Seetha Raama ; 'ಸಿಹಿ'ಯ ಅಗಲಿಕೆಯಿಂದ ಹುಚ್ಚಿಯಾದ ಸೀತಾ, ಕಂಗಾಲಾದ ಪ್ರೇಕ್ಷಕರು..!

By ಪೂರ್ವ

ಸೀತಾ ರಾಮ ಧಾರವಾಹಿಯೇನೋ ಅದ್ಭುತವಾಗಿ ಮೂಡಿ ಬರುತ್ತಿದೆ. ಆದರೆ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರೋಮೋ ವೊಂದು ಬಿಡುಗಡೆ ಆಗಿದ್ದು ಅಭಿಮಾನಿಗಳಲ್ಲಿ ಬಹಳಷ್ಟು ಕಾತರತೆ ಹೆಚ್ಚು ಮಾಡಿದೆ. ಪ್ರೋಮೋ ನೋಡಿದ ಅನೇಕ ಮಂದಿ ಸಿಹಿ ಪಾತ್ರಧಾರಿ ಎಂಡ್ ಆಗಿ ಬಿಡುತ್ತಾ ಎನ್ನುವ ಆಲೋಚನೆಯಲ್ಲಿ ಇದ್ದಾರೆ. ಸಿಹಿಗೆ ಸೀತಮ್ಮ ಹಾಗೆಯೇ ಅಪ್ಪ ಎಂದರೆ ಬಹಳ ಪ್ರೀತಿ. ಈಗಾಗಲೇ ಶ್ಯಾಮ್ ಕೈಯಲ್ಲಿ ಸಿಕ್ಕಿದ್ದ ಸಿಹಿಯನ್ನು ಸೀತಾ ಮಡಿಲಿಗೆ ಒಪ್ಪಿಸಲಾಗಿದೆ.

ಆದರೆ ಇನ್ನೂ ಪರ್ಮನೆಂಟ್ ಆಗಿ ಸೀತಾ ಬಳಿಯಲ್ಲಿಯೇ ಮಗು ಇರುವ ಹಾಗೆ ಮಾಡಬೇಕು ಎಂದು ಸಿಹಿ ತಾತ ನ ಇಚ್ಛೆ ಆಗಿರುತ್ತದೆ. ಸಿಹಿಯನ್ನು ನೋಡಿದ ಶಾಲಿನಿಗೆ ಕೂಡ ಆಕೆಯ ಮೇಲೆ ಪ್ರೀತಿ ಅಷ್ಟಕಷ್ಟೇ ಇರುತ್ತದೆ. ಶಾಲಿನಿ ಯ ಮಾತಿನೇಟಿ ಗೆ ಇನ್ನಷ್ಟು ಕುಗ್ಗಿದ್ದಳು ಸಿಹಿ. ಸಿಹಿ ತನ್ನ ತಾಯಿಗೆ ಯಾವುದೇ ರೀತಿಯ ನೋವು ಆಗಬಾರದು ಆಕೆ ಚೆನ್ನಾಗಿ ಇರಬೇಕು ಎನ್ನುವ ಆಲೋಚನೆ ಆಕೆಗೆ. ಪುಟ್ಟ ಹೃದಯದ ಒಳಗೆ ಅಮ್ಮನಿಗೆ ಬಹಳ ದೊಡ್ಡ ಗೋಪುರ ಕಟ್ಟಿದ್ದಳು ಸಿಹಿ. ಇದಕ್ಕಿಂತ ಮುಂಚಿತವಾಗಿಯೇ ಪ್ರೋಮೋ ವೊಂದನ್ನು ಸೀತಾ ರಾಮ ತಂಡ ರಿಲೀಸ್ ಮಾಡಿತ್ತು. ಇದರಲ್ಲಿ ಸಿಹಿಗೆ ಆಕ್ಸಿಡೆಂಟ್ ಆಗುವ ಸೀನ್ ತೋರಿಸಲಾಗಿದ್ದು . ಆಗ ಬಳಿಕ ಸಿಹಿಯ ಆತ್ಮ ಬಾಡಿಯಿಂದ ಹೊರ ಬಂದಿತ್ತು.

