ಸತ್ಯ ಧಾರವಾಹಿ: ಕಾರ್ತಿಕ್-ದಿವ್ಯ ಮದುವೆ ನಡೆಯುತ್ತಾ?

By ಪೂರ್ವ

ಸತ್ಯ ಧಾರವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರವಾಹಿಯಾಗಿದೆ. ಕಾರ್ತಿಕ್, ದಿವ್ಯಾನ ಇಷ್ಟ ಪಟ್ಟರೆ ರೌಡಿ ಬೇಬಿ ಸತ್ಯ ಮಾತ್ರ ಅಮೂಲ್ ಬೇಬಿನ ಪ್ರೀತಿ ಮಾಡುತ್ತಿದ್ದಾಳೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ. ಆದ್ರೆ ದಿವ್ಯನ ಸತ್ಯ ಎಷ್ಟು ಉರಿಸುತ್ತಿದ್ದಾಳೆ ಎಂದರೆ ದಿವ್ಯ ಕೊನೆಗೆ ಸಪ್ಪೆ ಮುಖ ಹಾಕಿ ಕುಳಿತುಕೊಳ್ಳುತ್ತಾಳೆ. ದಿವ್ಯನಿಗೆ ಕಾರ್ತಿಕ್ ಕಂಡರೆ ಅಷ್ಟಕ್ಕಷ್ಟೆ. ಬಾಲನನ್ನು ಯಾವುದೇ ಕಾರಣಕ್ಕೂ ಮದುವೆಗೆ ಹಾಜರಾಗದ ಹಾಗೆ ತಡೆದಿದ್ದಾಳೆ ಸತ್ಯ. ಬಾಲನ ಕಂಡರೆ ದಿವ್ಯಾನಿಗೆ ಪ್ರೀತಿ, ಕಾರ್ತಿಕ್‌ನ ಮೇಲಿನ ಪ್ರೀತಿ ಅವನ ಶ್ರೀಮಂತಿಕೆಗೋಸ್ಕರ ಹಾಗೆಯೇ ಬಾಲ ಮೇಲಿನ ಪ್ರೀತಿ ಕೂಡ ಹಾಗೆನೇ, ತನಗೆ ಹೇಗಾದರೂ ಇರಬಹುದು, ಇಷ್ಟ ಬಂದವರೊಟ್ಟಿಗೆ ಮಾತಾಡಬಹುದು, ತನ್ನ ಪಾಡಿಗೆ ಇರಬಹುದು ಎಂದು ಬಾಲನನ್ನು ಮದುವೆಯಾಗಲು ಎಲ್ಲರನ್ನು ಎದುರುಹಾಕಿಕೊಳ್ಳಲು ರೆಡಿ ಇದ್ದಾಳೆ ದಿವ್ಯಾ, ಆದರೆ ಸತ್ಯ ಮೇಲಿನ ಭಯಕ್ಕೋಸ್ಕರ ಸ್ವಲ್ಪ ಹಿಂಜರಿಯುತ್ತಿದ್ದಾಳೆ.

ಸತ್ಯಳಿಗೆ ಅಮೂಲ್ ಬೇಬಿ ಎಂದರೆ ಎಲ್ಲಿಲ್ಲದ ಅಕ್ಕರೆ. ಆತನನ್ನು ಕಂಡರೆ ಬಲು ಇಷ್ಟ ನಮ್ಮ ಸತ್ಯನಿಗೆ ಆದರೆ ಸತ್ಯನ ಕಂಡರೆ ಅದೇಕೋ ಕಾರ್ತಿಕ್ ಸಿಡಿ ಸಿಡಿ ಎನ್ನುತ್ತಾನೆ. ಕಾರ್ತಿಕ್‌ನನ್ನು ಎಷ್ಟು ಗೋಳು ಹೋಯ್ದುಕೊಳ್ಳಬೇಕೋ ಅಷ್ಟು ಗೋಳು ಹೊಯ್ದುಕೊಳ್ಳುತ್ತಿದ್ದಾಳೆ ಸತ್ಯ. ಆದರೆ ಇದನ್ನೆಲ್ಲ ನೋಡುತ್ತಿದ್ದ ಕಾರ್ತಿಕ್ ತಾಯಿ ಸತ್ಯಳನ್ನು ನಿಲ್ಲಿಸಿ ಬೈದಿದ್ದಾರೆ. ಆದರೂ ಇದಕ್ಕೆಲ್ಲ ಕೇರ್ ಮಾಡದ ಸತ್ಯ. ತನಗೆ ಹೇಗೆ ತೋಚುತ್ತದೋ ಹಾಗೆ ನಡೆದುಕೊಳ್ಳುತ್ತಾಳೆ. ಇತ್ತ ಕಾರ್ತಿಕ್ ಸತ್ಯಳ ಕೈಯಲ್ಲಿ ಇದ್ದ ಗೋರಂಟಿಯನ್ನು ನೋಡಿ ಶಾಕ್ ಆಗಿದ್ದಾನೆ.

