ಆಸ್ತಿ ಆಸೆಗೆ ಬಾಲನ ಮದುವೆ ಆಗಿ ಹಳ್ಳಕ್ಕೆ ಬಿದ್ದಳು ದಿವ್ಯಾ!
ಸತ್ಯ ಧಾರಾವಾಹಿಯಲ್ಲಿ ಇನ್ನುಮುಂದೆ ಸತ್ಯಗೆ ನಿತ್ಯ ಒಂದೊಂದು ಪರೀಕ್ಷೆಗಳು ಎದುರಾಗುತ್ತವೆ. ಇನ್ನುಮುಂದೆ ಆಚಾರ, ವಿಚಾರಗಳನ್ನು ಕಲಿಯುವ ಭರದಲ್ಲಿ ಸತ್ಯ ಇನ್ನೂ ಏನೇನು ಅವಾಂತರಗಳನ್ನು ಮಾಡುತ್ತಾಳೋ. ಇದಕ್ಕೆ ಸೀತಾ ಹೇಗೆ ನಡೆದುಕೊಳ್ಳುತ್ತಾಳೋ. ಇವೆಲ್ಲಾ ಹೊಸ ತಿರುವುಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.
ಇತ್ತ ದಿವ್ಯಾ, ಬಾಲನ ಸುಳ್ಳಿನ ಕೋಟೆಯಲ್ಲಿ ಬಂಧಿಯಾಗಿದ್ದಾಳೆ. ಅವನು ಹೇಳಿದ್ದಕ್ಕೆಲ್ಲಾ ತಲೆದೂಗಿಸಿಕೊಂಡು, ಕನಸಿನ ಕೋಟೆಯನ್ನು ಕಟ್ಟುತ್ತಿದ್ದಾಳೆ. ಯಾವಾಗ ಈ ಸುಳ್ಳಿನ ಕೋಟೆ ಒಡೆಯುತ್ತೋ ಗೊತ್ತಿಲ್ಲ. ಆದರೆ, ಈ ಸುಳ್ಳಿನ ಕೋಟೆಯಲ್ಲಿ ಸದ್ಯ ದಿವ್ಯಾ ಸುಖವಾಗಿದ್ದಾಳೆ.
ಮನೆಯೊಳಗೆ ಹೋಗುವ ಮುನ್ನ ಸತ್ಯ ಅವಾಂತರ ಮಾಡಿದ್ದಾಳೆ. ಮನೆಯೊಳಗೆ ಹೋದ ಮೇಲೆ ದೇವರ ಮನೆಯಲ್ಲೂ ಸತ್ಯ ಮಾಡಿದ ಪೂಜೆಯ ರೀತಿ ಸೀತಾ ಬಾಯಲ್ಲಿ ಸುಪ್ರಭಾತವನ್ನು ಹೇಳಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಏನೇನು ಘಟನೆಗಳು ನಡೆಯುತ್ತವೋ.

ಸತ್ಯಳ ಫಸ್ಟ್ ಟಾರ್ಗೆಟ್ ಸುಹಾಸ್!
ಸತ್ಯ ಸೇರನ್ನು ಜೋರಾಗಿ ಒದ್ದಿದ್ದಾಳೆ. ಅದು ಸೀದಾ ಸುಹಾಸ್ ತಲೆಗೆ ಬಿದ್ದಿದೆ. ಈ ಮೂಲಕ ಸುಹಾಸ್ ತಲೆಗೆ ಏಟು ಬಿದ್ದಿದ್ದು. ಇದಕ್ಕೆ ಯಾರೂ ಏನು ಮಾತನಾಡಿಲ್ಲ. ಲಕ್ಷ್ಮಣ ಹಾಗೂ ಊರ್ಮಿಳಾ ಮೆಲ್ಲಗೆ ನಕ್ಕಿದ್ದಾರೆ. ಇನ್ನು ಬಲಗಾಲಿಟ್ಟು ಕಾರ್ತಿಕ್ ಹಾಗೂ ಸತ್ಯ ಮನೆಯೊಳಗೆ ಪ್ರವೇಶಿಸಿದ್ದಾರೆ. ಆದರೆ ಮನೆಗೆ ಬರುತ್ತಿದ್ದಂತೆಯೇ ಕಾರ್ತಿಕ್, ಸೀತಾ, ಕೀರ್ತನಾ ತಮ್ಮ ಪಾಡಿಗೆ ತಾವು ಹೋಗಿದ್ದಾರೆ. ಇದರಿಂದ ಸತ್ಯ ಬೇಸರ ಮಾಡಿಕೊಂಡಿದ್ದು, ಊರ್ಮಿಳಾ ಸತ್ಯಳನ್ನು ಒಳಗೆ ಕರೆದುಕೊಂಡು ಹೋಗಿದ್ದಾಳೆ.

