Sathya: ದಿವ್ಯಾ ಬಳಿ ಡೈವರ್ಸ್ ಕೇಳಿದ ಬಾಲ; ಆತಂಕದಲ್ಲಿರುವ ದಿವ್ಯಾ ಮುಂದೇನು ಮಾಡ್ತಾಳೆ?
ಸತ್ಯ ಇದೀಗ ತಂದೆಯ ಕನಸನ್ನು ನನಸು ಮಾಡಿದ್ದಾಳೆ. ಚಿಕ್ಕ ವಯಸ್ಸಿನಿಂದಲೂ ಸತ್ಯ ಮನೆಯವರಿಗಾಗಿ ತನ್ನೆಲ್ಲ ಇಷ್ಟವನ್ನು ಪಕ್ಕಕ್ಕಿಟ್ಟುಟ್ಟು, ಮನೆಯವರಿಗಾಗಿ ಬಹಳ ಕಷ್ಟ ಪಟ್ಟು ದುಡಿದು ತನ್ನ ಅಕ್ಕನನ್ನು ಶಾಲೆಗೆ ಕಳುಹಿಸಿದಳು. ಹಾಗೆಯೇ ಮನೆಯನ್ನು ನಿಭಾಯಿಸಿದಳು. ಆದರೆ ಆಕೆಗೆ ಒಂದೇ ಒಂದು ಕೊರಗಿತ್ತು. ನಾನು ಪೊಲೀಸ್ ಆಗಬೇಕು, ನನ್ನ ತಂದೆಯ ಕನಸನ್ನು ಹೇಗಾದರೂ ಮಾಡಿ ನನಸು ಮಾಡಬೇಕು ಎಂದುಕೊಂಡು ಇದ್ದಳು.
ಸತ್ಯ ಕನಸಿಗೆ ಮತ್ತಷ್ಟು ಬಲ ತುಂಬಿದ್ದು ಆಕೆಯ ಗಂಡ ಕಾರ್ತಿಕ್. ಆತ ಸತ್ಯನನ್ನು ಓದಿಸುತ್ತಾನೆ. ಹಾಗೆಯೇ ಸತ್ಯ ಓದಿಗೆ ಯಾರೇ ಅಡ್ಡ ಬಂದರೂ ಅವರನ್ನೆಲ್ಲ ಎದುರಿಸಿ ಇದೀಗ ಪೊಲೀಸ್ ಆಗಿದ್ದಾಳೆ. ಆದರೆ ಇದೀಗ ಸತ್ಯಗೆ ಸಮಸ್ಯೆ ಎದುರಾಗಿದೆ. ಆಕೆಗೆ ಕೋಪ ಬರುತ್ತಿದೆ. ಅದಕ್ಕೆ ಹೇಗೆ ರಿಯಾಕ್ಟ್ ಮಾಡಬೇಕೋ ಎನ್ನುವುದು ತಿಳಿಯುತ್ತಿಲ್ಲ. ಮೇಲಧಿಕಾರಿಗಳ ಕಿರಿಕಿರಿ. ನೀನು ರಾತ್ರಿ ಕೆಲಸ ಮಾಡಬೇಡ, ಆಫೀಸ್ ಕೆಲಸ ಮಾತ್ರ ನೋಡಿಕೋ ಎಂದೆಲ್ಲ ಹೇಳುತ್ತಿರುತ್ತಾರೆ. ಆದರೆ ಸತ್ಯಗೆ ಅದು ಇಷ್ಟವಿಲ್ಲ. ಹಾಗಾಗಿ ಮನೆಯಲ್ಲಿ ಬಹಳ ನೋವಿನಿಂದ ಏನೋ ಯೋಚನೆ ಮಾಡುತ್ತಿರುತ್ತಾಳೆ.

