ಕಾರ್ತಿಕ್ ಮನಸು ಕೆಡಿಸುತ್ತಾನಾ ಸುಹಾಸ್?
ಕಾರ್ತಿಕ್‌ನನ್ನು ಸತ್ಯನಿಂದ ಹೇಗಾದರೂ ದೂರ ಮಾಡಲೇ ಬೇಕು ಎಂದು ಕಾರ್ತಿಕ್ ಅಕ್ಕ ಹಾಗೂ ಸುಹಾನ್ ಕಾಯುತ್ತಿದ್ದಾರೆ. ಇದೀಗ ಕಾರ್ತಿಕ್ ಗೆ ಚೆನ್ನಾಗಿ ಕುಡಿಸಿ ಮತ್ತು ಏರುವಂತೆ ಮಾಡಿ ಸತ್ಯಳ ಮನೆಯಲ್ಲಿ ಎನು ನಡೆದಿದೆ ಎಂದು ತಿಳಿದುಕೊಳ್ಳಲು ಸುಹಾಸ್ ನಾಟಕದ ಮೇಲೆ ನಾಟಕ ಮಾಡುತ್ತಿದ್ದಾನೆ.
ಟೆರೆಸ್‌ನಲ್ಲಿ ಮದ್ಯದ ಬಾಟಲಿ ರೆಡಿ ಮಾಡಿರುತ್ತಾನೆ ಸುಹಾನ್. ಅಲ್ಲಿಗೆ ಕಾರ್ತಿಕ್ ಬರುತ್ತಾನೆ, ಏನು ಬಾವ ಬರಕ್ಕೆ ಹೇಳಿದ್ರಂತೆ ಎನು ವಿಷಯ ಎನ್ನುತ್ತಾನೆ. ಆಗ ಸುಹಾಸ್, 'ರಾಯಲ್ ಸ್ಕಾಚ್ ನಿನಗಾಗಿ ಕಾಯುತ್ತಿದೆ ಎನ್ನುತ್ತಾನೆ. ಅದಕ್ಕೆ ಕಾರ್ತಿಕ್ ಹೇಳುತ್ತಾನೆ 'ಏನು ಸ್ಕಾಚ್ ಆ....ನಾನು ಯಾವಾಗ ನಿಮ್ಮತ್ರ ಇದನ್ನು ತರಕ್ಕೆ ಹೇಳಿದ್ದೆ' ಎಂದು ಕೇಳುತ್ತಾನೆ. ಅದಕ್ಕೆ ಸುಹಾಸ್ ಹೇಳುತ್ತಾನೆ 'ಕಾರ್ತಿಕ್ ಇದೀಗ ನೀನು ಕುಡಿಯೋಕೆ ಶುರು ಮಾಡಿದ್ದೆಯಂತೆ ಅದಕ್ಕೆ ಆರೆಂಜ್ ಮಾಡಿದೆ ನಿನಗೋಸ್ಕರ. ಮುಂಚೆ ಆದರೆ ನನಗೆ ಯಾರು ಕಂಪನಿ ಇರಲಿಲ್ಲ. ಇವಾಗ ನೀನು ಸಿಕ್ಕಿದಿಯಾ ಎಂದಾಗ ಕಾರ್ತಿಕ್ ಹೇಳುತ್ತಾನೆ ನೋ ಬಾವ ನಾನು ಅಚಾನಕ್ಕಾಗಿ ಕುಡಿದೆ ನನಗೆ ಕುಡಿಯೋಕೆ ಇಷ್ಟ ಇಲ್ಲ ಎನ್ನುತ್ತಾನೆ.
