Ask me Anything ಎಂದ ನಟಿ: ಡೇಟಿಂಗ್‌ಗೆ ಕರೆದ ಅಭಿಮಾನಿ

By ಪ್ರಿಯಾ ದೊರೆ

ಕಿರುತೆರೆ ನಟಿ ಶ್ವೇತಾ ಪ್ರಸಾದ್ ಧಾರಾವಾಹಿಯಲ್ಲಿ ಮಿಂಚುವುದಕ್ಕಿಂತಲೂ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಾರೆ. ನಾಯಕಿಯಾಗಿ ಕಾಣಿಸಿಕೊಳ್ಳದಿದ್ದರೂ ಕಿರುತೆರೆಯಿಂದ ದೂರ ಉಳಿಯದೇಯೇ ಅಥಿತಿ ಪಾತ್ರಗಳ ಮೂಲಕ ಆಗಾಗ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅದನ್ನು ಹೊರತು ಪಡಿಸಿದರೆ ತಮ್ಮದೇ ಎನ್‌ಜಿಒ ಹೊಂದಿದ್ದಾರೆ. ವಿವಿಧ ಬಿಸಿನೆಸ್ ಅನ್ನು ಕೂಡ ನಡೆಸುತ್ತಿದ್ದಾರೆ. ಅಲ್ಲದೇ ಫೋಟೋ ಶೂಟ್, ಪ್ರೊಮೋಷನ್ ವೀಡಿಯೋ, ಮಾಡೆಲಿಂಗ್ ಮಾಡುತ್ತಾ ಬ್ಯುಸಿಯಾಗಿರುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಶ್ವೇತಾ ಪ್ರಸಾದ್ ಅವರು ಅಭಿಮಾನಿಗಳ ಕಮೆಂಟ್ ಗಳಿಗೂ ಆಗಾಗ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.

Savarkar And Golwalkar Ambedkar Was Against Constitution Says Siddaramaiah

ಕೆಲವೊಮ್ಮೆ ಆಸ್ಕ್ ಮಿ ಎನಿಥಿಂಗ್ ಎಂದು ಹೇಳಿ ಸ್ಟೇಟಸ್ ಹಾಕುತ್ತಿರುತ್ತಾರೆ. ಆಗ ಅಭಿಮಾನಿಗಳು ತಮ್ಮ ಮನದಲ್ಲಿ ಯಾವುದಾದರೂ ಪ್ರಶ್ನೆಗಳಿದ್ದರೆ ಕೇಳಿ ಉತ್ತರ ಪಡೆಯುತ್ತಾರೆ.

ಮಗುವಿನ ಬಗ್ಗೆ ಪ್ರಶ್ನೆ

ಇತ್ತೀಚೆಗೆ ನಟಿ ಶ್ವೇತಾ ಪ್ರಸಾದ್ ಅವರು ಅಭಿಮಾನಿಗಳಿಗಾಗಿ ಸಮಯ ನೀಡಿದ್ದಾರೆ. Ask me Anything ಎಂದು ಸ್ಟೇಟಸ್ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳು ನಟಿಯ ಜೊತೆಗೆ ಪ್ರಶ್ನೆ ಮಾಡುವ ಮೂಲಕ ಮಾತನಾಡಲು ಯತ್ನಿಸಿದ್ದಾರೆ. ನೀವು ಮಗುವನ್ನು ದತ್ತು ತೆಗೆದುಕೊಳ್ಳುತ್ತೀರಾ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟಿ ಶ್ವೇತಾ ಪ್ರಸಾದ್ ಅವರು ಇಲ್ಲ. ಇನ್ನೂ ದತ್ತು ಪಡೆಯಲು ಕಾಯುತ್ತಿದ್ದೇನೆ ಎಂದು ಉತ್ತರ ನೀಡಿದ್ದಾರೆ. ನಟಿ ಶ್ವಾತಾ ಪ್ರಸಾದ್ ಅವರನ್ನು ಈ ಹಿಂದೆಯೇ ಯಾಕೆ ನಿಮಗಿನ್ನು ಮಕ್ಕಳಾಗಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಇದಕ್ಕೆ ನಟಿಯೂ ಕೂಡ ನೇರವಾಗಿ ಇದು ತಮ್ಮ ವಯಕ್ತಿಕ ವಿಚಾರ ಎಂದು ಉತ್ತರ ಕೊಟ್ಟಿದ್ದರು.

