Sathya: ಕೀರ್ತನಾ ಮಾತಿಗೆ ಸೊಪ್ಪು ಹಾಕದ ಮನೆಮಂದಿ; ಕಾರ್ತಿಕ್ ಸ್ಥಿತಿಗೆ ಜಾನಕಿ ಕಣ್ಣೀರು
ಸತ್ಯಗೆ ಇದೀಗ ಆಕೆಯ ಗಂಡನ ಮನೆಯಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಯಾರು ಮಾಡಲಾಗದ ಕೆಲಸವನ್ನು ದಿಟ್ಟ ಹೆಣ್ಣಾಗಿ ಸತ್ಯ ಮಾಡಿದ್ದಾಳೆ ಎನ್ನುವ ಹೆಮ್ಮೆ ಮನೆ ಮಂದಿಗೆ. ಕಾರ್ತಿಕ್‌ನನ್ನು ನಿರಪರಾಧಿ ಎಂದು ಗೊತ್ತಾಗಿ ಆಕೆಯ ಮೇಲಿದ್ದ ದೊಡ್ಡ ಹೊರೆ ಇಳಿಸುವಂತಾಗಿದೆ.
ಕಾರ್ತಿಕ್ ಜೈಲಿಗೆ ಹೋದಾಗ ಸತ್ಯ ಮೇಲೆ ಎಲ್ಲರೂ ತಿರುಗಿ ಬಿದ್ದಿದ್ದರು. ಕಾರ್ತಿಕ್ ಬಂಧನಕ್ಕೆ ಕಾರಣ ಕೇಳುತ್ತಿದ್ದರು. ಆದರೆ ಸತ್ಯ ಏನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆಕೆಗೆ ಬಹಳ ನೋವಾಗಿತ್ತು. ಕೊನೆಗೂ ಅಪರಾಧಿ ಯಾರು ಎನ್ನುವುದನ್ನು ಮನೆಮಂದಿಗೆ ಗೊತ್ತಾಗುವಂತೆ ಮಾಡಿದ್ದಾಳೆ.

ಸತ್ಯ ಹಾಗೂ ಕಾರ್ತಿಕ್ ಮನೆಗೆ ಬಂದ ವೇಳೆ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ಸತ್ಯ ಮನೆಗೆ ಬಂದವಳೇ ಕೀರ್ತನಾ ಎಂದು ಜೋರಾಗಿ ಕರೆಯುತ್ತಾರೆ. ಆದರೆ ಕೀರ್ತನಾ ಅಷ್ಟು ಬೇಗ ಮನೆ ಮಂದಿಗೆ ಕಾಣಿಸುವುದು ಇಲ್ಲ. ಸತ್ಯ ಕೂಗು ಕೇಳಿ ಕರೆಯುತ್ತಿರುವುದನ್ನು ನೋಡಿದ ಕೀರ್ತನಾ ಮೆತ್ತಗೆ ಮನೆಯಿಂದ ಹೊರಗೆ ಬರುತ್ತಾಳೆ. ಕೀರ್ತನಾಳನ್ನು ನೋಡಿದ ಸತ್ಯ ಆಕೆಯ ಕೆನ್ನೆಗೆ ಬಾರಿಸುತ್ತಾಳೆ. ಎಲ್ಲಕ್ಕೂ ನೀನೆ ಕಾರಣ ಎನ್ನುತ್ತಾಳೆ.
ಮಾವ ಆಫೀಸ್‌ನಲ್ಲಿ ಕಟ್ಟುನಿಟ್ಟಾಗಿ ಇದ್ದರು. ಹಾಗಾಗಿ ಹಣ ಮಾಡಲು ನಿನಗೆ ಆಗುತ್ತಿರಲಿಲ್ಲ. ಆದರೆ ಇದೀಗ ಮಾತ್ರೆಗಳ ದಂಧೆ ಮಾಡಿ ಎಷ್ಟು ಜನರ ಪ್ರಾಣ ನೀನು ತೆಗೆದುಬಿಟ್ಟು, ಕಾರ್ತಿಕ್ ಮೇಲೆ ತಪ್ಪು ಹೊರಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ರಾಯರು, ಸೀತಾಗೆ ಶಾಕ್ ಆಗುತ್ತದೆ. ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರಿಗೆ ಅರಿವು ಕೂಡ ಆಗಲ್ಲ.
ಕೀರ್ತನಾ ಮುಖವಾಡ ಬಯಲು
ಇನ್ನೂ ಮಾತ್ರೆಗಳ ದಂಧೆಯಲ್ಲಿ ಪಾಲ್ಗೊಂಡಿದ್ದು ಕೀರ್ತನ, ಆದರೆ ಅದರ ಪಾಲುದಾರಿಕೆ ಪಡೆದುಕೊಂಡಿದ್ದ ಕಾರ್ತಿಕ್ ಮೇಲೆ ಆಪಾದನೆ ಹೊರಿಸಿ ನೈಸ್ ಆಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ ಎಂದು ಹೇಳಿದಾಗ ಸೀತಾಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಆಕೆಗೆ ಸಿಟ್ಟು ಕೂಡ ಬರುತ್ತದೆ. ರಾಮಚಂದ್ರ ರಾಯರು, ಸತ್ಯ ಬಳಿ ಕೂಡಲೇ ಅರೆಸ್ಟ್ ಮಾಡುವಂತೆ ಸೂಚನೆ ನೀಡುತ್ತಾಳೆ. ಅದಕ್ಕೆ ಸೀತಾ ಕೂಡ ಸಾಥ್ ನೋಡುತ್ತಾಳೆ. ಇಂತಹ ಮಗಳು ಇದ್ದರೆ ಎಷ್ಟು, ಹೋದರೆ ಎಷ್ಟು. ನನಗೆ ಬಹಳ ಬೇಸರವಾಗಿದೆ. ಸತ್ಯ ಈಕೆಯನ್ನು ಇಲ್ಲಿಂದ ಬೇಗ ಕರೆದುಕೊಂಡು ಹೋಗು ಎಂದು ಹೇಳುತ್ತಾಳೆ.

