Seetha Raama: ಸೀತಾ ವಠಾರದಲ್ಲಿ ರಾಮನಾಮ ಜಪ: ಸಿಹಿಗಾಗಿ ರಾಮನನ್ನು ಕ್ಷಮಿಸುತ್ತಾಳಾ ಸೀತಾ?
ಸೀತಾ ಹಾಗೂ ರಾಮ ಮುನಿಸು ಸಿಹಿಗೆ ನುಂಗಲಾರದ ಬಿಸಿ ತುಪ್ಪ ಆಗಿಬಿಟ್ಟಿದೆ. ತನ್ನ ಗೆಳೆಯ ನನ್ನ ಜೊತೆ ಇದ್ದರೆ ಅದೇ ಸ್ವರ್ಗ ಎನ್ನುವ ಸಿಹಿ ಮಾತಿಗೆ ಸೀತಾ ಮಾತ್ರ ಒಪ್ಪುತ್ತಲೆ ಇಲ್ಲ. ಇನ್ನು ಮೇಲೆ ನಮ್ಮ ಜೀವನದಲ್ಲಿ ರಾಮನ ಪಾತ್ರ ಇಲ್ಲವೇ ಇಲ್ಲ. ಆತ ಯಾವತ್ತೂ ನಮ್ಮ ಜೊತೆ ಇರಲು ಸಾಧ್ಯವೇ ಇಲ್ಲ ಎಂಬ ಮಾತು ಹೇಳಿದ್ದಾಳೆ.
ಇನ್ನು ಸಿಹಿ ಹಾಗೂ ತಾತ ರೋಡ್‌ನಲ್ಲಿ ಹೋಗಬೇಕಾದರೆ ಕಸದ ರಾಶಿಗೆ ಯಾರೋ ರಾಮ ದೇವರ ಫೋಟೋವನ್ನೂ ಎಸೆದು ಬಿಟ್ಟಿರುತ್ತಾರೆ. ಇದನ್ನು ನೋಡಿದ ಸಿಹಿ ಓಡಿ ಬಂದು ಆ ಫೋಟೋವನ್ನು ಎತ್ತಿಕೊಂಡು ಬಿಡುತ್ತಾಳೆ . ಆ ಫೋಟೋ ನೋಡಿದ ಸಿಹಿ ತಾತನ ಬಳಿ ಹೇಳುತ್ತಾರೆ ತಾತ ದೇವರನ್ನು ಕಸದ ತೊಟ್ಟಿಯಲ್ಲಿ ಎಸೆದು ಬಿಟ್ಟಿದ್ದಾರೆ. ಯಾಕೆ ಹಾಗೆ ಮಾಡುವುದು ಎಂದು ಪ್ರಶ್ನೆ ಮಾಡುತ್ತಾಳೆ ಇದನ್ನು ಕೇಳಿಸಿಕೊಂಡ ತಾತ ಸಿಹಿಗೆ ಅದೇನೋ ಸಬೂಬು ಹೇಳಿ ಸುಮ್ಮನೆ ಆಗುತ್ತಾರೆ.

ಆದರೆ ಸಿಹಿ ಮಾತ್ರ ಇವತ್ತು ಹೇಗಾದರೂ ಮಾಡಿ ಶ್ರೀ ರಾಮನಿಗೆ ಪೂಜೆ ಮಾಡಲೇ ಬೇಕು ಎಂದುಕೊಂಡಿರುತ್ತಾಳೆ. ಇನ್ನು ... ಸೀತಾ ಮನೆಯ ಪಕ್ಕದಲ್ಲಿ ಇರುವ ಅಜ್ಜಿ ವಠಾರದ ಮಂದಿ ಬಳಿ, ರಾಜಿ ಇವತ್ತು ಆಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಆಗುತ್ತಿದೆ. ಅವರು ಮನೆ ಮನೆಗೆ ಮಂತ್ರಾಕ್ಷತೆಯನ್ನು ಕಳುಹಿಸಿದ್ದಾರೆ. ಇದನ್ನು ಹಾಕಿ ಪಾಯಸ ಮಾಡೋಣ. ಎಲ್ಲರೂ ಶ್ರೀ ರಾಮನ ಭಜನೆ ಮಾಡಿ ನಾವು ಪ್ರಸಾದ ಸ್ವೀಕಾರ ಮಾಡೋಣ ಎಂದು ಹೇಳುತ್ತಾರೆ. ಬಳಿಕ ರಾಮನ ನಾಮಗಳನ್ನು ಹಾಡುತ್ತಾ ಕೆಲಸದಲ್ಲಿ ನಿರತರಗುತ್ತಾರೆ.
ರಾಮನ ಸ್ಮರಣೆ ಮಾಡಿದ ವಠಾರದ ಮಂದಿ
ಅಷ್ಟರಲ್ಲಿ ಆಕೆಯ ಗಂಡ ಬಂದು.. ಲೇಯ್ ನೋಡೆ, ಬೇಳೆ ಹಾಗೂ ಗೋಡಂಬಿಯನ್ನು ತಂದಿದ್ದೇನೆ ಎಂದಾಗ ಅಲ್ಲಿಗೆ ಸಿಹಿ ಬಂದು ತಾತ ನನಗೆ ಹಣ ಬೇಕಾಗಿತ್ತು ಕೊಡುತ್ತಿಯ ಎಂದು ಕೇಳಿದಾಗ ಸಿಹಿ ತಾತ ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಸಿಹಿ, ನನಗೆ ಹಣ ಬೇಕು ಪ್ಲೀಸ್ ತಾತ ಆಮೇಲೆ ನಾನು ಆ ಹಣವನ್ನು ವಾಪಸ್ ಕೊಡುತ್ತೇನೆ ಎಂದು ಹೇಳುತ್ತಾಳೆ. ಆದರೆ ತಾತ, ಎಷ್ಟು ಹಣ ಬೇಕು ಎಂದು ಕೇಳಿದಾಗ ಸಿಹಿಗೆ ಮಾತ್ರ ಎನು ಉತ್ತರ ಹೇಳಬೇಕು ಎಂದು ತಿಳಿಯದಂತಾಗುತ್ತದೆ.

