Seetha Raam: ರಾಮ್‌ನಿಗೆ ತಲುಪಿದೆ ಸೀತಾ ಮದುವೆ ಆಮಂತ್ರಣ, ಈಗಲಾದರೂ ಮನದ ಮಾತು ಹೊರಬರುತ್ತಾ?

By Poorva

ಸೀತಾಗೆ ಇದೀಗ ರಾಮ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾನೆ ಎನ್ನುವ ಸತ್ಯವನ್ನು ಅಶೋಕ್ ಹೇಳುತ್ತಾನೆ. ಆದರೆ ಯಾರು ಆ ಹುಡುಗಿ ಎನ್ನುವುದನ್ನು ಸೀತಾನಿಂದ ಮುಚ್ಚಿ ಇಡುತ್ತಾನೆ. ಸೀತಾಗೆ ರಾಮ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ತಿಳಿದು ಬಹಳ ಖುಷಿ ಪಡುತ್ತಾಳೆ. ರಾಮ ಎಂದರೆ ಸೀತಾಗೆ ಅದು ಯಾಕೋ ಬಹಳ ಪ್ರೀತಿ, ಸ್ನೇಹಾ. ಆದರೆ ರಾಮ ಸೀತಾಳನ್ನು ಪ್ರೀತಿ ಮಾಡುತ್ತಾ ಇದ್ದರೂ ಸೀತಾಗೆ ತಿಳಿಯುವುದೇ ಇಲ್ಲ.

ಅಶೋಕ್‌ ತನ್ನ ಗೆಳೆಯ ಇನ್ನೊಂದು ಪ್ರೀತಿ ಮಾಡಿದರು ಅದು ಕೂಡ ಆತನಿಗೆ ಮುಳ್ಳಾಗಿ ಪರಿಣಮಿಸಿತು ಎಂದು ಬಹಳ ನೊಂದುಕೊಂಡಿರುತ್ತಾನೆ. ಇತ್ತ ರಾಮನನ್ನು ಭೇಟಿ ಆಗಲು ಸೀತಾ ತರಾ ತುರಿಯಲ್ಲಿ ಬರುತ್ತಾಳೆ. ಆಕೆ ರಾಮನ ಬಳಿ ಬಂದು ರಾಮ್ ಎಂದು ಕರೆಯುತ್ತಾರೆ. ಸೀತಾ ಧ್ವನಿ ಕೇಳಿ ಬಹಳ ನೋವಿನಿಂದ ಸೀತಾಳನ್ನು ನೋಡುತ್ತಾನೆ. ಆದರೆ ಸೀತಾಗೆ ರಾಮನ ನೋವಿನ ಪರಿವೆ ಇಲ್ಲ. ಆಕೆಗೆ ಸೀತಾ ಮೆಚ್ಚಿದ ಹುಡುಗಿ ಯಾರು ಎನ್ನುವ ಕುತೂಹಲ ಗರಿಗೆದರಿದೆ.

Seetha Raama kannada serial 25th December written update.

ರಾಮನ ಮುಖ ನೋಡಿ ಕಣ್ಣು ಸನ್ನೆ ಮಾಡುತ್ತಾಳೆ. ಆದರೆ ಯಾಕೆ ಹಾಗೆ ಮಾಡುತ್ತಾ ಇದ್ದಾರೆ ಎನ್ನುವುದು ರಾಮನಿಗೆ ಅರ್ಥ ಆಗದೆ ಸೀತಾ ಮುಖ ನೋಡುತ್ತಾನೆ. ಆ ಕೂಡಲೇ ಸೀತಾ ರಾಮನ ಬಳಿ ಎನು ಪ್ರೀತಿಯಲ್ಲಿ ಬಿದ್ದಿದ್ದೀರ ಎಂದು ಗೊತ್ತಾಯಿತು ಎನ್ನುತ್ತಾಳೆ. ಆಗ ರಾಮನಿಗೆ ಎನು ಹೇಳಬೇಕು ಎಂದು ತಿಳಿಯದೇ ಆತಂಕದಲ್ಲಿ ಆಕೆಯ ಮುಖ ನೋಡುತ್ತಾನೆ.

