ಕಾರ್ತಿಕ್, ದಿವ್ಯಾ ಅದ್ಧೂರಿ ಮದುವೆ ಸಂಭ್ರಮ: ಎದುರಾಗಲಿದೆಯೇ ವಿಘ್ನ?
ಸತ್ಯ ಧಾರಾವಾಹಿಯಲ್ಲಿ ಈಗಾಗಲೇ ಸಾಕಷ್ಟು ಟ್ವಿಸ್ಟ್‌ಗಳು ಎದುರಾಗಿವೆ. ಆದರೂ ಕೂಡ ಈ ಧಾರಾವಾಹಿಯ ಕುರಿತು ಪ್ರೇಕ್ಷಕರಿಗೆ ತಿಳಿದಿರದ ಅನೇಕ ರಹಸ್ಯಗಳಿವೆ. ಇದೀಗ ಕಾರ್ತಿಕ್ ಮತ್ತು ದಿವ್ಯಾ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದ್ದು, ಸತ್ಯಾಳೇ ಮುಂದೆ ನಿಂತು ಮದುವೆ ಕಾರ್ಯಕ್ರಮವನ್ನು ಮುಂದುವರೆಸಲು ಕಾರ್ತಿಕ್ ತಾಯಿ ಬಳಿ ಕೇಳಿಕೊಂಡು ಇದೀಗ ಮದುವೆ ಸಮಭ್ರಮದಲ್ಲಿ ಇಡೀ ಸತ್ಯ ತಂಡವೇ ಉತ್ಸುಕತೆಯಿಂದ ಭಾಗವಹಿಸಿದೆ. ಇದೀಗ ಸತ್ಯ ವೇಷ ಭೂಷಣಕ್ಕೆ ಕಾರ್ತಿಕ್ ತಾಯಿ ವಿರೋಧ ವ್ಯಕ್ತಪಡಿಸಿದ್ರು ಸತ್ಯ ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ.
ಇದೀಗ ಮದುವೆ ಸಲುವಾಗಿ ಸತ್ಯ ಗ್ಯಾರೇಜ್, ಮನೆ ಬಿಟ್ಟು ತೆರಳುವ ನಿರ್ಧಾರಕ್ಕೆ ಬಂದಿದ್ದಾಳೆ. ತಂದೆ ಅಗಲಿದ ನಂತರ ಇಡೀ ಮನೆ ಜವಾವ್ದಾರಿಯನ್ನು ತೆಗೆದುಕೊಳ್ಳುವ ಸತ್ಯ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಅಕ್ಕನ ಮದುವೆಗೆಂದು ಹಣ ಕೂಡಿಡುತ್ತಿದ್ದಳು ಇದೀಗ ಅಕ್ಕನ ಮದುವೆಗೋಸ್ಕರ ಎಲ್ಲವನ್ನು ತೊರೆದಿದ್ದಾಳೆ ಎಂದರೆ ತಪ್ಪಾಗದು. ಅಕ್ಕನ ಮದುವೆಗೊಸ್ಕರ ಹಾಗೆಯೇ ಅಕ್ಕನ ಮೇಲಿರುವ ಪ್ರೀತಿಗೆ ಸತ್ಯ ಏನು ಮಾಡಲು ಹಿಂದು ಮುಂದು ನೋಡುವುದಿಲ್ಲ ಎಂಬುವುದು ಇದಕ್ಕೆ ನಿದರ್ಶನವಾಗಿದೆ.
ಗ್ಯಾರೇಜ್‌ಗೆ ಆಗಮಿಸಿದ ಸೀತಾ ಸತ್ಯಳೊಂದಿಗೆ ಮಾತುಕತೆ ನಡೆಸಿ ಸತ್ಯಳನ್ನು ನಿಂದಿಸುತ್ತಾಳೆ. ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಸತ್ಯ ತನ್ನ ಅಕ್ಕನ ಮದುವೆ ನಡೆದರೆ ಸಾಕು ಎಂದುಕೊಂಡಿದ್ದಾಳೆ. ಇದೀಗ ಮೆಹೆಂದಿ ಶಾಸ್ತ್ರ ನಡೆಯುತ್ತಿದ್ದು ಸತ್ಯಳ ಕೈಗೆ ಒಬ್ಬಾಕೆ ಗೊರಂಟಿ ಇಟ್ಟಿದ್ದಾಳೆ ಅದರಲ್ಲಿ ಒಂದು ಕೈಯಲ್ಲಿ ಎಸ್ ಒಂದು ಕೈಯಲ್ಲಿ ಕೆ ಎಂದು ಬರೆಯಲಾಗಿದೆ. ಇದನ್ನು ನೋಡಿದ ಕಾರ್ತಿಕ್ ಕುಪಿತಗೊಂಡು ಈ ರೀತಿಯ ಗೋರಂಟಿ ಯಾರು ಹಚ್ಚಿರುವುದು ಎಂದು ಗುಣಾಗಾಡುತ್ತಾನೆ ಸತ್ಯಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಈ ವಿಚಾರ ಸತ್ಯನಿಗೆ ಗೊತ್ತೆ ಇರುವುದಿಲ್ಲ.

ಸತ್ಯ ಕಾರ್ತಿಕ್‌ನಲ್ಲಿ ಮೊದಲಿನ ರೀತಿಯಲ್ಲಿ ತನ್ನ ಗೆಳೆಯನನ್ನು ಕಾಣುತಿರುತ್ತಾಳೆ. ಇತ್ತ ದಿವ್ಯಾಳಿಗೆ ಕಾರ್ತಿಕ್ ಜೊತೆ ಮದುವೆಯಾಗಲು ಚೂರು ಇಷ್ಟವೇ ಇಲ್ಲ. ಆದ್ರೂ ಬಲವಂತಕ್ಕೆ ಮದುವೆಗೆ ಒಪ್ಪಿದ್ದಾಳೆ ಆಕೆಗೆ ಹಣದ ಮೇಲಿನ ವ್ಯಾಮೋಹವೇ ಅಧಿಕವಾಗಿದೆ. ಒಟ್ಟಿನಲ್ಲಿ ಸತ್ಯ ಧಾರಾವಾಹಿಯಲ್ಲಿ ಮುಂದೇನಾಗಬಹುದು ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.


Click it and Unblock the Notifications











