Satya serial: ಅತ್ತೆಗಾಗಿ ತ್ಯಾಗ ಮಾಡಿದ ಸತ್ಯ: ಹೆಂಡತಿ ಆಸೆ ಈಡೇರಿಸುತ್ತಾನಾ ಕಾರ್ತಿಕ್?
ಸತ್ಯ ಧಾರಾವಾಹಿ ದಿನೇ ದಿನೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಹೌದು ಇದೀಗ ಸತ್ಯ, ಸೀತಾ ಮಾತಿಗೆ ಒಪ್ಪಿಗೆ ನೀಡಿದ್ದಾಳೆ. ತನ್ನ ಅತ್ತೆ ನನ್ನ ಒಳ್ಳೆಯದಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾಳೆ. ಆಕೆ ಖುಷಿಯಾಗಿರಬೇಕು ಎಂದು ತನ್ನ ಆಸೆಯನ್ನೇ ತೊರೆದುಬಿಡುತ್ತಾಳೆ.
ಆಸೆ ತೊರೆದರೂ ಸತ್ಯ ಮನದಲ್ಲಿ ಬೇಸರವಿದೆ. ನನ್ನ ತಂದೆಗೆ ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ ಎನ್ನುವ ಬೇಸರ, ಒಂದು ಕಡೆ ಅತ್ತೆಯ ಮಾತಿನ ಪ್ರಕಾರ ನಡೆದುಕೊಳ್ಳುವ ಪರಿಸ್ಥಿತಿ ಇಬ್ಬರ ಮಾತನ್ನ ಹೇಗೆ ತೆಗೆದು ಹಾಕಲಿ ಎನ್ನುವುದೇ ಸತ್ಯ ಚಿಂತೆಗೆ ಕಾರಣ. ಆದ್ದರಿಂದ ಸತ್ಯ ಮನದಲ್ಲಿ ನೋವು ತುಂಬಿಕೊಂಡಿದ್ದರು, ಅದು ಯಾವುದನ್ನು ಹೇಳಿಕೊಳ್ಳದೇ ಸುಮ್ಮನಿರುತ್ತಾಳೆ.

ಇನ್ನು ಸೀತಾ ಮಾತ್ರ ಸತ್ಯ ಮಾತಿನಿಂದ ಬಹಳ ಖುಷಿಪಟ್ಟಿದ್ದಾಳೆ. ಸೀತಾಗೆ ಸತ್ಯ ಪೊಲೀಸಾದರೆ ಆಕೆಗೆ ಅಪಾಯವಿದೆ ಎಂದೆಲ್ಲ ಮನದಲ್ಲಿ ಅಂದುಕೊಂಡು ಕೋಟೆ ಮನೆಯ ಸೊಸೆ ಯಾವತ್ತು ಪೊಲೀಸ್ ಆಗುವುದು ಬೇಡ ಎಂದು ಹೇಳುತ್ತಾಳೆ. ಹಾಗೆ ಕೋಟೆ ಮನೆಗೆ ಸೊಸೆ ಪೊಲೀಸ್ ಆಗುವ ಅಗತ್ಯ ಇಲ್ಲ, ಸೊಸೆ ಸೊಸೆಯಾಗಿದ್ದರೆ ಚೆನ್ನ ಎಂದು ಸೀತಾ ಎಲ್ಲರ ಜೊತೆ ಕೂಡ ಕೂಗಾಡುತ್ತಿದ್ದಳು.
ಅತ್ತೆಯ ಮಾತಿನ ಪ್ರಕಾರ ನಡೆದುಕೊಂಡ ಸತ್ಯ
ಆಕೆಯ ಮನವೊಲಿಸಲು ಯಾರ ಕೈಯಿಂದಲೂ ಆಗುವುದಿಲ್ಲ. ಕೊನೆಗೆ ಸತ್ಯ ನಾನು ಪೋಲಿಸ್ ಆಗುವುದಿಲ್ಲ ನಿಮ್ಮ ಇಷ್ಟದ ಪ್ರಕಾರ ಯಾವತ್ತೂ ನಾನು ನಡೆದುಕೊಳ್ಳುತ್ತೇನೆ, ಹಾಗೆಯೇ ನೀವು ನನ್ನನ್ನು ಸೊಸೆ ಎಂದು ಒಪ್ಪಿಕೊಂಡಿದೆ ದೊಡ್ಡದು ಎನ್ನುತ್ತಾಳೆ. ಇನ್ನು ಸತ್ಯ ಮಾತ್ರ ಒಳಗೊಳಗೇ ಕುಗ್ಗಿ ಹೋಗುತ್ತಾಳೆ. ಆಸೆ ಪಟ್ಟಿದ್ದು ಯಾವತ್ತೂ ನನ್ನ ಕೈ ಸೇರುವುದು ಇಲ್ಲ ಎಂದುಕೊಂಡು ಇರುತ್ತಾಳೆ.
