Sathya: ಸತ್ಯ ಮೇಲೆ ಮುಗಿಬಿದ್ದ ಮನೆ ಮಂದಿ; ರಾಯರಿಗೆ ಸೊಸೆ ಮಾತು ಅರ್ಥ ಆಗುತ್ತಿಲ್ವಾ?

By Poorva

ಸತ್ಯ ಮೇಲೆ ಎಲ್ಲರೂ ಕಿಡಿ ಕಾರುತ್ತಿದ್ದಾರೆ. ಯಾರು ಆಕೆಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡದೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ನಕಲಿ ಮಾತ್ರೆಯ ಜಾಲತಾಣದಲ್ಲಿ ಕಾರ್ತಿಕ್ ಹೆಸರು ಕೇಳಿ ಬಂದಿರುವುದರಿಂದ ಕಾರ್ತಿಕ್‌ನನ್ನು ಅರೆಸ್ಟ್ ಮಾಡಬೇಕಾಯಿತು. ಅದು ಸತ್ಯ ಕೈಯಿಂದಲೇ. ಸತ್ಯ ಆಕೆಯ ಗಂಡನನ್ನು ಅರೆಸ್ಟ್ ಮಾಡಿಸಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಅಂದುಕೊಂಡು ಇದ್ದರೂ ಆದರೆ ಸತ್ಯ ಮಾತ್ರ ಇಲ್ಲ.

ತಪ್ಪು ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಸತ್ಯ ಆಲೋಚನೆ ಮಾಡುತ್ತಿರುತ್ತಾಳೆ. ಸತ್ಯಗೆ ಕಾರ್ತಿಕ್ ಎಂದರೆ ಬಹಳ ಪ್ರೀತಿ. ಆಕೆ ಆತನನ್ನು ಅರೆಸ್ಟ್ ಮಾಡಬೇಕಾದರೆ ಆಕೆಯ ಮನಸ್ಸಿಗೆ ಆದ ನೋವು ಅಷ್ಟಿಷ್ಟಲ್ಲ. ಆದರೆ ಅದು ಯಾರ ಕಣ್ಣಿಗೂ ಕಾಣುತ್ತಿಲ್ಲ. ಮಗನನ್ನು ಅರೆಸ್ಟ್ ಮಾಡಿಬಿಟ್ಟಳಲ್ಲ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಯಾಕೆ ಹೀಗೆಲ್ಲ ಮಾಡಿಬಿಟ್ಟಳು ನಿಮ್ಮ ಸೊಸೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸೀತಾಗೆ ಇರಿಸು ಮುರಿಸಾಗುತ್ತದೆ.

Satya kannada serial written update on 06th May episode

ಇತ್ತ ರಾಮಚಂದ್ರ ರಾಯರು ಗರಂ ಆಗಿರುತ್ತಾರೆ. ರಾಯರಿಗೆ ತನ್ನ ಮಗನನ್ನು ಅರೆಸ್ಟ್ ಮಾಡುವಷ್ಟು ಸೊಕ್ಕ ಈಕೆಗೆ ಎಂದು ಮನದಲ್ಲಿ ಯೋಚನೆ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಸತ್ಯ, ರಾಯರ ಎದುರಿಗೆ ಬಂದು ನಿಲ್ಲುತ್ತಾಳೆ. ಏನಮ್ಮಾ ಸತ್ಯ ಈಗ ಬಂದೆಯಾ? ನನ್ನ ಮಗನನ್ನು ಎಲ್ಲರ ಎದುರು ಅರೆಸ್ಟ್ ಮಾಡಿಕೊಂಡು ಹೋದೆಯಲ್ಲ ಆಗಲೇ ನಮ್ಮ ಘನತೆ ಗೌರವಕ್ಕೆ ನೀನು ಚ್ಯುತಿ ತಂದೆ ಎನ್ನುತ್ತಾರೆ.

ಮನೆ ಮರ್ಯಾದೆ ತೆಗೆದುಬಿಟ್ಟೆ

ನಾನು ಯಾವತ್ತೂ ಇದನ್ನೆಲ್ಲ ನಿನ್ನಿಂದ ನಿರೀಕ್ಷೆ ಮಾಡಿರಲಿಲ್ಲ. ನೀನು ಮದುವೆ ಆದ ಮೊದಲಿಗೆ ಹೇಳಿದ ಮಾತೇನು ಈಗ ನಡೆದುಕೊಳ್ಳುತ್ತಿರುವುದು ಏನು. ನೀನು ಕೋಟೆ ಮನೆಯ ಮರ್ಯಾದೆಯನ್ನು ತೆಗೆದು ಹಾಕಿ ಬಿಟ್ಟೆಯಲ್ಲ ಎಂದು ಹೇಳಿದಾಗ ಸತ್ಯಗೆ ಬಹಳ ನೋವಾಗುತ್ತದೆ.

