Sathya: ಸತ್ಯ ದಂಪತಿ ಪ್ರೇಮಿಗಳ ದಿನ ಆಚರಣೆ; ದಿವ್ಯಾ ಹೊಟ್ಟೆ ಉರಿಸಿದ ರುಕ್ಕು!

By Poorva

ಸತ್ಯ ಹಾಗೂ ಕಾರ್ತಿಕ್ ಪ್ರೇಮಿಗಳ ದಿನವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಕಾರ್ತಿಕ್ ಬಳಿಗೆ ಬಂದು ಸತ್ಯ, ಇವತ್ತು ನೀನು ನನ್ನ ಬಿಟ್ಟು ಎಲ್ಲಿಗೆ ಕೂಡ ಹೋಗಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾರ್ತಿಕ್‌ಗೆ ಅನುಮಾನ ಶುರು ಆಗುತ್ತದೆ. ಇದೇನು ಸತ್ಯ ಯಾವತ್ತೂ ನನ್ನ ಬಳಿ ಹೀಗೆ ಕೇಳಿಕೊಂಡೆ ಇಲ್ಲ... ಇವತ್ತು ಎಲ್ಲಿಗೆ ಹೋಗಬೇಡ ಎಂದರೆ ಏನು ಅರ್ಥ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇನ್ನೂ ಸತ್ಯ, ಕಾರ್ತಿಕ್ ನನ್ನು ಒಂದು ಜಾಗಕ್ಕೆ ಕರೆದುಕೊಂಡು ಹೋಗಿ ಪ್ರೇಮಿಗಳ ಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಾಳೆ. ಸತ್ಯಗೆ ಆಕೆಯ ಗೆಳೆಯರು ಸಹಾಯವನ್ನು ಮಾಡುತ್ತಾರೆ. ಗೆಳೆಯರ ಸಹಾಯದಿಂದ ಸತ್ಯ ಪ್ರೇಮಿಗಳ ಹಬ್ಬ ಆಚರಣೆ ಮಾಡುತ್ತಾಳೆ.

Satya kannada serial written 15th February Episode

ಸತ್ಯಳ ಖುಷಿಯ ಕ್ಷಣಗಳನ್ನು ನೋಡಿದ ಕಾರ್ತಿಕ್ ಮಾತ್ರ ಒಂದು ಸ್ಪೆಷಲ್ ಗಿಫ್ಟ್ ನೀಡುತ್ತಾನೆ. ಇತ್ತ ಬಾಲ ಮಾತ್ರ ಫೋನ್‌ನಲ್ಲಿ ಮಾತನಾಡುತ್ತಾ ಇರುತ್ತಾನೆ. ಆ ಬಳಿಕ ಮೆತ್ತಗೆ ಎಲ್ಲರ ಬಳಿ ಹೇಳುತ್ತಾನೆ. ಇವತ್ತು ಪ್ರೇಮಿಗಳ ಹಬ್ಬ ಅಲ್ವಾ? ಅದಕ್ಕಾಗಿ ಸತ್ಯ ಗೆಳೆಯರೆಲ್ಲಾ ಸತ್ಯ ಜೊತೆಯಲ್ಲೇ ಇದ್ದಾರೆ. ಅವರು ಇವತ್ತು ಅದ್ದೂರಿಯಾಗಿ ಪ್ರೇಮಿಗಳ ದಿನಾಚರಣೆಯನ್ನು ಸೆಲೆಬ್ರೇಟ್ ಮಾಡುತ್ತಿದ್ದಾರಂತೆ ಎಂದು ಹೇಳುತ್ತಾನೆ.

ಬಾಲ ಮಾತು ಕೇಳಿದ ಗಿರಿಜಮ್ಮ ಮಾತ್ರ ಬಹಳ ಖುಷಿ ಪಡುತ್ತಾರೆ. ನಮ್ಮ ಸತ್ಯ ಆ ಮನೆಯಲ್ಲಿ ಬಹಳಷ್ಟು ಕಷ್ಟ ಪಟ್ಟಿದ್ದಾಳೆ. ಮನೆಯವರೆಲ್ಲ ಒತ್ತಾಯದ ಮೇರೆಗೆ ಮದುವೆ ಆಗುತ್ತಾಳೆ. ಯಾರೋ ಮಾಡಿದ ತಪ್ಪಿಗೆ ಆಕೆ ಶಿಕ್ಷೆ ಅನುಭವಿಸುವ ಹಾಗೆ ಆಗಿತ್ತು ಎಂದು ಹೇಳುತ್ತಾಳೆ.

