Seetha-Bhoomi: ಭೂಮಿ-ಸೀತಾ ಕ್ಲೋಸ್ ಅಂತಾರೆ; ಆದ್ರೆ ಎಂಗೇಜ್ಮೆಂಟ್, ಮದ್ವೆ ವಿಚಾರ ಗೊತ್ತಿಲ್ಲ!

By ಎಸ್ ಸುಮಂತ್

ಜೀ ಕನ್ನಡ ಎಂಬುದು ಒಂದು ಕುಟುಂಬ. ಆ ವಾಹಿನಿಯಲ್ಲಿ ಬರುವ ಧಾರಾವಾಹಿಗಳೆಲ್ಲಾ ಒಂದೇ ಕುಟುಂಬದ ಕಥೆಯಿದ್ದಂತೆ. ಅಂದ್ರೆ ಕೂಡು ಕುಟುಂಬದಲ್ಲಿ ಒಬ್ಬೊಬ್ಬರು ಒಂದೊಂದು ಕಡೆ ಮದುವೆ ಆಗಿ ಹೋದಾಗ, ಫ್ಯಾಮಿಲಿ ದೊಡ್ಡದಾಗುತ್ತಲ್ಲ ಆ ರೀತಿ. ಇಲ್ಲಿ ಸ್ನೇಹಿತರು ಸಿಕ್ತಾರೆ, ಅಣ್ಣ ತಂಗಿಯರು ಸಿಕ್ತಾರೆ, ಅತ್ತೆ ಮಾವನ ಸಂಬಂಧಗಳು ಸಿಗುತ್ತವೆ. ಶುಭ ಸಮಾರಂಭಗಳಿಗೆ ಈ ಎಲ್ಲರೂ ಒಂದಾಗುತ್ತಾರೆ. ಫ್ಯಾಮಿಲಿ ಕಾರ್ಯಕ್ರಮಕ್ಕೆ ಆಗ ಒಂದು ಕಳೆ ಬರುತ್ತದೆ.

ಸದ್ಯ ಜೀ ಕನ್ನಡದಲ್ಲಿ 'ಸೀತಾ-ರಾಮ' ಕಲ್ಯಾಣದ ಸಂಭ್ರಮ ಜೋರಾಗಿದೆ. ಬೇಗ ಬೇಗನೇ ಮದುವೆ ಕೆಲಸಗಳು ಶುರುವಾಗಿವೆ. ಈಗಾಗಲೇ ಪತ್ರಿಕೆಯೂ ಸಿದ್ಧವಾಗಿದ್ದು, ಎಲ್ಲೆಡೆ ಪತ್ರಿಕೆ ಹಂಚುವ ಕೆಲಸ ಆರಂಭಗೊಂಡಿದೆ. ರಾಮನ ಮನೆಯಿಂದ ರೆಡಿಯಾಗಿರುವ ಲಗ್ನಪತ್ರಿಕೆ ನೋಡುವುದಕ್ಕೇನೆ ಚೆಂದ.

Seetha raama and Amruthadhaare serials characters Bhoomika and Seetha friendship

ಭೂಮಿ ಮನೆಗೆ ಬಂದ ಸೀತಾ

ಮದುವೆ ಕಾರ್ಯದಲ್ಲಿ ಸೀತಾ ಫುಲ್ ಬ್ಯುಸಿ ಇದ್ದಾಳೆ. ಸೀತಮ್ಮನ ಮದುವೆ ಕೆಲಸಗಳಲ್ಲಿ ಸಿಹಿಯೇ ಮುಂದೆ ನಿಂತು ಮಾಡುತ್ತಿದ್ದಾಳೆ. ಡ್ರೆಸ್ ಸೆಲೆಕ್ಟ್ ಮಾಡುವುದಾಗಲಿ, ಒಡವೆ ಸೆಲೆಕ್ಟ್ ಮಾಡುವುದಾಗಲಿ ಸಿಹಿಯೇ ಮುಂದೆ. ಈಗ ಲಗ್ನ ಪತ್ರಿಕೆಯನ್ನು ಹಂಚುತ್ತಿದ್ದು, ಭೂಮಿ ಟೀಚರ್ ಮನೆಗೆ ಬಂದಿದ್ದಾರೆ.

ಲಗ್ನ ಪತ್ರಿಕೆ ಕೊಟ್ಟು ಮದುವೆ ಎಂದ ಸೀತಾ

ಭೂಮಿಗೂ ಫ್ರೆಂಡ್‌ನ ಕಂಡು ಬಹಳ ಖುಷಿ ಆಯ್ತು. ವಿಶೇಷ ಏನು ಅಂತ ಕೇಳಿದಾಗ ಬಿಗ್ ಸರ್ಪೈಸ್ ಇದೆ ಅಂಡ್ ಗುಡ್ ನ್ಯೂಸ್ ಅಂತ ಹೇಳಿದ ಸೀತಾ, ಗೌತಮ್ ಬಂದ ಮೇಲೆ ತನ್ನ ಮದುವೆ ವಿಚಾರ ತಿಳಿಸಿದಳು. ಲಗ್ನ ಪತ್ರಿಕೆ ಕೊಟ್ಟು ಮದುವೆಯ ವಿಚಾರ ತಿಳಿಸಿದಳು. ಸೀತಾ-ರಾಮ, ಅದ್ಭುತವಾಗಿದೆ ಹೆಸರು ಎಂದಷ್ಟೆ ಭೂಮಿ ಹೇಳಿದಳು. ಆದರೆ ರಾಮ್ ಯಾರು ಎಂಬುದೇ ಭೂಮಿಗೆ ಗೊತ್ತಾಗಲಿಲ್ಲ.