ಅದಕ್ಕೆ ಸುಹಾಸ್ ಹೇಳುತ್ತಾನೆ ''ಕುಡಿದರೆ ತಪ್ಪಿಲ್ಲ ಬಾಮೈದ ದೊಡ್ಡವರಿಗೆ ಗೊತ್ತಾಗೋದು ತಪ್ಪು ಅಷ್ಟೇ ಎಂದಾಗ ಕಾರ್ತಿಕ್ ಖಡಕ್ ಆಗಿ ನೋ ಬಾವ ನಾನು ಕುಡಿಯಲ್ಲ. ಕುಡಿದರೆ ಆಗೋ ಎಫೆಕ್ಟ್ ನೋಡಿದರೆ ತಲೆ ಕೆಟ್ಟು ಹೋಗುತ್ತದೆ ಎನ್ನುತ್ತಾನೆ. ಅದಕ್ಕೆ ಸುಹಾಸ್ ಹೇಳುತ್ತಾನೆ ನೀನು ಕಂಪೆನಿ ಕೊಡುತ್ತಿಯಾ ಎಂದರೆ ನೀನು ಹೀಗೆ ಕೈ ಕೊಡೋದ? ಎಂದಾಗ ಕಾರ್ತಿಕ್ ಹೇಳುತ್ತಾನೆ, ಅದಕ್ಕೆ ಏನಂತೆ ಬೇಕಾದರೆ ಕಂಪನಿ ಕೊಡುತ್ತೇನೆ. ಕುಡಿಯಲ್ಲಾ ಅಷ್ಟೇ ಎನ್ನುತ್ತಾನೆ.

ಹಾಗಾದರೆ ಕೂಲ್ಡ್ ಡ್ರಿಂಕ್ಸ್ ಕುಡಿ ಓಕೆ ನಾ ಎಂದು ಹೇಳಿ ಕೋಲ್ಡ್ ಡ್ರಿಂಕ್ಸ್ ಹಾಕುತ್ತಾನೆ. ಬಳಿಕ ಸುಹಾಸ್ ಮದ್ಯ ಪಾನ ಮಾಡುತ್ತಾನೆ. ಆಗ ಕಾರ್ತಿಕ್ ಗೆ ಒಂದು ಕಾಲ್ ಬರುತ್ತದೆ ಒಂದು ನಿಮಿಷ ಎಂದು ಎದ್ದು ಹೋಗುತ್ತಾನೆ ಇದನ್ನೇ ಕಾಯುತ್ತಿದ್ದ ಸುಹಾಸ್ ಮದ್ದನ್ನು ಜೂಸ್ ಗೆ ಮಿಕ್ಸ್ ಮಾಡುತ್ತಾನೆ. ಗೆಳೆಯನ ಬಳಿ ಮಾತನಾಡಿ ಬಂದ ಕಾರ್ತಿಕ್ ಗೆ ಸುಹಾಸ್ ಜೂಸ್ ಕುಡಿಯಲು ಹೇಳುತ್ತಾನೆ.
ಆಮೇಲೆ, ನಿನ್ನ ನೋಡಿದರೆ ಪಾಪ ಅನ್ನಿಸುತ್ತೆ ಕಾರ್ತಿಕ್ ಮದುವೆ ಆದಮೇಲೆ ನಿನ್ನ ಲೈಪ್ ಹಾಳಾಗಿ ಹೋಯಿತು. ಹೇಗಿದ್ದೆ ನೀನು ಹೇಗಾದೆ ಈಗ ನಿನಗೆ ಸತ್ಯ ಸರಿಯಾದ ಜೋಡಿ ಅಲ್ಲ ಬಿಡು. ಅವಳೇನು ಅವಳ ಕ್ಲಾಸ್ ಎನು ಚೀ ಚಿ...ಮಾವ ಅವಳನ್ನು ನಿನ್ನ ತಲೆಗೆ ಕಟ್ಟಿ ದೊಡ್ಡ ಅನ್ಯಾಯ ಮಾಡಿದರು ಕಾರ್ತಿಕ್. ಪಾಪ ಕಣೋ ನಿನ್ನ ಅಕ್ಕ ದಿನ ಕಣ್ಣೀರು ಹಾಕುತ್ತಾಳೆ. ನನ್ನ ತಮ್ಮನಿಗೆ ಹೀಗೆ ಆಯ್ತಲ್ಲ ಅಂತ ಎಂದೆಲ್ಲ ಹೇಳುತ್ತಾನೆ. ಆದರೆ ಕಾರ್ತಿಕ್ ಮೌನ ವಹಿಸುತ್ತಾನೆ. ಸುಹಾಸ್ ಕುತಂತ್ರಕ್ಕೆ ಕಾರ್ತಿಕ್ ಬಲಿಯಾಗುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