ಕೊನೆಗೆ ತಾತ ಸ್ವಲ್ಪ ಮಟ್ಟಿಗೆ ಹಣ ಕೊಡುತ್ತಾರೆ ಅದನ್ನು ತೆಗೆದುಕೊಂಡು ಹೋಗಿ ವಠಾರದ ಮಕ್ಕಳು ಸೇರಿ ರಾಮ ನ ಪೂಜೆ ಗೆ ಏರ್ಪಾಟು ಮಾಡುತ್ತಾರೆ. ಹಾಗೆಯೇ ವಠಾರದ ಮಕ್ಕಳೆಲ್ಲ ಒಟ್ಟುಗೂಡಿ ಇಟ್ಟಿಗೆಗಳಿಂದ ಒಂದು ಸಣ್ಣ ಗೋಪುರವನ್ನು ಕಟ್ಟಿ ಅಲ್ಲಿ ರಾಮನ ಫೋಟೋ ಇಟ್ಟು ಬಹಳ ಅದ್ಭುತ ಅಲಂಕಾರ ಮಾಡುತ್ತಾ ಇರುತ್ತಾರೆ. ಆದರೆ ಇದೀಗ ರಾಮ ಸಿಹಿ ಜೊತೆ ಇಲ್ಲದೆ ವೀಕ್ಷಕರಿಗೆ ಅದ್ಯಾಕೋ ಬಿಕೋ ಅನ್ನಿಸಿ ಬಿಟ್ಟಿದೆ..
ಸೀತಾ ಕೋಪಕ್ಕೆ ತುತ್ತಾದ ರಾಮಗೆ ಕ್ಷಮೆ ಇಲ್ವಾ?
ಸೀತಾ ಕೋಪಕ್ಕೆ ತುತ್ತಾದ ರಾಮನಿಗೆ ಕ್ಷಮೆ ಇಲ್ಲವೇ ಎಂಬುವುದು ಅಭಿಮಾನಿಗಳ ವಾದ. ಒಂದು ಕಡೆ ಭಾರ್ಗವಿಯ ಆಟ ಬೇರೆಯೇ ಇದೆ. ತಾನು ಏನೇ ತಪ್ಪು ಕೆಲಸ ಮಾಡಿದರು ಸಿಕ್ಕಿ ಹಾಕಿಕೊಳ್ಳುವ ಸಂದರ್ಭದಲ್ಲಿ ಬೇರೆಯವರ ತಲೆಮೇಲೆ ಹಾಕುವುದು. ಇದೀಗ ಭಾರ್ಗವಿ ತನ್ನ ಗಂಡನ ಮೇಲೆಯೆ ರಾಮನಿಗೆ ಅನುಮಾನ ಬರುವ ಹಾಗೆ ಮಾಡಿದ್ದಾರೆ. ಆದರೆ ಇದ್ಯಾವುದೂ ವಿಶ್ವ ಗಮನಕ್ಕೆ ಬಂದಿಲ್ಲ. ವಿಶ್ವ ಮೇಲೆ ಅನುಮಾನ ಪಡುತ್ತಾಯಿದ್ದಾನೆ ರಾಮ. ಮುಂದೇನು ಎಂಬುದು ಕಾದು ನೋಡಬೇಕಾಗಿದೆ.


Click it and Unblock the Notifications











