ಮದುವೆ ಮನೆಯಿಂದ ದಿವ್ಯಾ ಎಸ್ಕೇಪ್, ಸತ್ಯಾಗೆ ಟೆನ್ಷನ್!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಹಲವು ದಿನಗಳ ಬಳಿಕ ಈಗ ದಿವ್ಯಾ ಮತ್ತು ಕಾರ್ತಿಕ್ ಮದುವೆ ಮುಹೂರ್ತದ ದಿನ ಬಂದಾಗಿದೆ. ಸತ್ಯ ಮದುವೆ ಮನೆ ತುಂಬಾ ಓಡಾಡಿಕೊಂಡು ನಗು ನಗುತಾ ಕೆಲಸ ಮಾಡುತ್ತಿದ್ದಾಳೆ. ಅಕ್ಕನ ಮದುವೆ ಅದ್ದೂರಿಯಾಗಿ, ಯಾವುದೇ ತೊಂದರೆ ಇಲ್ಲದಂತೆ ನಡೆಯಲಿ ಎಂದು ಎಚ್ಚರ ವಹಿಸಿದ್ದಾಳೆ.

ಕಾರ್ತಿಕ್ ಹಸೆ ಮಣೆಗೆ ಬಂದು ಕೂತಿದ್ದಾನೆ. ಖುಷಿಯಾಗಿ ತನ್ನ ಮದುವೆಯ ಕ್ಷಣಗಳನ್ನು ಅನುಭವಿಸುತ್ತಿದ್ದಾನೆ. ಆದರೆ ಇದೇ ಸಂದರ್ಭದಲ್ಲಿ ರಾಮಚಂದ್ರ ರಾಯರು ಚಿಂತೆಯಲ್ಲಿ ಮುಳುಗಿದ್ದಾರೆ. ಸತ್ಯಳನ್ನು ಮನೆಗೆ ಸೊಸೆ ಮಾಡಿಕೊಳ್ಳಬೇಕಿತ್ತು. ಆದರೆ ದಿವ್ಯಾ ಮನೆಗೆ ಬರುತ್ತಿದ್ದಾಳೆ. ಏನು ಮಾಡುವುದು.? ಎಂದು ಯೋಚನೆಗೆ ಇಳಿದಿದ್ದಾರೆ.

ಕಾರ್ತಿಕ್ ಜಾತಕದ ಜೊತೆ ಹೊಂದಾಣಿಕೆ ಆಗಿರುವುದು ಸತ್ಯಳ ಜಾತಕ. ಸ್ವಾಮೀಜಿಗಳು ಹೇಳಿರೋದು ಅದೇ. ಆದರೆ ದಿವ್ಯಾ ಜೊತೆಗೆ ಕಾರ್ತಿಕ್ ಮದುವೆ ಮಾಡುತ್ತಿದ್ದೇವೆ, ದಿವ್ಯಾಳನ್ನ ಮದುವೆಯಾದರೆ ಕಾರ್ತಿಕ್ ಚೆನ್ನಾಗಿರುತ್ತಾನಾ.? ಸಾವಿರ ಸುಳ್ಳನ್ನು ಹೇಳಿ ಮದುವೆ ಮಾಡಬೇಕು ಎನ್ನುತ್ತಾರೆ. ಈಗ ಎಲ್ಲಾ ಗೊತ್ತಿದ್ದು, ದಿವ್ಯಾ ಮದುವೆ ಮಾಡಿಸಿದರೆ ತೊಂದರೆ ಎದುರಾಗುತ್ತಾ ಅನ್ನೋ ಚಿಂತೆಯಲ್ಲಿ ರಾಮಚಂದ್ರರಾಯರು ಮುಳುಗಿದ್ದಾರೆ.

ಸತ್ಯಳನ್ನು ದುರಾದೃಷ್ಟವಂತೆ ಎಂದ ಕಾರ್ತಿಕ್!

ಸತ್ಯಳನ್ನು ದುರಾದೃಷ್ಟವಂತೆ ಎಂದ ಕಾರ್ತಿಕ್!