Seetarama serial 26th November written update

ಸಿಹಿ ಎಲ್ಲರ ಪಾಲಿಗೆ ಸತ್ತು ಹೋಗಿದ್ದಳು ಆದರೆ ಆ ಪುಟ್ಟ ಮಗುವಿಗೆ ತನ್ನನ್ನು ಯಾಕೆ ಯಾರು ನೋಡಿಯು ನೋಡದ ಹಾಗೆ ಮಾಡುತ್ತಾರೆ. ಅಪ್ಪ ಅಮ್ಮ ಯಾರು ನನ್ನ ಗುರುತು ಹಿಡಿಯುತ್ತಿಲ್ಲ ಯಾಕೆ ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇದೀಗ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ ಇದರಲ್ಲಿ ಮನೆಯ ಒಳಗೆ ನೇರವಾಗಿ ಸಿಹಿ ಬರುತ್ತಾಳೆ ಆಕೆಗೆ ತನ್ನ ತಂದೆ ಒಂದು ಪ್ಲೇಟ್ ನಲ್ಲಿ ಊಟ ಹಿಡಿದು ನಿಂತಿರುತ್ತಾರೆ. ರಾಮ್ ಮುಖ ಬಹಳ ಭಾವುಕವಾಗಿದ್ದು ತನ್ನ ಮಗಳನ್ನು ಕಳೆದುಕೊಂಡ ನೋವು ಆತನ ಮೊಗದಲ್ಲಿ ಎದ್ದು ಕಾಣುತ್ತಿತ್ತು.

ಮಗಳ ಸಾವಿನ ಸುದ್ದಿ ಕೇಳಿ ಹುಚ್ಚಿಯಾದ ಸೀತಾ

ಸೀತಾ ಗೆ ಮಗಳೆಂದರೆ ಪ್ರಾಣ . ಅಂತಹದ್ದರಲ್ಲಿ ಮಗಳೇ ಇನ್ನೂ ಇಲ್ಲ ಎಂದು ಗೊತ್ತಾದಾಗ ಆಕೆಗೆ ಆಗುವ ಆಘಾತ ಅಷ್ಟಿಷ್ಟಲ್ಲ. ಆಕೆ ತನ್ನ ಮಗಳ ನೆನಪಿನಲ್ಲಿ ಸೋತು ಹೋಗಿ ಬಿಟ್ಟಿದ್ದಾಳೆ. ಹಾಗೆಯೇ ಆಕೆಗೆ ಹುಚ್ಚೇ ಹಿಡಿದಿರುತ್ತದೆ. ಮನೆಗೆ ಬಂದ ಪುಟ್ಟ ಸಿಹಿಯ ಆತ್ಮ ತಂದೆಯನ್ನು ಕರೆಯುತ್ತಾಳೆ. ಆದರೆ ರಾಮ್ ಗೆ ಯಾವುದು ಕೇಳಿಸುವುದು ಇಲ್ಲ. ಸಿಹಿ ತನ್ನ ಫೋಟೋ ಗೆ ಹಾರ ಹಾಕಿರುವುದನ್ನು ನೋಡಿ ಅರೆರೆ ಇದ್ಯಾಕೆ ನನ್ನ ಫೋಟೋ ಗೆ ಹಾರ ಹಾಕಿದ್ದಾರೆ ಎಂದು ಯೋಚನೆ ಮಾಡುತ್ತಾಳೆ.