ಅಶೋಕನ ಮಾತು ಕೇಳಿ ಖುಷಿಪಟ್ಟ ಸೀತಾ

ರಾಮ್ ನನಗೆ ಎಲ್ಲಾ ವಿಚಾರ ತಿಳಿದಿದೆ. ನೀವು ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಗೊತ್ತಾಗಿದೆ ಯಾರು ಆ ಹುಡುಗಿ ಎಂದಾಗ ರಾಮನಿಗೆ ಎನು ಹೇಳಬೇಕು ತಿಳಿಯದೇ, ಹೌದು ನನೊಬ್ಬರನ್ನು ಪ್ರೀತಿ ಮಾಡುತ್ತಿದ್ದೇನೆ ಎನ್ನುತ್ತಾನೆ. ಕೂಡಲೇ ಸೀತಾ ರಾಮನ ಕೈ ಕುಲುಕಿ ಕಂಗ್ರಾಜುಲೇಶನ್ ಹೇಳುತ್ತಾಳೆ. ಬಳಿಕ ರಾಮನ ಬಳಿ ಬಂದು ಸೀತಾ ಮದುವೆ ಇನ್ವಿಟೇಶನ್ ಕಾರ್ಡ್ ಕೊಡುತ್ತಾಳೆ. ಶುಕ್ರವಾರ ನನ್ನ ಮದುವೆ ಇದೆ. ನೀವು ಬರಬೇಕು.. ಮದುವೆ ಕಾರ್ಡ್ ಸಿಕ್ಕ ಕೂಡಲೇ ದೇವರ ಬಳಿ ಇಟ್ಟು ಪೂಜೆ ಮಾಡಬೇಕು ಅಂತೆ.. ಆದರೆ ನಾನು ಮೊದಲಿಗೆ ನಿಮಗೆ ಕೊಡುತ್ತಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ರಾಮನಿಗೆ ಬಹಳ ಬೇಸರ ಆಗುತ್ತದೆ.

Seetha Raama kannada serial 25th December written update.

ಸೀತಾ ಮಾತಿಗೆ ಸುಮ್ಮನಿರುವ ರಾಮ್

ಎದೆಯಲ್ಲಿ ಅರಳಿದ ಮಧುರವಾದ ಪ್ರೀತಿಯನ್ನ ರಾಮ ತನ್ನ ಕೈಯ್ಯಾರೆ ಹೊಸಕಿ ಹಾಕುತ್ತಾ ಇದ್ದಾನೆ. ಇದೆಲ್ಲವನ್ನು ನೋಡಿದ ಅಶೋಕನಿಗೆ ಎನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರ ಪಟ್ಟುಕೊಂಡೊದ್ದಾನೆ. ತನ್ನಿಂದ ಆದರೂ ಅವರಿಬ್ಬರೂ ಒಂದಾಗಲಿ ಅಂದುಕೊಂಡರೆ ನಾನು ಅಂದುಕೊಂಡಿದ್ದು ಒಂದು.. ಇಲ್ಲಿ ಆಗಿದ್ದೆ ಇನ್ನೊಂದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಸೀತಾ ಪದೇ ಪದೇ ರಾಮನ ಬಳಿ ಆ ಲಕ್ಕಿ ಹುಡುಗಿ ಯಾರು? ನನಗೆ ಪರಿಚಯ ಮಾಡುವುದು ಇಲ್ವಾ ಎಂದು ಕೇಳುತ್ತಾಳೆ.

ರಾಮನ ಹುಡುಗಿ ಬಗ್ಗೆ ಪ್ರಶ್ನೆ ಮಾಡಿದ ಸೀತಾ

ಸೀತಾ ಮಾತು ಕೇಳಿಸಿಕೊಂಡ ರಾಮ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ. ರಾಮನಿಗೆ ಸೀತಾ ಎಂದರೆ ಪಂಚ ಪ್ರಾಣ ಸಿಹಿ ಎಂದರೆ ಅದಕ್ಕಿಂತ ಮಿಗಿಲು . ಆದರೆ ಅವರಿಬ್ಬರನ್ನು ಕಳೆದುಕೊಳ್ಳುವ ಭೀತಿ ರಾಮನಿಗೆ ಎದುರಾಗಿದೆ. ಆ ರುದ್ರ ಪ್ರತಾಪ ಮನದಲ್ಲಿ ಇರುವುದೇ ಬೇರೆ. ಆದರೆ ಸೀತಾ ಆಸ್ತಿಯನ್ನು ಲಪಟಾಯಿಸಲು ಇದೀಗ ಮದುವೆ ಎಂಬ ಅಸ್ತ್ರವನ್ನು ತನ್ನದಾಗಿಸಿಕೊಂಡಿದ್ದಾನೆ. ಇದೆಲ್ಲ ರಾಮನ ಅರಿವಿಗೆ ಬಂದಿಲ್ಲ. ಗಿಡುಗನ ಕೈಗೆ ಸೀತಾಳನ್ನು ಮದುವೆ ಮಾಡಲು ಅತ್ತಿಗೆ ಮಾತ್ರ ತುದಿಗಾಲಲ್ಲಿ ನಿಂತುಕೊಂಡಿದ್ದಾಳೆ.

More from Filmibeat

English summary
Seetharama serial 25th December written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X