For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ 2ನೇ ವೈಲ್ಡ್ ಕಾರ್ಡ್ ಎಂಟ್ರಿ: ಕಿಶನ್ ಗೆ ಆಪ್ತೆ ಯಾರು ಈಕೆ?

  |
  Bigg Boss Bigg Boss Kannada 7 : Second wild card contestant made an entry to the road

  ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿ ಆರು ವಾರಗಳನ್ನು ಮುಗಿಸಿ, ಏಳನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಸುಜಾತ ಮನೆಯಿಂದ ಹೊರಬಂದಿದ್ದಾರೆ. ಇದೀಗ, ಏಳನೇ ವಾರದ ಮೊದಲ ದಿನವೇ ಬಿಗ್ ಬಾಸ್ ಶಾಕ್ ನೀಡಿದ್ದಾರೆ.

  ಈಗಾಗಲೇ ವೈಲ್ಡ್ ಕಾರ್ಡ್ ಮೂಲಕ ಪೃಥ್ವಿ ಮನೆಯೊಳಗೆ ಹೋಗಿದ್ದರು. ಮತ್ತ್ಯಾರು ವೈಲ್ಡ್ ಕಾರ್ಡ್ ಬರುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದ ಮನೆ ಸದಸ್ಯರಿಗೆ ಈಗ ಅಚ್ಚರಿ ಎದುರಾಗಿದೆ. ಹೌದು, ಸೋಮವಾರದ ಸಂಚಿಕೆಯಲ್ಲಿ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿಯ ಪ್ರವೇಶವಾಗಿದೆ.

  ಮೊದಲ ಸಲ ಕ್ಯಾಮರಾ ಮುಂದೆ ಬಂದ ಜೈಜಗದೀಶ್ ಮೊದಲ ಪತ್ನಿಯ ಮಗಳು!ಮೊದಲ ಸಲ ಕ್ಯಾಮರಾ ಮುಂದೆ ಬಂದ ಜೈಜಗದೀಶ್ ಮೊದಲ ಪತ್ನಿಯ ಮಗಳು!

  ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಯವತಿಯನ್ನ ನೋಡಿದ ಬಳಿಕ ಇತರೆ ಬಿಗ್ ಬಾಸ್ ಸದಸ್ಯರು ತೀವ್ರ ಅಚ್ಚರಿಗೊಳಗಾಗಿದ್ದಾರೆ. ವಿಶೇಷ ಅಂದ್ರೆ ಕಿಶನ್ ಗೆ ಈಕೆ ಆಪ್ತೆ. ಹಾಗಿದ್ರೆ ಯಾರದು? ಮುಂದೆ ಓದಿ.....

  ವೈಲ್ಡ್ ಕಾರ್ಡ್ ಸ್ಪರ್ಧಿ ನೋಡಿ ಅಚ್ಚರಿಯಾಗಿದ್ದೇಕೆ?

  ವೈಲ್ಡ್ ಕಾರ್ಡ್ ಸ್ಪರ್ಧಿ ನೋಡಿ ಅಚ್ಚರಿಯಾಗಿದ್ದೇಕೆ?

  ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಆಟಕ್ಕೆ ಮತ್ತೊಬ್ಬ ಸ್ಪರ್ಧಿ ಎಂಟ್ರಿಯಾಗಿದ್ದಾರೆ. ಅಧಿಕೃತವಾಗಿ ಆ ವೈಲ್ಡ್ ಕಾರ್ಡ್ ಸ್ಪರ್ಧಿ ಯಾರು ಎಂದು ಬಹಿರಂಗಪಡಿಸಿದ ಬಿಗ್ ಬಾಸ್, ಅವರ ಎಂಟ್ರಿಯ ಪ್ರೋಮೋ ಬಿಡುಗಡೆ ಮಾಡಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯನ್ನ ನೋಡಿ ಮನೆಯ ಇತರೆ ಎಲ್ಲ ಸದಸ್ಯರು ಅಚ್ಚರಿಯಾಗಿದ್ದಾರೆ.

