ಕಾರ್ತಿಕ್‌ಗೆ ಪ್ರೀತಿ ಪಾಠ ಮಾಡಿದ ಸತ್ಯ, ಬದಲಾಗುತ್ತಾ ಕಾರ್ತಿಕ್ ಮನಸ್ಸು?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿ ತಂಡ ಕಳೆದ ಕೆಲ ದಿನಗಳಿಂದ ರೆಸಾರ್ಟ್ ಒಂದರಲ್ಲಿ ಬೀಡು ಬಿಟ್ಟಿದ್ದು, ದಿವ್ಯಾ ಹಾಗೂ ಕಾರ್ತಿಕ್ ಮದುವೆ ಸಂಭ್ರಮ ಮನೆ ಮಾಡಿದೆ. ಆದರೆ ದಿವ್ಯಾ ಹಾಗೂ ಬಾಲ ಓಡಿ ಹೋಗಲು ಪ್ರಯತ್ನ ಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ತಿಕ್ ತನ್ನ ಫಸ್ಟ್ ಲವ್ ಹೇಗಾಗಿದ್ದು, ದಿವ್ಯಾಳನ್ನು ಎಲ್ಲಿ ನೋಡಿದ್ದು ಎಂಬುದನ್ನು ಹೇಳಿದ್ದಾನೆ.

ಇನ್ನು ಸತ್ಯ ಅವರ ಚಿಕ್ಕಪ್ಪನಿಗೆ ದಿವ್ಯಾಳ ಬಗ್ಗೆ ಎಲ್ಲಾ ಗೊತ್ತಾಗಿದೆ. ಈ ಬಾರಿಯೂ ದಿವ್ಯಾ ಹಾಗೂ ಬಾಲ ಓಡಿ ಹೋಗುತ್ತಾರೆ ಎಂದು ಲೆಕ್ಕಾಚಾರ ಮಾಡಿಕೊಂಡಿದ್ದಾನೆ. ಈ ವಿಚಾರವಾಗಿಯೇ, ಪತ್ನಿ ರಾಜಿ ಬಳಿ ಹೇಳುತ್ತಿದ್ದಾನೆ. ಆದರೆ, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ರಾಜಿ ಹಾಗೇನು ಆಗೋದಿಲ್ಲ. ನಾನೇ ದಿವ್ಯಾ ಪಕ್ಕದಲ್ಲಿ ಕೂತುಕೊಳ್ಳುತ್ತೇನೆ ಎಂದು ಹೇಳಿ ಹೊರಡುತ್ತಾಳೆ.

ಇನ್ನು ಇದೀಗ ಸತ್ಯ ವೇದಿಕೆ ಮೇಲೆ ಬಂದು ತನ್ನ ಫಸ್ಟ್ ಲವ್ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಕಾರ್ತಿಕ್ ನನ್ನು ನೋಡಿದ್ದು, ಅವನ ಮೇಲೆ ಪ್ರೀತಿ ಶುರುವಾಗಿದ್ದನ್ನು ಹೇಳಬೇಕಿದೆ. ಇವೆಲ್ಲದರ ಬಗ್ಗೆ ಎಲ್ಲರ ಎದುರು ಹೇಗೆ ಹೇಳುತ್ತಾಳೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ.

Sathya Tv Serial Written Update On May 3rd

ಸತ್ಯ ವೇದಿಕೆ ಮೇಲೆ ಹೋಗಿ ನಿಲ್ಲುತ್ತಿದ್ದಂತೆಯೇ ಸೀತಾ ಎದ್ದು ಹೊರಡುತ್ತಾಳೆ. ಸೀತಾಳ ಹಿಂದೆಯೇ ಊರ್ಮಿಳ ಹೋಗುತ್ತಾಳೆ. ಇತ್ತ ಸತ್ಯ, ನನ್ನ ಪ್ರಕಾರ ಫಸ್ಟ್ ಲವ್ ನಿಜವಾದ ಲವ್. ಅಲ್ಲಿ ನಿಷ್ಕಲ್ಮಷವಾದ ಎರಡು ಮನಸುಗಳಿರುತ್ತವೆ. ಮೊದಲ ಸಲ ಯಾರ ಮೇಲೆ ಪ್ರೀತಿಯಾಗುತ್ತೋ ಅವರ ಮೇಲೆ ಮತ್ತೆ ಮತ್ತೆ ಸಾವಿರ ಸಲ ಪ್ರೀತಿಯಾಗುತ್ತೆ. ಅದೇ ಪ್ರೀತಿಗಿರುವ ಶಕ್ತಿ. ಇವರ ಜೊತೆಗೆನೇ ಬದುಕಬೇಕು, ಮುದುಕಿಯಾಗಬೇಕು ಅನಿಸುತ್ತಲ್ಲ. ಅದೇ ನಿಜವಾದ ಪ್ರೀತಿ. ಮೊದಲನೇಯದು ನಿಜವಾದ ಪ್ರೀತಿ. ಅದೇ ಲಾಸ್ಟ್ ಲವ್ ಎಂದು ಹೇಳುತ್ತಾಳೆ.

