Sathya: ದಿವ್ಯಾ ಮಾತಿಗೆ ಸತ್ಯ ಎದಿರೇಟು; ಇನ್ನೂ ಬದಲಾಗಿಲ್ವ ದಿವ್ಯಾ? ಎಂದ ಫ್ಯಾನ್ಸ್
ಸತ್ಯಳಿಗೆ ಇತ್ತೀಚೆಗೆ ಗಂಡನ ಜೊತೆ ಟೈಮ್ ಸ್ಪೆಂಡ್ ಮಾಡುವ ಆಸೆ. ಹೇಗಾದರೂ ಮಾಡಿ ನಾನು ಮತ್ತು ನನ್ನ ಗಂಡ ಕೆಲಸದ ಒತ್ತಡದ ಮಧ್ಯೆ ಕೂಡ ಖುಷಿಯಾಗಿ ಇರಬೇಕು ಎನ್ನುವ ಬಯಕೆ. ಸತ್ಯ ತಾಯಿ ಮನೆಗೆ ಹೋಗಿ ಅವರಿಗೆ ಕೊಂಚ ಪ್ರಮಾಣದಲ್ಲಿ ಸಹಾಯ ಆಗಲಿ ಎನ್ನುವ ನಿಟ್ಟಿನಲ್ಲಿ ಹಣ ನೀಡುತ್ತಾಳೆ.
ಮನೆಗೆ ಸತ್ಯ ಹಣ ಕೊಟ್ಟಿದ್ದಕ್ಕೆ ದಿವ್ಯಾ ಕೊಂಕು ಮಾತುಗಳಿಂದ ನಿಂದನೆ ಮಾಡುತ್ತಾಳೆ. ಆದರೆ ಅದ್ಯಾವುದಕ್ಕೂ ಸತ್ಯ ತಲೆ ಕೆಡಿಸಿಕೊಳ್ಳುವ ಮಾತೇ ಇಲ್ಲ. ಏನೇ ಹೇಳಿದರೂ ದಿವ್ಯಾ ಸರಿ ಹೋಗುವುದು ಬಹಳ ದೂರದ ಮಾತು ಎಂದು ಮನದಲ್ಲಿ ಯೋಚನೆ ಮಾಡಿ ಅಮ್ಮ ಹಾಗೂ ಅಜ್ಜಿಯ ಆಶೀರ್ವಾದ ಪಡೆದು ಅಲ್ಲಿಂದ ಹೋಗುತ್ತಾಳೆ.

ಪೊಲೀಸ್ ಕಾನ್ಸ್‌ಟೇಬರ್ ಮೆಡಿಕಲ್ ಮಾಫಿಯಾದ ಬಗ್ಗೆ ಮಾತನಾಡುತ್ತಿರುತ್ತಾರೆ. ಮೆಡಿಕಲ್ ಮಾಫಿಯಾ ಇದೀಗ ಎಲ್ಲೆಡೆ ಹಬ್ಬುತ್ತಿದೆ. ಇದನ್ನು ತಡೆಗಟ್ಟಲು ಬಹಳ ಕಷ್ಟ ಎಂದೆಲ್ಲ ಮಾತನಾಡುತ್ತಿರುವುದು ಸತ್ಯ ಕೇಳಿಸಿಕೊಳ್ಳುತ್ತಾ ಇರುತ್ತಾಳೆ. ಅದೇನು ನೀವು ಮಾತನಾಡುತ್ತಾ ಇದ್ದೀರಾ? ನೀವು ಯಾವುದರ ಬಗ್ಗೆ ಮಾತನಾಡುತ್ತಿದ್ದಿರಾ? ಎಂದು ಕೇಳಿದಾಗ ಏನು ಹೇಳದೆ ಸುಮ್ಮನಾಗುತ್ತಾರೆ ಕಾನ್ಸ್‌ಟೇಬಲ್ .
ಇತ್ತ ಬೇಗ ಬೇಗ ತನ್ನ ಕೆಲಸ ಮುಗಿಸಿ ಮನೆಗೆ ಬರುತ್ತಾಳೆ ಸತ್ಯ. ಇವತ್ತಾದರು ಗಂಡನ ಜೊತೆ ಮಾತನಾಡಬೇಕು. ಆತನ ಜೊತೆ ಸಿಕ್ಕಾಗಲೆಲ್ಲ ಕಾಲ ಕಳೆಯಬೇಕು ಎನ್ನುವುದು ಆಸೆ ಸತ್ಯಳಿಗೆ ಇರುತ್ತದೆ. ಆದರೆ ಅದ್ಯಾವುದನ್ನೂ ಯಾರ ಬಳಿಯೂ ಹೇಳಿಕೊಳ್ಳುವುದು ಇಲ್ಲ. ಇನ್ನೂ ರಾತ್ರಿಯ ವೇಳೆ ಗಂಡನ ಜೊತೆ ಮಾತನಾಡಬೇಕು ಎಂದು ಅಂದುಕೊಂಡಾಗ ಕಾರ್ತಿಕ್ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡುತ್ತಿರುತ್ತಾನೆ.

