Seetha Raama: ಸಿಹಿ ಮುಂದೆ ರುದ್ರ ಪ್ರತಾಪನ ಅಸಲಿ ಮುಖ ಬಯಲು, ಸೀತಾ ಬದುಕಲ್ಲಿ ಮುಂದೇನು?

By Poorva

ಸಿಹಿ ಗೆ ರುದ್ರಪ್ರತಾಪನ ಅಸಲಿ ಮುಖ ತಿಳಿದು ಹೋಗಿದೆ. ರುದ್ರ ಪ್ರತಾಪ ಸೀತಾ ಅತ್ತಿಗೆಯ ಬಳಿ ಸಿಹಿಯನ್ನು ಹೇಗಾದರೂ ಮಾಡಿ ಅನಾಥ ಆಶ್ರಮಕ್ಕೆ ಹಾಕಬೇಕು, ಸಿಹಿ ನನ್ನ ಕಣ್ಣ ಮುಂದೆ ಇರಬಾರದು ಎಂದು ಹೇಳುತ್ತ ಇರುವುದನ್ನು ಸಿಹಿ ಕೇಳಿಸಿಕೊಂಡಾಗಿದೆ. ತನ್ನ ತಾಯಿ ನಾನು ಅಪ್ಪ ಒಂದು ಸುಂದರವಾದ ಬದುಕು ಕಟ್ಟಿಕೊಳ್ಳಬೇಕು ಎಂದು ಅಂದುಕೊಂಡ ವೇಳೆ ಸಿಹಿಗೆ ಆಘಾತ ಆಗುತ್ತದೆ.

ವಿಚಾರ ತಿಳಿದ ಸಿಹಿ ಕಣ್ಣಲ್ಲಿ ಧಾರಾಕಾರವಾಗಿ ನೀರು ಬರುತ್ತದೆ. ಈ ವಿಚಾರವನ್ನು ಅಮ್ಮನ ಬಳಿ ಹೇಳಬೇಕು ಎಂದು ಓಡೋಡಿ ಬರುತ್ತಾ ಇರಬೇಕಾದರೆ ಎದುರಾಗಿ ರುದ್ರ ಪ್ರತಾಪ ಸಿಗುತ್ತಾನೆ. ಆತನನ್ನು ನೋಡಿ ಸಿಹಿ ಭಯದಿಂದ ತತ್ತರಿಸಿ ಹೋಗುತ್ತಾಳೆ. ಆ ಕೂಡಲೇ ಸಿಹಿ ನನ್ನನ್ನು ಅನಾಥ ಆಶ್ರಮಕ್ಕೆ ಸೇರಿಸುತ್ತಿರಿ ಅಲ್ವಾ...ನೀವು ಮಾತನಾಡಿದ್ದನ್ನು ಕೇಳಿಸಿಕೊಂಡೆ ಎಂದಾಗ ರುದ್ರ ಪ್ರತಾಪ್‌ಗೆ ಆಘಾತ ಆಗುತ್ತದೆ.

Seetha Raama kannada serial 29th December written update

ತನ್ನ ತಾಯಿ ಬಳಿ ನಿಜ ಹೇಳುತ್ತೇನೆ ಎಂದು ಹೇಳಿ ಅಲ್ಲಿಂದ ಓಡಿ ಹೋಗುತ್ತಾಳೆ. ಇನ್ನೂ ರುದ್ರ ಪ್ರತಾಪ್‌ಗೆ ಆತಂಕ ಶುರು ಆಗಿ ಬಿಟ್ಟಿರುತ್ತದೆ. ಸೀತಾಗೆ ತಿಳಿದರೆ ಆಕೆ ಮಾತ್ರ ಖಂಡಿತ ನನ್ನನ್ನು ಮದುವೆ ಆಗುವುದಿಲ್ಲ ಹೇಗಾದರೂ ಸಿಹಿಯನ್ನು ತಡೆಯಬೇಕು ಎಂದು ಹಿಂದೆಯೇ ಬರುತ್ತಾನೆ. ಇನ್ನು ಮದುವೆಯ ಗಳಿಬಿಲಿಯಲ್ಲಿ ಇದ್ದ ಸೀತಾ ಇದ್ಯಾವುದನ್ನೂ ಗಮನಿಸದೆ ಹೋದಳು. ಇತ್ತ ರಾಮ ಅಶೋಕ್ ಮಾತನ್ನು ಕೇಳುತ್ತಾನೆ ಸರಿ ನಾನು ಮಲೇಷಿಯಾಗೆ ಹೋಗುವ ಮುನ್ನ ಸಿಹಿ ಹಾಗೂ ಸೀತಾಳನ್ನು ನೋಡಿ ಹೋಗುತ್ತೇನೆ ಎಂದಾಗ ಅಶೋಕ್ ಆತನನ್ನು ಸೀತಾ ಮದುವೆ ನಡೆಯುತ್ತಿರುವ ಜಾಗಕ್ಕೆ ಕರೆದುಕೊಂಡು ಬರುತ್ತಾನೆ.