ಸತ್ಯ ನಡವಳಿಕೆ ಕೊಂಚ ಬದಲಾವಣೆ ಆಗಿದೆ ಯಾಕೆ ಎಂದು ಆಕೆಯನ್ನು ಗಮನಿಸುತ್ತಾ ಇರುತ್ತಾರೆ. ಕೊನೆಗೆ ಆಕೆಯ ಬಳಿ ಇದ್ದ ವಿಚಾರವನ್ನು ಹೇಳುತ್ತಾರೆ. ಯಾಕೆ ಸತ್ಯ ಏನಾಯಿತು, ಏನು ಯೋಚನೆ ಮಾಡುತ್ತಿದ್ದೀ ಎಂದಾಗ ಸತ್ಯ, ಸೀತಾ ಬಳಿ ತನಗೆ ಆಗುತ್ತಿರುವ ನೋವಿನ ಬಗ್ಗೆ ಹೇಳುತ್ತಾಳೆ. ಆಗ ಸೀತಾ ಸೊಸೆಗೆ ಬಹಳಷ್ಟು ಧೈರ್ಯ ತುಂಬುವ ಕೆಲಸ ಮಾಡುತ್ತಾಳೆ.
ಹಣದ ಮೋಹಕ್ಕೆ ಬಲಿಯಾಗಿದ್ದ ಬಾಲ
ದಿವ್ಯಾಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ತಾನು ಬಾಲನನ್ನು ಕಳೆದುಕೊಂಡು ಬಿಡುತ್ತಿದ್ದೆ. ಹಣದ ಮೋಹಕ್ಕೆ ಒಳಗಾಗಿ, ನಿಜವಾದ ಪ್ರೀತಿಯನ್ನು ಕಾಲಿನಿಂದ ಒದ್ದು ಹೋಗಿದ್ದೇನೆ. ಆದರೆ ಇದೀಗ ಮಾಡಿದ ತಪ್ಪಿ ಅರಿವಾಗಿ ದಿವ್ಯಾ, ಬಾಲನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾಳೆ. ಆದರೆ ಬಾಲ ಮಾತ್ರ ದಿವ್ಯಾ ಇನ್ನೊಮ್ಮೆ ನಾಟಕ ಮಾಡುತ್ತಾ ಇರಬಹುದು ಎಂದು ಭಾವಿಸಿ ಬಹಳ ಕಠೋರವಾದ ನಿರ್ಧಾರ ತೆಗೆದುಕೊಂಡು ಬಿಡುತ್ತಾನೆ. ದಿವ್ಯ ಅದೆಷ್ಟೇ ಕೇಳಿಕೊಂಡರು ಬಾಲ ಮಾತ್ರ ನನಗೆ ನಿನ್ನಿಂದ ಮುಕ್ತಿಬೇಕು , ದಯವಿಟ್ಟು ನನಗೆ ಡೈವರ್ಸ್ ಕೊಟ್ಟು ಬಿಡು ಎಂದಾಗ ದಿವ್ಯಾಗೆ ಶಾಕ್ ಆಗುತ್ತದೆ.

ಬಾಲನ ಮಾತು ಕೇಳಿ ದಿವ್ಯಾ ಶಾಕ್
ದಿವ್ಯಾ ತಾಯಿ ಅಳಿಯನ ಬಳಿ ಏನಪ್ಪಾ ಬಾಲ ಡೈವರ್ಸ್ ಆಗಿದೆ ಅಲ್ವಾ? ಎಂದಾಗ ಡೈವರ್ಸ್ ಆಗಿಲ್ಲ, ನಮಗೆ ಆರು ತಿಂಗಳು ಟೈಮ್ ಕೊಟ್ಟಿದ್ದಾರೆ. ಆದರೆ ನಾನು ಇದೀಗ ಕೇಳುತ್ತಿದ್ದೇನೆ ನನಗೆ ಡೈವರ್ಸ್ ಕೊಟ್ಟು ಬಿಡು ಎಂದು ಹೇಳಿ ಹೋಗುತ್ತಾನೆ. ಆದರೆ ದಿವ್ಯಾ ಮಾತ್ರ ನಾನು ಡೈವರ್ಸ್ ಯಾವುದೇ ಕಾರಣಕ್ಕೂ ಕೂಡ ಕೊಡುವುದು ಇಲ್ಲ , ದಯವಿಟ್ಟು ನನ್ನ ಬಿಟ್ಟು ಹೋಗಬೇಡ ಎಂದು ಹೇಳುತ್ತಾಳೆ.
ದಿವ್ಯ ಮೇಲೆ ನಂಬಿಕೆ ಕಳೆದುಕೊಂಡನ ಬಾಲ
ಬಾಲ ಅತ್ತೆ ಮಗಳು ಕೂಡ ಸೊಪ್ಪು ಹಾಕುತ್ತಾಳೆ ಇವತ್ತು ಏನು ನಾಟಕ ಮಾಡಿಕೊಂಡು ನಿಂತಿದ್ದಾಳೆ ಏನೋ, ನಾಳೆ ಕೂಡ ಇದೇ ರೀತಿ ಮಾಡಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಎಂದು ಕೊಂಚ ಜೋರಾಗಿ ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ದಿವ್ಯಾಳ ಅಳು ನಿಲ್ಲಿಸಲಾಗುತ್ತಿಲ್ಲ, ಬಾಲನನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೆ ಎನ್ನುವ ಭೀತಿಯಲ್ಲಿ ಇರುತ್ತಾಳೆ.


Click it and Unblock the Notifications