ಸತ್ಯ ಕೈಯಲ್ಲಿರುವ ಗೊರಂಟಿಯಲ್ಲಿ ಅಮೂಲ್ ಬೇಬಿ ಕಾರ್ತಿಕ್ ಹೆಸರಿನ ಮೊದಲ ಅಕ್ಷರ ಕೆ ಎಂದು ಮೆಹೆಂದಿ ಇಡುವಾಕೆ ಬರೆದಿದ್ದಾರೆ. ಇದನ್ನು ಕಂಡ ಕಾರ್ತಿಕ್ ಕೆಂಡಾಮಂಡಲನಾಗಿದ್ದಾನೆ. ಸತ್ಯ ಮದುವೆ ನಿಲ್ಲಿಸುವ ಉದ್ದೇಶದಲ್ಲಿ ಇದ್ದಾಳೆ ಎನ್ನುವ ಅನುಮಾನ ಕಾರ್ತಿಕ್‌ನಲ್ಲಿ ಬಲವಾಗಿ ಮೂಡುತ್ತಿದೆ. ಕಾರ್ತಿಕ್ ಈ ಬಗ್ಗೆ ಸತ್ಯನ ಬಳಿ ವಿಚಾರಿಸಿದಾಗ ಆಕೆಗೆ ಆಗ ತಾನೆ ಈ ಬಗ್ಗೆ ತಿಳಿದಿರುತ್ತದೆ. ಆದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ಸತ್ಯ, ವಾಶ್ ರೂಂನಲ್ಲಿ ಕೈಯನ್ನು ಎಷ್ಟು ತೊಳೆದರು ಗೋರಂಟಿ ಹೋಯಿತೆ ವಿನಃ ಕೆ ಎಂದು ಬರೆದಿದ್ದು ಮಾತ್ರ ಹೋಗದೇ ಇರೊದಕ್ಕೆ ಸತ್ಯ ಕೊಂಚ ತಳಮಳ ಗೊಳ್ಳುತ್ತಾಳೆ.

Satya Serial Written Update of 27 April Episode

ಕಾರ್ತಿಕ್, ದಿವ್ಯಳ ಪ್ರೀತಿಯ ಬಲೆಯಲ್ಲಿ ಈಗಾಗಲೇ ಸಿಕ್ಕಿ ಬಿದ್ದಿದ್ದಾನೆ. ಒಬ್ಬರನ್ನೊಬ್ಬರು ನೋಡಬೇಕು, ಅವರ ಬಗ್ಗೆ ತಿಳಿದುಕೊಳ್ಳಬೇಕು ಅಲ್ವಾ, ಜೀವನ ಪೂರ್ತಿ ಜೊತೆಯಾಗಿರಬೇಕು ಎಂದು ಎನಿಸಬೇಕು ಅದೇ ಅಲ್ವಾ ಪ್ರೀತಿ, ನಾನು ಹೀಗೆ ಅಂದ್ಕೊಂಡಿದ್ದೆ , ದಿವ್ಯಾ ಅವರನ್ನ ನೊಡೋವರೆಗೂ ಲವ್ ಆಗೆ ಇರಲಿಲ್ಲ, ದಿವ್ಯನ ನೋಡಿದ ಮೇಲೆ ನನ್ನ ಎಲ್ಲ ಆಲೋಚನೆಗಳು ಉಲ್ಟಾ ಆಯಿತು. ದಿವ್ಯಾನ ನೋಡಿದ ದಿನನೇ ನಾನು ಲವ್‌ಲ್ಲಿ ಬಿದ್ದೋದೆ, ಮದುವೆ ಆಗೋದಾದ್ರೆ ಇವಳನ್ನೇ ಎಂದು ಡಿಸೈಡ್ ಮಾಡಿಕೊಂಡೆ ನನಗೂ ಲವ್ ಆಗೊಯ್ತು. ಎಂದು ಕಾರ್ತಿಕ್ ಪ್ರೀತಿ ಬಗ್ಗೆ ಮನ ಬಿಚ್ಚಿ ವೇದಿಕೆಯಲ್ಲಿ ಮಾತನಾಡಿದ್ದಾನೆ. ಇಬ್ಬರ ನಡುವೆ ಪ್ರೀತಿ ಏನು ಏರ್ಪಡುತ್ತಿದೆ ಆದರೆ ಕಾರ್ತಿಕ್-ದಿವ್ಯಾಳನ್ನು ಮದುವೆ ಆಗಲು ಸಾಧ್ಯವಾ? ಈ ಮದುವೆ ನಡೆಯುತ್ತದೆಯಾ? ಪ್ರೇಕ್ಷಕರು ಕುತೂಹಲದಿಂದಿದ್ದಾರೆ.

More from Filmibeat

English summary
Satya Serial Written Update of 27 April Episode. Will Karthik and Divya marry each other.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X