ದಿವ್ಯಗೆ ಪಾಠ ಕಲಿಸಿದ ಬಾಲ
ಇತ್ತ ಬಾಲ ಮಾತ್ರ ದಿವ್ಯಗೆ ಬಹಳ ಒಳ್ಳೆಯ ಪಾಠ ಕಲಿಸಿದ್ದಾನೆ. ತನ್ನ ಅಂಗಡಿಯನ್ನೇ ಸುಟ್ಟು ಹಾಕಲು ಹೊರಟಿದ್ದ ದಿವ್ಯಾಗೆ ಇದೀಗ ಬಾಲ ಬಿಸಿ ಮುಟ್ಟಿಸಿದ್ದಾನೆ. ಆದರೂ ಕೂಡ ಬಾಲನ ಪ್ರೀತಿಗೆ ಮಣಿಯದ ದಿವ್ಯಾ ಮುಂದೆ ಏನು ಮಾಡುತ್ತಾಳೆ ನೋಡಬೇಕು. ಇನ್ನು ರಾಮಚಂದ್ರ ರಾಯರು -ಸೀತಾ ಒಂದು ಆಟವನ್ನು ಆಡುತ್ತಿರುತ್ತಾರೆ. ಅಲ್ಲಿಗೆ ಬಂದ ಊರ್ಮಿಳ ಇವತ್ತು ಯಾವ ತಿಂಡಿ ಮಾಡಲಿ ಎಂದು ಕೇಳುತ್ತಾಳೆ.

ಸಂತಸದಲ್ಲಿ ಇರುವ ಸೀತಾ
ಆಗ ಸೀತಾ ಬೆಳಗಿನ ಉಪಹಾರದ ಬಗ್ಗೆ ಮೆನು ಹೇಳುತ್ತಿರುವಾಗ ರಾಮಚಂದ್ರ ರಾಯರು ಕ್ಯಾರೆಟ್ ಹಲ್ವಾ ನನಗೂ ಮಾಡಿ ಎನ್ನುತ್ತಾನೆ. ಕ್ಯಾರೆಟ್ ಹಲ್ವಾ ನಮಗೋಸ್ಕರ ಮಾಡುವುದು ನಿಮಗೆ ಮಾಡುವುದಿಲ್ಲ ನೀವು ತಿನ್ನುವುದು ಬೇಡ ನಿಮಗೆ ಡಯಾಬಿಟಿಸಿದೆ ಎಂದು ಸೀತಾ ಹೇಳುತ್ತಾಳೆ. ಇದನ್ನು ಕೇಳಿದ ರಾಮಚಂದ್ರ ರಾಯರಿಗೆ ಅಯ್ಯೋ ಈ ಡಯಬಿಟೀಸ್ ಕಂಡು ಹಿಡಿದವರು ಯಾರು ಎಂದೆಲ್ಲ ಗೊಣಗುತ್ತಾರೆ.
ಬಾಡಿದ ಸತ್ಯ ಮುಖ ನೋಡಿ ಕಾರ್ತಿಕ್ ಬೇಸರ
ಊರ್ಮಿಳಾ ಜೊತೆ ಪದ್ಮ ಕೂಡ ತಿಂಡಿ ಮಾಡಲು ಭಾಗಿಯಾಗುತ್ತಾಳೆ. ಇದನ್ನೆಲ್ಲಾ ನೋಡಿದ ಸತ್ಯ ಮೆತ್ತಗೆ ಅಲ್ಲಿಂದ ಹೋಗುತ್ತಾಳೆ. ಸತ್ಯಳನ್ನ ನೋಡಿದ ಕಾರ್ತಿಕ್ ಬಹಳ ಬೇಸರ ಮಾಡಿಕೊಂಡಿರುತ್ತಾನೆ. ಮನೆಯ ಸೊಸೆ ಎಂದರೆ ಮನೆ ಕೆಲಸ ಮಾಡಿಕೊಂಡು ಬಿದ್ದಿರಬೇಕಾ ಅಥವಾ ಆಕೆಯ ಕನಸನ್ನ ಬಲಿಕೊಟ್ಟು ಮನೆಯವರಿಗಾಗಿ ಕೆಲಸ ಮಾಡಬೇಕಾ ಅಥವಾ ಹೆಣ್ಣು ಮಕ್ಕಳು ಅವರ ಆಸೆಯನ್ನು ಈಡೇರಿಸಿಕೊಳ್ಳಬೇಕಾ ಎಂದು ಕಾರ್ತಿಕ್ ಯೋಚನೆ ಮಾಡುತ್ತಾನೆ. ಬಳಿಕ ಅಮ್ಮನ ವಿರುದ್ಧ ಹೋಗಿ ಹೆಂಡತಿಯ ಆಸೆಯನ್ನು ಈಡೇರಿಸಲು ಮುಂದಾಗುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











