Seetarama ; ಅನಂತ ಲಕ್ಷ್ಮೀಯ ವಿರುದ್ದ ಗುಡುಗಿದ ಶ್ಯಾಮ್, ಈಗಲಾದರೂ ಶ್ಯಾಮ್ ಗೆ ನಿಜ ವಿಚಾರ ಗೊತ್ತಾಗುತ್ತಾ..?
ಶ್ಯಾಮ ಹಾಗೂ ಶಾಲಿನಿ ತನ್ನ ಕಳೆದು ಹೋದ ಮಗುವಿನ ಬಗ್ಗೆ ಇಬ್ಬರು ಮಾತನಾಡುತ್ತಿದ್ದಾರೆ. ಶ್ಯಾಮ ನನಗೆ ಮಗು ಬೇಕು ಆ ಅನಂತ ಲಕ್ಷ್ಮಿ ವಿರುದ್ಧ ನಾವು ಕೇಸ್ ಮಾಡೋಣ ಇಲ್ಲವಾದರೆ ಖಂಡಿತವಾಗಿಯೂ ನಮಗೆ ಆ ಮಗು ಸಿಗುವುದಿಲ್ಲ. ಡಾಕ್ಟರ್ ಅನಂತ ಲಕ್ಷ್ಮಿಯ ಬಳಿ ಈ ವಿಚಾರವನ್ನು ಎಷ್ಟೋ ಬಾರಿ ಪ್ರಸ್ತಾಪ ಮಾಡಿದ್ದೇವೆ ಆದರೆ ಅವರು ಬಾಡಿಗೆ ತಾಯಿ ಎಲ್ಲಿದ್ದಾರೆ ಎನ್ನುವ ವಿಚಾರವನ್ನೇ ನಮಗೆ ಹೇಳುತ್ತಿಲ್ಲ ಡಾ.ಅಂತ ಲಕ್ಷ್ಮಿ ಅವರು ಯಾಕೆ ಹೀಗೆ ಮಾಡಿದರು ಅವರ ಬಗ್ಗೆ ನಾವು ಪೊಲೀಸ್ ಗೆ ಕೇಸ್ ಅನ್ನ ಕೊಡೋಣ ಇಲ್ಲವಾದರೆ ಖಂಡಿತವಾಗಿಯೂ ನಮಗೆ ಆ ಮಗು ಸಿಗುವುದಿಲ್ಲ ನನಗೆ ಮಗು ಬೇಕೇ ಬೇಕು ಎಂದು ಶ್ಯಾಮ ಹೇಳುತ್ತಾನೆ
ಶಾಲಿನಿ ಮಾತ್ರ ಅದಕ್ಕೆ ಒಪ್ಪುವುದಿಲ್ಲ ಬೇಡ ಶ್ಯಾಮ್ ಹೀಗ್ಯಾಕ್ಕೆ ನಿಮಗೆ ಸಡನ್ ಆಗಿ ಮಗು ಬೇಕು ಎಂದು ಅನಿಸಿದ್ದು ಡಾ. ಅನಂತ ಲಕ್ಷ್ಮಿಯ ಬಳಿ ನಾನೇ ಸುಳ್ಳು ಹೇಳಲು ಹೇಳಿದೆ ಅದಕ್ಕೆ ಒಂದು ಕಾರಣ ಕೂಡ ಇದೆ ಎಂದು ಹೇಳುತ್ತಾಳೆ. ಈ ಮಾತುಗಳನ್ನೆಲ್ಲ ಸೀತಾ ಬಾಗಿಲ ಹಿಂದೆ ನಿಂತುಕೊಂಡು ಆಲಿಸುತ್ತಿರುತ್ತಾಳೆ. ಶಾಲಿನಿ ಹೇಳುವ ಒಂದೊಂದು ಮಾತು ಸೀತಾ ಮನಸನ್ನು ಕದಡಿಸುತ್ತಿದೆ ಎಂದು ಹೇಳಿದರೆ ತಪ್ಪಾಗದು. ಶಾಲಿನಿ ಹಾಗು ಶ್ಯಾಮ್ ಅವರ ಮಗು ಹುಟ್ಟಿದ ದಿನದಂದು ಸಿಹಿ ಜನಿಸಿದ್ದಳು ಅಂದರೆ ನನ್ನ ಬಳಿ ಇರುವ ಮಗು ಶ್ಯಾಮ್ ಹಾಗೂ ಶಾಲಿನಿದ್ದೆ ಎನ್ನುವ ವಿಚಾರ ಸೀತಾ ಗೆ ಇದೀಗ ಈ ವಿಚಾರ ತಿಳಿದಿದೆ ಇದರಿಂದ ಸೀತಾಗೆ ಬಹಳ ಆತಂಕವಾಗುತ್ತದೆ ಎಲ್ಲಿ ನನ್ನಿಂದ ಸಿಹಿ ಬೇರೆಯಾಗುತ್ತಾಳೋ ಎನ್ನುವ ಭಯ ಸೀತಾಗೆ ಕಾಡುತ್ತಿದೆ

