ಸೇರು ಒದ್ದು, ಅತ್ತೆಯ ಕೆಂಗಣ್ಣಿಗೆ ಗುರಿಯಾದ ಸತ್ಯ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಸೀತಾ ಒಪ್ಪಿಕೊಂಡಿದ್ದಾಳೆ. ಇದರ ನಡುವೆಯೇ ಸತ್ಯ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾಳೆ. ಈ ಮಾತು ರಾಮಚಂದ್ರ ರಾಯರ ಮನೆಯವರಿಗೆ ಶಾಕ್ ನೀಡಿದೆ.

ಊರ್ಮಿಳಾಗೆ ಕಾರ್ತಿಕ್ ಹಾಗೂ ಸತ್ಯ ಇಷ್ಟವಿಲ್ಲದೇ ಮದುವೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೇಗಪ್ಪ ಇಬ್ಬರೂ ಜೀವನ ನಡೆಸುತ್ತಾರೆ. ಇತ್ತ ಸೀತಕ್ಕನಿಗೂ ಈ ಮದುವೆ ಇಷ್ಟವಿಲ್ಲ. ಮುಂದೆ ಸತ್ಯ ಹೇಗೆ ಎಲ್ಲವನ್ನೂ ನಿಭಾಯಿಸುತ್ತಾಳೋ ಎಂದು ಯೋಚಿಸುತ್ತಿದ್ದಾಳೆ.

ಕಾರ್ತಿಕ್ ಹೇಗಾದರೂ ಮಾಡಿ ಸತ್ಯಳಿಂದ ದೂರಾಗಬೇಕು. ಅವಳು ಮನೆಗೆ ಬರದೇ ಇರುವುದೇ ಒಳ್ಳೆಯದು ಎಂದು ಯೋಚಿಸುತ್ತಿದ್ದಾನೆ. ಆದರೆ, ಸತ್ಯ, ಕಾರ್ತಿಕ್ ಮನೆಯಲ್ಲೇ ತನ್ನ ಬದುಕು ನಡೆದಂತೆ ನಡೆಯಬೇಕು ಎಂದು ತೀರ್ಮಾನಿಸಿದ್ದಾಳೆ.

ಗಿರಿಜಮ್ಮ ಮಗನಿಗೆ ಬೈದಿದ್ದು ಯಾಕೆ!

ಗಿರಿಜಮ್ಮ ಮಗನಿಗೆ ಬೈದಿದ್ದು ಯಾಕೆ!

ಗಿರಿಜಮ್ಮ ದೊಡ್ಡ ಮಗ ಮನೆಯಲ್ಲಿ ಕೂತು ಈಗ ಈ ಮನೆಯನ್ನು ನನ್ನ ಹೆಸರಿಗೆ ಮಾಡಿಕೊಡಿ ಎಂದು ಕೇಳುತ್ತಿದ್ದಾನೆ. ಆದರೆ, ಅದು ಸಾಧ್ಯವಿಲ್ಲ ಎಂದು ಸತ್ಯ ಸ್ನೇಹಿತರು ಹೇಳುತ್ತಾರೆ. ದಿವ್ಯಾ ಮದುವೆಯಾದ ಮೇಲೆ ತಾನೇ ಮನೆಯನ್ನು ನಿಮ್ಮ ಹೆಸರಿಗೆ ಮಾಡಿಕೊಡುವುದು ಎಂದು ಸತ್ಯ ಹೇಳಿದ್ದು ಆದರೆ ಈಗ ಮದುವೆಯಾಗಿರುವುದು ಸತ್ಯಳದ್ದು. ದಿವ್ಯಕ್ಕನದ್ದು ಇನ್ನೂ ಮದುವೆಯಾಗಿಲ್ಲ. ದಿವ್ಯಕ್ಕ ಮದುವೆಯಾದಾಗ ನೋಡಿಕೊಳ್ಳೋಣ ಎನ್ನುತ್ತಾರೆ. ಆಗ ಗಿರಿಜಮ್ಮ ಅವನಿಗೆ ಬೈದು ಕಳಿಸುತ್ತಾರೆ. ಸತ್ಯ ಹೆಸರಲ್ಲಿ ಮನೆ ಇರುವುದು. ನೀನು ಗಲಾಟೆ ಮಾಡಿದಾಗಲೇ ನಾವು ಸತ್ಯ ಹೆಸರಿಗೆ ಮನೆಯನ್ನು ಬರೆದಾಯ್ತು. ಈಗ ಏನಿದ್ದರೂ ಸತ್ಯಳನ್ನೇ ಕೇಳಬೇಕು. ಅವಳೂ ಬರುವವರೆಗೂ ಕಾಯಿ. ಈಗ ನಿನ್ನ ಮನೆಗೆ ಹೋಗು. ಸತ್ಯ ಬಂದಾಗ ಹೇಳಿ ಕಳಿಸುತ್ತೇನೆ ಆವಾಗ ಬಾ ಎಂದು ಹೇಳುತ್ತಾಳೆ.

ಸೇರು ಒದೆಯುವುದಿಲ್ಲ ಎಂದ ಸತ್ಯ!

ಸೇರು ಒದೆಯುವುದಿಲ್ಲ ಎಂದ ಸತ್ಯ!