ಮಾವನ ಮಾತಿಗೆ ನೊಂದ ಸತ್ಯ

ಆಕೆ ತನ್ನ ಮಾವನ ಬಳಿ ಹೇಳುತ್ತಾಳೆ. ರಾಯರೇ ನನಗೆ ಮೇಲಿನವರಿಂದ ಒತ್ತಡ ಹೆಚ್ಚಾಯಿತು. ಅದಲ್ಲದೇ ನಕಲಿ ಮಾತ್ರೆಗಳ ಮೋಸ ಕಾರ್ತಿಕ್ ಕಂಪನಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ನಾನೇನು ಮಾಡಲಿ? ಪೊಲೀಸ್ ಆದ ಬಳಿಕ ಯಾವುದಕ್ಕೂ ಹಿಂದೆ ಮುಂದೆ ನೋಡಿದರೂ ಕಷ್ಟ ಆಗುತ್ತದೆ. ಆದ ಕಾರಣ ಅರೆಸ್ಟ್ ಮಾಡಬೇಕಾಯಿತು ಎಂದು ಹೇಳುತ್ತಾಳೆ.

Satya kannada serial written update on 06th May episode

ನಿಜ ಅರ್ಥ ಮಾಡಿಸಲು ಸತ್ಯ ಹರಸಾಹಸ

ನೀನು ಯಾರ ಕೈಗೆ ಕೂಡ ಸಿಗಬಾರದು ಎಂದು ನನ್ನ ಮಗನನ್ನು ಅರೆಸ್ಟ್ ಮಾಡಿಬಿಟ್ಟೆಯಲ್ಲ. ನೀನೇ ಸ್ವಾರ್ಥಿ ಕಣಮ್ಮ? ಯಾಕೆ ಹೀಗೆಲ್ಲ ಮಾಡುತ್ತಿದ್ದಿಯಾ ನೀನು? ಎಂದಾಗ ಸತ್ಯ ಕುಸಿದು ಹೋಗುತ್ತಾಳೆ. ರಾಯರ ಕಾಲು ಹಿಡಿದು ಕೇಳಿಕೊಳ್ಳುತ್ತಾಳೆ. ನಾನು ಏನು ಮಾಡಬೇಕು ಎನ್ನುವುದನ್ನು ನೀವೇ ಹೇಳಿ ರಾಯರೇ, ನನಗೆ ಬಹಳ ಭಯ ಆಗುತ್ತಿದೆ ದಿಕ್ಕೇ ತೋಚದಂತಾಗಿದೆ. ನಾನು ಕಾರ್ತಿಕ್‌ನನ್ನು ಅರೆಸ್ಟ್ ಮಾಡದಿದ್ದರೂ ಬೇರೆಯವರು ಬಂದು ಅರೆಸ್ಟ್ ಮಾಡುತ್ತಿದ್ದರು. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ಹೇಳುತ್ತಾಳೆ.

ಜಾನಕಿಗೆ ಸಮಾಧಾನ ಹೇಳುತ್ತಿರುವ ಗಿರಿಜಮ್ಮ

ಸತ್ಯ ಮಾತಿಗೆ ರಾಯರು ಕೋಪದಿಂದ ಸರಿ ಹಾಗಾದರೆ ನನ್ನನ್ನು ಅರೆಸ್ಟ್ ಮಾಡಿಬಿಡು ಅಲ್ಲಿಗೆ ಸರಿ ಹೋಗಿ ಬಿಡುತ್ತಲ್ವಾ ಎಂದು ಹೇಳುತ್ತಾರೆ. ಈ ಮಾತು ಕೇಳಿ ಸತ್ಯಗೆ ದುಃಖ ಉಮ್ಮಳಿಸಿ ಬರುತ್ತದೆ. ಇತ್ತ ಸತ್ಯ ತಾಯಿ ಜಾನಕಿಗೆ ಆತಂಕ ಶುರು ಆಗಿದೆ. ಸತ್ಯಗೆ ಏನು ಆಗಬಾರದು. ಆಕೆ ಮನೆಯವರ ಜೊತೆ ಚೆನ್ನಾಗಿ ಇರಬೇಕು ಎಂದೆಲ್ಲ ಗಿರಿಜಾ ಅಮ್ಮನ ಬಳಿ ಹೇಳುತ್ತಿರುತ್ತಾಳೆ. ಆದರೆ ದಿವ್ಯಾ ಅದರಲ್ಲಿ ಕೂಡ ಖುಷಿ ಪಡುತ್ತಾಳೆ.

More from Filmibeat

English summary
Satya kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X