ಸತ್ಯಗೆ ಬಂತು ಧೈರ್ಯ
ಅತ್ತೆ, ಮಾವನ ಮಾತು ಕೇಳಿದ ಸತ್ಯಗೆ ಆನೆ ಬಲ ಬಂದ ಹಾಗೆ ಆಗುತ್ತದೆ. ಆಕೆಯನ್ನು ಅರೆಸ್ಟ್ ಮಾಡುತ್ತಾಳೆ. ಜೈಲಿಗೆ ಅಟ್ಟುತ್ತಾಳೆ. ಕೀರ್ತನ ಅದೆಷ್ಟೇ ಬೇಡಿಕೊಂಡರು ಸತ್ಯ ಮಾತ್ರ ಆಕೆಯ ಮಾತನ್ನು ಕಿವಿಗೆ ಕೂಡ ಹಾಕಿಕೊಳ್ಳುವುದು ಇಲ್ಲ. ಇನ್ನೂ ಕೀರ್ತನಾ ಜಾಮೀನಿನ ಮೂಲಕ ಜೈಲಿನಿಂದ ಹೊರಗೆ ಬರುತ್ತಾಳೆ. ಆಕೆ ನೇರವಾಗಿ ತನ್ನ ತವರು ಮನೆಯತ್ತ ಹೋಗುತ್ತಾಳೆ. ಆಕೆಯನ್ನು ನೋಡಿದ ಸೀತಾ ಮಾತ್ರ ಇನ್ನು ಈ ಮನೆಯಲ್ಲಿ ನಿನಗೆ ಜಾಗ ಇಲ್ಲ. ಇಲ್ಲಿಂದ ಹೊರಟು ಹೋಗು ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ.
ನೀನು ಮಗಳೇ ಅಲ್ಲ ಎಂದ ಸೀತಾ
ತಾಯಿ ಮಾತು ಕೇಳಿದ ಕೀರ್ತನಗೆ ಏನು ಹೇಳಬೇಕು ಎನ್ನುವುದು ಗೊತ್ತಾಗಲ್ಲ. ಆಕೆ ತಪ್ಪಾಯಿತು ಎಂದು ಅದೆಷ್ಟೇ ಕೇಳಿಕೊಂಡರೂ ಆಕೆಯ ತಂದೆ ತಾಯಿ ಮಾತ್ರ ಕರಗಲಿಲ್ಲ. ಹಾಗೆಯೇ ಜಾನಕಿ ತನ್ನ ಅಳಿಯನನ್ನು ನೋಡಲು ಸತ್ಯ ಮನೆಗೆ ಬರುತ್ತಾಳೆ. ಆಕೆಯ ಜೊತೆ ಬಾಲ ಕೂಡ ಬರುತ್ತಾನೆ. ಕಾರ್ತಿಕ್ ಸ್ಥಿತಿ ನೋಡಿ ಇಬ್ಬರೂ ಬಹಳ ಬೇಸರ ಪಟ್ಟುಕೊಂಡಿರುತ್ತಾರೆ.


Click it and Unblock the Notifications