ಸೀತಾ ಮದುವೆ ನೋಡಲು ಬಂದ ರಾಮ

ಸೀತಾಳನ್ನು ನೋಡಿ ಆಕೆಯನ್ನು ಮನಸಾರೆ ಹರಸಿ ಹೋಗಲು ಬರುತ್ತಾನೆ ರಾಮ. ಆದರೆ ಸೀತಾ ಹಾಗೂ ಸಿಹಿಗೆ ಕಾಣಿಸದ ಹಾಗೆ ನಿಂತು ನೋಡುತ್ತ ಇರುತ್ತಾನೆ . ಸೀತಾಗೆ ಅದ್ಯಾಕೋ ರಾಮ ಬಂದಿದ್ದಾನೆ ಮದುವೆಗೆ ಎಂದು ಅನ್ನಿಸಿಬಿಟ್ಟಿತು. ಆದರೆ ರಾಮ ಎಲ್ಲೂ ಕಾಣಿಸಿಸುವುದಿಲ್ಲ.

ರಾಮನಿಗೆ ನಿಜ ವಿಚಾರ ತಿಳಿಸಲು ಕರೆ ಮಾಡಿದ ಸಿಹಿ

ಇನ್ನು, ರಾಮನ ಬಳಿ ರುದ್ರ ಪ್ರತಾಪನ ಮುಖವಾಡ ಕಳಚಬೇಕು ಎಂದು ಸಿಹಿ ಫೋನ್ ಮಾಡುತ್ತಾ ಇರುತ್ತಾಳೆ ಆದರೆ ಅದ್ಯಾಕೋ ಫೋನ್ ಕೂಡ ಕನೆಕ್ಟ್ ಆಗುವುದಿಲ್ಲ. ಸಿಹಿಗೆ ಎನು ಮಾಡಬೇಕು ಎಂದು ತೋಚದೇ ಅಳುತ್ತಾ ದೇವರ ಮೊರೆ ಹೋಗುತ್ತಾಳೆ. ರಾಮ್ ಇದೀಗ ಸೀತಾ ಮದುವೆಗೆ ಬಂದಿದ್ದಾನೆ. ಮನದಲ್ಲಿ ಬಹಳ ನೋವಿದ್ದರು ಅದು ಯಾವುದನ್ನು ತೋರಿಸಿಕೊಳ್ಳದೆ ನಗು ನಗುತ್ತಲೇ ಇರುತ್ತಾನೆ. ಇತ್ತ ರಾಮ್ ಚಿಕ್ಕಮ್ಮ ಮಾತ್ರ ರಾಮ್ ಮಲೇಷಿಯಾಗೆ ಹೋಗೆ ಬಿಟ್ಟ ಇನ್ನೂ ನಮ್ಮದೇ ಕಾರುಬಾರು ಎಂದು ಮನದಲ್ಲಿ ಬಹಳ ಖುಷಿ ಪಡುತ್ತಾಳೆ. ಇನ್ನು ಮೇಲೆ ಆಫೀಸ್‌ನ ಎಲ್ಲಾ ಕೆಲಸ ತನ್ನ ತೆಕ್ಕೆಗೆ ಎಂದು ಭಾರ್ಗವಿ ಬೀಗುತ್ತಾ ಇದ್ದಾಳೆ.

Seetha Raama kannada serial 29th December written update

ರಾಮ್‌ನ ತಾತ ಮತ್ತಷ್ಟು ಕುಗ್ಗಿ ಹೋಗುತ್ತಾರೆ. ತ್ತ ರಾಮ್ ಮದುವೆಗೆ ಬಂದಿಲ್ಲ ಎನ್ನುವ ಬೇಸರದಲ್ಲಿ ಸೀತಾ ಇದ್ದರೆ, ಸಿಹಿ ನನ್ನ ಹಾಗೂ ಸೀತಮ್ಮ ದೂರ ಮಾಡುತ್ತಿದ್ದಾರೆ ಎನ್ನುವ ಆತಂಕದಲ್ಲಿ ಅಳುತ್ತಿದ್ದಾಳೆ. ಈ ಸಂದರ್ಭದಲ್ಲಿ ಎನು ಮಾಡಬೇಕು ಎಂದು ತೋಚದೇ ಕಂಗಾಲಾಗಿ ಹೋಗುತ್ತಾಳೆ.

ಸೀತಾ ಮದುವೆ ಗುಂಗಲ್ಲಿ ರಾಮ

ಇನ್ನು ರಾಮ್ ಸೀತಾ ಮದುವೆಗೆ ಬರುತ್ತಾನೆ . ಮರೆಯಲ್ಲಿ ನಿಂತು ಸೀತಾ ಮದುವೆಯನ್ನು ರಾಮ್ ನೋಡುತ್ತಿದ್ದ ವೇಳೆ ಸೀತಾ ರಾಮ್‌ನನ್ನು ನೋಡಿ ಬಹಳ ಖುಷಿಯಿಂದ ಓಡೋಡಿ ಬರುತ್ತಾಳೆ . ರಾಮ್ ಐಲವ್ ಯು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ರಾಮ್ ಸೀತಾಳನ್ನು ತಬ್ಬಿಕೊಂಡು ಬಹಳ ಖುಷಿ ಪಡುತ್ತಾನೆ ಇದನ್ನೆಲ್ಲ ನೆರೆದವರು ನೋಡಿ ಶಾಕ್ ಆಗುತ್ತಾರೆ ಎನ್ನುವ ಥರ ಪ್ರೋಮೋ ಇದ್ದು, ಧಾರಾವಾಹಿ ವೀಕ್ಷಕರು ಬಹಳ ಖುಷಿ ಪಟ್ಟಿದ್ದಾರೆ.

More from Filmibeat

English summary
Seetha rama serial 29th December written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X