Seetha Raama : ಸೀತಾ ಮೇಲಿನ ಬೆಟ್ಟದಷ್ಟು ಪ್ರೀತಿಯನ್ನು ಮನಸಲ್ಲೇ ಮುಚ್ಚಿಟ್ಟುಕೊಂಡ ರಾಮ, ಮನದ ಮಾತು ಹೇಳುತ್ತಾನಾ?

By Poorva

ಸೀತಾರಾಮ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಸೀತಾಗೆ ಹೇಗಾದರೂ ಮಾಡಿ ಮದುವೆ ಮಾಡಬೇಕು ಎನ್ನುವುದು ಎಲ್ಲರ ಕನಸು. ಆದರೆ ಸೀತಾಗೆ ಅದರ ಬಗ್ಗೆ ಯಾವುದೇ ಉದ್ದೇಶವಿರುವುದಿಲ್ಲ. ಸೀತಾಗೆ ಇದೀಗ ಆಕೆಯ ಮಗಳು ಸಿಹಿ ಮಾತ್ರ ಜೀವ ಜೀವನ ಎಲ್ಲ.

ಸೀತಾ ಸಿಹಿಗಾಗಿ ತನ್ನ ಜೀವನವನ್ನೇ ಪಣವಾಗಿ ಇಟ್ಟಿದ್ದಾಳೆ. ಸೀತಾ ತನ್ನ ಜೀವನದಲ್ಲಿ ಬಹಳ ಖುಷಿಯಿಂದ ಇದ್ದಾಳೆ. ಆದರೆ, ಆಕೆಯ ಮನೆ ಮಂದಿ ಮಾತ್ರ ಸೀತಾಗೆ ಹೇಗಾದರೂ ಮಾಡಿ ಮದುವೆ ಮಾಡಲೇಬೇಕು ಎಂದು ಮನದಲ್ಲಿ ಅಂದುಕೊಂಡಿರುತ್ತಾರೆ. ಇದೀಗ ಈ ವಿಚಾರ ರಾಮನ ಕಿವಿಗೆ ಕೂಡ ಬಿದ್ದಿದೆ. ಸೀತಾ ಪಕ್ಕದ ಮನೆಯವರು ಬಂದು ರಾಮನ ಬಳಿ ಹೇಳುತ್ತಾರೆ. ನೀನು ಹೇಗಾದರೂ ಮಾಡಿ ಸೀತಾಳನ್ನು ಮದುವೆಗೆ ಒಪ್ಪಿಸು. ಆ ವಕೀಲಪ್ಪನ ಜೊತೆ ಸೀತಾ ಮದುವೆಯಾದರೆ ಬಹಳ ಚೆನ್ನಾಗಿ ಇರುತ್ತಾರೆ ಎಂದು ಹೇಳುತ್ತಾರೆ .ಈ ವಿಚಾರ ಕೇಳಿದ ಕೂಡಲೇ ರಾಮನಿಗೆ ಬಹಳ ಬೇಸರವಾಗುತ್ತದೆ. ಆದರೂ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ.

 Seetha Raama Kannada serial written update on 30th November

ಸೀತಾ ಬಳಿ ಮಾತನಾಡಲು ಬಂದ ರಾಮ

ಸೀತಾ ಬಳಿ ಎಲ್ಲಾ ವಿಚಾರವನ್ನು ಹೇಳಿ ಬಿಡೋಣ ಎಂದು ಆಫೀಸಿನ ಕಡೆ ಹೋದರೆ ಸೀತಾ ಆಫೀಸಿನಲ್ಲಿ ಬೇರೆ ಕೆಲಸದಲ್ಲಿ ನಿರತರಾಗಿರುತ್ತಾಳೆ. ಆದರೆ ರಾಮನಿಗೆ ಸೀತಾ ಬಳಿ ಮಾತನಾಡಲು ಬಹಳ ವಿಷಯಗಳು ಇದ್ದರೂ, ಸೀತಾ ನನ್ನ ಬಳಿ ಏನು ಮಾತನಾಡುವುದಿದೆ ಎಂದಾಗ ಏನು ಮಾತನಾಡುವುದಿಲ್ಲ. ರಾಮ ಸೀತಾಳನ್ನು ಪ್ರೀತಿ ಮಾಡುತ್ತಿರುವ ವಿಷಯ ಸೀತಾ ಗಮನಕ್ಕೆ ಬಂದಿಲ್ಲ. ಆಕೆಯನ್ನು ಸೊಸೆಯಾಗಿ ತರಬೇಕು ಎಂದುರಾಮನ ಮನೆಯಲ್ಲಿ ಕೂಡ ಬಹಳ ಒತ್ತಾಯ ಇದೆ.

ದೇಸಾಯಿ ಮನೆತನದ ಸೊಸೆ ಆಗುತ್ತಾಳ ಸೀತಾ?

