Seetarama ; ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಮಾತುಗಳು ಬೇಕಾ, ಸಿಹಿ ಪಾತ್ರಧಾರಿಯ ನಡೆಗೆ ಬೇಸರಗೊಂಡ ಫ್ಯಾನ್ಸ್ ..!
ಸಿಹಿ ಮಾತಿಗೆ ಸೀರಿಯಲ್ ಪ್ರೇಮಿಗಳು ಬಹಳ ಬೇಸರ ಪಟ್ಟುಕೊಂಡಿದ್ದಾರೆ. ಸಿಹಿ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾಳೆ. ಆಕೆಗೆ ಶ್ಯಾಮ ಹಾಗೂ ಶಾಲಿನಿ ಎಂದರೆ ಬಹಳ ಇಷ್ಟ ಅವರಿಬ್ಬರ ಜೊತೆ ಬಹಳ ಸಲುಗೆಯಿಂದ ಇರುತ್ತಾಳೆ. ಆದರೆ ಶಾಲಿನಿ ಗೆ ಮಕ್ಕಳೆಂದರೆ ಅಷ್ಟಕಷ್ಟೇ ಆದರೆ ಶ್ಯಾಮನಿಗೆ ಮಕ್ಕಳೆಂದರೆ ಪ್ರಾಣ ಎಂದು ಹೇಳಿದರೆ ತಪ್ಪಾಗದು. ಆತನಿಗೆ ತನ್ನ ಮಗು ಕಳೆದು ಹೋಗಿದೆ. ಅದನ್ನು ಹುಡುಕಬೇಕು ಎಂದೆಲ್ಲ ಆಲೋಚನೆ ಮಾಡುತ್ತಿರುತ್ತಾಳೆ. ಇತ್ತೀಚಿನ ದಿನಗಳಲ್ಲಿ ಸಿಹಿ ಅಭಿಮಾನಿಗಳು ಕೊಂಚ ಬೇಸರ ಪಟ್ಟುಕೊಂಡು ಇದ್ದಾರೆ. ಸಿಹಿ ಮಾತುಗಳು ಬಹಳ ದೊಡ್ಡ ದೊಡ್ಡ ಪದಗಳೇ ಆಕೆಯ ಬಾಯಲ್ಲಿ ಬರುತ್ತಿದೆ
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಹಳ ಕಿರಿ ಕಿರಿ ಕೂಡ ಆಗುತ್ತಿದೆ. ಇದರಿಂದ ಅಭಿಮಾನಿಗಳು ಧಾರಾವಾಹಿಯ ಕಥೆ ಬರೆಯುವವರಿಗೆ ಬಯ್ಯುತ್ತಿದ್ದಾರೆ. ಸಿಹಿ ಮಗು, ಆಕೆಯ ಜೊತೆ ಅಂತಹ ಮಾತುಗಳನ್ನು ಆಡಿಸುವುದು ಎಷ್ಟು ಸರಿ, ಆ ಶಾಲಿನಿಗೆ ಮಗುವನ್ನು ಕಳೆದುಕೊಂಡಿರುವ ದುಃಖ ಸ್ವಲ್ಪ ಕೂಡ ಇಲ್ಲ. ಆದರೆ ಇದೀಗ ಮಗು ಬೇಕು ಎಂದು ಆಕೆಯ ಗಂಡ ಹೇಳಿದಾಗ ಕೂಡ ಯಾವುದೇ ರಿಯಾಕ್ಟ್ ಮಾಡುವುದಿಲ್ಲ. ಶ್ಯಾಮ ಬಾಡಿಗೆ ತಾಯಿಯನ್ನು ಹುಡುಕಲು ಶ್ರಮ ವಹಿಸುತ್ತಿದ್ದರೆ, ಇತ್ತ ಶಾಲಿನಿ ಮಾತ್ರ ಇದಕ್ಕೆ ನನಗೆ ಯಾವುದೇ ಸಂಬಂಧ ಇಲ್ಲ. ನನಗೆ ನನ್ನ ಬ್ಯೂಟಿ ನನಗೆ ಹೆಚ್ಚು ಎಂದು ಹೇಳುತ್ತಾನೆ.

