Sathya: ಅತ್ತೆಯ ಮುಂದೆ ಗಂಡನನ್ನು ಹೊಡೆಯಲು ಸಿದ್ದಳಾದ ಸತ್ಯ; ಸೀತಾಳನ್ನು ಕಂಡು ಶಾಕ್‌

By Poorva

ದಿವ್ಯಾಗೆ ಬಾಲನನ್ನ ಹೇಗಾದರೂ ಮಾಡಿ ತನ್ನವನ್ನಾಗಿ ಮಾಡಿಕೊಳ್ಳುವ ಬಯಕೆ. ಬಾಲ ನನ್ನಿಂದ ದೂರ ಹೋಗುತ್ತಿದ್ದಾನೆ ಎಂದು ತಿಳಿದು ದಿವ್ಯಾ ಬಹಳ ಬೇಸರ ಮಾಡಿಕೊಂಡು ಇದ್ದಾಳೆ. ಹಂತ ಹಂತವಾಗಿ ಬಾಲ ಬೆಳೆಯುತ್ತಿದ್ದಾನೆ. ಬೀದಿ ಬದಿ ಅಂಗಡಿ ಆರಂಭಿಸಿ ದುಡ್ಡು ಸಂಪಾದನೆ ಮಾಡಿ ಇದೀಗ ಹೋಟೆಲ್ ಶುರು ಮಾಡಿದ್ದಾನೆ.

ದಿವ್ಯಾ ಮಾತ್ರ ಬಾಲನನ್ನು ನಾನು ಬಿಟ್ಟು ಬಹಳ ದೊಡ್ಡ ಮಟ್ಟದ ತಪ್ಪು ಮಾಡಿಬಿಟ್ಟೆ. ನನಗೆ ಬಾಲ ಇದೀಗ ಬೇಕು ಎಂದರೂ ಬಾಲ ನನ್ನ ಜೊತೆ ಬದುಕಲು ತಯಾರಿಲ್ಲ ಎಂದು ಬಹಳ ನೊಂದುಕೊಂಡಿದ್ದಾಳೆ. ಬಾಲನಿಗೆ ದಿವ್ಯಾ ಜೊತೆ ಬದುಕು ರೋಸಿ ಹೋಗಿದೆ. ಆಕೆಗೆ ಹೇಗಾದರೂ ಬುದ್ದಿ ಕಲಿಸಲೇಬೇಕು ಎಂದು ಯೋಚನೆ ಮಾಡುತ್ತಾನೆ. ಅದರ ಹಾಗೆ ಮನೆ ಮಂದಿ ನಡೆದುಕೊಂಡು ಇರುತ್ತಾರೆ.

Satya kannada serial written Update on 11th may episode

ರುಕ್ಕು ಜೊತೆ ಬಾಲ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆ ಪ್ರಕಾರವಾಗಿ ರುಕ್ಕು ಕೂಡ ಬಾಲನ ಜೊತೆ ಹೆಚ್ಚಿನ ಸಲುಗೆಯಿಂದ ಇರುತ್ತಾಳೆ. ಇದನ್ನು ನೋಡಿದ ದಿವ್ಯಾಗೆ ಹೇಗಾದರೂ ಮಾಡಿ ಬಾಲನ ಜೀವನದಿಂದ ರುಕ್ಕುವನ್ನು ದೂರ ಮಾಡಲೇಬೇಕು ಎಂದು ನಿಶ್ಚಯ ಮಾಡಿರುತ್ತಾಳೆ. ಇನ್ನೂ ಬಾಲ ಲೈಪ್ ಇನ್ಶುರೆನ್ಸ್ ಮಾಡಿಸಲು ಒಬ್ಬರನ್ನು ಕರೆದುಕೊಂಡು ಬರುತ್ತಾನೆ. ದಿವ್ಯಾ ಇವರ್ಯಾರು ಮನೆಗೆ ಬಂದಿದ್ದಾರಲ್ಲ ಎಂದು ಯೋಚನೆ ಮಾಡುತ್ತಿರುತ್ತಾಳೆ.

ಬಾಲ ತನ್ನ ಅತ್ತೆ ಹಾಗೂ ಅಜ್ಜಿಯ ಬಳಿ ಪಾಲಿಸಿ ಮಾಡಿಸಲು ಕರೆದುಕೊಂಡು ಬಂದೆ ಎಂದಾಗ ದಿವ್ಯಗೆ ಬಹಳ ಖುಷಿ ಆಗುತ್ತದೆ. ಆಕೆ ಲೈಪ್ ಇನ್ಶುರೆನ್ಸ್ ನನ್ನದು ಮಾಡುತ್ತಾರೆ ಎಂದು ಖುಷಿಯಲ್ಲಿ ಇದ್ದಳು. ಆದರೆ ಬಾಲ ಅತ್ತೆ, ಅಜ್ಜಿ ಹಾಗೂ ರುಕ್ಕು ಬಾಲನ ಹೆಸರಲ್ಲಿ ಮಾತ್ರ ಮಾಡಿಸುತ್ತಾನೆ. ಆಗ ದಿವ್ಯಾ ಮನದಲ್ಲಿ ಯೋಚನೆ ಮಾಡುತ್ತಾಳೆ.

