ಬಾಲನ ಮೋಸದ ಬುಟ್ಟಿಯಲ್ಲಿ ದಿವ್ಯಾ: ಮುಂದೇನಾಗುತ್ತೆ ದಿವ್ಯಾ ಗತಿ?
ಸತ್ಯ ಧಾರಾವಾಹಿಯಲ್ಲಿ ದಿವ್ಯಾ, ಬಾಲನನ್ನು ಮದುವೆಯಾಗಿ ಆಯ್ತು. ಸತ್ಯ ಕಾರ್ತಿಕ್ ಮನೆಗೆ ಪ್ರವೇಶ ಮಾಡಿಯೂ ಆಯ್ತು. ಇನ್ನು ಮುಂದೆ ಧಾರಾವಾಹಿಯಲ್ಲಿ ಯಾವೆಲ್ಲಾ ಟ್ವಿಸ್ಟ್ ಗಳು ನಡೆಯುತ್ತವೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಸತ್ಯ ದೇವರಿಗೆ ಆರತಿ ಮಾಡಿದ್ದಾಳೆ. ಈ ಆರತಿಯನ್ನು ಎಲ್ಲರಿಗೂ ಕೊಟ್ಟಿದ್ದಾಳೆ. ಆದರೆ ಸೀತಾ ಆರತಿ ತೆಗೆದುಕೊಳ್ಳದೇ ಹಾಗೆಯೇ ಹೊರಟು ಹೋಗಿದ್ದಾಳೆ. ಹೆಜ್ಜೆ ಹೆಜ್ಜೆಗೂ ಸತ್ಯಾಗೆ ಬೇಸರವಾಗುತ್ತಿದೆ. ಆದರೂ ಎಲ್ಲವನ್ನೂ ಸಹಿಸಿಕೊಂಡು ಸತ್ಯ ಮೌನವಾಗಿದ್ದಾಳೆ.
ಗಿರಿಜಮ್ಮ ಹಾಗೂ ಜಾನಕಿ ಇಬ್ಬರೂ ಸತ್ಯಳನ್ನು ನೆನಪಿಸಿಕೊಂಡಿದ್ದಾರೆ. ಸತ್ಯ ಆ ಮನೆಯಲ್ಲಿ ಊಟ ಮಾಡಿದಳೋ.. ಇಲ್ಲ ಉಪವಾಸ ಇದ್ದಾಳೋ. ಈ ಮದುವೆ ಕಾರ್ತಿಕ್ ಹಾಗೂ ಸೀತಾ ಅವರಿಗೆ ಕೊಂಚವೂ ಇಷ್ಟವಿರಲಿಲ್ಲ. ಅಲ್ಲಿ ಸತ್ಯಾಗೆ ಯಾವ ರೀತಿ ಕಷ್ಟವಾಗುತ್ತಿದೆಯೋ ಎಂದು ಗಿರಿಜಮ್ಮ ಹೇಳುತ್ತಾಳೆ. ಇದಕ್ಕೆ ಜಾನಕಿ, ಹೌದು ಅತ್ತೆ, ಪಾಪ ಸತ್ಯ, ಒಂದು ದಿನವೂ ತನಗಾಗಿ ಎಂದು ಬದುಕಿದವಳಲ್ಲ. ಪ್ರತಿ ಕ್ಷಣವೂ ಈ ಮನೆಗೋಸ್ಕರ ದುಡಿದಿದ್ದಾಳೆ. ಯಾವಾಗಲೂ ನಮ್ಮ ಖುಷಿ, ಸಂತೋಷವನ್ನೇ ಬಯಸಿದವಳು ಎಂದು ಜಾನಕಿ ಹೇಳುತ್ತಾಳೆ.

ಸತ್ಯ ನೆನೆದು ಅಮ್ಮ, ಅಜ್ಜಿ ಬೇಸರ!
ನಾವು ಹೇಳಿದ್ವಿ ಅಂತ ಹಿಂದೆ ಮುಂದೆ ನೋಡದೆ ಕಾರ್ತಿಕ್ ಬಳೀ ತಾಳಿ ಕಟ್ಟಿಸಿಕೊಂಡಳು. ಅವಳು ಅಮುಲ್ ಬೇಬಿನಾ ಎಷ್ಟು ಪ್ರೀತಿಸುತ್ತಿದ್ದಳು. ನಾವೇ ಅವಳ ಆಸೆ, ಕನಸಿನ ಬಗ್ಗೆ ಏನೂ ಯೋಚಿಸಲಿಲ್ಲ. ದಿವ್ಯಾ ಮದುವೆ ಮನೆಯಿಂದ ಓಡಿ ಹೋದಳು ಎಂದ ತಕ್ಷಣ ಸತ್ಯಳನ್ನು ಮದುವೆಯಾಗುವುದಕ್ಕೆ ಹೇಳಿದೆವು. ಅವಳು ಏನೂ ಮಾತನಾಡದೆ ಮದುವೆಗೆ ಒಪ್ಪಿಕೊಂಡಳು. ಪಾಪ ಅಲ್ಲಿ ಒಬ್ಬಳೇ ಇನ್ನೂ ಏನೇನು ಕಷ್ಟ ಅನುಭವಿಸಬೇಕೋ ಎಂದು ಜಾನಕಿ ಹಾಗೂ ಗಿರಿಜಮ್ಮ ಮಾತನಾಡುತ್ತಾ ನೊಂದುಕೊಳ್ಳುತ್ತಾರೆ.