ಸೀತಾ ಈ ಮನೆಯ ಸೊಸೆಯಾಗಬೇಕು ಎಂದು ರಾಮನ ತಾತ ಹೇಳುತ್ತಾನೆ. ದೇಸಾಯಿ ಅವರು ಕೂಡ ನಿರ್ಧಾರ ಮಾಡಿರುತ್ತಾರೆ. ಇನ್ನು ಸಿಹಿ ಜೊತೆ ಬಹಳ ಖುಷಿಯಿಂದ ಇರುವ ರಾಮ ಸೀತಾ ಬಾಳನ್ನು ಕೂಡ ಹಸನು ಮಾಡಲು ಹೊರಟಿದ್ದಾನೆ. ಆದರೆ ಈ ವಿಚಾರ ಸೀತಾಗೆ ಅದು ಯಾಕೋ ಅರ್ಥವೇ ಆಗುತ್ತಿಲ್ಲ. ಈತ ಸೀತಾಳ ಬಳಿ ಮಾತನಾಡಬೇಕು ಎಂದು ಹೇಳುತ್ತಿದ್ದಾಗ ಅಲ್ಲಿಗೆ ಬಂದ ಸೀತಾ ಗೆಳತಿ ರಾಮನನ್ನು ಚುಡಾಯಿಸುತ್ತಾಳೆ.

 Seetha Raama Kannada serial written update on 30th November

ರಾಮನನ್ನು ನೋಡಿ ಅಯ್ಯೋ ಪಾಪ ಎಂದ ಸೀತಾ

ಆದರು ರಾಮ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ಬಳಿಕ ಸೀತಾ ಬಳಿಗೆ ಬಂದ ಗೆಳತಿ ಹೇಳುತ್ತಾಳೆ. ನನಗೆ ರಾಮನನ್ನು ಕಂಡರೆ ಬಹಳ ಬೇಸರವಾಗುತ್ತದೆ. ನೀನು ಅವನ ಜೊತೆ ಸ್ವಲ್ಪ ಮಾತನಾಡು ಎಂದು ಹೇಳುತ್ತಾಳೆ . ಆಗ ಸೀತಾ ಕೂಡ ನನಗೂ ಕೂಡ ರಾಮನ ನೋಡಿದರೆ ಬಹಳ ಬೇಸರಾವಾಗುತ್ತಿದೆ ಎನ್ನುತ್ತಾಳೆ. ಇನ್ನು ರಾಮ ತನ್ನ ಪ್ರೀತಿಯನ್ನು ಸೀತಾ ಬಳಿ ಹೇಳದೆ ಹೋದರೆ ಸೀತಾಗೆ ಮನೆ ಮಂದಿಯೆಲ್ಲ ಸೇರಿ ಆ ವಕೀಲನೊಂದಿಗೆ ಮದುವೆ ಮಾಡುವುದನ್ನು ಗ್ಯಾರಂಟಿ.

ಸೀತಾ ಮಾತಿಗೆ ರಾಮ ಗಪ್ ಚುಪ್

ರಾಮ ಸೀತಾ ಬಳಿ 'ಸೀತಾ ನಿಮ್ಮ ಮನೆಯ ಬಳಿ ನಾನು ನಿನ್ನೆ ಬಂದಿದ್ದೆ. ನಿಮ್ಮ ಬಳಿ ನಾನು ಸ್ವಲ್ಪ ಮಾತನಾಡಬೇಕಾಗಿದ್ದು ಆದ ಕಾರಣ ನಾನು ನಿಮ್ಮ ಮನೆಗೆ ಬಂದಿದ್ದೆ . ಆದರೆ ನೀವು ಅಲ್ಲಿ ಇರಲಿಲ್ಲ' ಎಂದು ಹೇಳುತ್ತಾನೆ. ಇದಕ್ಕೆ ನನ್ನ ಬಳಿ ನಿಮಗೆ ಏನು ಮಾತು ದಿನವೂ ಕೂಡ ನಾವು ಇಬ್ಬರು ಆಫೀಸಿನಲ್ಲಿ ಸಿಗುತ್ತೇವೆ ಅಲ್ವ, ಆಫೀಸಿನಲ್ಲಿ ಮಾತನಾಡಿ ಮುಗಿಸಬಹುದಲ್ಲ ಎಂದು ಸೀತಾ ಹೇಳುತ್ತಾಳೆ. ಆಗ ರಾಮ ಏನು ಮಾತನಾಡುವುದು ಎಂದು ತಿಳಿಯದೆ ಪೆಚ್ಚಾಗಿ ಕುಳಿತುಕೊಳ್ಳುತ್ತಾನೆ.

More from Filmibeat

English summary
Seetha Raama serial 30th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X