ಹೇರ್ ಸ್ಟೈಲ್ ಬಗ್ಗೆ ಕುತೂಹಲ

ಇದೀಗ ಅಭಿಮಾನಿ ಕೇಳಿದ ಪ್ರಶ್ನೆಗೆ ಸಮಾಧಾನವಾಗಿ ಉತ್ತರ ಕೊಟ್ಟಿದ್ದಾರೆ. ಇನ್ನು ನಿಮ್ಮ ಹೇರ್ ಡು ಬಗ್ಗೆ ಕ್ಲೂ ಕೊಡಿ ಎಂದು ನಾಲ್ಕು ಸೆಕೆಂಡ್‌ನಲ್ಲಿ ನಾಲ್ವರು ಪ್ರಶ್ನೆ ಮಾಡಿದ್ದಾರಂತೆ. ಇನ್ನೊಬ್ಬರು ಬಾಬ್ ಹೇರ್ ಕಟ್ ಅನ್ನು ಮತ್ತೆ ಮಾಡಿಸಿಕೊಳ್ಳುವ ಪ್ಲಾನ್ ಇದೆಯಾ ಎಂದು ಪ್ರಶ್ನೆ ಮಾಡಿದ್ದು, ಅದಕ್ಕೆ ನಟಿ ಶ್ವೇತಾ ಅವರು ನಾನು ಮತ್ತೆ ತಲೆಕೂದಲಿಗೆ ಕತ್ತರಿ ಹಾಕಬೇಕಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ನೀವ್ಯಾಕೆ ಇಷ್ಟು ಪ್ರಿಟಿಯಾಗಿದ್ದೀರಾ ಎಂದು ಕೇಳಿದ್ದಕ್ಕೆ ನಟಿ ಶ್ವೇತಾ ಅವರು ನಾಚಿಕೊಂಡಿದ್ದಾರೆ.

ಡೇಟಿಂಗ್ ಬಗ್ಗೆ ಪ್ರಶ್ನೆ

ನನ್ನನ್ನು ಮದುವೆಯಾಗುತ್ತೀರಾ? ಎಂದು ಪ್ರಶ್ನಿಸಿದವರಿಗೆ ಫೇಕ್ ಪ್ರೊಫೈಲ್ ಎಂದು ಕಾಣಿಸುತ್ತದೆ ಎಂದಿದ್ದಾರೆ. ನಿಮ್ಮ ಜೊತೆಗೆ ಡೇಟ್ ಮಾಡಬಹುದಾ? ಎಂದಿದ್ದಕ್ಕೆ ಗುರ್ ಎಂದಿದ್ದಾರೆ. ನನ್ನ ಮದುವೆ ಆಗ್ತೀರಾ ಎಂದು ಮತ್ತೊಬ್ಬರು ಕೇಳಿದ್ದಾರೆ. 21 ದಿನದ ಚಾಲೆಂಜ್ ಹೇಗೆ ನಡೆಯುತ್ತಿದೆ ಎನ್ನುವುದು ಇನ್ನೊಬ್ಬರ ಪ್ರಶ್ನೆ. ಇದಕ್ಕೆ ನಟಿ ನಾನು ಅಷ್ಟು ಚೆನ್ನಾಗಿ ಮಾಡುತ್ತಿಲ್ಲ. ಯಾವುದಕ್ಕೂ 21ನೇ ದಿನದ ರಿಸಲ್ಟ್ ಕಾದು ನೋಡೋಣ ಎಂದಿದ್ದಾರೆ. ಕೊನೆಯದಾಗಿ ಬಿಗ್ ಬಾಸ್ ಸ್ಫರ್ಧಿ ನಟಿ ಸಂಜನಾ ಅವರು ಮತ್ತೆ ಯಾವಾಗ ನಾವು ಡೇಟ್ ಗೆ ತೆರಳೋದು ಎಂದು ಕೇಳಿದ್ದಾರೆ. ಇದಕ್ಕೆ ಶ್ವೇತಾ ಅವರು ಒಂದು ಫೋನ್ ಕರೆ ಸಾಕು ಎಂದು ಉತ್ತರಿಸಿದ್ದಾರೆ.

ಸಖತ್ ಬ್ಯುಸಿ ಶ್ವೇತಾ

ಇನ್ನು ನಟಿ ಶ್ವೇತಾ ಪ್ರಸಾದ್ ಅವರು ಯಾವುದಾದರೂ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾ, ಅಭಿಮಾನಿಗಳಿಗೆ ಹೊಸ ವಿಚಾರಗಳನ್ನು ತಿಳಿಸಿಕೊಡುತ್ತಿರುತ್ತಾರೆ. ಜನರಿಗೆ ಖುಷಿ ತರುವಂತಹ ಒಳ್ಳೆಯ ಕೆಲಸವನ್ನು ಮಾಡುತ್ತಾ ಇತರರಿಗೂ ಮಾದರಿಯಾಗಿರುವ ನಟಿ ಶ್ವೇತಾ ಪ್ರಸಾದ್ ಅವರು, ಹಾಟ್ ಲುಕ್‌ಗೂ ಸೈ, ಟ್ರೆಡಿಷನಲ್ ಲುಕ್‌ಗೂ ಜೈ ಎನ್ನುತ್ತಾರೆ. ಹೊಸತನಕ್ಕೆ ತುಡಿಯುವ ಶ್ವೇತಾ ಅವರು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಮಾಡುತ್ತಾರೆ.

More from Filmibeat

English summary
Actress Shwetha Prasad answered for fans questions;
Read more about: actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X