ಸಿಹಿ ಹುಟ್ಟಿದ ಬಳಿಕ ಆಕೆಯನ್ನು ಶಾಲಿನಿ ಯಾಕೆ ತೆಗೆದುಕೊಳ್ಳಲಿಲ್ಲ ಎನ್ನುವುದೇ ಸೀತಾಗೆ ಕಾಡುವ ಪ್ರಶ್ನೆ. ಶ್ಯಾಮಗೆ ಮಕ್ಕಳೆಂದರೆ ಪಂಚ ಪ್ರಾಣ. ಶಾಲಿನಿ ಯಾಕೆ ಆ ಮಗುವನ್ನು ತೆಗೆದುಕೊಳ್ಳಲಿಲ್ಲ ಎನ್ನುವುದು ಬಹಳ ದೊಡ್ಡ ಯಕ್ಷ ಪ್ರಶ್ನೆ ಆಗಿದೆ. ಇತ್ತ ಶಾಲಿನಿ ಮಗು ಬೇಡ ಎನ್ನುವ ಕಾರಣಕ್ಕೆ ಶ್ಯಾಮ ಯಾವ ರೀತಿ ರಿಯಾಕ್ಟ್ ಆಗುತ್ತಾನೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇತ್ತ ರಾಮ ಕೂಡ ಶ್ಯಾಮ ಹಾಗೂ ಶಾಲಿನಿ ಮಗುವಿನ ಹುಡುಕಾಟದಲ್ಲಿ ಇದ್ದಾನೆ. ಆತನಿಗೆ ಶ್ಯಾಮನ ಒದ್ದಾಟ ನೋಡಲು ಆಗುವುದು ಇಲ್ಲ. ಆದ ಕಾರಣ ಆತನ ಮಗು ಆದರೂ ನಮಗೆ ಒಳ್ಳೆಯದು ಎಂದುಕೊಂಡು ಇರುತ್ತಾನೆ.
ಶಾಲಿನಿಯ ಮೊಂಡಾಟಕ್ಕೆ ಕೊನೆನೆ ಇಲ್ವಾ?
ಇನ್ನು ಶಾಲಿನಿ ಮಗು ಹೆತ್ತು ಕೊಟ್ಟರೆ ಆಕೆಯ ಸೌಂದರ್ಯ ಹಾಳಾಗುತ್ತದೆ ಎನ್ನುವ ಆಲೋಚನೆಯಲ್ಲಿ ಇದ್ದಾಳೆ. ಆದರೆ ಶಾಲಿನಿಗೆ ಗಂಡನ ಖುಷಿಗಿಂತ ತನ್ನ ಖುಷಿಯೇ ಆಕೆಗೆ ಹೆಚ್ಚಾಗಿರುತ್ತದೆ. ಇನ್ನು ಸತ್ಯಜಿತ್ ಹೆಂಡತಿಯನ್ನು ಭೇಟಿ ಆಗಲು ಮನೆಗೆ ಕದ್ದು ಬರುತ್ತಾನೆ. ಗಂಡನನ್ನು ನೋಡಿ ಸತ್ಯಜಿತ್ ಹೆಂಡತಿ ಬಹಳ ಖುಷಿ ಪಡುತ್ತಾಳೆ. ಗಂಡನನ್ನು ಬಾಚಿ ತಬ್ಬಿಕೊಳ್ಳುತ್ತಾಳೆ. ಇದನ್ನು ನೋಡಿದ ಭಾರ್ಗವಿ ಮಾತ್ರ ಕೊಂಕು ಮಾತುಗಳಿಂದ ನಿಂದನೆ ಮಾಡುತ್ತಾಳೆ. ಆದರೆ ಸತ್ಯಜಿತ್ ಇದ್ಯಾವುದಕ್ಕೂ ಡೊಂಟ್ ಕೇರ್ ಎಂದು ಹೇಳುತ್ತಾನೆ.
ಸತ್ಯಜಿತ್ ಹೇಳಿದ ಮಾತು ನಿಜವಾಗುತ್ತಾ?
ಆತನಿಗೆ ಭಾರ್ಗವಿ ಹೇಳಿದ ಮಾತುಗಳು ನೋವುಂಟು ಮಾಡಿದರು ಆತ ಮಾತ್ರ ಈ ಮನೆಯ ಸೊಸೆ ನನ್ನನ್ನು ಈ ಮನೆಗೆ ಕರೆದುಕೊಂಡು ಬಂದೆ ಬರುತ್ತಾಳೆ ಎನ್ನುವ ಭರವಸೆ ಮಾತುಗಳನ್ನು ಹೇಳುತ್ತಾರೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾರೆ. ಇತ್ತ ರಾಮನ ಮಾತು ಗೆಳೆಯನ ಹೆಂಡತಿ ಗೆ ಕೂಡ ಕ್ಯಾನ್ಸರ್ ಬಂದು ಆಕೆಯ ಸ್ಥಿತಿಯನ್ನು ನೋಡಲು ವೀಕ್ಷಕರಿಗೆ ಸಾಧ್ಯ ಆಗುತ್ತಿಲ್ಲ. ಪ್ರಿಯ ಬಹಳ ಒಳ್ಳೆಯ ಗುಣವಂತೆ ಆದರೆ ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.


Click it and Unblock the Notifications