ದಿವ್ಯಾ, ಬಾಲ ಮದುವೆ ನಡೆದೇ ಹೋಯ್ತು!
ಇತ್ತ ತಮ್ಮ ಮದುವೆ ಅದ್ಧೂರಿಯಾಗಿ ನಡೆಯುತ್ತದೆ ಎಂದು ಕನಸು ಕಂಡಿದ್ದ ದಿವ್ಯಾಗೆ ನಿರಾಸೆಯಾಗಿದೆ. ಆದರೂ ಮುಂದೆ ಬದುಕಲ್ಲಿ ಕೋಟಿ ಕೋಟಿ ಹಣವನ್ನು ತನ್ನದಾಗಿಸಿಕೊಳ್ಳ ಬಹುದು ಎಂಬ ನಿರೀಕ್ಷೆಯಲ್ಲಿ ದಿವ್ಯಾ ಸಿಂಪಲ್ ಆಗಿ ಮದುವೆಯಾಗಿದ್ದಾಳೆ. ದಿವ್ಯಾ ಹಾಗೂ ಬಾಲ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಬಳಿಕ ರೆಸಾರ್ಟ್‌ಗೆ ತೆರಳಿ ಫೋಟೋ ಶೂಟ್ ಸಹ ಮಾಡಿಸಿಕೊಂಡಿದ್ದಾರೆ. ದಿವ್ಯಾ ಈ ಫೋಟೋಗಳನ್ನೆಲ್ಲಾ ಬಾಲನ ತಂದೆ ತಾಯಿಗೆ ತೋರಿಸಲು ಎಂದುಕೊಂಡಿದ್ದಾಳೆ. ಆದರೆ ಅದು ತನಗೇ ಎಂಬುದು ಇನ್ನೂ ಗೊತ್ತಾಗಿಲ್ಲ.

ದಿವ್ಯಾ ಪ್ರಶ್ನೆಗಳಿಗೆ ಬೇಸತ್ತ ಬಾಲ!
ರೆಸಾರ್ಟ್‌ಗೆ ಬಂದಿರುವುದಕ್ಕೆ ದಿವ್ಯಾಗೆ ಅನುಮಾನ ಶುರುವಾಗಿದೆ. ನಾವು ಸೀದಾ ನಿಮ್ಮ ಮನೆಗೆ ಹೋಗುತ್ತೀವಿ ಎಂದುಕೊಂಡರೆ, ಇಲ್ಲಿಗ್ಯಾಕೆ ಕರೆದುಕೊಂಡು ಬಂದಿದ್ದೀಯಾ ಎಂದು ಕೇಳುತ್ತಾಳೆ. ಅದಕ್ಕೆ ಬಾಲ ತುಪ್ಪ ಸವರಿದ್ದಾನೆ. ತಾನು ಮದುವೆಯಾಗುವುದು ಮೀಡಿಯಾಗೆ ಗೊತ್ತಾದರೆ ಕಷ್ಟ. ಅಪ್ಪ-ಅಮ್ಮ ನಮ್ಮಿಬ್ಬರ ಮದುವೆಯ ಬಗ್ಗೆ ತುಂಬಾ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಅದು ಇದು ಅಂತ ಸುಳ್ಳು ಹೇಳಿ ಬಾಲ ಹೇಗೋ ದಿವ್ಯಾಳನ್ನು ಮ್ಯಾನೇಜ್ ಮಾಡುತ್ತಿದ್ದಾನೆ.

ದೇವರ ಮನೆಯಲ್ಲಿ ಈಡುಗಾಯಿ ಹೊಡೆದ ಸತ್ಯ!
ಕಾರ್ತಿಕ್ ಮನೆಯಲ್ಲಿ ಸತ್ಯ ಕೈಯಲ್ಲಿ ದೀಪ ಹಚ್ಚಿಸಿದ್ದಾರೆ. ಸ್ವಲ್ಪವೂ ನಯ ನಾಜೂಕು ತಿಳಿಯದ ಸತ್ಯ ದೀಪ ಹಚ್ಚುವ ರೀತಿಗೆ ಸೀತಾ ಕೆಂಡಾಮಂಡಲಗೊಂಡಿದ್ದಾಳೆ. ಹೇಗೆ ಪೂಜೆ ಮಾಡಬೇಕು ಎಂಬುದನ್ನು ಊರ್ಮಿಳಾ ಸನ್ನೆಯಲ್ಲೇ ತಿಳಿಸುತ್ತಿದ್ದಾಳೆ. ಇನ್ನು ತೆಂಗಿನ ಕಾಯಿಯನ್ನು ಹೊಡೆಯಲು ಹೇಳಿದಾಗ ಸತ್ಯ ಏಕಾಏಕಿ ಈಡುಗಾಯಿ ಹೊಡೆದಿದ್ದಾಳೆ. ಇದರ ಚಿಪ್ಪು ಮತ್ತೆ ಸುಹಾಸ್ ತಲೆಗೆ ಬಿದ್ದಿದ್ದು ರಕ್ತ ಬಂದಿದೆ. ಮಚ್ಚಿನಿಂದ ಹೊಡೆಯಬೇಕು ಎಂದು ಊರ್ಮಿಳಾ ಸನ್ನೆ ಮಾಡಿ ತೋರಿಸಿಕೊಟ್ಟಿದ್ದಾಳೆ. ಆದರೆ ಸತ್ಯ ಕೈಯಲ್ಲೇ ಹೊಡೆದಿದ್ದು, ಎಲ್ಲರಿಗೂ ಶಾಕ್ ಆಗಿದೆ. ಇನ್ನು ಈ ವಿಚಾರಕ್ಕೆ ಸೀತಾ ಬೈಯುತ್ತಾ ಇದ್ದಾಳೆ.


Click it and Unblock the Notifications