  ಸೃಜನ್-ಅಕುಲ್ ಗೆ ಆದಂತೆ, ವಾಸುಕಿ-ಚಂದನ್ ವಿಷ್ಯದಲ್ಲೂ ಆಗಬಹುದು!ಸೃಜನ್-ಅಕುಲ್ ಗೆ ಆದಂತೆ, ವಾಸುಕಿ-ಚಂದನ್ ವಿಷ್ಯದಲ್ಲೂ ಆಗಬಹುದು!

  ಕಿಶನ್ ಗೆ ಆಪ್ತೆ

  ಕಿಶನ್ ಗೆ ಆಪ್ತೆ

  ಹೊಸದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿರುವ ಆ ಯುವತಿ ಬಿಗ್ ಬಾಸ್ ಮನೆಯೊಳಗೆ ಯಾರಿಗೂ ಪರಿಚಯ ಇಲ್ಲ ಎಂಬ ಮಾಹಿತಿ ಇದೆ. ಆದರೆ, ಕಿಶನ್ ಗೆ ಈ ಮೊದಲೇ ಪರಿಚಯ ಮತ್ತು ಬಹಳ ಆಪ್ತೆ ಎನ್ನುವುದು ಪ್ರೋಮೋದಲ್ಲಿ ಗೊತ್ತಾಗಿದೆ. ಯಾಕಂದ್ರೆ, ವೈಲ್ಡ್ ಕಾರ್ಡ್ ಸ್ಪರ್ಧಿ ಕಿಶನ್ ಅವರನ್ನ ತಬ್ಬಿಕೊಂಡಿರುವ ಪ್ರೋಮೋ ಈ ಕುತೂಹಲಕ್ಕೆ ಕಾರಣವಾಗಿದೆ.

  ಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ 'ಎಂಡೆಮೊಲ್': ಇತಿಹಾಸ ನಿರ್ಮಿಸಿದ ತೆಲುಗು

  ರಕ್ಷಾ ಸೋಮಶೇಖರ್ !

  ರಕ್ಷಾ ಸೋಮಶೇಖರ್ !

  ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವುದು ನಟಿ ರಕ್ಷಾ ಸೋಮಶೇಖರ್ ಎನ್ನಲಾಗಿದೆ. ಕಾರ್ತಿಕ್ ಜಯರಾಂ ನಟಿಸಿದ್ದ ಮೇ 1 ಚಿತ್ರದಲ್ಲಿ ರಕ್ಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈಕೆಯೇ ಈಗ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿರುವುದು ಎನ್ನಲಾಗಿದೆ.

  ಲೆಕ್ಕಾಚಾರ ಏನಾಗಲಿದೆ?

  ಲೆಕ್ಕಾಚಾರ ಏನಾಗಲಿದೆ?

  ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಪೃಥ್ವಿ ಮನೆಯೊಳಗೆ ಬಂದಾಗ, ಅವರು ಕೂಡ ಯಾರಿಗೂ ಅಡ್ಜಸ್ಟ್ ಆಗಿರಲಿಲ್ಲ. ಈಗ ಎರಡನೇ ಸ್ಪರ್ಧಿ ಬಂದಿರುವುದು ಮನೆಯ ಇತರೆ ಸದಸ್ಯರ ಲೆಕ್ಕಾಚಾರಕ್ಕೆ ಹುಳ ಬಿಟ್ಟಂತಿದೆ. ಇಂದಿನಿಂದ ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಹಂತದ ಆಟ ಶುರುವಾಗಬಹುದು ಎಂಬ ನಿರೀಕ್ಷೆ ಇದೆ.

  English summary
  Second wild card contestant entered to bigg boss kannada 7 house. according to source, actress raksha somashekar is the new contestant

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X