ಕಾರ್ತಿಕ್ ಖುಷಿಯಾಗಿರುವ ಸತ್ಯ

ಸತ್ಯ ಮಾತ್ರ ಎಲ್ಲರ ಪ್ರೀತಿಯ ಸೊಸೆ ಆಗಿದ್ದಾಳೆ ಎಂದಾಗ ಬಾಲ, ಇದನ್ನು ಕಂಡರೆ ಕೆಲವರಿಗೆ ಆಗುವುದಿಲ್ಲ. ಅದು ಸ್ವಂತ ತಂಗಿಯನ್ನು ಕಂಡರೆ ಹೀಗೆ ಆಡುತ್ತಾರೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಗಿರಿಜಮ್ಮ ಕೆಲವರಿಗೆ ದೇವರು ಒಳ್ಳೆ ಬುದ್ದಿ ಕೊಟ್ಟಿದ್ದರೆ, ಇನ್ನೂ ಕೆಲವರಿಗೆ ದುರ್ಬುದ್ಧಿ ಕೊಟ್ಟಿರುತ್ತಾನೆ. ನಾವು ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳುತ್ತಾಳೆ.

Satya kannada serial written 15th February Episode

ಬಾಲನ ಮಾತಿಗೆ ರುಕ್ಕು ಉತ್ತರ

ಇನ್ನು ಬಾಲ ಮಾತ್ರ ನಾನು ಯಾರ ಜೊತೆ ಪ್ರೇಮಿಗಳ ಹಬ್ಬ ಆಚರಣೆ ಮಾಡಲಿ ಎಂದು ಹೇಳುತ್ತಿರುವಾಗ ರುಕ್ಕು ಹೇಳುತ್ತಾಳೆ ನಾನು ಇದ್ದೇನೆ ಅಲ್ವಾ ಮಾವ. ನನ್ನ ಜೊತೆ ಪ್ರೇಮಿಗಳ ಹಬ್ಬ ಆಚರಣೆ ಮಾಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಾಲ ಬೇಕಂತಲೇ ರುಕ್ಕು ಕೇಕ್ ಇಲ್ಲ ಹೇಗೆ ಸೆಲೆಬ್ರೇಟ್ ಮಾಡುವುದು ಎಂದಾಗ ರುಕ್ಕು ಅಡಿಗೆ ಮನೆಗೆ ಹೋಗುತ್ತಾಳೆ. ಇದೆಲ್ಲವನ್ನೂ ನೋಡಿದ ಗಿರಿಜಮ್ಮ ಮಾತ್ರ ಬಹಳ ಖುಷಿಯಲ್ಲಿರುತ್ತಾಳೆ.

ರುಕ್ಕು ಮಾತಿಗೆ ನಕ್ಕ ಗಿರಿಜಮ್ಮ

ರುಕ್ಕು ಕೇಸರಿಬಾತ್ ತೆಗೆದುಕೊಂಡು ಬರುತ್ತಾಳೆ. ಆಗ ದಿವ್ಯಾ ಕೊಂಕು ಆಡುತ್ತಾಳೆ.. ಅರೆರೆ ನಾನೇನೋ ಕೇಕ್ ತೆಗೆದುಕೊಂಡು ಬಂದೆ ಎಂದುಕೊಂಡಿದ್ದೆ. ಆದರೆ ಉಪ್ಪಿಟ್ಟು ತೆಗೆದುಕೊಂಡು ಬಂದಿದ್ದೀಯಾ? ಎನ್ನುತ್ತಾಳೆ. ಸಿಟ್ಟಿನಲ್ಲಿ ರುಕ್ಕು ಏನೇನೋ ಬಡ ಬಡಾಯಿಸುತ್ತ ಇರುತ್ತಾಳೆ. ಆ ಬಳಿಕ ಆ ಕೇಸರಿ ಬಾತ್‌ ಅನ್ನೇ ಕೇಕ್ ರೀತಿ ಕಟ್ ಮಾಡಿ ಬಾಲಗೆ ತಿನ್ನಿಸಿ ಪ್ರೇಮಿಗಳ ಹಬ್ಬದ ಶುಭಾಶಯ ಎಂದು ಹೇಳುತ್ತಾಳೆ .ಇದನ್ನು ಕೇಳಿದ ದಿವ್ಯಗೆ ಮಾತ್ರ ಕೋಪ ಉಕ್ಕಿ ಹರಿಯುತ್ತದೆ.

More from Filmibeat

English summary
Satya Kannada serial Today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X