ಬಾಲನ ಮಾತಿಗೆ ಬೇಸರಗೊಂಡ ದಿವ್ಯ

ನೀನು ನನ್ನ ಹೆಸರಲ್ಲಿ ಲೈಫ್‌ ಇನ್ಶುರೆನ್ಸ್ ಮಾಡಿಸದಿದ್ದರೂ ಪರವಾಗಿ ಇಲ್ಲ. ಆದರೆ ಆ ರುಕ್ಕು ನೀನು ಮದುವೆ ಆಗುವ ಹುಡುಗಿ ಎಂದು ಆಗಾಗ ಹೇಳುತ್ತಿಯಾ, ಹಾಗೆಯೇ ಆಕೆಯ ಜೊತೆ ಮದುವೆ ಆಗುತ್ತೇನೆ ಎಂದು ಬೇರೆ ಹೇಳುತ್ತಿಯಾ, ಇದು ನನಗೆ ನೋವು ಕಾಡುತ್ತಿದೆ ಎಂದು ಬೇಸರ ಮಾಡಿಕೊಂಡು ಇರುತ್ತಾಳೆ.

ಜೈಲಿನಲ್ಲಿ ಕಾರ್ತಿಕ್‌ಗೆ ಶಿಕ್ಷೆ

ಇನ್ನೂ ಕಾರ್ತಿಕ್ ಜೈಲಿನಲ್ಲಿ ಅಪರಾಧಿ ಸ್ಥಾನದಲ್ಲಿ ಕುಳಿತಿದ್ದಾನೆ. ಆದರೆ ಅಧಿಕಾರಿಗಳು ಆಗಾಗ ಕಾರ್ತಿಕ್‌ನನ್ನು ಜೈಲಿನಲ್ಲಿ ವಿಚಾರಣೆ ನಡೆಸುತ್ತಾರೆ ಹಾಗೆಯೇ ಶಿಕ್ಷೆ ಕೂಡ ನೀಡುತ್ತಾರೆ. ನಾನು ಈ ತಪ್ಪು ಮಾಡಿಲ್ಲ ನನ್ನ ಬಿಟ್ಟು ಬಿಡಿ ಎಂದು ಕಾರ್ತಿಕ್ ಪದೇ ಪದೇ ಹೇಳಿದರೂ ಸತ್ಯ ಮೇಲಿನ ಅಧಿಕಾರಿ ಕಾರ್ತಿಕ್‌ಗೆ ಮನ ಬಂದ ಹಾಗೆ ಹೊಡೆಯುತ್ತಾನೆ.

Satya kannada serial written Update on 11th may episode

ಕಾರ್ತಿಕ್‌ಗೆ ಹೊಡೆದ ಮೇಲಾಧಿಕಾರಿ

ಪೊಲೀಸರ ನಡೆ ಕಾರ್ತಿಕ್‌ಗೆ ಬಹಳ ಭಯ ಪಡಿಸುತ್ತದೆ. ಹಾಗೆಯೇ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದೆ. ಇದಕ್ಕೆಲ್ಲ ಕಾರಣ ಸತ್ಯ ಎಂದು ಆಕೆಯ ಮೇಲೆ ಕಿಡಿ ಕಾರುತ್ತಿರುತ್ತಾನೆ. ಸತ್ಯ ಏನೇ ಮಾಡಿದರು ನನ್ನ ಒಳ್ಳೆಯದಕ್ಕೆ ಎಂದುಕೊಂಡಿದ್ದ ಕಾರ್ತಿಕ್‌ಗೆ ಇದೀಗ ಆಘಾತ ಎದುರಾಗಿದೆ. ಕಾರ್ತಿಕ್‌ನನ್ನು ಹೊಡೆಯುವುದನ್ನು ಸತ್ಯ ನೋಡುತ್ತಾಳೆ. ಆಕೆ ಮೇಲಾಧಿಕಾರಿಯನ್ನು ಪ್ರಶ್ನೆ ಮಾಡುತ್ತಾಳೆ. ಆಗ ಕಾರ್ತಿಕ್‌ಗೆ ಹೊಡೆಯಲು ಸತ್ಯಗೆ ಹೇಳುತ್ತಾನೆ.

ಗಂಡನ ಸ್ಥಿತಿಗೆ ಸತ್ಯ ಬೇಸರ

ಒಂದು ವೇಳೆ ಆಕೆ ಹೊಡೆಯದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗಿ ಎಂದು ಹೇಳಿದಾಗ ಸತ್ಯ ಏನು ಮಾಡಬೇಕು ತಿಳಿಯದೇ ಕಾರ್ತಿಕ್ ಬಳಿ ಹೋಗುತ್ತಾಳೆ. ಸತ್ಯ ಕೈಯಲ್ಲಿ ಕೋಲು ಹಿಡಿದು ಕಾರ್ತಿಕ್ ಮುಂದೆ ನಿಂತಿರುತ್ತಾಳೆ. ಕಾರ್ತಿಕ್, ಸತ್ಯಳನ್ನು ನೋಡಿದಾಗ ಆತನಿಗೆ ಏನು ಹೇಳಬೇಕು ಎನ್ನುವುದೆ ತಿಳಿಯುವುದಿಲ್ಲ.

ಮಗನನ್ನು ನೋಡಲು ಬಂದ ಸೀತಾ

ಜೈಲಿನಲ್ಲಿದ್ದ ಮಗನಿಗೆ ಸೀತಾ ಮನೆಯಿಂದ ಊಟ ತೆಗೆದುಕೊಂಡು ಬರುತ್ತಾಳೆ. ಆಗ ಸತ್ಯ ತನ್ನ ಮಗನನ್ನೇ ಹೊಡಿಯುವಷ್ಟು ಬೆಳೆದಿದ್ದಾಳಾ ಎಂದು ಶಾಕ್‌ನಿಂದ ಹಾಗೆಯೇ ಬಹಳ ಕೋಪದಿಂದ ಆಕೆಯತ್ತ ನೋಡುತ್ತಾಳೆ.

More from Filmibeat

English summary
Satya kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X