ಇನ್ನು ಶಾಲಿನಿ ಜೊತೆ ಸಿಹಿ ಆಡುತ್ತಿರುವ ಮಾತುಗಳನ್ನು ನೋಡಿ ಜನರೇ ಬೇಸರ ಪಟ್ಟುಕೊಂಡಿದ್ದಾರೆ. ಮಕ್ಕಳು ಮಕ್ಕಳಾಗಿದ್ದರೆ ಚೆಂದ. ಸೀತಾ ಹಾಗೂ ರಾಮ ಅನಂತಲಕ್ಷ್ಮೀಯನ್ನು ಭೇಟಿಯಾಗಲು ಹೋಗಿರುತ್ತಾರೆ. ಆದರೆ ಮೊದಲಿಗೆ ಸೀತಾ ಅನಂತ ಲಕ್ಷ್ಮಿಯನ್ನು ಭೇಟಿ ಮಾಡಿ ಮಾತನಾಡುತ್ತಿರುವಾಗ ಅಲ್ಲಿಗೆ ರಾಮ ಬರುತ್ತಾನೆ. ಸೀತಾಳನ್ನು ಅನಂತ ಲಕ್ಷ್ಮೀ ಬಳಿ ನೋಡಿ ರಾಮನೀಗೆ ಆಶ್ಚರ್ಯವಾಗುತ್ತದೆ. ಇದೇನಿದು ಸೀತಾ ಮನೆಯಲ್ಲಿ ಹೇಳದೆ ಕೇಳದೆ ಇಲ್ಲಿಗೆ ಬಂದಿದ್ದಾರಲ್ಲ ಎಂದು ಯೋಚನೆ ಮಾಡುತ್ತಾನೆ. ಅದಾದ ಬಳಿಕ ಸೀತಾ ರಾಮನನ್ನು ನೋಡಿ ಕುಂಚ ಆತಂಕಕ್ಕೆ ಒಳಗಾಗುತ್ತಾಳೆ . ಇತರ ಶ್ಯಾಮ್ ಹಾಗೂ ಶಾಲಿನಿಯ ಮಗುವಿನ ಹುಡುಕಾಟದಲ್ಲಿ ಇದ್ದಾನೆ ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಬೇಕು ಎಂದುಕೊಂಡಿದ್ದ ಆದರೆ ಮಗು ಮಾತ್ರ ಆ ಬಾಡಿಗೆ ತಾಯಿಯ ಬಳಿಗೆ ಉಳಿದುಕೊಂಡಿತು
ಕಳೆದು ಹೋದ ಮಗುವಿನ ಹುಡುಕಾಟದಲ್ಲಿ ಶ್ಯಾಮ
ಆ ಮಗುವೇ ಸಿಹಿ ಈ ವಿಚಾರ ಗೊತ್ತಿಲ್ಲದೇ ರಾಮ ಬಾಡಿಗೆ ತಾಯಿಯನ್ನು ಹುಡುಕುತ್ತಿರುತ್ತಾನೆ ಆಕೆಯ ಡೆಲಿವರಿ ಮಾಡಿಸಿದ್ದು ಅನಂತ ಲಕ್ಷ್ಮಿ ಎನ್ನುವುದು ಕೂಡ ರಾಮನಿಗೆ ತಿಳಿದಿದೆ. ಇತ್ತ ಭಾರ್ಗವಿ ಮನೆಯಲ್ಲಿ ಸಿಹಿ ಇಲ್ಲದೆ ಇರುವುದನ್ನ ಕಂಡು, ಈಕೆ ಕೂಡ ತನ್ನ ತಾಯಿಯ ಹಾಗೆ ಹೇಳದೆ ಮನೆಯಿಂದ ಆಚೆ ಹೋಗಿದ್ದಾಳೆನೋ, ಎನ್ನುವ ಹಾಗೆ ಮಾತನಾಡುತ್ತಾರೆ. ಆ ವೇಳೆ ಭಾರ್ಗವಿಯ ಮಗ ಹೇಳುತ್ತಾನೆ. ಇಲ್ಲ ಸಿಹಿ ನನ್ನ ಬಳಿ ಹೇಳಿ ಶ್ಯಾಮ ಅಂಕಲ್ ಮನೆಗೆ ಹೋಗಿದ್ದಾಳೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಭಾರ್ಗವಿಗೆ ಕೊಂಚ ಕೋಪ ಬರುತ್ತದೆ. ಆಕೆ ತನ್ನ ಮಗನಿಗೆ ಗದರುತ್ತಾಳೆ.
ಭಾರ್ಗವಿ ಗೆ ಕೌಂಟರ್ ಕೊಟ್ಟ ಸೀತಾ
ಇತ್ತ ಭಾರ್ಗವಿ ತನ್ನ ಮಾವನ ಬಳಿ ಇಲ್ಲಸಲ್ಲದನ್ನು ಹೇಳಿ ಅವರ ತಲೆಯನ್ನು ಕೆಡಿಸಿರುತ್ತಾಳೆ. ಆದರೆ ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲಿ ಯಾರು ಕೂಡ ಇರುವುದಿಲ್ಲ. ಕೊನೆಗೆ ರಾಮ ಹಾಗೂ ಸೀತಾ ಇಬ್ಬರು ಮನೆಗೆ ಬರುತ್ತಾರೆ. ಆದರೆ ಸಿಹಿ ಶ್ಯಾಮನ ಮನೆಗೆ ಹೋಗಿರುವುದು ನೋಡಿ ಬಹಳ ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ಸತ್ಯಜಿತ್ ಗೆ ಸೀತಾ ಭಾರ್ಗವಿ ಮೇಲೆ ಸವಾರಿ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಯಾಕೆಂದರೆ ಸೀತಾ ಮುಂಚೆ ಎಲ್ಲಾ ತುಂಬಾ ಪಾಪ ಆಗಿದ್ದಳು ಆದರೆ ಇದೀಗ ಭಾರ್ಗವಿಯ ಕುತಂತ್ರ ತಿಳಿದು ಕೊಂಚ ಜಾಗರೂಕತೆಯಿಂದ ಇರುತ್ತಾಳೆ.


Click it and Unblock the Notifications