ಊರ್ಮಿಳಾ, ಸತ್ಯ ಹಾಗೂ ಕಾರ್ತಿಕ್ ಗೆ ಆರತಿ ಮಾಡುತ್ತಾಳೆ. ರಾಮಚಂದ್ರ ರಾಯರು ಸತ್ಯಳನ್ನು ಸೇರು ಒದ್ದು ಮನೆಯೊಳಗೆ ಬರುವಂತೆ ಹೇಳುತ್ತಾರೆ. ಆದರೆ ಸತ್ಯ ಮನೆಗೆ ಬರುವುದಿಲ್ಲ ಎಂದು ಹೇಳುತ್ತಾಳೆ. ಆಗ ಮನೆಯವರೆಲ್ಲರೂ ಶಾಕ್ ಆಗುತ್ತಾರೆ. ಕಾರ್ತಿಕ್ ಖುಷಿ ಪಡುತ್ತಾನೆ. ಈಗಲಾದರೂ ಬುದ್ಧೀ ಬಂತಲ್ಲ ನನ್ನ ಪುಣ್ಯ ಎಂದುಕೊಳ್ಳುತ್ತಾನೆ. ಇತ್ತ ಸೀತಾ ಒಳ್ಳೆಯದೇ ಆಯಿತು. ಇದರಿಂದ ಇಲ್ಲಿ ಯಾರಿಗೂ ಯಾವ ನಷ್ಟವೂ ಇಲ್ಲ ಎಂದು ಹೇಳುತ್ತಾರೆ. ಆದರೆ ಇವರ ಯಾರ ಮಾತಿಗೂ ಸತ್ಯ ಕಿವಿಕೊಡುವುದಿಲ್ಲ.

ಸತ್ಯಗೆ ಯಾವುದೇ ಶಾಸ್ತ್ರ ಗೊತ್ತಿಲ್ಲ!

ಸತ್ಯಗೆ ಯಾವುದೇ ಶಾಸ್ತ್ರ ಗೊತ್ತಿಲ್ಲ!

ರಾಮಚಂದ್ರ ರಾಯರು ಯಾಕಮ್ಮ ಸತ್ಯ ಬರುವುದಿಲ್ಲ ಎಂದು ಹೇಳುತ್ತಿದ್ದೀಯಾ. ಏನು ನಿನ್ನ ಸಮಸ್ಯೆ ಎಂದು ಕೇಳುತ್ತಾನೆ. ಆಗ ಸತ್ಯ, ಅಲ್ಲ ರಾಯರೇ, ನಾವು ಅನ್ನವನ್ನು ಕಣ್ಣಿಗೆ ಒತ್ತಿಕೊಂಡು ತಿನ್ನುತ್ತೇವೆ. ಆದರೆ, ನಾನ್ಯಾಕೆ ಅದನ್ನು ಒದ್ದು ಮನೆಯೊಳಗೆ ಬರಬೇಕು. ಅದು ತಪ್ಪಲ್ವಾ ಎನ್ನುತ್ತಾಳೆ. ಆಗ ರಾಮಚಂದ್ರ ರಾಯರು, ಸೇರು ಒದ್ದು ಬರುವ ಅರ್ಥವನ್ನು ಹೇಳುತ್ತಾನೆ. ಆಗ ಸತ್ಯ ಈ ಮನೆಯ ಶಾಸ್ತ್ರ, ಸಂಪ್ರದಾಯವನ್ನು ಗೌರವಿಸಬೇಕು. ಅದನ್ನು ಅರ್ಥಮಾಡಿಕೊಂಡು ನಡೆಯಬೇಕು ಎಂದು ಸೇರು ಒದೆಯಲು ಒಪ್ಪುತ್ತಾಳೆ.

ಸೇರು ಒದ್ದು ಬಂದ ಸತ್ಯ!

ಸೇರು ಒದ್ದು ಬಂದ ಸತ್ಯ!

ಆದರೆ ಅಷ್ಟರಲ್ಲಿ ರಿತು ಬಂದು ಸತ್ಯಳನ್ನು ತಡೆಯುತ್ತಾಳೆ. ಶಾಸ್ತ್ರ ಪೂರ ಮುಗಿಯದೇ ಸತ್ಯಳನ್ನು ಮನೆಯೊಳಗೆ ಬಿಡುವುದಿಲ್ಲ ಎನ್ನುತ್ತಾಳೆ. ಯಾವ ಶಾಸ್ತ್ರ ಎಂದು ಎಲ್ಲರೂ ಕೇಳುತ್ತಾರೆ. ಆಗ ಗಂಡನ ಹೆಸರನ್ನು ಹೇಳುವಂತೆ ಸತ್ಯಳನ್ನು ಕೇಳುತ್ತಾಳೆ. ಸತ್ಯ ಆಗ ಮುದ್ದಾಗಿ, ಅರ್ಥ ಪೂರ್ಣವಾಗಿ ಕಾರ್ತಿಕ್ ಹೆಸರನ್ನು ಹೇಳುತ್ತಾಳೆ. ಇತ್ತ ಕಾರ್ತಿಕ್ ಕೂಡ ಸತ್ಯ ಹೆಸರನ್ನು ಹೇಳುತ್ತಾಳೆ. ನಂತರ ಸತ್ಯ ಸೇರನ್ನು ಜೋರಾಗಿ ಒದೆಯುತ್ತಾಳೆ. ಅದು ಸೀದಾ ಸುಹಾಸ್ ತಲೆಗೆ ಬೀಳುತ್ತದೆ. ಸುಹಾಸ್‌ಗೆ ಏನಾಗಿದೆ ಎಂದು ಸೋಮವಾರ ತಿಳಿಯಬೇಕಷ್ಟೇ.

More from Filmibeat

English summary
Sathya Tv Serial Written Update On May 27th Episode, Big Twist In Sathya Life,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X