ಕಾರ್ತಿಕ್ ಹಸೆ ಮಣೆ ಮೇಲೆ ಇರುವುದನ್ನು ನೋಡಿ ಸತ್ಯ, ಸೂಪರ್ ಆಗಿ ಕಾಣುತ್ತಿದ್ದೀಯಾ ಎಂದು ಸನ್ನೆ ಮಾಡುತ್ತಾಳೆ. ಆಗ ಸುಮ್ಮನಿರದ ಕಾರ್ತಿಕ್ ಸತ್ಯಳನ್ನು ರೇಗಿಸಲು ಮುಂದಾಗುತ್ತಾನೆ. ಕಾರ್ತಿಕ್ ನಿನ್ನ ಹಣೆಯಲ್ಲಿ ನನ್ನ ಪಕ್ಕದಲ್ಲಿ ಕೂತು ತಾಳಿ ಕಟ್ಟಿಸಿಕೊಳ್ಳುವ ಅದೃಷ್ಟವಿಲ್ಲ. ಎಂದು ಕಾರ್ತಿಕ್ ಸನ್ನೆಯಲ್ಲಿ ಹೇಳುತ್ತಾನೆ. ಇದನ್ನು ಗಮನಿಸಿದ ಸತ್ಯ ಬೇಸರಗೊಳ್ಳುತ್ತಾಳೆ. ಕಣ್ಣು ತುಂಬಾ ನೀರು ತುಂಬಿಕೊಳ್ಳುತ್ತಾಳೆ. ಬೇಸರದಲ್ಲೇ ಹೊರ ಬರುತ್ತಾಳೆ. ಇನ್ನು ಮದುವೆ ಮನೆಯಲ್ಲಿ ಎಲ್ಲರೂ ಚೆಂದವಾಗಿ ರೆಡಿಯಾಗಿ ಓಡಾಡುತ್ತಿರುತ್ತಾರೆ.

ಸತ್ಯ ದಾರಿ ತಪ್ಪಿಸಿದ ಬಾಲ!

ಸತ್ಯ ದಾರಿ ತಪ್ಪಿಸಿದ ಬಾಲ!

ಬಾಲ, ದಿವ್ಯಾಳನ್ನು ಕರೆದುಕೊಂಡು ಹೋಗಲು ಪ್ಲಾನ್ ಮಾಡಿಕೊಂಡಿದ್ದಾನೆ. ಅದಕ್ಕಾಗಿ ಕೀರ್ತನಾಳಿಗೆ ದಿವ್ಯಾ ರೂಮ್‌ನಲ್ಲಿ ಯಾರೂ ಇರದಂತೆ ನೋಡಿಕೊಳ್ಳುವಂತೆ ಹೇಳಿದ್ದಾನೆ. ಸತ್ಯಾಳ ದಾರಿ ತಪ್ಪಿಸಲು ಯಾರೋ ಆಕೆಯನ್ನು ಕರೆದಿದ್ದಾರೆ ಎಂದು ಹುಡುಗನ ಕೈಯಲ್ಲಿ ಹೇಳಿ ಕಳಿಹಿಸುತ್ತಾನೆ. ಸತ್ಯ, ದಿವ್ಯಾ ರೂಮಿಗೆ ಹೋಗುವ ಬದಲು ಸೀದಾ ಗೇಟ್ ಬಳಿ ಬಂದು ಹುಡುಕಾಡುತ್ತಾಳೆ. ಆದರೆ ಸತ್ಯಾಗೆ ಯಾರೂ ಸಿಗುವುದಿಲ್ಲ. ಅದೇ ಅನುಮಾನದಲ್ಲೇ ಸತ್ಯ ಸೀದಾ ದಿವ್ಯಾ ರೂಮಿಗೆ ಹೋಗುತ್ತಾಳೆ. ಅಲ್ಲಿ ಗಿರಿಜಮ್ಮ ನನ್ನ ಮಂಟಪದ ಹತ್ತಿರ ಕರೆದುಕೊಂಡು ಹೋಗು ಎಂದು ಬಲವಂತವಾಗಿ ಸತ್ಯಳನ್ನ ಕರೆದುಕೊಂಡು ಹೋಗುತ್ತಾರೆ.

ಕಾರ್ತಿಕ್, ಸತ್ಯ ಮದುವೆಯಾಗಲಿ ಎಂದ ಸ್ನೇಹಿತರು!

