗುಸಿಯಂತಾದ ಅತ್ತೆ ಸೀತಾ, ಸೊಸೆ ಸತ್ಯ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ರಾಮಚಂದ್ರ ರಾಯರು ಸೀತಾಳನ್ನು ಸಮಾಧಾನ ಮಾಡುತ್ತಿದ್ದಾರೆ. ಆದರೆ ಸೀತಾ ತೀರಾ ಸಿಟ್ಟಾಗಿದ್ದು ಯಾರ ಮಾತನ್ನೂ ಕೇಳುತ್ತಿಲ್ಲ. ಮನೆಗೆ ಬರುವ ಮಗ ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತಾಳಾ ಎಂಬುದೇ ಈಗ ಕುತೂಹಲದ ಸಂಗತಿ.

ರಾಮಚಂದ್ರ ರಾಯರು ಬಂದದ್ದನ್ನು ಬಂದ ಹಾಗೆಯೇ ಸ್ವೀಕರಿಸಬೇಕು. ಅದನ್ನೇ ಅಲ್ಲವೇ ಗುರುಗಳು ಹೇಳಿರುವುದು. ನಿನ್ನ ಮನಸ್ಸು ನನಗೆ ಅರ್ಥವಾಗುತ್ತದೆ. ಆದರೆ, ಆಗಿದ್ದನ್ನೆಲ್ಲಾ ಬಿಟ್ಟು ಈಗ ಕಾರ್ತಿಕ್ ಹಾಗೂ ಸತ್ಯಳನ್ನು ಮನೆ ತುಂಬಿಸಿಕೋ ಎಂದು ಸೀತಾ ಗೆ ರಾಮಚಂದ್ರ ರಾಯರು ಹೇಳುತ್ತಾರೆ.

ಆದರೆ ಸೀತಾ ಇದಕ್ಕೆ ಸುತಾರಾಂ ಒಪ್ಪುವುದಿಲ್ಲ. ನನ್ನ ಬಾಯಿ ಮುಚ್ಚಿಸಿ ಎಲ್ಲವನ್ನೂ ಮಾಡಿ ಮುಗಿಸಿದ್ದೀರಿ. ಇನ್ನೇನು ಉಳಿದಿದೆ. ಅವಳನ್ನು ನಾನು ಆರತಿ ಎತ್ತಿ ಮನೆಗೆ ತುಂಬಿಸಿಕೊಳ್ಳಲಾರೆ. ನನ್ನ ಹೊಟ್ಟೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ ಎಂದು ಸಿಟ್ಟಾಗುತ್ತಾಳೆ.

ನಿಶಾ ಕರೆಗೆ ಕೀರ್ತನಾ ಸಿಡಿಮಿಡಿ!

ನಿಶಾ ಕರೆಗೆ ಕೀರ್ತನಾ ಸಿಡಿಮಿಡಿ!

ಇತ್ತ ಕೀರ್ತನಾ ಹಾಗೂ ಸುಹಾಸ್ ಕಾರ್ತಿಕ್ ನನ್ನು ಸತ್ಯ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದಾರೆ. ತಮ್ಮ ಪ್ಲಾನ್ ಎಲ್ಲವೂ ಉಲ್ಟಾ ಆಯಿತಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಸತ್ಯ ಮನೆಗೆ ಬಂದರೆ ಇನ್ನು ತಮಗೆ ಉಳಿಗಾಲವಿಲ್ಲ ಯೋಚಿಸುತ್ತಿರುವಾಗಲೇ ನಿಶಾ ಕೀರ್ತನಾಗೆ ಕರೆ ಮಾಡಿದ್ದಾಳೆ. ತನಗೆ ಕೀರ್ತನಾಳೇ ಮೋಸ ಮಾಡಿದ್ದು ಎಂದು ಕೂಗಾಡಿದ್ದಾಳೆ. ಕಾರ್ತಿಕ್ ನನ್ನು ಮದುವೆಯಾಗಿ ರಾಯಲ್ ಲೈಫ್ ಲೀಡ್ ಮಾಡಬೇಕು ಎಂದುಕೊಂಡಿದ್ದ ನಿಶಾ ಆಸೆಗೆ ಕೀರ್ತನಾಳೇ ತಣ್ಣೀರೆರಚ್ಚಿದ್ದು ಎಂಬಂತೆ ಮಾತನಾಡಿದ್ದಾಳೆ. ಅದಕ್ಕೆ ಕೀರ್ತನಾ ಕೂಡ ಕೂಗಾಡಿ ಫೋನ್ ಇಟ್ಟಿದ್ದಾಳೆ.

ಸತ್ಯಳನ್ನು ಬಿಟ್ಟು ಬಂದ ಕಾರ್ತಿಕ್!

ಸತ್ಯಳನ್ನು ಬಿಟ್ಟು ಬಂದ ಕಾರ್ತಿಕ್!