ರಾಮ್ ನನ್ನು ನೋಡಿ ಭಯಬಿದ್ದ ಸೀತಾ

ಇತ್ತ ರಾಮ ಸೀತಾ ರೂಮ್ ಕಡೆ ಬಂದಾಗ ಸೀತಾ ಭಯದಿಂದ ನನ್ನ ಸಿಹಿಯನ್ನು ನಾನು ಯಾರಿಗೂ ಕೊಡಲ್ಲ ಎನ್ನುವ ಮಾತನ್ನು ಬಹಳ ಭಯದಿಂದ ಹೇಳುತ್ತಾಳೆ. ಹಾಗೆಯೇ ರಾಮ್ ತನ್ನ ಹೆಂಡತಿಯ ಬಳಿ ಮಾತನಾಡಲು ಬರುತ್ತಾಳೆ. ಆದರೆ ಅದ್ಯಾವುದಕ್ಕೂ ಆಸ್ಪದ ಕೊಡದ ಸೀತಾ ಅಲ್ಲಿಂದ ಓಡಿ ಹೋಗುತ್ತಾಳೆ. ಇದನ್ನೇ ಬಳಸಿಕೊಂಡ ಭಾರ್ಗವಿ ತನ್ನ ಮಾವನ ಬಳಿ ಸೀತಾಗೆ ಹುಚ್ಚು ಕಮ್ಮಿ ಆಗುವ ಹಾಗೆ ಕಾಣುತ್ತಿಲ್ಲ. ನಾವು ಯಾಕೆ ರಾಮ್ ಗೆ ಇನ್ನೊಂದು ಮದುವೆ ಮಾಡಬಾರದು ಎಂದು ಹೇಳುತ್ತಿರುವುದನ್ನು ಪುಟಾಣಿ ಸಿಹಿ ಕೇಳಿಸಿಕೊಳ್ಳುತ್ತಾಳೆ. ಆ ಮಾತನ್ನು ಕೇಳಿಸಿಕೊಂಡ ಸಿಹಿಗೆ ಬಹಳ ನೋವು ಆಗುತ್ತದೆ.

ಸುಬ್ಬಿಯನ್ನು ನೋಡಿ ಆಶ್ಚರ್ಯಗೊಂಡ ಸಿಹಿ

ತನ್ನ ತಾಯಿಗೆ ಏನಾಗಿದೆ ? ಆಕೆ ನಾನು ಬಂದರೆ ಮಾತ್ರ ಸರಿ ಹೋಗುವುದಾ ಇಲ್ಲವಾದರೆ ಆಕೆ ಸರಿ ಹೋಗುವುದು ಇಲ್ವಾ ನನ್ನ ಅಪ್ಪ ಅಮ್ಮನ ಜೀವನ ಸರಿ ಹೋಗಲು ನಾನೇನಾದರೂ ಮಾಡಲೇಬೇಕು ಎಂದುಕೊಂಡು ಸಿಹಿ ದಾರಿಯುದ್ದಕ್ಕೂ ನಡೆದುಕೊಂಡು ಹೋಗುವಾಗ ದಾರಿಯ ಬದಿಯಲ್ಲಿ ಮಕ್ಕಳು ಹೊಟ್ಟೆಪಾಡಿಗಾಗಿ ಜನರನ್ನು ರಂಜಿಸುವ ಕೆಲಸ ಮಾಡುತ್ತಾರೆ. ಇದನ್ನು ನೋಡಿದ ಸಿಹಿಗೆ ಬಹಳ ಖುಷಿ ಆಗುತ್ತದೆ. ಅಲ್ಲಿಯೇ ಇದ್ದ ಒಂದು ಹುಡುಗಿ ಯಾರದೋ ಪರ್ಸ್ ಕದಿಯುತ್ತಾಳೆ. ಇದನ್ನು ನೋಡಿದ ಸಿಹಿ ನೀನು ತಪ್ಪು ಮಾಡುತ್ತಿದ್ದೀಯಾ ಎಂದು ಜೋರಾಗಿ ಹೇಳುತ್ತಾಳೆ. ಆಗ ಸುಬ್ಬಿ ಸಿಹಿಯನ್ನು ನೋಡಿ ಮಾತನಾಡುತ್ತಾಳೆ. ಆಗ ಸಿಹಿ ಗೆ ಆಶ್ಚರ್ಯ ಆಗುತ್ತದೆ. ಸುಬ್ಬಿ ನನ್ನನ್ನೇ ಹೋಲುತ್ತಿದ್ದಾಳೆ ಎನ್ನುವ ಖುಷಿ ಆಗೇಕೆ ಆಗುತ್ತದೆ. ಇನ್ನೂ ಸುಬ್ಬಿ ಗೆ ಸಿಹಿಯನ್ನು ನೋಡಿ ಶಾಕ್ ಆಗುತ್ತದೆ. ಆದರೆ ಸೀತಾ ಹಾಗೂ ರಾಮ್ ಜೀವನಕ್ಕೆ ಸುಬ್ಬಿ ಕಾಲಿಡುತ್ತಾಳ? ಕಾದು ನೋಡಬೇಕಾಗಿದೆ .

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X