Sathya: ಸತ್ಯ ಕನಸಿಗೆ ಅತ್ತೆ ಅಡ್ಡಗಾಲು; ದಿವ್ಯಾ ಆರ್ಭಟಕ್ಕೆ ಬ್ರೇಕ್ ಹಾಕುವವರು ಯಾರು?

By Poorva

ಸೀತಾಗೆ ತನ್ನ ಸೊಸೆ ಸತ್ಯಳನ್ನು ಕಂಡರೆ ಬಹಳ ಅಚ್ಚುಮೆಚ್ಚು. ಸತ್ಯ ಯಾವುದೇ ಕೆಲಸ ಮಾಡಿದರು ಅದರಲ್ಲಿ ಏನಾದರೂ ಒಂದು ಅರ್ಥ ಇರುತ್ತದೆ ಎಂದು ಸೀತಮ್ಮ ನಂಬಿಕೊಂಡಿರುತ್ತಾಳೆ. ಅದೇ ರೀತಿ ಸತ್ಯ ಕೂಡ ಸೀತಮ್ಮನ ನಂಬಿಕೆಯನ್ನು ಯಾವತ್ತೂ ಕೂಡ ಹುಸಿ ಮಾಡಿಲ್ಲ. ಇದೀಗ ಸತ್ಯಗೆ ಪೊಲೀಸ್ ಕೆಲಸ ಸಿಕ್ಕಿದೆ.

ಸೀತಾ ಗುರುಗಳ ಮಾತುಗಳನ್ನ ಕೇಳಿ ಬಹಳ ಆತಂಕಕ್ಕೆ ಒಳಗಾಗಿದ್ದಾಳೆ. ಹೌದು ನನ್ನ ಸೊಸೆ ಪೊಲೀಸ್ ಕೆಲಸಕ್ಕೆ ಹೋದರೆ ಆಕೆಯ ಜೀವಕ್ಕೆ ಅಥವಾ ಕುಟುಂಬಕ್ಕೆ ತೊಂದರೆಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸೀತಮ್ಮ, ಸತ್ಯ ಕೆಲಸಕ್ಕೆ ಹೋಗುವುದು ಬೇಡ ಎಂದು ಖಡಕ್ಕಾಗಿ ಹೇಳುತ್ತಾಳೆ. ಇದನ್ನು ಕೇಳಿದ ಸತ್ಯಗೆ ಬಹಳ ಬೇಸರ ಆಗುತ್ತದೆ. ಆದರೆ ಆಕೆ ಮಾತ್ರ ಅತ್ತೆಯ ಬಳಿ ಬಂದು ನಾನು ಪೊಲೀಸ್ ಕೆಲಸಕ್ಕೆ ಹೋಗುತ್ತೇನೆ ಎಂದು ಪರ್ಮಿಷನ್ ಕೇಳುತ್ತಾಳೆ.

Satya Kannada serial 09th February written update

ಗುರುಗಳು ಹೇಳಿದ ಮಾತನ್ನು ಧಿಕ್ಕರಿಸಿ ಹೋಗುವುದು ಸರಿ ಅಲ್ಲ. ಆದ ಕಾರಣ ನೀನು ಕೆಲಸಕ್ಕೆ ಹೋಗುವುದು ಬೇಡ ಎಂದು ಸೀತಾ ಹೇಳುತ್ತಾಳೆ. ಸತ್ಯ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾಳೆ. ಇದನ್ನೆಲ್ಲ ನೋಡಿದ ಕಾರ್ತಿಕ್, ಸತ್ಯ ಹಾಗೂ ಅಮ್ಮನ ರೀತಿಯ ಜೋಡಿ ಇರುವುದಕ್ಕೆ ಸಾಧ್ಯವಿಲ್ಲ. ಅತ್ತೆಗೆ ನೋವು ಆಗಬಾರದು ಎಂದು ಸೊಸೆ, ಸೊಸೆಗೆ ಏನು ಆಗಬಾರದು ಎಂಬ ಕಾಳಜಿ ಅತ್ತೆಗೆ, ಇವರಿಬ್ಬರೂ ಹೀಗೆಯೇ ಇರಲಿ ಎನ್ನುತ್ತಾನೆ. ಇದನ್ನು ಕೇಳಿದ ಸೀತಾ ಖುಷಿ ಆಗುತ್ತಾಳೆ.

