Bigg Boss ಬಿಗ್ ಬಾಸ್ ಬಿಗ್ ವೇದಿಕೆಯಲ್ಲಿ ಗುರುತಿಸಿಕೊಂಡು ಜನಪ್ರಿಯತೆ ಗಳಿಸಿದವರು ಇವರೇ ನೋಡಿ

By ಅನಿತಾ ಬನಾರಿ

ಬಿಗ್ ಬಾಸ್ ಕನ್ನಡ ಸೀಸನ್ 10 ಸದ್ಯ ಮುಗಿಯುವ ಹಂತಕ್ಕೆ ಬಂದಿದೆ. ಕಳೆದ ಹತ್ತು ವರ್ಷಗಳಿಂದಲೂ 10 ಸೀಸನ್‌ಗಳನ್ನು ಮುಗಿಸಿರುವ ಈ ಬಿಗ್ ಬಾಸ್‌ನಲ್ಲಿ ಬಂದಿರುವ ಎಲ್ಲಾ ಸ್ಪರ್ಧಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಾವಂತರು.

ಆದರೆ, ಎಷ್ಟೋ ಮಂದಿ ಸರಿಯಾದ ವೇದಿಕೆ ಸಿಗದೇ ತಮ್ಮ ಐಡೆಂಟಿಟಿಯನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಸಾಧ್ಯವಾಗದೆ ಹೋಯಿತು. ಬಿಗ್ ಬಾಸ್ ಅಂತವರಿಗೆ ವೇದಿಕೆ ಮಾಡಿಕೊಟ್ಟಿದೆ. ಅದನ್ನು ಹಲವರು ಉತ್ತಮವಾಗಿಯೇ ಬಳಸಿಕೊಂಡಿದ್ದಾರೆ.

See these are the personalities who got recognized from Bigg Boss show

ಒಳ್ಳೆ ಹುಡುಗ ಪ್ರಥಮ್

ಹೌದು ನಟ ನಿರ್ದೇಶಕ ಪ್ರಥಮ ಅವರು ಹಲವಾರು ವರ್ಷಗಳಿಂದ ಸಿನಿರಂಗದಲ್ಲಿ ಇದ್ದರೂ ಜನರಿಗೆ ಪರಿಚಯವೇ ಇರಲಿಲ್ಲ. ಬಿಗ್ ಬಾಸ್ ಸೀಸನ್ 4 ರಲ್ಲಿ ಇವರಿಗೆ ಬಹಳಷ್ಟು ಪಾಪುಲಾರಿಟಿ ಸಿಕ್ಕಿದ್ದಲ್ಲದೇ ಆ ಶೋವಿನ ವಿನ್ನರ್ ಆಗಿ ಅವರು ಹೊರಹೊಮ್ಮಿದರು. ತದ ನಂತರ ಪ್ರಥಮ್ ಅವರು ಸಿನಿಮಾಗಳಲ್ಲಿ ಅಭಿನಯಿಸಿದರೂ ಜನ ಇಂದಿಗೂ ಅವರನ್ನು ಬಿಗ್ ಬಾಸ್ ವಿನ್ನರ್ ಪ್ರಥಮ್ ಎಂದೇ ಗುರುತಿಸುತ್ತಾರೆ.

ಶೃತಿ ಪ್ರಕಾಶ್

ಕನ್ನಡದ ಅದ್ಭುತ ಗಾಯಕಿ ಶ್ರುತಿ ಪ್ರಕಾಶ್ ಅವರು ಜನರಿಗೆ ತಮ್ಮ ಸ್ವರದಿಂದ ಪರಿಚಯವಿದ್ದರೆ ಹೊರತು ಮುಖತಃ ಪರಿಚಯವಿರಲಿಲ್ಲ. ಈ ಕಲಾವಿದೆಗೆ ಬಿಗ್ ಬಾಸ್ ಒಂದೊಳ್ಳೆಯ ವೇದಿಕೆಯಾಯಿತು. ಸೀಸನ್ 5 ರ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಈಕೆ ಬಹಳಷ್ಟು ಜನ ಪ್ರೀತಿ, ಜನಪ್ರಿಯತೆಯನ್ನು ಪಡೆದರು. ಮುಂದೆ ನಟಿಯಾಗಿಯೂ ಭಡ್ತಿ ಗಾಯಕಿ ಪಡೆದರು.