ಕಾರ್ತಿಕ್, ಸತ್ಯ ಮದುವೆಯಾಗಲಿ ಎಂದ ಸ್ನೇಹಿತರು!

ಕಾರ್ತಿಕ್ ಹಾಗೂ ಸತ್ಯ ಒಬ್ಬರನ್ನೊಬ್ಬರು ಪ್ರೀತಿಸಿದ್ದರೂ, ಎಂದಿಗೂ ಇಬ್ಬರೂ ಹೇಳಿಕೊಂಡಿರಲಿಲ್ಲ. ಆದರೆ ಸತ್ಯ ಕಾರ್ತಿಕ್‌ಗೆ ತನ್ನ ಪ್ರೀತಿ ನಿವೇದನೆಯನ್ನು ಮಾಡಿಕೊಂಡಿದ್ದಳು. ಕಾರ್ತಿಕ್ ಪ್ರೀತಿಸಿದ್ದು ಗೊತ್ತಿದ್ದರೂ ಅಕ್ಕನಿಗಾಗಿ ಪ್ರಿತಿಯನ್ನು ತ್ಯಾಗ ಮಾಡುತ್ತಿದ್ದಾಳೆ. ಬಾಲನ ಜೊತೆ ದಿವ್ಯಾ ಓಡಿ ಹೋಗಬಾರದು ಎಂದು ಹುಡುಗರನ್ನು ಕಾವಲು ಕಾಯಲು ಹೇಳಿದ್ದಾಳೆ. ಇತ್ತ ಹುಡುಗರಿಗೆ ಹೇಗಾದರೂ ಮಾಡಿ ಸತ್ಯ ಹಾಗೂ ಕಾರ್ತಿಕ್ ಮದುವೆ ಮಾಡಿಸಬೇಕು ಎಂದು ಒದ್ದಾಡುತ್ತಿದ್ದಾರೆ. ಬಾಲ ಜೈಲಿನಿಂದ ಹೊರಗೆ ಬಂದಿರುವ ವಿಚಾರವನ್ನು ಸತ್ಯಳಿಂದ ಹುಡುಗರು ಮುಚ್ಚಿಟ್ಟಿದ್ದಾರೆ. ದಿವ್ಯಾ ಓಡಿ ಹೋಗಲಿ ಎಂದು ರೂಮಿನಿಂದ ದೂರ ಬಂದಿದ್ದಾರೆ. ದಿವ್ಯಾ ರೂಮಿನಲ್ಲಿ ಇಲ್ಲದೇ ಇರುವುದನ್ನು ನೋಡಿಯೂ ತಮಗೇನು ಗೊತ್ತೇ ಇಲ್ಲ ಎಂಬಂತೆ ಸೈಲೆಂಟ್ ಆಗಿದ್ದಾರೆ.

ದಿವ್ಯಾ ಕಾಣುತ್ತಿಲ್ಲ ಎಂದು ಕಿರುಚಿದ ಕಾರ್ತಿಕ್ ಅಕ್ಕ!

ದಿವ್ಯಾ ಕಾಣುತ್ತಿಲ್ಲ ಎಂದು ಕಿರುಚಿದ ಕಾರ್ತಿಕ್ ಅಕ್ಕ!

ದಿವ್ಯಾ ಬಾಲಾ ಜೊತೆಗೆ ಓಡಿ ಹೋಗಿದ್ದಾಳೆ, ಎಲ್ಲೂ ಕಾಣುತ್ತಾ ಇಲ್ಲ ಎಂದು ಕಿರುಚುತ್ತಾ ಬರುತ್ತಾಳೆ. ಈ ವಿಚಾರವನ್ನು ಮುಂದಿನ ಸಂಚಿಕೆಯಲ್ಲಿ ತೋರಿಸಲಾಗುವುದು. ಆದರೆ ಈ ವಿಚಾರ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಹಾಗಾದರೆ ಈ ಬಾರಿಯೂ ಮದುವೆ ನಿಂತು ಹೋಗುತ್ತಾ.? ಇಲ್ಲ ಸತ್ಯಳ ಜೊತೆಗೆ ಕಾರ್ತಿಕ್ ಮದುವೆಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Sathya Tv Serial Written Update On May 9th, major Twist,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X