ಕಾರ್ತಿಕ್ ಒಬ್ಬನೇ ಮನೆಗೆ ಬಂದಿದ್ದಾನೆ. ಇದನ್ನು ನೋಡಿದ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ಎಲ್ಲೋ ಸತ್ಯ, ಒಬ್ಬನೇ ಯಾಕೆ ಬಂದಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇಬ್ಬರೂ ದಾರಿ ಮಧ್ಯೆ ಜಗಳವಾಡಿಕೊಂಡ್ರಾ ಎಂದು ಕೇಳಿದ್ದಾರೆ. ಲಕ್ಷ್ಮಣ, ಊರ್ಮಿಳಾ ಯಾರ ಮಾತಿಗೂ ಏನೂ ಹೇಳದೇ ಕಾರ್ತಿಕ್ ಮೌನವಾಗಿದ್ದಾನೆ. ಏನು ಹೇಳುವುದು ಎಂದು ಗೊತ್ತಾಗದೇ ಬೇಸರದಲ್ಲಿದ್ದಾನೆ. ಅಷ್ಟರಲ್ಲಿ ಸತ್ಯ ಬೈಕ್ ನಲ್ಲಿ ಬಂದಿದ್ದಾಳೆ. ಸತ್ಯ ಏನು ಹೇಳುವುದು ಎನ್ನುವಷ್ಟರಲ್ಲಿ ರಿತು ಮಧ್ಯದಲ್ಲಿ ಬಾಯಿ ಹಾಕಿದ್ದಾಳೆ. ಅತ್ತಿಗೆ ಅವರ ಸ್ಟೈಲ್ ನಲ್ಲೇ ಎಂಟ್ರಿ ಕೊಡಲು ಬೈಕ್ ನಲ್ಲಿ ಬಂದಿದ್ದಾರೆ ಎನ್ನುತ್ತಾಳೆ.

ಸತ್ಯಗೆ ಆರತಿ ಮಾಡಲ್ಲ ಎಂದು ಸೀತಾ ಹಠ!

ಸತ್ಯಗೆ ಆರತಿ ಮಾಡಲ್ಲ ಎಂದು ಸೀತಾ ಹಠ!

ರಾಮಚಂದ್ರ ರಾಯರು ಸೀತಾಳನ್ನು ಕರೆದುಕೊಂಡು ಬರಲು ಮೇಲೆ ಹೋಗಿದ್ದಾರೆ. ಸೀತಾ ಸಿಟ್ಟಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದಾರೆ. ಅವರನ್ನು ಸ್ವಾಗತಿಸಬೇಕಾದವಳು ನಾನು, ನೀನೇ ಇಲ್ಲಿದ್ದರೆ ಹೇಗೆ. ಆಗಿ ಹೋಗಿದ್ದನ್ನೇಲ್ಲಾ ನೆನಪಿಸಿಕೊಂಡರೆ ಆಗುತ್ತಾ ಎಂದು ಹೇಳಿದಾಗ, ಸೀತಾ ನನಗೆ ಅವಳನ್ನು ಮನೆಗೆ ತುಂಬಿಸಿಕೊಳ್ಳಲು ಇಷ್ಟ ಇಲ್ಲ. ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ. ಅಷ್ಟಕ್ಕೂ ಮನೆಗೆ ಯಾಕೆ ತುಂಬಿಸಿಕೊಳ್ಳುತ್ತಾರೆ ಹೇಳಿ, ಲಕ್ಷ್ಮೀ ಸ್ವರೂಪದಲ್ಲಿ ಬರುತ್ತಾಳೆ. ಸುಖ, ಶಾಂತಿ, ಸೌಭಾಗ್ಯ ಅನ್ನೋ ಲಕ್ಷ್ಮೀ ಜೊತೆಗೆ ಮನೆಗೆ ಕಾಲಿಡುತ್ತಾಳೆ. ಆದರೆ ಇವಳು ದಾರಿಯಲ್ಲಿ ಹೋಗುವ ಮಾರಿ. ಮಾರಿನಾ ನಾನು ಮನೆಗೆ ಹೇಗೆ ತುಂಬಿಸಿಕೊಳ್ಳಲಿ ಎನ್ನುತ್ತಾಳೆ.

ಪತಿಯ ಮಾತು ಮೀರುವುದಿಲ್ಲ ಸೀತಾ!

ಪತಿಯ ಮಾತು ಮೀರುವುದಿಲ್ಲ ಸೀತಾ!

ರಾಮಚಂದ್ರ ರಾಯರು ಮಾರಿ ಅಂದ್ರೂ, ಲಕ್ಷ್ಮೀ ಅನ್ನೋದು ಕೂಡ ದೈವ ಸ್ವರೂಪ. ತಪ್ಪು ಅನ್ನೋದು ನಮ್ಮ ಮನಸ್ಸಿನ ಭಾವನೆ. ನಿನ್ನ ಮನಸ್ಸಿನ ನೋವು ನನಗೆ ಅರ್ಥವಾಗುತ್ತೆ. ಶಾಸ್ತ್ರ, ಸಂಪ್ರದಾಯ ಅನ್ನೋ ನೀನೇ ಅದಕ್ಕೆ ಅಪಚಾರ ಮಾಡಿದ ಹಾಗೆ ಆಗುವುದಿಲ್ಲವಾ. ಅವಳನ್ನು ಈಗ ಮನೆಗೆ ತುಂಬಿಸಿಕೊಂಡು ನಿನಗೆ ಹೇಗೆ ಬೇಕೋ ಹಾಗೆ ತಯಾರಿ ಮಾಡಿಕೋ ಎನ್ನುತ್ತಾರೆ. ಆದರೆ ಸೀತಾ ನನಗೆ ಅದ್ಯಾವುದೂ ಬೇಕಾಗಿಲ್ಲ ಎನ್ನುತ್ತಾಳೆ. ಆಗ ರಾಯರು ಕೊನೆಯದಾಗಿ ಬರುತ್ತಿಯೋ ಇಲ್ಲವೋ ಎಂದು ಪ್ರಶ್ನೆ ಮಾಡಿದಾಗ ಗಂಡನ ಮಾತನ್ನು ಮೀರಿ ನನಗೆ ಗೊತ್ತಿಲ್ಲ. ಅದು ನನ್ನ ಸಂಸ್ಕಾರವೂ ಅಲ್ಲ. ನಾನು ಬರುತ್ತೀನಿ ಎಂದು ಹೇಳುತ್ತಾಳೆ.

More from Filmibeat

English summary
Sathya Tv Serial Written Update On May 26th Episode, Big Twist In Sathya Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X