See these are the personalities who got recognized from Bigg Boss show

ನಿವೇದಿತಾ ಗೌಡ

ಟಿಕ್ ಟಾಕ್ ವಿಡಿಯೋಗಳನ್ನು ಮಾಡಿಕೊಂಡಿದ್ದ ನಿವೇದಿತಾ ಗೌಡ ಅವರು ಜನಪ್ರಿಯತೆಯನ್ನು ಪಡೆದಿದ್ದು ಬಿಗ್ ಬಾಸ್ ವೇದಿಕೆ ಮೂಲಕ. ಬಾರ್ಬಿ ಡಾಲ್ ಎಂದೇ ಪ್ರಸಿದ್ಧಿ ಪಡೆದಿದ್ದ ಇವರು ಮುಂದೆ ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವೆಬ್ ಸಿರೀಸ್ ನಲ್ಲಿಯೂ ಮೋಡಿ ಮಾಡಿದ್ದಾರೆ.

ಶಶಿಕುಮಾರ್

ರೈತರೇ ದೇಶದ ಬೆನ್ನೆಲುಬು. ಶಶಿಕುಮಾರ್ ಬಿಗ್ ಬಾಸ್ ಸ್ಪರ್ಧಿಯಾಗಿ ಅದ್ಭುತವಾಗಿ ಆಟ ಮಾಡಿದರು. ರಾಜ್ಯದ ರೈತರನ್ನು ಪ್ರತಿನಿಧಿಸಿದ ಅವರು ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಕೂಡಾ ಹೆಗಲೇರಿಸಿಕೊಂಡಿದ್ದರು. ಮುಂದೆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ ಇವರು ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.

ಧನರಾಜ್

ಡಬ್ಬಿಂಗ್ ಆರ್ಟಿಸ್ಟ್ ಮಿಮಿಕ್ರಿ ಮ್ಯಾನ್, ವಾಯ್ಸ್ ಓವರ್ ಕಲಾವಿದ ಧನರಾಜ್ ಅವರು ತಮ್ಮ ಸ್ವರದ ಮೂಲಕ ಜನರಿಗೆ ಪರಿಚಿತರಿದ್ದರು. ಆದರೆ ಅವರ ಮುಖ ವೀಕ್ಷಕರಿಗೆ ಗೊತ್ತಾಗಿದ್ದು ಬಿಗ್ ಬಾಸ್ ಮೂಲಕ. ತಮ್ಮ ಒಳ್ಳೆಯತನ ಹಾಗೂ ಸ್ಪರ್ಧಾತ್ಮಕ ಮನೋಭಾವದಿಂದ ಬಹಳಷ್ಟು ಜನಪ್ರಿಯತೆಯನ್ನು ಪಡೆದರು.

ದಿವ್ಯಾ ಸುರೇಶ್

ನಟಿ ದಿವ್ಯ ಸುರೇಶ್ ಅವರು ಒಂದೆರಡು ಸಿನಿಮಾಗಳನ್ನು ಮಾಡಿದ್ದರೂ ಸಹ ಜನರಿಗೆ ಪರಿಚಯವಿರಲಿಲ್ಲ. ಬಿಗ್ ಬಾಸ್ ಸೀಸನ್ 9 ಆಗಿದೆ ಒಳ್ಳೆಯ ವೇದಿಕೆ ಹಾಗೂ ಜನಪ್ರಿಯನ್ನು ನೀಡಿತು. ಅಷ್ಟೇ ಅಲ್ಲದೆ ಸ್ಟ್ರಾಂಗ್ ಕಂಟೆಸ್ಟಂಟ್ ಎಂಬ ಹೆಗ್ಗಳಿಕೆಯನ್ನು ಆಕೆ ಪಡೆದುಕೊಂಡರು.

ಶಮಂತ್ ಗೌಡ

ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇದ್ದ ಬ್ರೋ ಗೌಡ ಅಲಿಯಾಸ್ ಶಮಂತ್ ಅವರು ಬಿಗ್ ಬಾಸ್ ನಿಂದ ಜನಪ್ರಿಯತೆಯನ್ನು ಪಡೆದಿದ್ದಷ್ಟೇ ಅಲ್ಲದೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ ನಾಯಕ ನಟನಾಗಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ಕನ್ನಡದ ಗಾಯಕನಾಗಿರುವ ಶಮಂತ್ ಈಗಾಗಲೇ ಕೆಲವು ಹಾಡುಗಳನ್ನು ಬರೆದಿದ್ದಾರೆ. ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

More from Filmibeat

English summary
Look at these personalities who gained popularity through the popular reality show Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X