ದಿವ್ಯಾಗೆ ಹಿಡಿ ಶಾಪ ಹಾಕಿದ ತಾಯಿ!
ಇನ್ನು ಹೀಗೆ ಮಾತನಾಡುತ್ತಾ ದಿವ್ಯಾ ಎಲ್ಲಿಗೆ ಹೋದಳೋ. ಯಾರ ಜೊತೆಗೆ ಹೋದಳೊ ಎಂದು ಗಿರಿಜಮ್ಮ ಕೇಳುತ್ತಾಳೆ. ಅದಕ್ಕೆ ಜಾನಕಿ ಎಲ್ಲಿಗಾದರೂ ಹೋಗಲಿ ಬಿಡಿ ಅವಳಿಂದ ನಮ್ಮ ಮನೆಯ ಮಾನ ಮರ್ಯಾದೆ ಎಲ್ಲವೂ ಹೋಯ್ತು. ಮನೆಯಿಂದ ಆಚೆ ಹೋದರೆ ಸಾಕು ಎಲ್ಲರೂ ಒಂದೊಂದು ಮಾತನಾಡುತ್ತಾರೆ. ಕಾರ್ತಿಕ್ ಜೊತೆಗೆ ದಿವ್ಯಾ ಮದುವೆ ಮಾಡಲು ಸತ್ಯ ಎಷ್ಟು ಕಷ್ಟ ಪಟ್ಟಳು. ದಿವ್ಯಾ ಬಾಯಿಬಿಟ್ಟು ಮದುವೆ ಇಷ್ಟವಿಲ್ಲ ಎನ್ನಬಹುದಿತ್ತು. ಆದರೆ ಎಂಥಹ ಕೆಲಸ ಮಾಡಿದಳೂ ನೋಡಿ ಎಂದು ಬೈಯುತ್ತಾರೆ.

ನಾಟಕದ ಕಣ್ಣೀರು ಹಾಕಿದ ದಿವ್ಯಾ!
ಇನ್ನು ಬಾಲ ಹಾಗೂ ದಿವ್ಯಾ ರೂಮಿಗೆ ಹೋವಗುವಷ್ಟರಲ್ಲಿ ಮಾಧ್ಯಮದವರು ಬಂದಿದ್ದಾರೆ. ಬಾಲ ಹಣ ಕೊಟ್ಟು ಮಾಧ್ಯಮದವರನ್ನು ಕರೆಸಿದ್ದು, ಅವರೆಲ್ಲಾ ಆಕ್ಟಿಂಗ್ ಮಾಡುತ್ತಿದ್ದಾರೆ, ದಿವ್ಯಾ ಓವರ್ ಆಕ್ಟಿಂಗ್ ಮಾಡಿದ್ದಾಳೆ. ಮಾಧ್ಯಮದ ಮೂಲಕವೇ ತನಗೂ, ಬಾಲನಿಗೂ ಅವಸರದಲ್ಲಿ ಮದುವೆಯಾಗಿದೆ. ಕ್ಷಮಿಸಿ ಬಿಡಿ ಎಂದು ದಿವ್ಯಾ ತನ್ನ ಅತ್ತೆ ಮಾವನನ್ನು ಕೇಳಿಕೊಂಡಿದ್ದಾಳೆ. ಆದರೆ, ಬಾಲನಿಗೆ ಹಿಂದೂ-ಮುಂದು ಯಾರೂ ಇಲ್ಲ. ಕ್ಯಾಮರಾ ಎದುರು ಕಣ್ಣಿರಿಟ್ಟು ಕ್ಷಮೆ ಕೇಳಿದ್ದು, ತಮ್ಮ ಮದುವೆಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾಳೆ.

ರೂಮಿನಿಂದ ಆಚೆ ಹೋಗಲು ಕಾರ್ತಿಕ್ ಹಠ!
ಇತ್ತ ಸತ್ಯ ಕಾರ್ತಿಕ್ ರೂಮಿಗೆ ಬಂದಿದ್ದು, ಕಾರ್ತಿಕ್ ಹಾಗೂ ಸತ್ಯ ಜಗಳವಾಡುತ್ತಿದ್ದಾರೆ. ಸತ್ಯ ನಾನು ನೀವು ಒಂದೇ ರೂಮಿನಲ್ಲಿ ಇರಬೇಕು ಎಂದು ಹೇಳುತ್ತಿದ್ದರೆ, ಕಾರ್ತಿಕ್ ಇದು ನನ್ನ ರೂಮ್ ಅಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ಕಿರುಚಾಡುತ್ತಾನೆ. ಇದೇ ವೇಳೆಗೆ ರಾಮಚಂದ್ರ ರಾಯರು ಬಂದಿದ್ದು, ಇಬ್ಬರೂ ಶಾಕ್ ಆಗಿದ್ದಾರೆ.


Click it and Unblock the Notifications