ಈ ನಡುವೆ ಬಾಲ, ಕೀರ್ತನಾ ಹಾಗೂ ಸುಹಾಸ್ ಭೇಟಿಯಾಗುತ್ತಾರೆ. ತನ್ನ ಪ್ಲಾನ್ ಅನ್ನು ಹೇಳಿದ ಬಾಲ, ದಿವ್ಯಾಳನ್ನು ಕರೆದುಕೊಂಡು ಹೋಗಲು ನಾಳೆಯ ಪ್ರೋಗ್ರಾಂ ಬಗ್ಗೆ ನನಗೆ ಮಾಹಿತಿ ಬೇಕು ಎಂದಾಗ, ಸುಹಾಸ್ ವಿವರಿಸುತ್ತಾನೆ.

Sathya Tv Serial Written Update On May 3rd

ಅಲ್ಲಿ ಸತ್ಯ ತನ್ನ ಮೊದಲ ಪ್ರೇಮದ ಕಥೆಯನ್ನು ಹೇಳುತ್ತಿದ್ದರೆ. ಇಲ್ಲಿ ಊರ್ಮಿಳ ಸೀತಾಳನ್ನು ಸಮಾಧಾನ ಮಾಡಿ ಕರೆದುಕೊಂಡು ಬರಲು ಪ್ರಯತ್ನಿಸುತ್ತಾಳೆ. ಆದರೆ ಸೀತಾ ಇದಕ್ಕೆ ಒಪ್ಪುವುದಿಲ್ಲ. ಸತ್ಯ ಮಾತು ಮುಗಿದ ಮೇಲೆ ಬರುತ್ತೀನಿ ಎಂದು ಹೇಳುತ್ತಾಳೆ. ಇದೇ ವೇಳೆಗೆ ರಿತು ಈ ಮಾತುಗಳೆಲ್ಲಾ ನಿಮ್ಮ ಫಸ್ಟ್ ಲವ್ ಬಗ್ಗೇನಾ ಎಂದು ಕೇಳುತ್ತಾಳೆ. ಇದಕ್ಕೆ ಸತ್ಯ ಇಲ್ಲ. ಗಂಡು ಹುಡುಗಿಯನ್ನು ಯಾರೂ ಪ್ರೀತಿಸುವುದಿಲ್ಲ. ಜಸ್ಟ್ ಫ್ರೆಂಡ್ ಎಂದು ಹೇಳುತ್ತಾರೆ. ನಮ್ಮ ಸ್ಟೈಲ್ ನೋಡಿ ರೌಡಿ ಎಂಬ ಪಟ್ಟವನ್ನೂ ಕಟ್ಟುತ್ತಾರೆ.

ಹುಡುಗರಿಗೆ ಹುಡುಗಿಯರು ಎಂದರೆ, ಸೀರೆಯುಟ್ಟು, ಮಲ್ಲಿಗೆ ಮುಡಿದಿರಬೇಕು. ಮುಂಗುರಳು ನೀಲಕೇಶ ಇರಲೇಬೇಕು. ಹೀಗಿರುವಾಗ ಬಾಯ್ ಕಟ್ ಮಾಡಿಸಿಕೊಂಡವರನ್ನು ಪ್ರೀತಿಸುತ್ತಾರೆ ಎಂಬುದು ಶುದ್ಧ ಸುಳ್ಳು. ಇನ್ನು ನನ್ನಂಥವರಿಗೆ ಫಸ್ಟ್ ಲವ್ ಆದರೂ ಅದು ಒನ್ ಸೈಡ್ ಲವ್ ಅಷ್ಟೇ. ಮನಸ್ಸನ್ನು ಯಾರೂ ನೋಡುವುದಿಲ್ಲ. ರೂಪವನ್ನಷ್ಟೇ ನೋಡುತ್ತಾರೆ. ಯಾರಿಗೂ ನನ್ನಂಥವರ ಮೇಲೆ ಪ್ರೀತಿ ಹುಟ್ಟೋದಿಲ್ಲ ಅಂತೆಲ್ಲಾ ಬೇಸರದಲ್ಲಿ ಮಾತನಾಡುತ್ತಾಳೆ. ಆಗ ರಾಮಚಂದ್ರ ನಿಮಗೂ ಒಬ್ಬನು ಅಂತ ಇರುತ್ತಾನೆ. ಅವನು ಸಿಕ್ಕೇ ಸಿಗುತ್ತಾನೆ ಎಂದು ಸಮಾಧಾನ ಮಾಡುತ್ತಾನೆ. ಈ ಎಲ್ಲಾ ಮಾತುಗಳನ್ನು ಸೀತಾ, ಊರ್ಮಿಳ ಕೂಡ ಕೇಳಿಸಿಕೊಳ್ಳುತ್ತಿದ್ದಾರೆ. ಮುಂದೆ ಏನಾಗುತ್ತೆ.? ಅಮುಲ್ ಬೇಬಿ ಸತ್ಯಳಾನ್ನು ಒಪ್ಪಿಕೊಂಡು ಮದುವೆಯಾಗುತ್ತಾನಾ.? ಕಾದು ನೋಡಬೇಕು.

More from Filmibeat

English summary
Sathya Tv Serial Written Update On May 3rd, Major Twist,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X