ಟೈಮ್ ಮೀಸಲಿಡಲು ಹೇಳಿದ ಸತ್ಯ
ಅಮುಲ್ ಬೇಬಿ ಇವತ್ತಾದರು ನನಗೆ ಟೈಮ್ ಕೊಡು ಯಾಕೆ ನೀನು ಹೀಗೆಲ್ಲ ಮಾಡುತ್ತಿದ್ದೀರಾ. ಇವತ್ತೂ ನೀವು ಕೆಲಸ ಮಾಡಬೇಕಾ? ನನಗೆ ನಿಮ್ಮ ತೋಳಲ್ಲಿ ಮಲಗುವ ಆಸೆ ನಿಮ್ಮ ಜೊತೆ ಏನೆಲ್ಲ ಹಂಚಿಕೊಳ್ಳಬೇಕು ಎನ್ನುವ ಬಯಕೆ. ಆದರೆ ನಿಮಗೆ ಸ್ವಲ್ಪ ಕೂಡ ಟೈಮ್ ಇಲ್ಲ. ಇದೇ ನನಗೆ ಬೇಸರ ಎಂದು ಮನದಲ್ಲಿ ಇರುವ ನೋವನ್ನು ಹೊರಗೆ ಹಾಕುತ್ತಾಳೆ. ಮೇಡಂ ಅವರಿಗೆ ಇವತ್ತು ಗಂಡನ ನೆನಪಾಗಿ ಬಿಟ್ಟಿದೆ ಎಂದು ಕಾರ್ತಿಕ ವ್ಯಂಗ್ಯವಾಡುತ್ತಾನೆ. ಇದನ್ನೆಲ್ಲ ನೋಡಿದ ಸತ್ಯಗೆ ನಗು ಬರುತ್ತದೆ. ಏನು ಮಾತನಾಡಬೇಕು ಎಂದು ತೋಚದಂತಾಗುತ್ತದೆ.
ಕಾರ್ತಿಕ್ ತೋಳಿನಲ್ಲಿ ತಲೆಯಿಟ್ಟು ಮಲಗಿದ ಸತ್ಯ
ಕೊನೆಗೆ ಕಾರ್ತಿಕ್ ತೋಳಿನಲ್ಲಿ ತನ್ನ ಮುಖ ಇಟ್ಟು ಖುಷಿಯಲ್ಲಿ ಇರುತ್ತಾಳೆ ಸತ್ಯ. ಇತ್ತ ಸತ್ಯ ಮನೆಯಲ್ಲಿ ಪಲಾವ್ ಮಾಡಿ ಇರುತ್ತಾಳೆ ಊರ್ಮಿಳಾ. ಅದನ್ನು ತಿಂದ ಊರ್ಮಿಳಾ ಮಗಳು ಮೆತ್ತಗೆ ಅಮ್ಮನ ಬಳಿ ಹೇಳುತ್ತಾಳೆ. ಏನಮ್ಮಾ ಈ ಬಾರಿ ನೀನು ಸೊಪ್ಪು ಜಾಸ್ತಿ ಹಾಕಿದೀಯಾ? ತಿನ್ನುತ್ತಿದ್ದಂತೆ ಸೊಪ್ಪು ಸಿಗುತ್ತದೆ ಎಂದು ಹೇಳುತ್ತಾಳೆ.
ತಲೆ ತಿರುಗಿ ಬಿದ್ದ ಊರ್ಮಿಳಾ
ಇದನ್ನು ಕೇಳಿದ ಸೀತಾ, ಊರ್ಮಿಳಾ ನೋಡು ಊರ್ಮಿಳಾ ನಿನ್ನ ಮಗಳು ತಿನ್ನುವಾಗಲು ಏನೋ ಕಾಮೆಂಟ್ ಮಾಡುತ್ತಾಳೆ ಎಂದು ತಮಾಷೆ ಮಾಡುತ್ತಾಳೆ. ನಾಲ್ಕು ಕೊಡು ಅವಳಿಗೆ ಎಂದು ಹೇಳಿದ್ದೆ ತಡ ಊರ್ಮಿಳಾ ಮಗಳಿಗೆ ಹೊಡೆಯಲು ಓಡೋಡಿ ಬರುತ್ತಾಳೆ. ಅಮ್ಮ ಓಡಿ ಬರುವುದನ್ನು ನೋಡಿದ ಊರ್ಮಿಳಾ ಮಗಳು ಓಡಿ ಹೋಗುತ್ತಾಳೆ. ತನ್ನ ತಾಯಿಯ ಕೈಗೆ ಸಿಗದೆ ಹೋಗುತ್ತಾಳೆ. ಅಷ್ಟರಲ್ಲಿ ಊರ್ಮಿಳಾಗೆ ತಲೆ ಚಕ್ಕರ್ ಬರುತ್ತದೆ. ಆಕೆ ತಲೆ ಹಿಡಿದುಕೊಂಡು ಕೆಳಗೆ ಬೀಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