Seetha raama and Amruthadhaare serials characters Bhoomika and Seetha friendship

ಬೆಸ್ಟ್ ಫ್ರೆಂಡ್‌ಗೆ ಗೊತ್ತಿಲ್ವಾ?

ಇಬ್ಬರು ಭೇಟಿ ಆಗೋದು ಅಪರೂಪ. ಭೇಟಿ ವಿಚಾರಕ್ಕೆ ವೀಕ್ಷಕರಿಗೂ ಆಕ್ಷೇಪವಿಲ್ಲ ಬಿಡಿ. ಆದರೆ ಬೆಸ್ಟ್ ಫ್ರೆಂಡ್ಸ್ ಅಂತಾರೆ. ಸಿಕ್ಕಾಗ ಆತ್ಮೀಯತೆಯಿಂದ ಮಾತನಾಡುತ್ತಾರೆ. ಆದರೂ ಮದುವೆಗೂ ಮುನ್ನ ಇಬ್ಬರಿಗೂ ಯಾವ ವಿಚಾರವೂ ಗೊತ್ತೆ ಇರುವುದಿಲ್ಲ. ಇದು ಹೇಗೆ ಎಂಬುದೇ ವೀಕ್ಷಕರ ಪ್ರಶ್ನೆ. ಬೆಸ್ಟ್ ಫ್ರೆಂಡ್ ಎಂದಾಗ ಭೇಟಿ ಆಗೋದು ಬೇಡ, ಫೋನ್ ನಲ್ಲಾದರೂ ಗುಡ್ ನ್ಯೂಸ್ ಹಂಚಿಕೊಳ್ಳಬೇಕು ಅಲ್ವಾ. ಮೊದಲೇ ಸೀತಾಗೆ ಪ್ರಿಯಾ ಬಿಟ್ಟರೆ ಬೇರೆ ಯಾರು ಇಲ್ಲ. ಎಂಗೇಜ್ಮೆಂಟ್ ಕೂಡ ಗ್ರ್ಯಾಂಡ್ ಆಗಿಯೇ ಮಾಡಿಕೊಂಡರು ಸೀತಾ, ಭೂಮಿಗೆ ಯಾಕೆ ತಿಳಿಸಲಿಲ್ಲ.

ಭೂಮಿ ಮದುವೆಯಲ್ಲೂ ಹಿಂಗೆ ಆಗಿತ್ತು

ಸೀತಾ ಮಾತ್ರ ಅಲ್ಲ ಭೂಮಿ ಮದುವೆಯಲ್ಲೂ ಇದೇ ಥರ ಆಗಿತ್ತು. ಭೂಮಿಗೆ ಮದುವೆಯೆಲ್ಲಾ ಗೊತ್ತಾಗಿತ್ತು, ಗೊಂದಲ, ಬೇಸರದಲ್ಲಿ ಇದ್ದಳು. ಆಗಲೂ ಸೀತಾ ಎಂಬ ಸ್ನೇಹಿತೆಯನ್ನು ನೆನಪಿಸಿಕೊಳ್ಳಲಿಲ್ಲ.‌ ಮದುವೆ ದಿನ ಹೋಗಿ ಪತ್ರಿಕೆ ಕೊಟ್ಟಾಗ ಸೀತಾ ಫುಲ್ ಖುಷಿಯಾಗಿದ್ದಳು. ಈಗ ಸೀತಾ ಮದುವೆ, ಅದೇ ದೃಶ್ಯ ಮತ್ತೆ ರಿಪೀಟ್ ಆಗಿದೆ. ಮನೆ ಮಾತ್ರ ಬದಲಾಗಿದೆ. ಯಾಕಿಂಗೆ..? ಲಗ್ನ ಪತ್ರಿಕೆ ಹಂಚಬೇಕಲ್ಲ ಅಂತ ಫ್ರೆಂಡ್ಶಿಪ್ ಮಾಡ್ತಾರಾ ನಿರ್ದೇಶಕರು..? ಇಂಥದ್ದೊಂದು ಗಾಢವಾದ ಪ್ರಶ್ನೆ ಡೈಲಿ ಸೀರಿಯಲ್ ನೋಡುವವರ ಮನದಲ್ಲಿ ಮೂಡಿದೆ.

More from Filmibeat

English summary
zee kannada kannada seetharama and amruthadare Written Update on June 19th episode. Here is the details about Bhumi does not know about Sita's engagement;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X