ಅತ್ತೆ ಮಾತಿಗೆ ಸಪ್ಪಗಾದ ಸತ್ಯ

ಇನ್ನು ಸತ್ಯಗೆ ಮಾತ್ರ ತನ್ನ ಕನಸು ಕನಸಾಗಿಯೇ ಉಳಿದು ಬಿಟ್ಟಿತು ಎನ್ನುವ ಕೊರಗು ಇರುತ್ತದೆ. ಇತ್ತ ಬಾಲ ಹಾಗೂ ದಿವ್ಯ ಬದುಕಿನಲ್ಲಿ ಬಿರುಕು ಮೂಡಿದೆ. ಮನೆ ಬಿಟ್ಟು ಹೋಗಿದ್ದ ದಿವ್ಯಾ ಇದೀಗ ಮನೆಗೆ ವಾಪಸ್ ಬಂದಿದ್ದಾಳೆ. ದಿವ್ಯಳ ತಾಯಿ ಮನೆಗೆ ಬರಬೇಡ ಎಂದಾಗ ಮನೆಯನ್ನೇ ಎರಡು ಭಾಗ ಮಾಡಿದ್ದಾಳೆ. ದಿವ್ಯಾ ದುರಹಂಕಾರಕ್ಕೆ ಇದೀಗ ಬಾಲ ಜೀವನ ಹಾಳಾಗಿದೆ. ನನಗೆ ಈ ಮನೆಯಲ್ಲಿ ಇರುವ ಹಕ್ಕಿದೆ. ನಿನ್ನ ಮನೆ ಅಲ್ಲ, ಇದು ನನ್ನ ಅಪ್ಪ ಕಟ್ಟಿಸಿರುವ ಮನೆ ಎಂದು ಅಮ್ಮನಿಗೆ ಹೇಳುತ್ತಾಳೆ ದಿವ್ಯ.

ತಾಯಿ ಮಾತಿಗೆ ಎದುರಾಡಿದ ದಿವ್ಯ

ದಿವ್ಯಾಳ ಮಾತು ಕೇಳಿದ ಗಿರಿಜಮ್ಮನಿಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ನನ್ನ ಮನೆಗೆ ಆಗುವವಳೂ ಸತ್ಯ ಮಾತ್ರ. ಅದು ಎಂದಿಗೂ ಇಂದಿಗೂ ಕೂಡ. ಈಕೆಯ ಮೇಲೆ ಈಗೀಗ ಭರವಸೆಯೇ ಹೊರಟು ಹೋಗಿದೆ ಎಂದು ಬಹಳ ದುಃಖದಿಂದ ಹೇಳುತ್ತಾಳೆ. ಇದನ್ನು ಕೇಳಿದ ಬಾಲನಿಗೆ ಬೇಸರ ಆಗುತ್ತದೆ. ಬಾಲನಿಗೆ ಸ್ವಲ್ಪವೂ ಮಾತನಾಡಲು ಬಿಡದ ದಿವ್ಯಾ ಜೋರು ಮಾಡುತ್ತಾಳೆ..

Satya Kannada serial 09th February written update

ಬಾಲನ ಮೇಲೆ ಕೋಪಿಸಿಕೊಂಡ ದಿವ್ಯ

ಇದೆಲ್ಲ ಆಗಿರುವುದು ನಿನ್ನಿಂದಲೇ. ನೀನೇ ಹೀಗೆ ಮಾಡಿರುವುದು. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಕೊಂಚ ಜೋರಾಗಿಯೇ ದಿವ್ಯಾ ಹೇಳಿ ಬಿರುಗಾಳಿಯಂತೆ ಮನೆಯ ಒಳಗೆ ಹೋಗುತ್ತಾಳೆ. ಬಾಲಗೆ ಮಾತ್ರ ದಿವ್ಯಾ ಮಾಡಿರುವುದು ಚೂರು ಸರಿ ಕಾಣಿಸುತ್ತಿಲ್ಲ. ಆತನಿಗೆ ಗಿರಿಜಮ್ಮ ಬೇರೆ ಹುಡುಗಿಯ ಜೊತೆ ಮದುವೆ ಮಾಡಲು ನಿರ್ಧಾರ ಮಾಡಿದ್ದರು. ಇದೀಗ ಆ ಮದುವೆಯನ್ನು ದಿವ್ಯಾ ಬಂದು ಹಾಳು ಮಾಡಿದ್ದಾಳೆ. ಬಾಲ ಪ್ರೀತಿಗೆ ದಿವ್ಯಾ ಕೊಳ್ಳಿ ಇಟ್ಟಾಯಿತು. ಮುಂದೇನು ಮಾಡುತ್ತಾಳೆ ಕಾದು ನೋಡಬೇಕಿದೆ.

More from Filmibeat

English summary
Satya kannada serial latest episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X